ಒಂದೇ ದಿನ ಆರು ಬಾರಿ ಹೃದಯಾಘಾತವಾದ ವಿದ್ಯಾರ್ಥಿಯ ಬದುಕಿಸಿದ ವೈದ್ಯರು
ಭಾರತೀಯ ಮೂಲದ , ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ, ವಿದ್ಯಾರ್ಥಿಯೋರ್ವನಿಗೆ ಒಂದೇ ದಿನದಲ್ಲಿ ಆರು ಬಾರಿ ಹೃದಯಾಘಾತವಾಗಿ ಬದುಕುಳಿದ ಘಟನೆ ನಡೆದಿದೆ.
ಲಂಡನ್: ಭಾರತೀಯ ಮೂಲದ , ಲಂಡನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ, ವಿದ್ಯಾರ್ಥಿಯೋರ್ವನಿಗೆ ಒಂದೇ ದಿನದಲ್ಲಿ ಆರು ಬಾರಿ ಹೃದಯಾಘಾತವಾಗಿ ಬದುಕುಳಿದ ಘಟನೆ ನಡೆದಿದೆ. 21 ವರ್ಷದ ಅತುಲ್ ರಾವ್, ಹೀಗೆ ಆರು ಬಾರಿ ಹೃದಯ ನಿಂತರೂ ಬದುಕುಳಿದ ಯುವಕ. ಈ ವಿದ್ಯಾರ್ಥಿ ಘಟನೆಯ ಬಳಿಕ ವೈದ್ಯಕೀಯ ಕ್ಷೇತ್ರದಲ್ಲಿ ಶಿಕ್ಷಣ ಪಡೆಯಲು ಬಯಸಿದ್ದು, ಇದಾದ ನಂತರ ವೈದ್ಯಕೀಯ ಕ್ಷೇತ್ರದಲ್ಲಿಯೇ ವೃತ್ತಿ ಜೀವನ ಆರಂಭಿಸಲು ಬಯಸಿದ್ದಾರೆ ಎಂದು ಅಂಗ್ಲ ಮಾಧ್ಯಮ ದಿ ಪ್ರಿಂಟ್ ವರದಿ ಮಾಡಿದೆ.
ಲಂಡನ್‌ನ ಸಿಯಾಟಲ್ ನಿವಾಸಿಯಾದ ಅತುಲ್ ರಾವ್ (Atul Rao), ಟೆಕ್ಸಾಸ್‌ನ (Texas) ಬೇಲರ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದು, ಇತ್ತೀಚೆಗೆ ಅವರರ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾದ ಪರಿಣಾಮ ಹೃದಯಕ್ಕೆ ರಕ್ತಚಲನೆಯಾಗದೇ ಹೃದಯಾಘಾತಕ್ಕೆ ಒಳಗಾಗಿದ್ದರು. ಶ್ವಾಸಕೋಶ ಬ್ಲಾಕ್ ಆಗಿದ್ದರಿಂದ ಹೃದಯಕ್ಕೆ ರಕ್ತಚಲನೆ ಆಗದೇ ಪಲ್ಮನರಿ ಎಂಬಾಲಿಸಮ್ ಎಂಬ ಸ್ಥಿತಿ ಉಂಟಾಗಿ ಒಂದೇ ದಿನದಲ್ಲಿ ಒಟ್ಟು ಆರು ಬಾರಿ ಹೃದಯಾಘಾತವಾಗಿತ್ತು.
