ನಾಗ್ಪುರದ ಸಂಜು ಭಗತ್ 36 ವರ್ಷಗಳ ಕಾಲ ಹೊಟ್ಟೆಯಲ್ಲಿ ಅವಳಿ ಭ್ರೂಣ ಹೊಂದಿದ್ದ ಅಪರೂಪದ 'ಭ್ರೂಣದಲ್ಲಿ ಭ್ರೂಣ' ಪ್ರಕರಣ. ಉಸಿರಾಟದ ತೊಂದರೆಯಿಂದಾಗಿ ಶಸ್ತ್ರಚಿಕಿತ್ಸೆ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿತು.

ಮಹಾರಾಷ್ಟ್ರದ ನಾಗ್ಪುರದಿಂದ ವೈದ್ಯಕೀಯ ಜಗತ್ತನ್ನೇ ಆಶ್ಚರ್ಯಗೊಳಿಸಿದ ಅತ್ಯಂತ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಂಜು ಭಗತ್ ಎಂಬ ವ್ಯಕ್ತಿಯೊಬ್ಬರು 36 ವರ್ಷಗಳ ಕಾಲ ತಮ್ಮ ಹೊಟ್ಟೆಯಲ್ಲಿ ಅವಳಿ ಭ್ರೂಣವನ್ನು ಹೊಂದಿದ್ದರು, ಇದನ್ನು ವೈದ್ಯಕೀಯವಾಗಿ 'ಭ್ರೂಣದಲ್ಲಿ ಭ್ರೂಣ' (Fetus in Fetu) ಎಂದು ಕರೆಯಲಾಗುತ್ತದೆ.

ಅಸಾಮಾನ್ಯ ಲಕ್ಷಣಗಳು

ಬಾಲ್ಯದಿಂದಲೂ ಸಂಜು ಅವರ ಹೊಟ್ಟೆ ಸ್ವಲ್ಪ ಊದಿಕೊಂಡಿತ್ತು, ಆದರೆ ಇದನ್ನು ಕುಟುಂಬವು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮಾಮೂಲಿ ಹೊಟ್ಟೆಯಂದೇ ಭಾವಿಸಿದ್ದರು ಆದರೆ ವಯಸ್ಸಾದಂತೆ ಅವರ ಹೊಟ್ಟೆ ಅಸಹಜವಾಗಿ ಬೆಳೆಯುತ್ತ ಹೋಯ್ತು. ಜನರು ಅವರನ್ನು ಗರ್ಭಿಣಿ ಎಂದು ಕರೆಯುವಂತಾಯಿತು. 1999ರಲ್ಲಿ ಸ್ಥಿತಿ ಗಂಭೀರವಾಗಿ, ಉಸಿರಾಟದ ತೊಂದರೆ ಉಂಟಾದಾಗ, ಸಂಜು ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಯಿತು.

ಶಸ್ತ್ರಚಿಕಿತ್ಸೆ ವೇಳೆ ವೈದ್ಯರೇ ಶಾಕ್:

ವೈದ್ಯರು ಗೆಡ್ಡೆ ಇರಬಹುದೆಂದು ಭಾವಿಸಿ ಶಸ್ತ್ರಚಿಕಿತ್ಸೆಗೆ ಮುಂದಾದಾಗ, ಒಳಗಿನ ದೃಶ್ಯ ಅವರನ್ನು ದಿಗ್ಭ್ರಮೆಗೊಳಿಸಿತು. ಸಂಜು ಅವರ ಹೊಟ್ಟೆಯಲ್ಲಿ ಗೆಡ್ಡೆಯ ಬದಲು ಭಾಗಶಃ ಅಭಿವೃದ್ಧಿಯಾದ ಮಾನವ ಭ್ರೂಣವಿತ್ತು! ಡಾ ಅಜಯ್ ಮೆಹ್ತಾ ಮತ್ತು ಅವರ ತಂಡವು ಮೂಳೆಗಳು, ಕೂದಲು, ದವಡೆಗಳು ಸೇರಿದಂತೆ ದೇಹದ ಭಾಗಗಳನ್ನು ತೆಗೆದುಹಾಕಿದರು. ಈ ದೃಶ್ಯ ವೈದ್ಯರನ್ನೂ ಆಶ್ಚರ್ಯಗೊಳಿಸಿತು.

ಏನಿದು Fetus in Fetu?

