Asianet Suvarna News Asianet Suvarna News

Benefits of Dates: ಮಕ್ಕಳ ಬೆಳವಣಿಗೆಗೆ ಖರ್ಜೂರ ಸೇವನೆ ಬೆಸ್ಟ್

ಪ್ರಾಚೀನ ಕಾಲದಿಂದಲೂ ಜನರು ಖರ್ಜೂರ (Dates)ವನ್ನು ಆರೋಗ್ಯ (Health)ಯುತವಾದ ಆಹಾರ ಎಂದೇ ಪರಿಗಣಿಸಿದ್ದಾರೆ. ಹಸಿ ಖರ್ಜೂರವಾದರೂ ಸರಿ, ಒಣ ಖರ್ಜೂರವಾದರೂ ಸರಿ ಇವುಗಳ ಸೇವನೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಕ್ಕಳ (Children) ಸದೃಢ ಬೆಳವಣಿಗೆಗೂ ಖರ್ಜೂರ ಸೇವನೆ ಬೆಸ್ಟ್..

Amazing Health Benefits of Dates
Author
Bengaluru, First Published Dec 20, 2021, 9:07 PM IST

ಖರ್ಜೂರ ಸೇವನೆ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿದೆ. ಖರ್ಜೂರದಲ್ಲಿರುವ ಹೆಚ್ಚಿನ ಕ್ಯಾಲೋರಿ ಅಂಶವು ದೇಹಕ್ಕೆ ದಿನವಿಡೀ ಶಕ್ತಿಯನ್ನು ಒದಗಿಸುವುದರಿಂದ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ಖರ್ಜೂರ ಅಗತ್ಯ ವಿಟಮಿನ್‌ಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಖರ್ಜೂರದಲ್ಲಿ ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳು ಅಧಿಕ ಪ್ರಮಾಣದಲ್ಲಿದೆ. ತಜ್ಞರ ಪ್ರಕಾರ, ಎಲ್ಲಾ ರೀತಿಯ ಖರ್ಜೂರವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಖರ್ಜೂರಗಳು ಮೂಲತಃ ಉಷ್ಣವಲಯದ ಹಣ್ಣುಗಳಾಗಿವೆ. ವೈಜ್ಞಾನಿಕವಾಗಿ ಇದನ್ನು ಫೀನಿಕ್ಸ್ ಡಾಕ್ಟಿಲಿಫೆರಾ ಎಂದು ಕರೆಯಲಾಗುತ್ತದೆ.

ಮೂಳೆಯ ಆರೋಗ್ಯದ ಬೆಳವಣಿಗೆಗೆ ಸಹಾಯ ಮಾಡುತ್ತವೆ

ಖರ್ಜೂರದಲ್ಲಿ ಸೆಲೆನಿಯಮ್, ಮ್ಯಾಂಗನೀಸ್, ಮೆಗ್ನೀಸಿಯಮ್ ಮತ್ತು ತಾಮ್ರದಂತಹ ಸೂಕ್ಷ್ಮ ಪೋಷಕಾಂಶಗಳು ಹೆಚ್ಚು ಸಮೃದ್ಧವಾಗಿವೆ. ಈ ಸೂಕ್ಷ್ಮ ಪೋಷಕಾಂಶಗಳು ಮೂಳೆಯ ಆರೋಗ್ಯದ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಖರ್ಜೂರದಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ಆಸ್ಟಿಯೊಪೊರೋಸಿಸ್‌ನಂತಹ ಮೂಳೆಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಹೆಚ್ಚು ಪರಿಣಾಮಕಾರಿ. ಆದ್ದರಿಂದ, ಆರೋಗ್ಯಕರ ಮೂಳೆಗಳಿಗಾಗಿ ನಿಮ್ಮ ಆಹಾರದ ಭಾಗವಾಗಿ ನೀವು ಖರ್ಜೂರವನ್ನು ಸೇರಿಸುವುದು ಹೆಚ್ಚು ಸೂಕ್ತವಾಗಿದೆ.

ದಿನಕ್ಕೆರಡು ಖರ್ಜೂರ ತಿಂದರೆ ಲೈಂಗಿಕ ಆರೋಗ್ಯಕ್ಕೂ ಆಗುತ್ತೆ ಮದ್ದು!

