Asianet Suvarna News Asianet Suvarna News

ಮೈಯಲ್ಲಿ ಕೊಬ್ಬು ಹೆಚ್ಚಾದರೆ ಈ ಯೋಗ ಮಾಡಿ

ಕೊಲೆಸ್ಟ್ರಾಲ್ ಹೆಚ್ಚಾಗೋದು ಈಗ ಕಾಮನ್ ಸಮಸ್ಯೆ. ಅನೇಕರು ಇದ್ರಿಂದ ಬಳಲ್ತಿದ್ದಾರೆ. ಅದ್ರಲ್ಲಿ ನೀವೂ ಒಂದಾಗಿದ್ದು, ಕೆಟ್ಟ ಕೊಲೆಸ್ಟ್ರಾಲ್ ದೇಹದಿಂದ ಹೊರಗೆ ಹೋಗ್ಬೇಕೆಂದ್ರೆ ಕೆಲ ಯೋಗಾಸನ ಮಾಡಿ. 
 

Asanas That Can Reduce High Cholesterol Level
Author
Bangalore, First Published Aug 9, 2022, 3:56 PM IST

ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದ್ರೆ ಅನೇಕ ಅನಾರೋಗ್ಯ ನಮ್ಮನ್ನು ಕಾಡುತ್ತದೆ. ಇದು ಎಲ್ಲಿರಿಗೂ ತಿಳಿದಿರುವ ಸಂಗತಿ. ಅಧಿಕ ಕೊಲೆಸ್ಟ್ರಾಲ್ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಮೇಣದಂತಿದೆ. ಇದರ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ಕೊಲೆಸ್ಟ್ರಾಲ್ ದೇಹಕ್ಕೆ ಬಹಳ ಅವಶ್ಯಕ. ಆದ್ರೆ ಕೊಲೆಸ್ಟ್ರಾಲ್ ಹೆಚ್ಚಾದ್ರೆ ಸಮಸ್ಯೆಯಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಸರಿಯಾಗಿಡಲು ಕೆಲವೊಂದು ಕ್ರಮಕೈಗೊಳ್ಳಬೇಕು. ಉತ್ತಮ ಆಹಾರ ಸೇವನೆ ಜೊತೆಗೆ ಸರಿಯಾದ ನಿದ್ರೆ ಮುಖ್ಯವಾಗುತ್ತದೆ. ಇದ್ರ ಜೊತೆಯಲ್ಲೇ ಪ್ರತಿ ನಿತ್ಯ ಯೋಗ ಕೂಡ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಇಂದು ನಾವು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಯಾವೆಲ್ಲ ಯೋಗಾಸನ ಮಾಡ್ಬೇಕು ಎಂಬುದನ್ನು ನಿಮಗೆ ಹೇಳ್ತೆವೆ.

ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಪ್ರತಿ ನಿತ್ಯ ಮಾಡಿ ಯೋಗ :

ಕೊಲೆಸ್ಟ್ರಾಲ್ (Cholesterol) ಕಡಿಮೆ ಮಾಡುತ್ತೆ ಸರ್ವಾಂಗಾಸನ (Sarvangasana) : ಹೆಚ್ಚಾದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸರ್ವಾಂಗಾಸನ ಯೋಗವನ್ನು ಪ್ರತಿದಿನ ಮಾಡಬಹುದು. ಸರ್ವಾಂಗಾಸನ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್  ಕಡಿಮೆಯಾಗುತ್ತದೆ. ಮೊದಲು ಮ್ಯಾಟಿನ ಮೇಲೆ ಬೆನ್ನು ಕೆಳಗೆ ಹಾಕಿ ಮಲಗಬೇಕು.  ನಿಧಾನವಾಗಿ ಕಾಲುಗಳೆರಡನ್ನೂ ಮೇಲಕ್ಕೆ ಎತ್ತಬೇಕು. ನಿಮ್ಮ ಕಾಲಿನಿಂದ ಪೃಷ್ಠದವರೆಗಿನ ಭಾಗ ಸಂಪೂರ್ಣ ನೆಲದಿಂದ ಮೇಲಿರಬೇಕು. ದೇಹದ ಸಂಪೂರ್ಣ ಭಾರವನ್ನು ಭುಜಗಳು, ತಲೆ ಮತ್ತು ಮೊಣಕೈಗಳ ಮೇಲೆ ಹಾಕಬೇಕು. ಯಾವುದೇ ಗಾಯ, ಥೈರಾಯ್ಡ್ ಮತ್ತು ಹೃದಯದ ಸಮಸ್ಯೆಗಳು ನಿಮಗಿದ್ದರೆ ಈ ಆಸನವನ್ನು ಮಾಡಬಾರದು. 

