ಬಿಪಿ ಮಾತ್ರಗಳನ್ನು ತೆಗೆದುಕೊಳ್ಳುತ್ತಿದ್ದೀರಾ: ಅಡ್ಡಪರಿಣಾಮಗಳೇನು ನೋಡಿ
ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಬಿಪಿ ಔಷಧಿಗಳು ಸಣ್ಣಮಟ್ಟಿನ ಅಡ್ಡಪರಿಣಾಮ ಅಥವಾ ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ ಎಂದು ತಿಳಿದು ತೆಗೆದುಕೊಳ್ಳುತ್ತಾರೆ. ಆದಾಗ್ಯೂ, ವೈದ್ಯರ ಪ್ರಕಾರ, ಇವುಗಳನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಎಂದಿಗೂ ತೆಗೆದುಕೊಳ್ಳಬಾರದು.

ಎಲ್ಲಾ ಅಲೋಪಥಿ ಔಷಧಿಗಳು ಅಡ್ಡಪರಿಣಾಮಗಳನ್ನು ಹೊಂದಿವೆ ರಕ್ತದೊತ್ತಡ ಅಥವಾ ಬಿಪಿಗೆ ತೆಗೆದುಕೊಳ್ಳುವ ಮಾತ್ರಗಳು ಕೂಡ ಇದರಿಂದೇ ಭಿನ್ನವಾಗಿಲ್ಲ.. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಔಷಧಿಗಳು ಸಣ್ಣಮಟ್ಟಿನ ಅಡ್ಡಪರಿಣಾಮ ಅಥವಾ ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ ಎಂದು ತಿಳಿದು ತೆಗೆದುಕೊಳ್ಳುತ್ತಾರೆ. ಆದಾಗ್ಯೂ, ವೈದ್ಯರ ಪ್ರಕಾರ, ಇವುಗಳನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಎಂದಿಗೂ ತೆಗೆದುಕೊಳ್ಳಬಾರದು.
ರಕ್ತದೊತ್ತಡದ ಮಾತ್ರೆಗಳು ಹೇಗೆ ಕೆಲಸ ಮಾಡುತ್ತವೆ.
ಅಧಿಕ ರಕ್ತದೊತ್ತಡಕ್ಕೆ ನೀಡುವ ಔಷಧಿಗಳು/ಮಾತ್ರೆಗಳು ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಸೇರಿದಂತೆ ಹಲವಾರು ಅಚಾನಕ್ ಆಗಿ ಸಂಭವಿಸುವ ಆರೋಗ್ಯ ಸಮಸ್ಯೆಯನ್ನು ತಡೆಯುತ್ತವೆ. ಲೋಟೆನ್ಸಿನ್, ಇಂಡೆರಲ್ ಮತ್ತು ಟೆವೆಟೆನ್ ಮುಂತಾದವು ವೈದ್ಯರು ಉಲ್ಲೇಖಿಸಬಹುದಾದ ಕೆಲವು ರಕ್ತದೊತ್ತಡಕ್ಕೆ ನೀಡುವ ಮಾತ್ರೆಗಳ ಹೆಸರುಗಳಾಗಿವೆ.
ರಕ್ತದೊತ್ತಡ ಔಷಧಿಗಳಅಡ್ಡಪರಿಣಾಮಗಳೇನು?
ಇಂದು ರಕ್ತದೊತ್ತಡ ಮಟ್ಟವನ್ನು ನಿರ್ವಹಿಸಲು ಎಂದಿಗಿಂತಲೂ ಹೆಚ್ಚಿನ ಔಷಧಿಗಳ ಆಯ್ಕೆಗಳಿದ್ದರೂ, ನೀವು ಸಡನ್ ಆಗಿ ಎದ್ದು ನಿಂತಾಗ ತಲೆತಿರುಗುವಿಕೆಯಂತಹ ಕೆಲವು ಅಡ್ಡಪರಿಣಾಮಗಳು ಸಂಭವಿಸುತ್ತವೆ - ಆದ್ದರಿಂದ, ನೀವು ನಿಮ್ಮ ಅಧಿಕ ರಕ್ತದೊತ್ತಡಕ್ಕೆ ಹೊಸ ಪ್ರಿಸ್ಕ್ರಿಪ್ಷನ್ ಪಡೆದಾಗ, ಅದರ ಬಗ್ಗೆ ಮತ್ತು ಅದರ ಸಂಭಾವ್ಯ ಪರಿಣಾಮಗಳ ಬಗ್ಗೆ ಓದಲು ಮರೆಯದಿರಿ.
