ಹೆಂಡತಿ ಗರ್ಭಿಣಿಯಾದಾಗ ಗಂಡ ಈ ಕೆಲಸಗಳನ್ನ ಮಾಡಬಾರದು
Pregnant Health: ಗರ್ಭಿಣಿಯನ್ನು ಹೇಗೆ ನೋಡಿಕೊಳ್ಳುತ್ತೇವೆ ಎಂಬುದರ ಮೇಲೆ ಆಕೆಯ ಹೆರಿಗೆ ಸಹಜವಾಗಿ ನಡೆಯುತ್ತದೆ. ಗರ್ಭಿಣಿ ಅಪೌಷ್ಟಿಕತೆ ಹಾಗೂ ಅನಾರೋಗ್ಯ ಪೀಡಿತರಾಗಿದ್ದರೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಆಗಬೇಕಾಗುತ್ತದೆ.
ಗರ್ಭಿಣಿ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ಗಂಡನ ಕರ್ತವ್ಯ ಆಗಿರುತ್ತದೆ. ಗರ್ಭಿಣಿಯನ್ನು (Pregnant) ಆರೈಕೆ ಹುಟ್ಟಲಿರುವ ಮಗುವಿನ ಆರೋಗ್ಯವನ್ನು (Baby Health) ನಿರ್ಧರಿಸುತ್ತದೆ. ಮಹಿಳೆ ಗರ್ಭ ಧರಿಸಿದ ದಿನದಿಂದ ಆಕೆಯನ್ನ ಚೆನ್ನಾಗಿ ನೋಡಿಕೊಳ್ಳಬೇಕು. ಈ ಸಮಯದಲ್ಲಿ ಸಣ್ಣ ಸಣ್ಣ ತಪ್ಪುಗಳಿಗೆ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ. ಗರ್ಭಿಣಿಯನ್ನು ಆರೋಗ್ಯಕರ ಮತ್ತು ಸಂತೋಷವಾಗಿ ನೋಡಿಕೊಳ್ಳುವುದು ಗಂಡ (Husband) ಸೇರಿದಂತೆ ಆಕೆಯ ಕುಟುಂಬದ ಜವಾಬ್ದಾರಿಯಾಗಿರುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯ ತುಂಬಾ ಸೂಕ್ಷ್ಮವಾಗಿರುವ ಕಾರಣವನ್ನು ಗರ್ಭಿಣಿಯ ಬಗ್ಗೆ ಕಾಳಜಿ ವಹಿಸಬೇಕು.
ಗರ್ಭಿಣಿಯನ್ನು ಹೇಗೆ ನೋಡಿಕೊಳ್ಳುತ್ತೇವೆ ಎಂಬುದರ ಮೇಲೆ ಆಕೆಯ ಹೆರಿಗೆ ಸಹಜವಾಗಿ ನಡೆಯುತ್ತದೆ. ಗರ್ಭಿಣಿ ಅಪೌಷ್ಟಿಕತೆ ಹಾಗೂ ಅನಾರೋಗ್ಯ ಪೀಡಿತರಾಗಿದ್ದರೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಆಗಬೇಕಾಗುತ್ತದೆ.
ಆಹಾರದ ಅರಿವು
ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಕೆಲ ಮಹಿಳೆಯರು ಆಹಾರ ಸೇವಿಸಲು ಹಿಂದೇಟು ಹಾಕುತ್ತಾರೆ. ಇಂತಹ ಸಮಯದಲ್ಲಿ ಗಂಡನಾದವನು ಪತ್ನಿಗೆ ಆಹಾರ ಎಷ್ಟು ಮುಖ್ಯ ಎಂಬುದರ ಕುರಿತು ಅರಿವು ಮೂಡಿಸಬೇಕು. ಅರಿವು ಮೂಡಿಸುವುದರ ಜೊತೆಗೆ ಪೌಷ್ಠಿಕಾಂಶವುಳ್ಳ ಗುಣಮಟ್ಟದ ಆಹಾರ ನೀಡಬೇಕು. ಇಂತಹ ಸಮಯದಲ್ಲಿ ಗರ್ಭಿಣಿ ಪತ್ನಿ ಸೇವಿಸುವ ಆಹಾರದಲ್ಲಿ ನಿರ್ಲಕ್ಷ್ಯ ಹೊಂದಬಾರದು. ಗಂಡ ಎಂದಿಗೂ ಈ ತಪ್ಪನ್ನು ಮಾಡಬಾರದು.
ನಿದ್ದೆ ಸಮಯ
ಗರ್ಭಿಣಿಯರಿಗೆ ವಿಶ್ರಾಂತಿ ಅಗತ್ಯವಿರುತ್ತದೆ. ಗರ್ಭಾವಸ್ಥೆ ಸಮಯದಲ್ಲಿ ಗರ್ಭಿಣಿಗೆ ನಿದ್ದೆ ಮಾಡಲು ಅವಕಾಶ ನೀಡಬೇಕು. ಈ ಒಂದು ಅಭ್ಯಾಸ ತಾಯಿ ಮತ್ತು ಮಗುವಿನ ಆರೋಗ್ಯದಲ್ಲಿ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಈ ಕಾರಣದಿಂದ ಗಂಡಂದಿರು ತಮ್ಮ ಹೆಂಡತಿಯರು ಗರ್ಭಿಣಿಯಾಗಿದ್ದಾಗ ವಿಶ್ರಾಂತಿ ಪಡೆಯಲು ಸಾಕಷ್ಟು ಸಮಯವನ್ನು ಮೀಸಲಿಡಬೇಕು. ಅನಾವಶ್ಯಕವಾಗಿ ಕಾಲಹರಣ ಮಾಡಿ ನಿದ್ದೆ ಸಮಯವನ್ನು ಹಾಳು ಮಾಡಬಾರದು.
