ಕೋವಿಡ್ ಸೋಂಕಿಗೂ, ಹಾರ್ಟ್‌ಅಟ್ಯಾಕ್‌ಗೂ ಸಂಬಂಧವಿದ್ಯಾ? ಕೇಂದ್ರ ಆರೋಗ್ಯ ಸಚಿವರು ಹೇಳಿದ್ದೇನು?
ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಬಹುತೇಕರು ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿಕೊಂಡಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಕೋವಿಡ್ ಸೋಂಕಿನ ಹರಡುವಿಕೆಯ ನಂತ್ರ ಹಾರ್ಟ್‌ಅಟ್ಯಾಕ್ ಹೆಚ್ಚಾಗ್ತಿದೆ ಅನ್ನೋ ಮಾತು ಕೇಳಿ ಬರ್ತಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ಏನಂತಾರೆ?
ಹಾರ್ಟ್ ಅಟ್ಯಾಕ್ ಅನ್ನೋದು, ನೆಗಡಿ, ಕೆಮ್ಮು ಜ್ವರಕ್ಕಿಂತ ಕಾಮನ್ ಅನ್ನೋ ಭಯಾನಕ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ಮೊನ್ನೆ ತನಕ ಗಟ್ಟಿ ಮುಟ್ಟಾಗಿದ್ದೋರೇ, ಹಾರ್ಟ್ ಅಟ್ಯಾಕ್ ಆಗಿ ಪ್ರಾಣ ಕಳ್ಕೊಳ್ತಾರೆ. ಬಹುತೇಕರು ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿಕೊಂಡಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಕೋವಿಡ್ ಸೋಂಕಿನ ಹರಡುವಿಕೆಯ ನಂತ್ರ ಹಾರ್ಟ್‌ಅಟ್ಯಾಕ್ ಹೆಚ್ಚಾಗ್ತಿದೆ ಅನ್ನೋ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಿದೆ. ಇನ್ನು ಕೆಲವರು ಕೊರೋನಾ ಲಸಿಕೆಯನ್ನು ಹಾಕಿಸಿಕೊಂಡ ನಂತರ ಹೃದಯಾಘಾತ ಹೆಚ್ಚಾಗ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದರ ಅಸಲಿಯತ್ತೇನು? ಕೋವಿಡ್ ಸೋಂಕಿನ ಹರಡುವಿಕೆಯ ನಂತ್ರ ಹಾರ್ಟ್‌ಅಟ್ಯಾಕ್ ಹೆಚ್ಚಾಗ್ತಿದೆ ಅನ್ನೋ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಏನ್ ಹೇಳ್ತಾರೆ.
ಸೋಂಕುಗಳ ಉಲ್ಬಣ ಎದುರಿಸಲು ಸರ್ಕಾರ ಸಿದ್ಧ; ಮನ್ಸುಖ್ ಮಾಂಡವಿಯಾ
ಭಾರತದಲ್ಲಿ ಇದುವರೆಗೆ 214 ವಿಭಿನ್ನ ರೂಪಾಂತರಗಳು (Variant) ಕಂಡುಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಮಾತ್ರವಲ್ಲ ಇತ್ತೀಚಿನ ಸೋಂಕುಗಳ (Virus) ಉಲ್ಬಣವನ್ನು ಎದುರಿಸಲು ಸರ್ಕಾರವು ಸಿದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದರು. ಐಸಿಯು ಹಾಸಿಗೆಗಳು, ಆಮ್ಲಜನಕ ಪೂರೈಕೆ ಮತ್ತು ಇತರ ನಿರ್ಣಾಯಕ ಆರೈಕೆ ವ್ಯವಸ್ಥೆಗಳು ಜಾರಿಯಲ್ಲಿವೆ. ಕೋವಿಡ್ ಹೇಗೆ ಹೆಚ್ಚಾಗಬಹುದು ಎಂದು ಊಹಿಸಲು ಅಸಾಧ್ಯ, ಆದರೆ ಈಗ ಉಲ್ಬಣಗೊಳ್ಳುತ್ತಿರುವ ಕೋವಿಡ್ ರೂಪಾಂತರಗಳು ದುರಂತವನ್ನು ಉಂಟುಮಾಡುವಷ್ಟು ಅಪಾಯಕಾರಿ ಅಲ್ಲ ಎಂದು ಸಚಿವರು ವಿವರಿಸಿದರು.