ಕೊಲೆಸ್ಟ್ರಾಲ್ ಕಡಿಮೆ ಮಾಡಲು ಪಶ್ಚಿಮೋತ್ತಾಸನವೂ ಪ್ರಯೋಜನಕಾರಿ : ಪಶ್ಚಿಮೋತ್ತಾಸನ ಕೊಲೆಸ್ಟ್ರಾಲ್ ನಿಯಂತ್ರಿಸಲು ತುಂಬಾ ಒಳ್ಳೆಯದು ಎಂದು ಸಾಬೀತಾಗಿದೆ. ಇದನ್ನು ಮಾಡಲು ಮ್ಯಾಟ್ ಮೇಲೆ  ಕಾಲುಗಳನ್ನು ಚಾಚಿ, ನೇರವಾಗಿ ಕುಳಿತುಕೊಳ್ಳಬೇಕು. ನಂತರ ಉಸಿರನ್ನು ನಿಧಾನವಾಗಿ ಬಿಡುತ್ತಾ ಕಾಲುಗಳನ್ನು ಕೈನಿಂದ ಹಿಡಿಯಬೇಕು. ನಿಧಾನವಾಗಿ ಮುಂದಕ್ಕೆ ಬಾಗಬೇಕು. ನಿಮ್ಮ ಮೊಣಕಾಲಿಗೆ ಮೂಗನ್ನು ತಾಗಿಸುವ ಪ್ರಯತ್ನ ಮಾಡಬೇಕು. ಮೊಣಕೈಗಳನ್ನು ನೆಲಕ್ಕೆ ತಾಗಿಸಬೇಕು. ನಂತ್ರ ನಿಧಾನವಾಗಿ ಉಸಿರು ತೆಗೆದುಕೊಳ್ತಾ ಹಿಂದಿನ ಸ್ಥಿತಿಗೆ ಮರಳಬೇಕು.  ಆಪರೇಷನ್, ಭೇದಿ, ಗರ್ಭಧಾರಣೆ, ಅಸ್ತಮಾ ಮತ್ತು ಸ್ಲಿಪ್ ಡಿಸ್ಕ್ ಸಮಸ್ಯೆಯ ಸಂದರ್ಭದಲ್ಲಿ ಈ ಆಸನವನ್ನು ಮಾಡಬೇಡಿ.

ಕಪಾಲಭಾತಿ ಪ್ರಾಣಾಯಾಮ ಮಾಡಿ ನೋಡಿ : ಕೊಲೆಸ್ಟ್ರಾಲ್   ಕಡಿಮೆ ಮಾಡುವಲ್ಲಿ ಕಪಾಲಭಾತಿ ತುಂಬಾ ಒಳ್ಳೆಯದು ಎಂದು ಸಾಬೀತುಪಡಿಸಬಹುದು. ಇದು ಸ್ಥೂಲಕಾಯವನ್ನೂ ನಿಯಂತ್ರಿಸುತ್ತದೆ. ಇದನ್ನು ಮಾಡಲು ನೇರವಾಗಿ ಕುಳಿತುಕೊಳ್ಳಬೇಕು. ದೀರ್ಘ ಮತ್ತು ಆಳವಾದ ಉಸಿರನ್ನು ತೆಗೆದುಕೊಂಡು, ನಂತ್ರ ಹೊಟ್ಟೆಯನ್ನು ಒಳಗೆ ಎಳೆದುಕೊಳ್ತಾ ಉಸಿರನ್ನು ಹೊರಗೆ ಬಿಡಬೇಕು. ಇದನ್ನು ನಿರಂತರವಾಗಿ ಮಾಡಬೇಕು. ದಣಿವಾದಾಗ ಇದನ್ನು ನಿಲ್ಲಿಸಿ. ಕಪಾಲಭಾತಿಯನ್ನು ಯಾವುದೇ ತಜ್ಞರ ಸಲಹೆಯಿಲ್ಲದೆ ಮಾಡಬಾರದು. ಆರಂಭದಲ್ಲಿ ತಜ್ಞರಿಂದ ತರಬೇತಿ ಪಡೆದು ಮಾಡಿದ್ರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ರಕ್ತದೊತ್ತಡ, ಮೈಗ್ರೇನ್, ಗರ್ಭಿಣಿಯರು ಮತ್ತು ಮುಟ್ಟಿನ ಸಮಯದಲ್ಲಿ ಕಪಾಲಭಾತಿ ಪ್ರಾಣಾಯಾಮವನ್ನು ಮಾಡಬಾರದು. 