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ

ಅಧ್ಯಯನದಿಂದ ಖರ್ಜೂರದಲ್ಲಿರುವ ಬೀಟಾ ಡಿ-ಗ್ಲುಕನ್ ಎಂಬ ಅಂಶವು ದೇಹದೊಳಗೆ ಆ್ಯಂಟಿ-ಟ್ಯೂಮರ್ ಚಟುವಟಿಕೆಯನ್ನು ಉತ್ತೇಜಿಸಲು ತುಂಬಾ ಅನುಕೂಲಕರವಾಗಿದೆ ಎಂದು ತಿಳಿದುಬಂದಿದೆ. ಖರ್ಜೂರ (Dates)ದಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳ ಹೆಚ್ಚಿನ ಸಾಂದ್ರತೆಯು ಸ್ವತಂತ್ರ ರಾಡಿಕಲ್‌ಗಳ (ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳು) ಚಟುವಟಿಕೆಗಳನ್ನು ಕಡಿಮೆ ಮಾಡಲು ಸಹಾಯ (Help) ಮಾಡುತ್ತದೆ. ಇದರಿಂದಾಗಿ ಕ್ಯಾನ್ಸರ್ (Cancer) ಸಂಭವಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಮೂತ್ರಪಿಂಡಗಳನ್ನು ರಕ್ಷಿಸುತ್ತದೆ

ಖರ್ಜೂರದ ಸೇವನೆ ಮೂತ್ರಪಿಂಡಗಳು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಖರ್ಜೂರದಲ್ಲಿರುವ ಅಂಶ ಮೂತ್ರಪಿಂಡದಲ್ಲಿ ಹೆಚ್ಚುವರಿಯಾಗಿರುವ ಪ್ಲಾಸ್ಮಾ ಮತ್ತು ಕ್ರಿಯೇಟಿನೈನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಮೂತ್ರಪಿಂಡಗಳ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. .

ಮಕ್ಕಳು ಸದೃಢವಾಗಿ ಬೆಳೆಯಲು ಖರ್ಜೂರ ಸೇವನೆ ಉತ್ತಮ

ಮಕ್ಕಳು ಸದೃಢವಾಗಿ ಬೆಳೆಯಲು ಖರ್ಜೂರ ಸೇವನೆ ಉತ್ತಮ. ಹಾಲಿನೊಂದಿಗೆ ಖರ್ಜೂರದ ಪೇಸ್ಟ್ ಅನ್ನು ಮಿಶ್ರಣ ಮಾಡಿ ಮಕ್ಕಳಿಗೆ ಕುಡಿಸಿದರೆ ಮಕ್ಕಳು ದಷ್ಟಪುಷ್ಟವಾಗಿ ಬೆಳೆಯಲು ಸಹಾಯವಾಗುತ್ತದೆ. ದೇಹದಲ್ಲಿ ಶಕ್ತಿ ತುಂಬಲು ಸಹ ಖರ್ಜೂರ ಸೇವನೆ ಸಹಾಯಕಾರಿಯಾಗಿದೆ. ದಿನಕ್ಕೆ ಎರಡಾದರೂ ಖರ್ಜೂರವನ್ನು ಸೇವಿಸುವುದು ಆರೋಗ್ಯಕ್ಕೆ ಹಿತಕರ.

ಖರ್ಜೂರ ತಿನ್ನಲು ಸೂಕ್ತ ಸಮಯ ಯಾವುದು?

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಖರ್ಜೂರ ಸೇವಿಸಬೇಕು. ಶೀತವಿದ್ದಾಗ, ಒಂದು ಗ್ಲಾಸ್ ಹಾಲಿನಲ್ಲಿ 5-6 ಖರ್ಜೂರ ಸೇರಿಸಿ, ಐದು ಕರಿಮೆಣಸು, ಒಂದು ಏಲಕ್ಕಿ ಮತ್ತು ಒಂದು ಚಮಚ ತುಪ್ಪ ಸೇರಿಸಿ ಮತ್ತು ಅದನ್ನು ಕುದಿಸಿ. ರಾತ್ರಿಯಲ್ಲಿ ಮಲಗುವ ಮುನ್ನ ಕುಡಿಯುವುದರಿಂದ ಶೀತ ಮತ್ತು ನೆಗಡಿಗೆ ಪರಿಹಾರ ಸಿಗುತ್ತದೆ. 