ಮಕ್ಕಳನ್ನೂ ಬಿಡ್ತಿಲ್ಲ ಹಾರ್ಟ್‌ಅಟ್ಯಾಕ್! ಆಟವಾಡಿ ಬಂದು ಮಲಗಿದ್ದ ಬಾಲಕಿ ಹೃದಯಾಘಾತದಿಂದ ಸಾವು
ಕೋವಿಡ್, ಹಾರ್ಟ್‌ಅಟ್ಯಾಕ್ ಮಧ್ಯೆಯಿರುವ ಸಂಬಂಧ ಪರಿಶೀಲನೆ
ಯುವ ಮತ್ತು ಆರೋಗ್ಯವಂತ ಜನರಲ್ಲಿಯೂ ಸಹ ಹೆಚ್ಚುತ್ತಿರುವ ಹೃದಯಾಘಾತದ ಬಗ್ಗೆ ಮಾತನಾಡಿದ ಸಚಿವರು, ಆರೋಗ್ಯ ಸಚಿವಾಲಯವು ಕೋವಿಡ್ ಮತ್ತು ಹೆಚ್ಚುತ್ತಿರುವ ಹೃದಯಾಘಾತದ ಮಧ್ಯೆಯಿರುವ ಸಂಭವನೀಯ ಸಂಬಂಧವನ್ನು ಪರಿಶೀಲಿಸುತ್ತಿದೆ ಎಂದು ಹೇಳಿದರು. ಕೋವಿಡ್‌ಗೆ ತುತ್ತಾಗಿದ್ದ ಯುವಜನರಲ್ಲಿ ಇತ್ತೀಚಿನ ಹೃದಯಾಘಾತಗಳ (Heartattack) ನಡುವಿನ ಸಂಬಂಧವನ್ನು ಕಂಡುಹಿಡಿಯಲು ಸರ್ಕಾರವು ಸಂಶೋಧನೆಯನ್ನು ಮಾಡುತ್ತಿದೆ. ಮತ್ತು ಎರಡು ಮೂರು ತಿಂಗಳಲ್ಲಿ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ' ಎಂದು ಅವರು ಹೇಳಿದರು.
'ದಿಢೀರ್ ಹೃದಯಾಘಾತದ ಹಲವಾರು ಪ್ರಕರಣಗಳನ್ನು ನಾವು ನೋಡಿದ್ದೇವೆ. ಹಲವಾರು ಯುವ ಕಲಾವಿದರು, ಕ್ರೀಡಾಪಟುಗಳು, ಪ್ರದರ್ಶನ ಮಾಡುವಾಗ ವೇದಿಕೆಯಲ್ಲೇ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾರೆ. ಇಂಥಾ ಘಟನೆಗಳು ಹಲವಾರು ಸ್ಥಳಗಳಿಂದ ವರದಿಯಾಗಿವೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಬೇಕಾಗಿದೆ" ಎಂದು ಅವರು ಹೇಳಿದರು.
ಕೋವಿಡ್ ಬಳಿಕ ಹೆಚ್ಚಾಯ್ತಾ ಹಾರ್ಟ್ಅಟ್ಯಾಕ್, ತಜ್ಞರು ಈ ಬಗ್ಗೆ ಏನ್ ಹೇಳ್ತಾರೆ?
ಹೊಸ ರೂಪಾಂತರ ಪತ್ತೆಯಾದಾಗ ಲಸಿಕೆಗಳ ಪರಿಣಾಮಕಾರಿತ್ವ ಪರಿಶೀಲನೆ
ಕೋವಿಡ್ ಸಾಂಕ್ರಾಮಿಕ ರೋಗದ ನಾಲ್ಕನೇ ತರಂಗದ ಬಗ್ಗೆ, ಆರೋಗ್ಯ ಸಚಿವರು (Health minister) ಎಚ್ಚರಿಕೆಯ ಅಗತ್ಯವಿದೆ ಎಂದು ಹೇಳಿದರು. ಕೊನೆಯ Covid ರೂಪಾಂತರವು Omicron ನ BF.7 ಉಪ-ವ್ಯತ್ಯಯವಾಗಿದೆ ಮತ್ತು ಈಗ XBB1.16 ಉಪ-ರೂಪಾಂತರವು ಸೋಂಕುಗಳ ಉಲ್ಬಣವನ್ನು ಉಂಟುಮಾಡುತ್ತಿದೆ ಎಂದರು. 'ಹೊಸ ರೂಪಾಂತರ ಪತ್ತೆಯಾದಾಗ, ನಾವು ಅದನ್ನು ಲ್ಯಾಬ್‌ನಲ್ಲಿ ಗುರುತಿಸುತ್ತೇವೆ ಮತ್ತು ಪ್ರತ್ಯೇಕಿಸುತ್ತೇವೆ. ನಂತರ ನಾವು ಅವುಗಳ ಮೇಲೆ ಲಸಿಕೆಗಳ ಪರಿಣಾಮಕಾರಿತ್ವವನ್ನು ಅಧ್ಯಯನ ಮಾಡುತ್ತೇವೆ. ಇಲ್ಲಿಯವರೆಗೆ, ನಮ್ಮ ಲಸಿಕೆಗಳು ಪ್ರಸ್ತುತ ಎಲ್ಲಾ ರೂಪಾಂತರಗಳ ವಿರುದ್ಧ ಕೆಲಸ ಮಾಡಿದೆ' ಎಂದು ಮಾಹಿತಿ ನೀಡಿದರು.
CoWIN ಫ್ಲಾಟ್‌ಫಾರ್ಮ್ ಎಲ್ಲಾ ವ್ಯಾಕ್ಸಿನೇಷನ್ ಡೇಟಾವನ್ನು ಒದಗಿಸಿದೆ. ಹೀಗಾಗಿ ಇದು ಅಧ್ಯಯನಕ್ಕೆ ಹೆಚ್ಚು ಸಹಾಯ ಮಾಡಿದೆ ಎಂದು ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಳೆದ ಮೂರು-ನಾಲ್ಕು ತಿಂಗಳುಗಳಿಂದ ಪಾರ್ಶ್ವವಾಯು ಮತ್ತು ಕೋವಿಡ್ ನಡುವಿನ ಸಂಬಂಧವನ್ನು ಅಧ್ಯಯನ ಮಾಡುತ್ತಿದೆ. ಇನ್ನೆರಡು ತಿಂಗಳಲ್ಲಿ ಅಧ್ಯಯನ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.