ಯೋಗ ಮಾಡುವಾಗ ಬರೋ ಹೂಸು ತಡೆಯಲು ಇಲ್ಲಿವೆ ಟಿಪ್ಸ್

ಶಲಭಾಸನ :  ಶಲಭಾಸನ ಸುಲಭವಾಗಿ ಕಂಡ್ರೂ ಅದನ್ನು ಮಾಡುವುದು ಸ್ವಲ್ಪ ಕಷ್ಟ. ಭುಜಗಳು ಮತ್ತು ತೋಳುಗಳನ್ನು ಬಲಪಡಿಸಲು ಈ ಆಸನವು ತುಂಬಾ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ, ಇದು ಹೊಟ್ಟೆಯ ಅಂಗಗಳನ್ನು ಸಹ ಉತ್ತೇಜಿಸುತ್ತದೆ. ಮೈಗ್ರೇನ್ ಸಮಸ್ಯೆ ಹೊಂದಿದ್ದರೆ ಮತ್ತು ಗರ್ಭಿಣಿಯಾಗಿದ್ದರೆ ಈ ಭಂಗಿಯನ್ನು ಅಭ್ಯಾಸ ಮಾಡಬಾರದು. 

ಆಡೋ ಮಾತುಗಳ ಬಗ್ಗೆ ಮಾತ್ರವಲ್ಲ, ಬಾಡಿ ಲಾಂಗ್ವೇಜ್ ಬಗ್ಗೆಯೂ ಎಚ್ಚರಿಕೆಯಿರಲಿ

ಸೂರ್ಯ ನಮಸ್ಕಾರ (Surya Namaskara) : ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು  ಬೆಳಿಗ್ಗೆ ಸೂರ್ಯ ನಮಸ್ಕಾರ ಮಾಡುವುದು ಬಹಳ ಒಳ್ಳೆಯದು. ಸೂರ್ಯ ನಮಸ್ಕಾರದ ಎಲ್ಲ ಆಸನವನ್ನು ಮಾಡೋದ್ರಿಂದ ದೇಹದ ಎಲ್ಲ ಭಾಗಕ್ಕೆ ವ್ಯಾಯಾಮ ಸಿಗುತ್ತದೆ. ಅವು ಕೊಲೆಸ್ಟ್ರಾಲ್ ಕಡಿಮೆ ಮಾಡಲು ನೆರವಾಗುತ್ತವೆ. ಸೂರ್ಯಾಸನದಿಂದ ಹೊಟ್ಟೆಯ ಸ್ನಾಯುಗಳು ಹಿಗ್ಗುತ್ತವೆ. ಕಿಬ್ಬೊಟ್ಟೆಯ ಸ್ನಾಯುಗಳಿಗೆ ವ್ಯಾಯಾಮ ಸಿಗುತ್ತದೆ. ಸೂರ್ಯ ನಮಸ್ಕಾರವನ್ನು ಎಂದಿಗೂ ಅವಸರದಲ್ಲಿ ಮಾಡಬಾರದು. ಹಾಗೆಯೇ ಸೂರ್ಯ ನಮಸ್ಕಾರ ಮಾಡಿದ ತಕ್ಷಣ ಸ್ನಾನ ಮಾಡುಬಾರದು.
 

Follow Us:
Download App:
  • android
  • ios