Tea and Foods: ಚಹಾದೊಂದಿಗೆ ತಿನ್ನಲೇಬಾರದ ಆಹಾರ ಪದಾರ್ಥಗಳಿವು

ಬಿಸಿ ಚಹಾದೊಂದಿಗೆ ಬಿಸಿ ಪಕೋಡ ತಿನ್ನುವುದನ್ನು ನೆನಪಿಸಿಕೊಂಡರೆ ಈಗಲೇ ಆ ಕೆಲಸ ಮಾಡೋಣ ಎನಿಸುವುದು ಗ್ಯಾರೆಂಟಿ. ಆದರೆ, ಚಹಾದೊಂದಿಗೆ ಕಡಲೆ ಹಿಟ್ಟಿನಿಂದ ಮಾಡಿದ ಪಕೋಡ ಸೇರಿದಂತೆ ಹಲವು ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ.  

Do not eat these foods with tea

ನಾವು ಭಾರತೀಯರಿಗೆ ಬೆಳಗ್ಗೆ ಎದ್ದರೆ ಟೀ ಬೇಕು, ಮಧ್ಯಾಹ್ನದ ಜಡತ್ವ ಹೋಗಿಸಲು ಟೀ ಬೇಕು, ಸಂಜೆಯಾದರೂ ಟೀ-ಕಾಫಿ ಕುಡಿಯುವುದು ಸಾಮಾನ್ಯ. ಟೀ ಆಸ್ವಾದಿಸುವವರು ಇಲ್ಲಿ ಹೆಚ್ಚು. ಈಗಂತೂ ಮಳೆಗಾಲ. ಸಂಜೆಯ ಹೊತ್ತು ಬಿಸಿಬಿಸಿಯಾಗಿ ಟೀ ಕುಡಿಯಬೇಕು ಎನ್ನಿಸುವುದು ಸಹಜ. ಜತೆಗೆ ಬಿಸಿಬಿಸಿ ಬೋಂಡಾ, ಬಜ್ಜಿ, ಬಿಸ್ಕತ್ ಸೇರಿದಂತೆ ಕೆಲವು ತಿನಿಸುಗಳು ಭಾರೀ ಖುಷಿ ಕೊಡುತ್ತವೆ. ಆದರೆ, ಟೀ ಜತೆಗೆ ಕೆಲವೊಂದು ಆಹಾರ ಪದಾರ್ಥಗಳನ್ನು ತಪ್ಪಿಯೂ ಸೇವನೆ ಮಾಡಬಾರದು. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವುಂಟಾಗುತ್ತದೆ. ನೀವೂ ಸಹ ಚಹಾಪ್ರಿಯರಾಗಿದ್ದರೆ ದಿನದಲ್ಲಿ ಹಲವು ಬಾರಿ ಸೇವನೆ ಮಾಡುತ್ತೀರಿ. ಆ ಸಮಯದಲ್ಲಿ ಚಹಾದೊಂದಿಗೆ ಏನು ತಿನ್ನುತ್ತೀರಿ ಎನ್ನುವುದು ಮುಖ್ಯ. ಟೀ ಜತೆಗೆ ಹೊಟ್ಟೆಗೆ ಹೋಗಿ ಸೇರುವ ಕೆಲವು ಆಹಾರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.  ಅವು ಯಾವುವು ಎಂದು ಅರಿತುಕೊಂಡು ಅದರಂತೆ ನಡೆದುಕೊಳ್ಳುವುದು ಮುಖ್ಯ.

•    ಬೀಜಗಳು (Nuts)
ಚಹಾಕ್ಕೆ ಹಾಲು ಬೆರೆಸುತ್ತೇವೆ. ಹಾಲಿನೊಂದಿಗೆ ಐರನ್ ಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದು ಸರಿಯಲ್ಲ. ಬೀಜಗಳಲ್ಲಿ ಐರನ್ ಅಧಿಕ ಪ್ರಮಾಣದಲ್ಲಿರುವುದರಿಂದ ಟೀ ಜತೆಗೆ ಅವುಗಳನ್ನು ಸೇವಿಸಬಾರದು. ಹಾಗೆಯೇ, ಐರನ್ ಅಂಶವುಳ್ಳ ಸೊಪ್ಪು, ತರಕಾರಿಗಳನ್ನು ಸಹ ಟೀ ಜತೆ ಸೇವಿಸಬಾರದು. ಚಹಾದಲ್ಲಿ ಟ್ಯಾನಿನ್ ಮತ್ತು ಆಕ್ಸಾಲೆಟ್ ಅಂಶವಿರುತ್ತವೆ. ಇವು ಐರನ್ ಅಂಶವನ್ನು ದೇಹ ಹೀರಿಕೊಳ್ಳುವುದನ್ನು ತಡೆಯುತ್ತವೆ. ಹೀಗಾಗಿ, ಒಟ್ಟಿಗೆ ಇವುಗಳನ್ನು ಸೇವಿಸಬಾರದು.