ಕಾಲುಗಳ ಮಸಾಜ್
ಗರ್ಭಿಣಿಯರಿಗೆ ಕಾಲುಗಳ ಮಸಾಜ್ ಆಗಾಗ್ಗೆ ಮಾಡುತ್ತಿರಬೇಕು. ಕಾಲುಗ ಮಸಾಜ್ ಮಾಡೋದರಿಂದ ದೇಹದಲ್ಲಿ ರಕ್ತದ ಪರಿಚಲನೆ ಉಂಟಾಗುತ್ತದೆ. ದಿನಕ್ಕೆ ಕನಿಷ್ಠ ಎರಡು ಬಾರಿಯಾದ್ರೂ ಕಾಲು ಮತ್ತು ಪಾದಗಳ ಮಸಾಜ್ ಮಾಡಬೇಕು. ನಾನು ಗಂಡ ಎಂದು ನಾಚಿಕೊಳ್ಳೋರು ಪಾದದ ಮಸಾಜ್‌ಗೆ ಜನರನ್ನು ನೇಮಿಸಬಹುದು. ಹೆಂಡತಿಯ ಸೇವೆ ಮಾಡೋದರಲ್ಲಿ ಯಾವುದೇ ತಪ್ಪಿಲ್ಲ.
ಮದುವೆಗೂ ಮೊದ್ಲು ಪ್ರಿಯಾಂಕಾ ಚೋಪ್ರಾ 'ಅದನ್ನೇ' ಕಲಿತಿರಲಿಲ್ಲವಂತೆ; ಅವರಪ್ಪ ಏನ್ ಹೇಳಿದ್ರಂತೆ?
ಅಡುಗೆ
ಗರ್ಭಾವಸ್ಥೆ ಸಮಯದಲ್ಲಿ ಮಹಿಳೆಯರು ಹುಣಸೆ, ಮಾವು, ಉಪ್ಪಿನಕಾಯಿ ಸೇರಿದಂತೆ ಹುಳಿ ಪದಾರ್ಥ ತಿನ್ನುವ ಬಯಕೆ ಉಂಟಾಗುತ್ತದೆ. ಇನ್ನು ಕೆಲವರಿಗೆ ಒಂದಿಷ್ಟು ಪದಾರ್ಥ ಅಥವಾ ಅದರ ವಾಸನೆಯಿಂದ ಅಲರ್ಜಿ ಹೊಂದಿರುತ್ತಾರೆ. ಇಂತಹ ಸಮಯದಲ್ಲಿ ಗಂಡನಾದವರು ಆಕೆಗೆ ಪೂರಕವಾದ ವಾತಾವರಣ ನಿರ್ಮಿಸೋದರ ಜೊತೆಗೆ ಇಷ್ಟವಾದ ಆಹಾರವನ್ನು ಕೊಡಿಸಬೇಕು.
ಹೆಂಡತಿ ಸೌಂದರ್ಯದ ಬಣ್ಣನೆ
ಗರ್ಭಾವಸ್ಥೆ ಸಮಯದಲ್ಲಿ ಮಹಿಳೆಯದ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತದೆ. ತೂಕ ಹೆಚ್ಚಳ, ಮುಖದ ಚಹರೆಯಲ್ಲಿ ಕಪ್ಪು ಕಲೆಗಳಂತಹ ಸಮಸ್ಯೆಗಳು ಉಂಟಾಗುತ್ತವೆ. ಬಾಹ್ಯ ಸೌಂದರ್ಯವನ್ನು ಮಹಿಳೆಯರು ಕಳೆದುಕೊಳ್ಳುತ್ತಾರೆ. ಇದರಿಂದ ಗರ್ಭಿಣಿ ಖಿನ್ನತೆಗೊಳಗಾಗುವ ಸಾಧ್ಯತೆ ಇರುತ್ತದೆ. ಇದನ್ನು ತಿಳಿದು ಗಂಡನಾದವನು ಪತ್ನಿಯ ಸೌಂದರ್ಯವನ್ನು ವರ್ಣನೆ ಮಾಡಬೇಕು. ಅದನ್ನು ಬಿಟ್ಟು ಕೀಳಾಗಿ ಕಾಣಬಾರದು.
ಎದೆಹಾಲು ಮಾರಾಟ ಮಾಡುತ್ತಿದ್ದ ಅಂಗಡಿಗೆ ಅಧಿಕಾರಿಗಳಿಂದ ಸೀಲ್
ತಾಳ್ಮೆ
ಗರ್ಭಿಣಿಯರಲ್ಲಿ ಹಾರ್ಮೋನ್‌ಗಳು ಬದಲಾವಣೆಗಳು ಆಗೋದರ ಜೊತೆ ಮಗುವಿನ ಬೆಳವಣಿಗೆಯಿಂದ ಎಲ್ಲಾ ಕೆಲಸದಲ್ಲಿಯೂ ಸಕ್ರಿಯರಾಗಿರಲು ಸಾಧ್ಯವಿರಲ್ಲ. ಹಾರ್ಮೋನ್‌ಗಳ ವ್ಯತ್ಯಾಸದಿಂದ ಮಹಿಳೆಯರ ಕೋಪ, ಸಿಟ್ಟು ಬರುತ್ತಿರುತ್ತದೆ. ಈ ಸಂದರ್ಭದಲ್ಲಿ ಗಂಡನಾದವನು ತಾಳ್ಮೆಯಿಂದಿರಬೇಕು.