Kids Care: ಹಸಿವೆಂದು ಮಕ್ಕಳು ಅತ್ತಾಗ ನೀಡಿ ಈ ಆಹಾರ

ಮಕ್ಕಳ ಆರೋಗ್ಯ ಬಹಳ ಮುಖ್ಯ. ಅವರಿಗೆ ಪೋಷಕಾಂಶದ ಆಹಾರ ನೀಡ್ಬೇಕಾಗುತ್ತದೆ. ಮಕ್ಕಳು ಕರಿದ ತಿಂಡಿ, ಬಿಸ್ಕತ್ ಗೆ ಆಸೆಪಡ್ತಾರೆ. ಆದ್ರೆ ಪಾಲಕರು ಮಕ್ಕಳಿಗೆ ಆ ಆಹಾರ ನೀಡುವ ಬದಲು ಉತ್ತಮ ಆಹಾರ ನೀಡ್ಬೇಕು.
 

Apple Rice Pudding Recipe And Its Benefits For Babies

ಮಕ್ಕಳ ಆರೋಗ್ಯದ ರಕ್ಷಣೆ ಪೋಷಕರ ಹೊಣೆ. ಮಕ್ಕಳಿಗೆ ರುಚಿ – ರುಚಿ ಆಹಾರ ಬೇಕು. ಅವರಿಗೆ ಪೋಷಕಾಂಶ, ಆರೋಗ್ಯಕರ ಆಹಾರದ ಬಗ್ಗೆ ಜ್ಞಾನ ಇರೋದಿಲ್ಲ. ಪಾಲಕರಾದವರು ಮಕ್ಕಳ ಆಹಾರದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಮಗು ಅತ್ತ ತಕ್ಷಣ ಚಾಕೋಲೇಟ್, ಬಿಸ್ಕತ್ ನೀಡುವ ಬದಲು ಮಕ್ಕಳಿಗೆ ಒಳ್ಳೆಯ, ಪೌಷ್ಟಿಕಾಂಶದ ಆಹಾರ ನೀಡ್ಬೇಕು. ಇಂದು ನಾವು ಮಕ್ಕಳಿಗಾಗಿ ಸ್ಪೇಷಲ್ ಫುಡ್ ಒಂದನ್ನು ಹೊತ್ತು ತಂದಿದ್ದೇವೆ. ರುಚಿಕರ ಹಾಗೂ ಪೋಷಕಾಂಶವುಳ್ಳ ಆಹಾರವನ್ನು ಮಕ್ಕಳಿಗೆ ನೀಡ್ಬೇಕೆಂದ್ರೆ ನೀವೂ ಆಪಲ್ ರೈಸ್ ಪುಡ್ಡಿಂಗ್ ಆಹಾರವನ್ನು ಮಕ್ಕಳಿಗೆ ನೀಡ್ಬಹುದು. ಅದನ್ನು ಮಾಡೋದು ಹೇಗೆ ಮತ್ತೆ ಅದ್ರಿಂದ ಏನು ಪ್ರಯೋಜನ ಎಂಬುದನ್ನು ನಾವಿಂದು ಹೇಳ್ತೇವೆ.

ಮೊದಲಿಗೆ ಆಪಲ್ ರೈಸ್ ಪುಡ್ಡಿಂಗ್ ಮಾಡೋದು ಹೇಗೆ ಎಂಬುದನ್ನು ತಿಳಿಯೋಣ : 

ಆಪಲ್ ರೈಸ್ ಪುಡ್ಡಿಂಗ್ ಗೆ ಬೇಕಾಗುವ ಸಾಮಗ್ರಿ :  
ಕಾಲು ಕಪ್ ಅಕ್ಕಿ, ಒಂದು ಕಪ್ ಹಾಲು, ಎರಡು ಚಮಚ ಆಪಲ್ ಪ್ಯೂರಿ ಅಥವಾ ಸೇಬಿನ ರಸ, ಚಿಟಿಕೆ ದಾಲ್ಚಿನ್ನಿ ಪುಡಿ, ರುಚಿಗೆ ತಕ್ಕಂತೆ ಸಕ್ಕರೆ.

ಇದನ್ನೂ ಓದಿ: TEA AND FOODS: ಚಹಾದೊಂದಿಗೆ ತಿನ್ನಲೇಬಾರದ ಆಹಾರ ಪದಾರ್ಥಗಳಿವು

ಆಪಲ್ ರೈಸ್ ಪುಡ್ಡಿಂಗ್ ಮಾಡುವುದು ಹೇಗೆ ? :  
ಮೊದಲು ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತ್ರ ಹಾಲನ್ನು ಕುದಿಸಿ ಮತ್ತು ಅದಕ್ಕೆ ಅಕ್ಕಿ ಸೇರಿಸಿ. ಇದರ ನಂತರ  ಸೇಬಿನ ಪ್ಯೂರಿ ಅಥವಾ ಸಣ್ಣದಾಗಿ ಕೊಚ್ಚಿದ ಸೇಬುಗಳನ್ನು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಬೇಯಿಸಿ. ಸುಮಾರು 10 ನಿಮಿಷಗಳ ಕಾಲ ಅಕ್ಕಿಯನ್ನು ಬೇಯಿಸಬೇಕು. ಇದು ಸ್ವಲ್ಪ ತೆಳ್ಳಗಿರಲಿ ಎನ್ನುವವರು ಇದಕ್ಕೆ ಸ್ವಲ್ಪ ಸಕ್ಕರೆ ಹಾಗೂ ಸ್ವಲ್ಪ ಹೆಚ್ಚು ಹಾಲನ್ನು ಹಾಕಬಹುದು. ಅಕ್ಕಿ ಬೆಂದ ಮೇಲೆ ಗ್ಯಾಸ್ ಆಫ್ ಮಾಡಿ,ಚಚಿಟಿಕೆ ದಾಲ್ಚಿನ್ನಿ ಸೇರಿಸಿ. ನಂತ್ರ ಮಕ್ಕಳಿಗೆ ಇದನ್ನು ತಿನ್ನಲು ನೀಡಿ. 