Diuretics ಮಾತ್ರೆಗಳು (ಮೂತ್ರವರ್ಧಕಗಳು)
ಈ ಔಷಧಿಗಳು ನಿಮ್ಮ ದೇಹದಿಂದ ಹೆಚ್ಚುವರಿ ನೀರು ಮತ್ತು ಉಪ್ಪನ್ನು ಹೊರಹಾಕುತ್ತವೆ. ಆದರೆ ಈ ಮಾತ್ರೆಗಳ ಅಡ್ಡಪರಿಣಾಮಗಳು ಹೀಗಿವೆ ನೋಡಿ, ಹೆಚ್ಚುವರಿ ಮೂತ್ರ ವಿಸರ್ಜನೆ, ಪುರುಷರಲ್ಲಿ ನಿಮಿರುವಿಕೆಯ ಸಮಸ್ಯೆಗಳು, ದೌರ್ಬಲ್ಯ, ಕಾಲುಗಳ ಸೆಳೆತ ಮತ್ತು ತೀವ್ರ ಆಯಾಸದ ಜೊತೆಗೆ ಈ ಮಾತ್ರೆಗಳು ಕೆಲವೊಮ್ಮೆ ನಿಮ್ಮ ದೇಹದ ಪೊಟ್ಯಾಸಿಯಮ್ ಮಟ್ಟವನ್ನು ಕೂಡ ಕಡಿಮೆ ಮಾಡುತ್ತದೆ
ಬೀಟಾ-ಬ್ಲಾಕರ್ (Beta-blockers)
ಈ ಔಷಧಿಗಳು ನಿಮ್ಮ ಹೃದಯ ಬಡಿತವನ್ನು ಕಡಿಮೆ ಬಲವಾಗಿ ಮತ್ತು ನಿಧಾನವಾಗಿಸುತ್ತವೆ. ಆದರೂ ಇವುಗಳು ಆಸ್ತಮಾ ಲಕ್ಷಣಗಳು, ಕೈಗಳು ಮತ್ತು ಪಾದಗಳು ಶೀತಗೊಳ್ಳುವುದು(ಕೈ ಅಂಗಾಲು ತಂಪಾಗುವುದು),
ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು, ನಿದ್ರೆಯ ಸಮಸ್ಯೆಗಳಿಗೆ ಕಾರಣವಾಗಬಹುದು.
ACE tablets(ಎಸಿಇ ಮಾತ್ರೆಗಳು)
ಈ ಅಧಿಕ ರಕ್ತದೊತ್ತಡ ಔಷಧಿಗಳು ರಕ್ತನಾಳಗಳು ಕಿರಿದಾಗಲು ಕಾರಣವಾಗುವ ಹಾರ್ಮೋನ್ ರಚನೆಯನ್ನು ತಡೆಯುತ್ತವೆ. ಆದ್ದರಿಂದ ನಾಳಗಳು ವಿಶ್ರಾಂತಿ ಪಡೆಯುತ್ತವೆ ಆದರೆ ಇವುಗಳು ಒಣ ಹಾಗೂ ಹೋಗದ ಕೆಮ್ಮು, ಚರ್ಮದ ತುರಿಕೆ, ರುಚಿ ಕಳೆದುಕೊಳ್ಳುವುದು ಮುಂತಾದ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತವೆ.
