Egg a Day: ಮಧುಮೇಹಕ್ಕೆ ನೀಡುತ್ತಾ ಆಹ್ವಾನ ?

ಮೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶ ಮತ್ತು ಕೊಲೆಸ್ಟ್ರಾಲ್ (Cholesterol) ಅಂಶವಿರುತ್ತದೆ. ಇದು ಮಧುಮೇಹಕ್ಕೆ ಕಾರಣವಾಗಬಹುದೇ ? ಹೃದಯಕ್ಕೆ ತೊಂದರೆಯನ್ನುಂಟು ಮಾಡಬಹುದೇ ? ಎಂಬ ಬಗ್ಗೆ ಹಲವರಿಗೆ ಭಯವಿದೆ. ಹಾಗಿದ್ರೆ ದಿನಾಲೂ ಮೊಟ್ಟೆ (Egg) ತಿಂದರೆ ಮಧುಮೇಹ ಬರುವ ಸಾಧ್ಯತೆ ಹೆಚ್ಚಿದೆಯಾ ತಿಳಿದುಕೊಳ್ಳೋಣ..?

An Egg a day will Take you closer to Diabetes

ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎಂಬ ಮಾತೇ ಇದೆ. ಯಾಕೆಂದರೆ ಸೇಬು ಹಣ್ಣು ಅಷ್ಟೊಂದು ಪ್ರಮಾಣದಲ್ಲಿ ಪೌಷ್ಠಿಕಾಂಶಗಳನ್ನು ಹೊಂದಿದೆ ಎಂದರ್ಥ. ಅದೇ ರೀತಿ ದಿನಕ್ಕೊಂದು ಮೊಟ್ಟೆ ಸೇವಿಸುವುದರಿಂದ ಆರೋಗ್ಯವರ್ಧನೆಯಾಗುತ್ತದೆ ಎಂದು ತಿಳಿದವರು ಹೇಳುತ್ತಾರೆ. ಹೀಗಾಗಿ ಡಯಟ್‌ನಲ್ಲಿರುವವರ ಪ್ಲೇಟ್‌ನಲ್ಲಿ ಹಣ್ಣು, ತರಕಾರಿಗಳು ಇರುವಂತೆಯೇ ಒಂದು ಮೊಟ್ಟೆಯೂ ಇರುತ್ತದೆ. ಜಿಮ್ ಗೆ ಹೋಗುವವರು, ವರ್ಕೌಟ್ ಮಾಡುವವರು ಸಹ ದಿನಕ್ಕೊಂದು ಮೊಟ್ಟೆ ತಿನ್ನುವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಆದರೆ ದಿನಕ್ಕೊಂದು ಮೊಟ್ಟೆ ತಿನ್ನಬಹುದಾ, ಇಲ್ಲವಾ ಎನ್ನುವ ಬಗ್ಗೆ ಹಲವರಿಗೆ ಗೊಂದಲವಿದೆ. ದಿನಕ್ಕೊಂದು ಮೊಟ್ಟೆ ತಿಂದವರಿಗೆ ಮಧುಮೇಹ ಬೇಗ ಬರುತ್ತದಾ..? ಎಂಬ ಭಯವಿದೆ.

ಮೊಟ್ಟೆ ಸೇವನೆಯಿಂದ ಮಧುಮೇಹ ಬರುತ್ತದೆ ಎಂಬ ಮಾತು ಸಂಪೂರ್ಣ ನಿಜವೂ ಅಲ್ಲ, ಸಂಪೂರ್ಣ ಸುಳ್ಳು ಕೂಡಾ ಅಲ್ಲ. ಕೊಲೆಸ್ಟ್ರಾಲ್ ಅಂಶಗಳಿಗೆ ತೀರಾ ಸೆನ್ಸಿಟಿವ್ ಆಗಿರುವವರಿಗೆ ಮಾತ್ರ ಮೊಟ್ಟೆಯಲ್ಲಿನ ಕೊಬ್ಬಿನ ಅಂಶ ತೊಂದರೆಯುಂಟು ಮಾಡಬಹುದು. ಅಂದರೆ ಮೊದಲೇ ಹೃದಯದ ಕಾಯಿಲೆ ಅಥವಾ ಇನ್ನಿತರ ಹೃದಯದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮೊಟ್ಟೆಯ ಸೇವನೆ ತೊಂದರೆಯುಂಟು ಮಾಡಬಹುದು.