•    ಲಿಂಬೆರಸ (Lemon)
ತೂಕ ಇಳಿಕೆ ಮಾಡಲು ಲಿಂಬು ಬೆರೆಸಿದ ಟೀ ಕುಡಿಯುವುದು ಸಾಮಾನ್ಯ. ಇದು ನಿಜವಿರಬಹುದು. ಆದರೆ, ಚಹಾದೊಂದಿಗೆ ಲಿಂಬೆ ರಸವನ್ನು ಬೆರೆಸಿದರೆ ಅದು ಆಮ್ಲೀಯ ಗುಣ ಪಡೆದುಕೊಳ್ಳುತ್ತದೆ. ದೇಹದಲ್ಲಿ ಊತವನ್ನು ಉಂಟುಮಾಡಬಲ್ಲದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬು ಟೀ ಸೇವಿಸಿದರೆ ಆಸಿಡ್ ರಿಫ್ಲಕ್ಸ್ ಹಾಗೂ ಹಾರ್ಟ್ ಬರ್ನ್ ಉಂಟಾಗಬಲ್ಲದು.

ಇದನ್ನೂ ಓದಿ: ಅಲೋವೆರಾ ಆರೋಗ್ಯಕ್ಕೆ ಒಳ್ಳೇದು ನಿಜ…ಆದ್ರೆ ತೊಂದ್ರೆನೂ ಇದೆ

•    ಕಡಲೆ (Gram Flour)
ಕಡಲೆ ಹಿಟ್ಟಿನಿಂದ ಮಾಡಿದ ಬಜ್ಜಿ, ಬೋಂಡಾ, ಪಕೋಡ ದೊಂದಿಗೆ ಚಹಾ ಸೇವನೆ ಮಾಡುವುದು ಭಾರತದಲ್ಲಿ ಅತ್ಯಂತ ಜನಪ್ರಿಯ ಪದ್ಧತಿ. ಆದರೆ, ಕಡಲೆ ಹಿಟ್ಟಿನಿಂದ ಮಾಡಿದ ಈ ಆಹಾರ ಸೇವನೆ ಮಾಡುವುದರಿಂದ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಅಕ್ಕಿ ಸೇರಿದಂತೆ ಇತರೆ ಹಿಟ್ಟಿನಿಂದ ಮಾಡಿದ ಪದಾರ್ಥಗಳಿಂದ ಏನೂ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಕಡಲೆ ಹಿಟ್ಟು ಹಾಗೂ ಟೀ ಸೇರಿದಾಗ ಪೌಷ್ಟಿಕಾಂಶಗಳು ದೇಹಕ್ಕೆ ಸೇರುವ ಪ್ರಮಾಣವನ್ನು ಕಡಿಮೆ ಮಾಡುತ್ತವೆ. 

•    ಅರಿಶಿಣ (Turmeric)
ಟೀ ಕುಡಿಯುವಾಗ ಅರಿಶಿಣದಿಂದ ಮಾಡಿದ ಯಾವುದೇ ಪದಾರ್ಥವನ್ನು ಸೇವನೆ ಮಾಡಬಾರದು. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್, ಆಸಿಡಿಟಿ, ಮಲಬದ್ಧತೆ ಉಂಟಾಗಬಲ್ಲದು. 

ಇದನ್ನೂ ಓದಿ: Vegan Vs Vegetarian: ಏನಿದು ಹೊಸ ಡಯಟ್ ಖಯಾಲಿ?

•    ಶೀತಲ ಆಹಾರ (Cold Items)
ಫ್ರಿಡ್ಜ್ ನಲ್ಲಿಟ್ಟ ಶೀತಲ ಆಹಾರವನ್ನು ಬಿಸಿಯಾದ ಟೀ ಅಥವಾ ಟೀ ಕುಡಿದಾದ ತಕ್ಷಣವೇ ಸೇವಿಸಬಾರದು. ಇದರಿಂದ ಜೀರ್ಣ ವ್ಯವಸ್ಥೆ ಹದಗೆಡುತ್ತದೆ. ಜಠರ, ಯಕೃತ್ತು, ಕರುಳಿನಲ್ಲಿ ಸಮಸ್ಯೆ ಉಂಟಾಗುತ್ತದೆ. ಬೇರೆ ಬೇರೆ ರೀತಿಯ ತಾಪಮಾನವುಳ್ಳ ಆಹಾರವನ್ನು ತಿನ್ನುವುದರಿಂದ ಜೀರ್ಣ ಪ್ರಕ್ರಿಯೆ ನಿಧಾನವಾಗುತ್ತದೆ. ವಾಕರಿಕೆಯ ಸಮಸ್ಯೆ ಕಾಣಬಹುದು. ಹೀಗಾಗಿ, ಬಿಸಿಯಾದ ಚಹಾ ಕುಡಿದ ಅರ್ಧ ಗಂಟೆಯ ಬಳಿಕ ತಣ್ಣಗಿನ ಆಹಾರಗಳನ್ನು ಸೇವನೆ ಮಾಡಬಹುದು. ಆಗ ಏನೂ ಸಮಸ್ಯೆ ಉಂಟಾಗುವುದಿಲ್ಲ. ಸಮಾರಂಭಗಳಲ್ಲಿ ಐಸ್ ಕ್ರೀಮ್ ಜತೆಗೆ ಬಿಸಿ ಜಾಮೂನು ಸೇವಿಸಿದಾಗ ಹೊಟ್ಟೆ ಹಾಳಾಗುವುದು ಇದೇ ಕಾರಣಕ್ಕೆ ಎನ್ನುವುದು ತಿಳಿದಿರಲಿ.

Latest Videos
Follow Us:
Download App:
  • android
  • ios