ಕೂಡಲೇ ಆತನನ್ನು ಲಂಡನ್‌ನ (London) ಇಂಪೀರಿಯಲ್ ಕಾಲೇಜ್ ಹೆಲ್ತ್‌ಕೇರ್ ಎನ್‌ಎಚ್‌ಎಸ್ ಟ್ರಸ್ಟ್ ಹ್ಯಾಮರ್‌ಸ್ಮಿತ್ ಆಸ್ಪತ್ರೆಯ ಹೃದಯ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಯ್ತು. ಅಲ್ಲಿ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿ ಹೃದಯಕ್ಕೆ ರಕ್ತದ ಹರಿವನ್ನು ತಡೆಯುತ್ತಿದೆ ಎಂದು ಸ್ಕ್ಯಾನ್‌ಗಳು ದೃಢಪಡಿಸಿದವು. ಇದಾದ ನಂತರ ಕೂಡಲೇ ಚಿಕಿತ್ಸೆ ನೀಡಿ ಅವರನ್ನು ಬದುಕುಳಿಸಲಾಯ್ತು. ಇದಾದ ನಂತರ ತನ್ನ ಜೀವ ಉಳಿಸಿದ ಆಸ್ಪತ್ರೆ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಲು ತನ್ನ ಪೋಷಕರೊಂದಿಗೆ ಅತುಲ್ ರಾವ್ ಲಂಡನ್‌ನ ಈ ಆಸ್ಪತ್ರೆಗೆ ಆಗಮಿಸಿದ್ದರು.
ಈ ಘಟನೆ ಸಂಭವಿಸುವ ಮೊದಲು ನಾನು ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಬೇಕೆ ಅಥವಾ ವ್ಯವಹಾರ ಕ್ಷೇತ್ರ ಆಯ್ಕೆ ಮಾಡಬೇಕೆ ಎಂದು ಗೊಂದಲಕ್ಕೊಳಗಾಗಿದ್ದೆ. ಅಲ್ಲದೇ ಬಹುತೇಕ ನಾನು ವ್ಯವಹಾರ ಕ್ಷೇತ್ರವನ್ನೇ ಆಯ್ಕೆ ಮಾಡ್ತಿದ್ದೆ. ಆದರೆ ಈಗ ಕೊನೆ ಕ್ಷಣದಲ್ಲಿ ನಾ ಬದುಕುಳಿದ ನಂತರ ನನಗೆ ಉಳಿದ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಬೇಕು, ನನಗೆ ಬದುಕಲು ಸಿಕ್ಕಿದ 2ನೇ ಅವಕಾಶವನ್ನು ಇತರರಿಗೆ ಸಹಾಯ ಮಾಡುತ್ತಾ ಕಳೆಯಬೇಕು ಎಂದು ಬಯಸಿದ್ದೇನೆ ಎಂದು ಅತುಲ್ ರಾವ್ ಹೇಳಿದ್ದಾರೆ.
ಮಗಳಿಗೆ ಬುದ್ಧಿ ಕಲಿಸಲು ಬರ್ತ್‌ಡೇಗೆ ಕೊಳಚೆ ನೀರು ಗಿಫ್ಟ್ ಕೊಟ್ಟ ಅಪ್ಪ
ರಾವ್ ಅವರು ಪ್ರಿ-ಮೆಡ್ ಪದವಿಯ ಅಂತಿಮ ವರ್ಷದಲ್ಲಿದ್ದು, ಇದು ವೈದ್ಯಕೀಯ ಅಭ್ಯಾಸ ಮಾಡಲು ಮುಂದಿನ ಪದವಿಗೆ ಹೋಗಲು ಅನುವು ಮಾಡಿಕೊಡುತ್ತದೆ. ಜುಲೈ 27 ರಂದು ಇವರಿಗೆ ಹೃದಯಾಘಾತವಾಗಿತ್ತು. ಈತನನ್ನು ಆಂಬುಲೆನ್ಸ್‌ನಲ್ಲಿ ಕರೆದೊಯ್ಯುವ ವೇಳೆ ಈತ ಬದುಕುಳಿಯುತ್ತಾನೆ ಈತನನ್ನು ನಾವು ಮತ್ತೆ ಭೇಟಿಯಾಗಬಹುದು ಎಂಬ ಯಾವ ಭರವಸೆಯೂ ನಮಗಿರಲಿಲ್ಲ ಎಂದು ಅಲ್ಲಿನ ಆಂಬುಲೆನ್ಸ್ ಸರ್ವಿಸ್ ಸಿಬ್ಬಂದಿ ಹಾಗೂ ಪ್ಯಾರಾ ಮೆಡಿಕ್ ನಿಕ್ ಸಿಲ್ಲೆಟ್ ಹೇಳಿದರು.