ಇದು ಅತ್ಯಂತ ಅಪರೂಪದ ಜನ್ಮಜಾತ ಸ್ಥಿತಿಯಾಗಿದ್ದು, ಏಕಜೈಗೋಟಿಕ್ ಅವಳಿ ಗರ್ಭಾವಸ್ಥೆಯಲ್ಲಿ ಒಂದು ಭ್ರೂಣವು ಸಂಪೂರ್ಣವಾಗಿ ಬೆಳೆಯುವಾಗ, ಇನ್ನೊಂದು ಭ್ರೂಣ ಅಭಿವೃದ್ಧಿಯಾಗದೆ ಆತಿಥೇಯ ಭ್ರೂಣದ ದೇಹದೊಳಗೆ ಆವರಿಸಲ್ಪಡುವ ಸ್ಥಿತಿ. ಇದರಿಂದ ರಕ್ತ ಪೂರೈಕೆ ಪಡೆಯುತ್ತದೆ ಆದರೆ ಸ್ವತಂತ್ರ ಅಂಗಗಳನ್ನು ಹೊಂದಿರುವುದಿಲ್ಲ.

ವೈದ್ಯಕೀಯ ಜಗತ್ತಿನ ಕೂತೂಹಲ:

1963 ರಲ್ಲಿ ನಾಗ್ಪುರದಲ್ಲಿ ಜನಿಸಿದ ಸಂಜು ಭಗತ್ ಅವರನ್ನು ' ಗರ್ಭಿಣಿ ಪುರುಷ' ಜನರು ಗೇಲಿ ಮಾಡುತ್ತಿದ್ದರು.ಅವರ ದೊಡ್ಡ ಹೊಟ್ಟೆ ಅವರನ್ನು ಅವರ ಪುಟ್ಟ ಸಮುದಾಯದಲ್ಲಿ ಎದ್ದು ಕಾಣುವಂತೆ ಮಾಡುತ್ತಿತ್ತು. ಹೊಟ್ಟೆಯಲ್ಲಿ ಅವನ ಚಿಕ್ಕ ಸಹೋದರರೇ ಬೆಳೆಯುತ್ತಿರುವುದು ಅವನು 20 ರ ಹರೆಯದಲ್ಲಿದ್ದಾಗ, ಅಲ್ಲಿಂದಾಚೆಗೆ ಆತನ ಹೊಟ್ಟೆಯಲ್ಲಿನ ಬೆಳವಣಿಗೆ ವೇಗವಾಗಿ ಬೆಳೆಯಿತು. ಅವನಿಗೆ ಮುಂದೆ ಉಸಿರಾಡಲು ಕಷ್ಟವಾಗುವಷ್ಟು ಬೆಳೆಯಿತು. ಈ ಹಂತದಲ್ಲಿ, ಅವನು ತನ್ನ ಜಮೀನಿನಲ್ಲಿ ಕೆಲಸ ಮಾಡಲು ಮತ್ತು ಜೀವನ ಸಾಗಿಸಲು ಕಷ್ಟಪಡುತ್ತಿದ್ದನು, ಇದು ಅವನ ಕುಟುಂಬವನ್ನು ಪೋಷಿಸುವುದು ತುಂಬಾ ಕಷ್ಟಕರವಾಗಿತ್ತು.

36 ವರ್ಷಗಳ ಕಾಲ ಈ ಸ್ಥಿತಿಯೊಂದಿಗೆ ಬದುಕಿದ ಸಂಜು ಭಗತ್ ಅವರ ಪ್ರಕರಣವು ವೈದ್ಯಕೀಯ ಜಗತ್ತಿನಲ್ಲಿ ಒಂದು ಮಿರಾಕಲ್ ಎನ್ನುವಂತೆ ಮಾಡಿತು. ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ನಂತರ ಸಂಜು ಚೇತರಿಸಿಕೊಂಡರ. ಈ ಅಪರೂಪದ ವಿದ್ಯಮಾನವು ಮಾನವ ದೇಹದ ಸಂಕೀರ್ಣತೆ ಬಗ್ಗೆ ವಿಜ್ಞಾನಿಗಳಿಗೆ ಹೊಸ ಕುತೂಹಲವನ್ನು ಹುಟ್ಟುಹಾಕಿದ್ದು ಸುಳ್ಳಲ್ಲ. ಸಂಜು ಭಗತ್‌ಗೆ , ಅವರ ಸ್ಥಿತಿ ವೈದ್ಯರಿಗೆ ವೈದ್ಯಕೀಯ ಪವಾಡವಾಗಿರಬಹುದು, ಆದರೆ ಅವರ ಹತ್ತಿರ ವಾಸಿಸುತ್ತಿದ್ದ ಜನರು ಅವರನ್ನು ನಿರ್ದಯವಾಗಿ ಕೀಟಲೆ ಮಾಡುತ್ತಲೇ ಇದ್ದುದರಿಂದ ಅವರಿಗೆ ಅದು ಅವಮಾನ ಮತ್ತು ದುಃಖದ ಸಂಗತಿಯಾಗಿತ್ತು.