ಆಪಲ್ ರೈಸ್ ಪುಡ್ಡಿಂಗ್‌ ನಲ್ಲಿರುವ ಪೋಷಕಾಂಶ : 190 ಗ್ರಾಂ ಅಂದರೆ ಒಂದು ಕಪ್ ಆಪಲ್ ರೈಸ್ ಪುಡ್ಡಿಂಗ್ ನಲ್ಲಿ 205 ಕ್ಯಾಲೋರಿಗಳು, 4.4 ಗ್ರಾಂ ಕೊಬ್ಬು, 190 ಮಿಲಿ ಗ್ರಾಂ ಸೋಡಿಯಂ, 0.8 ಗ್ರಾಂ ಡಯೆಟರಿ ಫೈಬರ್, 6.1 ಗ್ರಾಂ ಪ್ರೊಟೀನ್, 39 ಕ್ಯಾಲೋರಿಗಳು, 2.5 ಗ್ರಾಂ ಸ್ಯಾಚುರೇಟೆಡ್ ಕೊಬ್ಬು, 35.3 ಗ್ರಾಂ ಕಾರ್ಬೋಹೈಡ್ರೇಟ್ ಮತ್ತು 2 ಗ್ರಾಂ ಕಾರ್ಬೋಹೈಡ್ರೇಟ್, 2.7 ಗ್ರಾಂ  ಸಕ್ಕರೆಯಿದೆ. 

ಮಕ್ಕಳಿಗೆ ಇದ್ರಿಂದಾಗು ಪ್ರಯೋಜನಗಳು :  ಸೇಬು ಹಣ್ಣು ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿದೆ. ವಿಟಮಿನ್ ಸಿ, ಫೈಬರ್ ಮತ್ತು ಫೈಟೊಕೆಮಿಕಲ್‌ಗಳನ್ನು ಸಹ ಸೇಬು ಹಣ್ಣು ಹೊಂದಿರುತ್ತವೆ. ಸೇಬು ಹಣ್ಣು ಫೈಬರ್, ಪೆಕ್ಟಿನ್ ಹೊಂದಿರುತ್ತವೆ. ಸೇಬು ಹಣ್ಣನ್ನು ತಿನ್ನುವುದರಿಂದ ಮಕ್ಕಳು ಮಲಬದ್ಧತೆಯ ಸಮಸ್ಯೆ ಎದುರಿಸುವುದಿಲ್ಲ.

ಇದನ್ನೂ ಓದಿ: Monsoon: ಸಿಕ್ಕಿದ್ದೆಲ್ಲ ಹಣ್ಣು ತಿಂದ್ರೆ ಆರೋಗ್ಯ ಕೆಡ್ಬಹುದು ಜೋಪಾನ

ಮಕ್ಕಳಿಗೆ ಅಕ್ಕಿಯಿಂದಾಗುವ ಪ್ರಯೋಜನಗಳು :  ಅಕ್ಕಿಯು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಇದು ಮಗುವಿಗೆ ಶಕ್ತಿಯನ್ನು ನೀಡುತ್ತದೆ. ಅಕ್ಕಿಯಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಇದ್ದು, ಮೂಳೆಗಳಿಗೆ ಶಕ್ತಿ ನೀಡುತ್ತದೆ. ಅಕ್ಕಿಯಲ್ಲಿ ಸಣ್ಣ ಪ್ರಮಾಣದಲ್ಲಿ ಸತು, ತಾಮ್ರ ಮತ್ತು ಸೆಲೆನಿಯಮ್ ಕೂಡ ಇರುತ್ತದೆ. ಇದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು. 
ಇದನ್ನು ಮಕ್ಕಳು ಸುಲಭವಾಗಿ ತಿನ್ನುತ್ತಾರೆ. ಸ್ವಲ್ಪ ತೆಳ್ಳಗೆ ಮಾಡಿದ್ರೆ ಮಕ್ಕಳು ಸುಲಭವಾಗಿ ಕುಡಿಯುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ಶಾಲೆಗೆ ಹೋಗುವ ಮಕ್ಕಳವರೆಗೆ ಎಲ್ಲರಿಗೂ ಈ ಆಪಲ್ ರೈಸ್ ಪುಡ್ಡಿಂಗ್ ಸೇವನೆ ಮಾಡ್ಬಹುದು. 

Latest Videos
Follow Us:
Download App:
  • android
  • ios