ಹ್ಯಾಮರ್ಸ್ಮಿತ್ ಆಸ್ಪತ್ರೆಯ ಸಿಬ್ಬಂದಿ ಅತುಲ್ ಅವರನ್ನು ಜೀವಂತವಾಗಿಡಲು ರಾತ್ರಿಯಿಡೀ ದಣಿವರಿಯಿಲ್ಲದೆ ಕೆಲಸ ಮಾಡಿದರು ಮತ್ತು ಒಂದು ವೇಳೆ ಅವರಿಗೆ ಹೃದಯ ಮತ್ತು ಶ್ವಾಸಕೋಶದ ಕೆಲಸವನ್ನು ಸಂಪೂರ್ಣವಾಗಿ ಬದಲಾಯಿಸಬಲ್ಲ ಜೀವಾಧಾರಕ ವ್ಯವಸ್ಥೆಯಾದ ಎಕ್ಸ್‌ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ (ECMO) ಅಗತ್ಯ ಬಂದರೆ ಎನ್ನುವ ಕಾರಣಕ್ಕೆ ಮರುದಿನ ಸೇಂಟ್ ಥಾಮಸ್ ಆಸ್ಪತ್ರೆಗೆ ಸಾಗಿಸಲಾಯ್ತು. ಈ ವೇಳೆ ಅವರು ಇನ್ನೂ ತೀವ್ರವಾಗಿ ಅಸ್ವಸ್ಥರಾಗಿದ್ದರು. (ಎಕ್ಸ್‌ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ ಎಂದರೆ ಇದೊಂದು ಜೀವಾಧಾರಕ ವ್ಯವಸ್ಥೆಯಾಗಿದ್ದು, ಹೃದಯ ಮತ್ತು ಶ್ವಾಸಕೋಶದ ಕೆಲಸವನ್ನು ಸಂಪೂರ್ಣವಾಗಿ ಬದಲಾಯಿಸಬಲ್ಲದು ಇದರಿಂದ ರೋಗಿಗಳಿಗೆ ಗುಣವಾಗಲು ಸಮಯವಿರುತ್ತದೆ. )
ಪ್ರಣಯ ನಗರಿಗೆ ಹೊಸ ಹಾವಳಿ : ಮೆಟ್ರೋ ಏರ್‌ಪೋರ್ಟ್ ಹೊಟೇಲ್ ಥಿಯೇಟರ್ ಎಲ್ಲೆಂದರಲ್ಲಿ ತಿಗಣೆಗಳ ದರ್ಬಾರ್
ಆದರೆ ಅಷ್ಟು ಹೊತ್ತಿಗೆ ಇವರಿಗೆ ನೀಡಿದ್ದ ಹೆಪ್ಪುಗಟ್ಟುವ ಔಷಧಿಗಳು ಕೆಲಸ ಮಾಡಲು ಪ್ರಾರಂಭಿಸಿದವು ಮತ್ತು ಇತರ ಜೀವ ಬೆಂಬಲ ಯಂತ್ರಗಳ ಸಹಾಯದಿಂದ ಅವರು ECMO ಅಗತ್ಯವಿಲ್ಲದೇ ಚೇತರಿಸಿಕೊಳ್ಳಲು ಸಾಧ್ಯವಾಯಿತು. ಇದು ನಿಜವಾಗಿ ವೈದ್ಯಕೀಯ ತಂಡದ ದೊಡ್ಡ ಪ್ರಯತ್ನವಾಗಿತ್ತು ಮತ್ತು ಇದರಿಂದಲೇ ಅತುಲ್ ಇಲ್ಲಿರಲು ಸಾಧ್ಯವಾಗುವಂತೆ ಅನೇಕ ಜನರು ಸಹಾಯ ಮಾಡಿದರು. ಎಂದು ಇಂಪೀರಿಯಲ್ ಕಾಲೇಜ್ ಹೆಲ್ತ್‌ಕೇರ್ NHS ಟ್ರಸ್ಟ್‌ನ ಹ್ಯಾಮರ್‌ಸ್ಮಿತ್ ಆಸ್ಪತ್ರೆಯ ನಿರ್ಣಾಯಕ ಆರೈಕೆ ಸಲಹೆಗಾರ ಡಾ ಲೂಯಿಟ್ ಠಕುರಿಯಾ ಹೇಳಿದರು