Egg Benefits : ಚಳಿಗಾಲದಲ್ಲಿ ಮೊಟ್ಟೆ ತಿನ್ನೊದ್ರಿಂದ ಆರೋಗ್ಯಕ್ಕೆ ಲಾಭ

ದಿನಕ್ಕೊಂದು ಮೊಟ್ಟೆ ಸೇವನೆ ಆರೋಗ್ಯಕ್ಕೆ ಹಾನಿಕರವೇ ?

ಅನೇಕ ಜನರು ದಿನಕ್ಕೆ ಒಂದು ಮೊಟ್ಟೆ Egg) ಅಥವಾ ಎರಡು ಮೊಟ್ಟೆಯನ್ನು ತಿನ್ನಲು ಇಷ್ಟಪಡುವ ಕಾರಣವೆಂದರೆ, ಅದು ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಅಷ್ಟೇ ಅಲ್ಲ ಮೊಟ್ಟೆಯಲ್ಲಿ ಪ್ರೋಟೀನ್ (Protein), ವಿಟಮಿನ್ಸ್, ಖನಿಜಗಳು, ಕೊಬ್ಬುಗಳು ಹೇರಳವಾಗಿವೆ. ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಹೊಸ ಸಂಶೋಧನೆಯು ಪ್ರತಿದಿನ ಒಂದು ಅಥವಾ ಹೆಚ್ಚಿನ ಮೊಟ್ಟೆಗಳನ್ನು ಸೇವಿಸುವುದರಿಂದ ಟೈಪ್ 2 ಮಧುಮೇಹದ ಅಪಾಯ ಹೆಚ್ಚಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

ವಿಶ್ವ ಆಹಾರ ಮತ್ತು ಪೌಷ್ಟಿಕಾಂಶ ಸಂಸ್ಥೆಗಳು ಮೊಟ್ಟೆಗಳನ್ನು ಸೇವಿಸಲು ಪ್ರೇರೇಪಿಸುತ್ತವೆ. ಅಮೇರಿಕನ್ ಡಯಾಬಿಟಿಸ್ (Diabetes) ಅಸೋಸಿಯೇಷನ್‌ನಂತಹ ಹೆಸರಾಂತ ಸಂಸ್ಥೆಗಳು ಸಹ ಮೊಟ್ಟೆಗಳ ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಅಂಶದಿಂದಾಗಿ ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಯೋಗ್ಯವಾದ ಪೌಷ್ಟಿಕಾಂಶದ ಆಯ್ಕೆಯಾಗಿ ಮೊಟ್ಟೆಯನ್ನು ಸೇವಿಸುವಂತೆ ಶಿಫಾರಸು ಮಾಡುತ್ತವೆ.

ಬೇಯಿಸಿದ ಬಳಿಕ ಎಷ್ಟು ಸಮಯದೊಳಗೆ ಮೊಟ್ಟೆ ಸೇವಿಸಬೇಕು?

ಆದರೆ ದಿನಕ್ಕೊಂದು ಮೊಟ್ಟೆ ಸೇವನೆಯ ಅಭ್ಯಾಸವು ಮಧುಮೇಹವನ್ನು ಆಹ್ವಾನಿಸಬಹುದು ಎಂದು ಅಧ್ಯಯನವೊಂದು ಹೇಳಿರುವುದು ಮೊಟ್ಟೆ ಪ್ರಿಯರಿಗೆ ಅಚ್ಚರಿಯುಂಟು ಮಾಡಿದೆ. ಚೀನಾದ ವಿಶ್ವವಿದ್ಯಾಲಯಗಳು ಈ ಅಧ್ಯಯನವನ್ನು ನಡೆಸಿವೆ.

ಅಧ್ಯಯನದ ವರದಿಯಲ್ಲೇನಿದೆ..?