(CCB tablets)ಕ್ಯಾಲ್ಸಿಯಂ ಚಾನೆಲ್ ಬ್ಲಾಕರ್‌ಗಳು
ಈ ಔಷಧಿಗಳು ಕ್ಯಾಲ್ಸಿಯಂ ಅನ್ನು ಹೃದಯ ಸ್ನಾಯು ಮತ್ತು ರಕ್ತನಾಳಗಳ ಜೀವಕೋಶಗಳಿಗೆ ಪ್ರವೇಶಿಸದಂತೆ ತಡೆಯುತ್ತವೆ ಇದರಿಂದ ನಿಮ್ಮ ರಕ್ತನಾಳಗಳು ವಿಶ್ರಾಂತಿ ಪಡೆಯಬಹುದು. ಆದರೆ ಇದರ ಜೊತೆಗ ಇವುಗಳು
ಮಲಬದ್ಧತೆ, ತಲೆನೋವು, ಅನಿಯಮಿತ ಅಥವಾ ಅತಿ ವೇಗದ ಹೃದಯ ಬಡಿತ ಹಾಗೂ ಊದಿಕೊಂಡ ತುದಿಗಾಲುಗಳಿಗೆ ಕಾರಣವಾಗಬಹುದು
ಆಲ್ಫಾ-ಬ್ಲಾಕರ್‌ಗಳು (Alpha-blockers)
ಆಲ್ಫಾ ಬ್ಲಾಕರ್‌ಗಳು ರಕ್ತನಾಳಗಳಿಗೆ ನರಗಳ ಪ್ರಚೋದನೆಯನ್ನು ಕಡಿಮೆ ಮಾಡುತ್ತದೆ. ರಕ್ತವು ಹೆಚ್ಚು ಸುಲಭವಾಗಿ ಹರಿಯಲು ಅನುವು ಮಾಡಿಕೊಡುತ್ತದೆ ಆದರೂ ಇವು ತಲೆತಿರುಗುವಿಕೆ, ಇದ್ದಕ್ಕಿದ್ದಂತೆ ಎದ್ದು ನಿಂತಾಗ ವೀಕ್‌ನೆಸ್, ವೇಗದ ಹೃದಯ ಬಡಿತಕ್ಕೆ ಕಾರಣವಾಗಬಹುದು
ವಾಸೋಡಿಲೇಟರ್‌ಗಳು (Vasodilators)
ರಕ್ತನಾಳದ ಗೋಡೆಗಳಲ್ಲಿನ ಸ್ನಾಯುಗಳನ್ನು ಸಡಿಲಗೊಳಿಸಲು, ರಕ್ತನಾಳಗಳನ್ನು ತೆರೆಯಲು ಮತ್ತು ರಕ್ತವು ಉತ್ತಮವಾಗಿ ಹರಿಯಲು ವಾಸೋಡಿಲೇಟರ್‌ಗಳು ಉತ್ತಮವಾಗಿವೆ. ಹಾಗಿದ್ದೂ ಈ ಔಷಧಿಗಳು ಈ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಅವುಗಳೆಂದರೆ, ಅತಿಯಾದ ಕೂದಲು ಬೆಳವಣಿಗೆ
ದ್ರವ ಧಾರಣ(Fluid retention), ತಲೆನೋವು, ಅನಿಯಮಿತ ಅಥವಾ ಅತಿ ವೇಗದ ಹೃದಯ ಬಡಿತ, ನಿಮ್ಮ ಕೀಲುಗಳಲ್ಲಿ ನೋವು ಮತ್ತು ಸೆಳೆತ, ನಿಮ್ಮ ಕಣ್ಣುಗಳ ಸುತ್ತ ಊತಕ್ಕೆ ಕಾರಣವಾಗಬಹುದು.
ಸಂಯೋಜಿತ ಔಷಧಿಗಳು
ಹಲವರು ಅಧಿಕ ರಕ್ತದೊತ್ತಡ ಚಿಕಿತ್ಸೆಯನ್ನು ಕೇವಲ ಒಂದು ಔಷಧಿಯಿಂದ ಪ್ರಾರಂಭಿಸುತ್ತಾರೆ, ಅಥವಾ ನಿಮ್ಮ ವೈದ್ಯರು ಎರಡನ್ನು ಶಿಫಾರಸು ಮಾಡಬಹುದು. ಮೊದಲ ಔಷಧಿ ಅಥವಾ ಸಂಯೋಜನೆಯು ನಿಮ್ಮ ರಕ್ತದೊತ್ತಡವನ್ನು ಸಾಕಷ್ಟು ಕಡಿಮೆ ಮಾಡದಿದ್ದರೆ, ಡೋಸೇಜ್ ಹೆಚ್ಚಾದರೂ ಸಹ, ಮತ್ತೊಂದು ಔಷಧಿಯನ್ನು ಸೇರಿಸಬಹುದು. ಕೆಲವೊಮ್ಮೆ, ಎರಡು ಅಥವಾ ಮೂರು ಔಷಧಿಗಳನ್ನು ಒಟ್ಟಿಗೆ ಬಳಸುವುದರಿಂದ ಒಂದೇ ಔಷಧದ ಪ್ರಮಾಣವನ್ನು ಹೆಚ್ಚಿಸುವುದಕ್ಕಿಂತ ಕಡಿಮೆ ಅಡ್ಡಪರಿಣಾಮಗಳು ಉಂಟು ಮಾಡಿದರು ಈ ಔಷಧಿಗಳ ಸಂಯೋಜನೆಯು ಅಡ್ಡಪರಿಣಾಮಗಳ ಅಪಾಯವನ್ನು ಹೆಚ್ಚಿಸುತ್ತದೆ.
ಅಡ್ಡಪರಿಣಾಮಗಳನ್ನು ಕಡಿಮೆ ಮಾಡುವ ಮಾರ್ಗಗಳು
ರಕ್ತದೊತ್ತಡ ಔಷಧಿಗಳ ಅಡ್ಡಪರಿಣಾಮಗಳನ್ನು ತಗ್ಗಿಸಲು, ಯಾವಾಗಲೂ ಮೊದಲು ನಿಮ್ಮ ವೈದ್ಯರೊಂದಿಗೆ ಮಾತನಾಡಿ. ವೈದ್ಯಕೀಯ ಸಲಹೆಯಿಲ್ಲದೆ ರಕ್ತದೊತ್ತಡ ಔಷಧಿಯನ್ನು ನಿಲ್ಲಿಸುವುದು ಅಥವಾ ಡೋಸೇಜ್ ಅನ್ನು ಬದಲಾಯಿಸುವುದು ಸೂಕ್ತವಲ್ಲ.
ಇವುಗಳನ್ನು ಪಾಲಿಸಿ
ಕುಳಿತಲ್ಲಿಂದ ಮೇಲೇಳುವಾಗ ಅಥವಾ ಮಲಗಿದಲ್ಲಿಂದ ಮೇಲೇಳುವಾಗ ಸ್ವಲ್ಪ ನಿಧಾನವಾಗಿ ಮೇಲೇಳಿ ಏಕೆಂದರೆ ಇದು ತಲೆತಿರುಗುವಿಕೆ ಮತ್ತು ಬೀಳುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಪೊಟ್ಯಾಸಿಯಮ್ ಮಟ್ಟವನ್ನು ಗಮನದಲ್ಲಿರಿಸಿಕೊಳ್ಳಿ ಮನೆಯಲ್ಲಿ ಯಾವಾಗಲೂ ನಿಮ್ಮ ರಕ್ತದೊತ್ತಡವನ್ನು ಪರಿಶೀಲಿಸಿ ನಿಮ್ಮ ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡುವುದು ಮತ್ತು ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವಂತಹ ಕೆಲವು ಜೀವನಶೈಲಿಯ ಬದಲಾವಣೆಗಳನ್ನು ಮಾಡಿ.