ರಕ್ತಹೀನತೆಯನ್ನು ಹೋಗಲಾಡಿಸಲು ನೆರವಾಗುತ್ತದೆ

ಖರ್ಜೂರದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಇದು ರಕ್ತಹೀನತೆಯನ್ನು ಹೋಗಲಾಡಿಸಲು ನೆರವಾಗುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ರಾತ್ರಿ ಖರ್ಜೂರವನ್ನು ನೆನೆಸಿಟ್ಟು, ಬೆಳಿಗ್ಗೆ ಹಾಲು ಅಥವಾ ತುಪ್ಪದೊಂದಿಗೆ ತಿನ್ನುವುದು ಪ್ರಯೋಜನಕಾರಿಯಾಗಿದೆ. ಇದಲ್ಲದೆ, 3-4 ಖರ್ಜೂರಗಳನ್ನು ಬಿಸಿ ನೀರಿನಲ್ಲಿ ತೊಳೆದು ಹಸುವಿನ ಹಾಲಿನೊಂದಿಗೆ ಕುದಿಸಿ, ಬೆಳಿಗ್ಗೆ ಮತ್ತು ಸಂಜೆ ಕುಡಿಯುವುದರಿಂದ ಕಡಿಮೆ ರಕ್ತದೊತ್ತಡದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಪ್ರತಿದಿನ ಸೇವಿಸುವ ಎರಡು ಖರ್ಜೂರಗಳಿಂದ 20-25mg ನಷ್ಟು ಮೆಗ್ನೀಶಿಯಂ ದೊರಕುವುದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆ ಕಡಿಮೆಯಾಗುತ್ತದೆ.

ಮಲಬದ್ಧತೆ ಸಮಸ್ಯೆಗೆ ಪರಿಹಾರ 

ಚಳಿಗಾಲದಲ್ಲಿ ಖರ್ಜೂರದಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಫೈಬರ್ ಅಂಶಗಳಿವೆ. ಹೀಗಾಗಿ ಇದು ಮಲಬದ್ಧತೆಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ರಾತ್ರಿಯಲ್ಲಿ ಮಲಗುವ ಮುನ್ನ ಕೆಲವು ಖರ್ಜೂರಗಳನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ತಿನ್ನಿರಿ. ಇದು ಮಲಬದ್ಧತೆ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಖರ್ಜೂರದ ಸೇವನೆ ಸಂಧಿವಾತದ ನೋವನ್ನು ಶಮನ ಮಾಡುತ್ತದೆ. ಇದಲ್ಲದೆ, ಪಾರ್ಶ್ವವಾಯು ಮತ್ತು ಎದೆ ನೋವಿನ ಸಮಸ್ಯೆಗಳನ್ನು ನಿವಾರಿಸಲು ಖರ್ಜೂರ ಸಹಕಾರಿಯಾಗಿದೆ.

ಹೃದಯದ ಕ್ಷಮತೆ ಉತ್ತಮಗೊಳ್ಳಲು ಎರಡು ಖರ್ಜೂರಗಳನ್ನು ರಾತ್ರಿಯಿಡೀ ತಣ್ಣೀರಿನಲ್ಲಿ ನೆನೆಸಿಟ್ಟು ಮರುದಿನ ಈ ಖರ್ಜೂರಗಳನ್ನು ಬೀಜ ನಿವಾರಿಸಿ ನೀರಿನೊಂದಿಗೇ ಕುಡಿಯಬೇಕು. ಎರಡು ಖರ್ಜೂರಗಳನ್ನು ಒಂದು ಲೋಟ ಹಾಲಿನಲ್ಲಿ ನೆನೆಸಿಟ್ಟು ಇದಕ್ಕೆ ಒಂದು ಚಮಚ ಜೇನು ಬೆರೆಸಿ ಕುದಿಸಿ ಕುಡಿಯುವುದರಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ. 

Follow Us:
Download App:
  • android
  • ios