ಚೀನಾದಲ್ಲಿ ವಯಸ್ಕರಲ್ಲಿ ಮಧುಮೇಹದ ಅಪಾಯವನ್ನು ಹೆಚ್ಚಾಗುತ್ತಿರುವುದು ಹೆಚ್ಚಿನ ಮೊಟ್ಟೆಯ ಸೇವನೆಯಿಂದ ಎಂದು ತಿಳಿದುಬಂದಿದೆ. ಚೀನಾ (China) ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಕತಾರ್ ವಿಶ್ವವಿದ್ಯಾಲಯದ ಸಂಶೋಧಕರ ತಂಡಗಳು 1991ರಿಂದ 2009ರ ವರೆಗೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ‘ಚೀನಾ ಆರೋಗ್ಯ ಮತ್ತು ಪೋಷಣೆ ಸಮೀಕ್ಷೆ’ ಎಂಬ ಶೀರ್ಷಿಕೆಯಡಿ ಈ ಅಧ್ಯಯನವನ್ನು ನಡೆಸಲಾಗಿತ್ತು.

ಸಂಶೋಧನೆಯ ಪ್ರಕಾರ, ದಿನಕ್ಕೆ ಒಂದು ಅಥವಾ ಹೆಚ್ಚು ಮೊಟ್ಟೆಗಳನ್ನು ಸೇವಿಸುವವರಿಗೆ ಮಧುಮೇಹದ ಅಪಾಯ 60 ಪ್ರತಿಶತದಷ್ಟು ಹೆಚ್ಚಿಸಿದೆ ಎಂದು ತಿಳಿದುಬಂದಿದೆ. ಮಧುಮೇಹವು ಆಹಾರದೊಂದಿಗೆ ನೇರವಾಗಿ ಸಂಬಂಧಿಸಿದ್ದಾಗಿದೆ. ಪ್ರತಿನಿತ್ಯ ಒಂದು ಮೊಟ್ಟೆ ತಿನ್ನುವುದು ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತದೆ ಎಂಬುದನ್ನು ಅಧ್ಯಯನದಲ್ಲಿ ತಿಳಿಸಲಾಗಿದೆ. ಪುರುಷರೊಂದಿಗೆ ಹೋಲಿಸಿದಾಗ ಮಹಿಳೆಯರಿಗೆ ಈ ಅಪಾಯವು ಇನ್ನಷ್ಟು ಹೆಚ್ಚಿರುವುದು ಕಂಡು ಬರುತ್ತದೆ.

1991ರಿಂದ 2009ರ ವರೆಗೆ, ಚೀನಾದಲ್ಲಿ ಮೊಟ್ಟೆಗಳನ್ನು ತಿನ್ನುವ ಜನರ ಸಂಖ್ಯೆಯು ಸುಮಾರು ದ್ವಿಗುಣಗೊಂಡಿದೆ. ದೀರ್ಘಕಾಲೀನ ಮೊಟ್ಟೆಯ ಸೇವನೆಯು (ದಿನಕ್ಕೆ 38 ಗ್ರಾಂಗಿಂತ ಹೆಚ್ಚು) ಚೀನೀ ವಯಸ್ಕರಲ್ಲಿ ಮಧುಮೇಹದ ಅಪಾಯವನ್ನು ಸರಿಸುಮಾರು 25 ಪ್ರತಿಶತದಷ್ಟು ಹೆಚ್ಚಿಸಿದೆ. "ಇದಲ್ಲದೆ, ನಿಯಮಿತವಾಗಿ ಬಹಳಷ್ಟು ಮೊಟ್ಟೆಗಳನ್ನು ತಿನ್ನುವ ವಯಸ್ಕರು (50 ಗ್ರಾಂಗಿಂತ ಹೆಚ್ಚು, ಅಥವಾ ದಿನಕ್ಕೆ ಒಂದು ಮೊಟ್ಟೆಗೆ ಸಮನಾಗಿರುತ್ತದೆ) ಮಧುಮೇಹದ ಅಪಾಯವು ಶೇಕಡಾ 60ರಷ್ಟು ಹೆಚ್ಚಾಗುತ್ತದೆ ಎಂದು ಆಹಾರತಜ್ಞರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios