Fitness Secrets: ಹೆರಿಗೆಯಾದ ಒಂದೂವರೆ ತಿಂಗಳಿಗೇ ತಲೆ ಕೆಳಗು ಮಾಡಿ ನಿಂತ್ಕೊಂಡ್ರು ಆಲಿಯಾ ಭಟ್‌

ಸದ್ಯ ತಾಯ್ತನದ ಸುಖ ಸವಿಯುತ್ತಿರುವ ಆಲಿಯಾ ಭಟ್‌ ಈಗ ತಮ್ಮ ಯೋಗದ ಫೋಟೊವೊಂದರಿಂದಾಗಿ ಸುದ್ದಿಯಲ್ಲಿದ್ದಾರೆ. ತಮ್ಮ ಇನ್‌ ಸ್ಟಾಗ್ರಾಮ್‌ ಖಾತೆಯಲ್ಲಿ ಅವರು ಹಾಕಿರುವ ಶೀರ್ಷಾಸನದ ಫೋಟೊ ಹೊಸ ಅಮ್ಮಂದಿರಲ್ಲಿ ಸ್ಫೂರ್ತಿ ಹುಟ್ಟುಹಾಕಿದೆ. 
 

Alia Bhat did areal yoga after one and half month of delivery of child

ಸೋಷಿಯಲ್‌ ಮೀಡಿಯಾದಲ್ಲಿ ಆಲಿಯಾ ಭಟ್‌ ಹಾಕಿರುವ ಪೋಸ್ಟ್‌ ಒಂದು ಎಲ್ಲರನ್ನು ದಂಗು ಬಡಿಸಿದೆ. ಅದರಲ್ಲೂ ಮಹಿಳೆಯರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಏಕೆಂದರೆ, ಆಲಿಯಾ ಭಟ್‌ ಏರಿಯಲ್‌ ಯೋಗ ಮಾಡುತ್ತಿರುವ ಪೋಸ್‌ ನಲ್ಲಿ ಫೋಟೊ ಶೇರ್‌ ಮಾಡಿದ್ದಾರೆ. ಹೆರಿಗೆಯಾದ ಒಂದೂವರೆ ತಿಂಗಳ ಬಳಿಕ ಫಿಟ್‌ ನೆಸ್‌ ಕಾಯ್ದುಕೊಳ್ಳಲು ಏನು ಮಾಡಿದೆ ಎನ್ನುವ ಅನುಭವಗಳನ್ನು ಅವರು ಹಂಚಿಕೊಂಡಿದ್ದಾರೆ. ಕೇವಲ ಒಂದೂವರೆ ತಿಂಗಳಲ್ಲಿ ಏರಿಯಲ್‌ ಯೋಗ ಮಾಡಿದ್ದಾರೆ ಎನ್ನುವುದೇ ಈಗ ಹಾಟ್‌ ವಿಚಾರ. ಹೆರಿಗೆಯಾದ ಬಳಿಕ ಸರಿಸುಮಾರಾಗಿ ದೇಹ ಸಹಜಸ್ಥಿತಿಗೆ ಬರಲು ಸ್ವಲ್ಪ ಸಮಯ ಬೇಕು. ಇದು ಒಬ್ಬೊಬ್ಬರಲ್ಲಿ ಒಂದೊಂದು ರೀತಿ. ಈ ನಡುವೆ ದೇಹದ ಫಿಟ್‌ ನೆಸ್‌ ಅನ್ನು ಹಿಂದಿನ ಸ್ಥಿತಿಗೆ ಮರಳಿಸಲು ಮಹಿಳೆಯರು ಪ್ರಯತ್ನ ಮಾಡಬೇಕು ಎಂದೂ ಅವರು ಸಲಹೆ ನೀಡಿದ್ದಾರೆ. ಆಲಿಯಾ ಭಟ್‌ ಸದ್ಯ ಈಗ ಹೆಣ್ಣುಮಗುವಿನ ಅಮ್ಮ. ತಾಯ್ತನವನ್ನು ಎಂಜಾಯ್‌ ಮಾಡುತ್ತಿರುವ ಸೆಲೆಬ್ರಿಟಿ ತಾರೆ. ತಮ್ಮ ಇನ್‌ ಸ್ಟಾಗ್ರಾಮ್ ಖಾತೆಯಲ್ಲಿ ಅವರು ತಾವು ಯೋಗ ಮಾಡುತ್ತಿರುವ ಭಂಗಿಯ ಫೋಟೊ ಶೇರ್‌ ಮಾಡುವ ಜತೆಗೆ, ಅಮ್ಮಂದಿರಿಗೆ ಕಿವಿಮಾತನ್ನೂ ಹೇಳಿದ್ದಾರೆ. ಸದ್ಯ ತಾವು ತಮ್ಮ ಅಂತಃಸತ್ವದೊಂದಿಗೆ ಸಂಪರ್ಕ ಬೆಳೆಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಜತೆಗೆ, “ಪ್ರತಿ ಅಮ್ಮಂದಿರು ತಮ್ಮ ದೇಹವನ್ನು ಗಮನಿಸಬೇಕು, ದೇಹದ ಮಾತು ಕೇಳಿಸಿಕೊಳ್ಳಬೇಕು, ದೇಹ ಅನುಮತಿ ನೀಡದ ಯಾವುದೇ ಚಟುವಟಿಕೆ ಮಾಡಬಾರದುʼ ಎಂದು ಹೇಳಿರುವುದು ಇದೀಗ ಹೊಸ ಅಮ್ಮಂದಿರಿಗೆ ಸ್ಫೂರ್ತಿಯಾಗುವಂತಿದೆ.

ಆಲಿಯಾ ಭಟ್‌ (Alia Bhat) ತಮ್ಮ ಮಗಳು (Daughter) ಹುಟ್ಟಿದ ಒಂದು ಮತ್ತು ಎರಡನೇ ವಾರದಲ್ಲಿ ಕೇವಲ ಉಸಿರಾಟ (Breathing) ಮತ್ತು ವಾಕಿಂಗ್‌ (Walking) ಬಗ್ಗೆ ಗಮನ ನೀಡಿದ್ದರು. ಅವುಗಳ ಮೂಲಕ ದೇಹದ ಸ್ಥಿರತೆ (Stability) ಮತ್ತು ಸಮತೋಲನವನ್ನು (Balance) ಮರಳಿ ಪಡೆಯಲು ಯತ್ನಿಸಿದ್ದರು. “ಆದರೆ, ನೀವು ನಿಮಗೆ ಎಷ್ಟು ಬೇಕೋ ಅಷ್ಟು ಸಮಯ ತೆಗೆದುಕೊಳ್ಳಿ. ಹಾಗೂ ನಿಮ್ಮ ದೇಹ ನಿಮಗಾಗಿ ಏನೆಲ್ಲ ಮಾಡಿದೆಯೋ ಅದಕ್ಕಾಗಿ ಅದರ ಬಗೆಗೊಂದು ಮೆಚ್ಚುಗೆ ಉಳಿಸಿಕೊಳ್ಳಿʼ ಎಂದೂ ಅಮ್ಮಂದಿರಿಗೆ ಹೇಳಿದ್ದಾರೆ. ಆಲಿಯಾ ಪ್ರಕಾರ, “ಮಗುವಿಗೆ ಜನ್ಮ ನೀಡುವುದು ಚಮತ್ಕಾರದ ಕಾರ್ಯ. ಇದರ ನಂತರ ವ್ಯಾಯಾಮ (Exercise) ಮಾಡುವ ಮುನ್ನ ವೈದ್ಯರ ಸಹಕಾರ ಪಡೆದುಕೊಳ್ಳಬೇಕುʼ.

Exercise ಮಾಡುವಾಗ ಗಾಯ ಆಗ್ಬಾರ್ದು ಅಂದ್ರೆ ಸೆಲೆಬ್ರಿಟೀಸ್ ಟಿಪ್ಸ್ ಫಾಲೋ ಮಾಡಿ

ಏನಿದು ಏರಿಯಲ್ ಯೋಗ?
ವರ್ಕೌಟ್‌ (Workout) ಮಾಡಿದಾಗ ಸಂಪೂರ್ಣ ದೇಹ ಹೇಗೆ ಕೆಲಸ ಮಾಡುತ್ತದೆಯೋ ಅದೇ ರೀತಿಯ ಕಾರ್ಯವನ್ನು ಏರಿಯಲ್‌ ಯೋಗ (Ariel Yoga) ಮಾಡುತ್ತದೆ. ಈ ಯೋಗದ ಹಲವು ರೀತಿಯ ಚಲನೆಗಳು (Movements) ದೇಹದ ಪ್ರತಿ ಭಾಗವನ್ನೂ ಚಲಿಸುವಂತೆ ಅಥವಾ ಹಿಗ್ಗುವಂತೆ ಮಾಡುತ್ತವೆ. ಈ ಯೋಗ ಮಾಂಸಖಂಡಗಳನ್ನು (Muscles) ದೃಢಪಡಿಸುತ್ತದೆ. ಇದರಲ್ಲಿ ತಲೆಕೆಳಗು ಮಾಡಿ ಉಲ್ಟಾ ನಿಂತುಕೊಳ್ಳಬೇಕಾಗುತ್ತದೆ. ತಲೆಯನ್ನು ಕೆಳಭಾಗದಲ್ಲಿರಿಸಿ ಕಾಲುಗಳನ್ನು ಮೇಲ್ಭಾಗಕ್ಕೆ ಕೊಂಡೊಯ್ದು ಬ್ಯಾಲೆನ್ಸ್‌ ಮಾಡಬೇಕಾಗುತ್ತದೆ. ಅಧೋಮುಖ ಶ್ವಾನಾಸನ, ವಿಪರೀತಕರಣಿ ಹಾಗೂ ಶೀರ್ಷಾಸನ ಸೇರಿದಂತೆ ಹಲವು ಪ್ರಮುಖ ಆಸನಗಳನ್ನು (Asanas) ಇದು ಒಳಗೊಂಡಿದೆ. 

Yoga Tips : ಮಧುಮೇಹಿಗಳು ಈ ಯೋಗ ಮಾಡಿದ್ರೆ ಹೆಚ್ಚುತ್ತೆ ಸಮಸ್ಯೆ

ಏರಿಯಲ್‌ ಯೋಗದಿಂದೇನು ಲಾಭ?
ಏರಿಯಲ್‌ ಯೋಗದಿಂದ ದೇಹದಲ್ಲಿ ರಕ್ತಪರಿಚಲನೆ (Blood Circulation) ಉತ್ತಮಗೊಳ್ಳುತ್ತದೆ. ಇದರಿಂದ ಶರೀರದ ಪ್ರತಿ ಅಂಗಾಂಗಕ್ಕೂ ಆಮ್ಲಜನಕ (Oxigen) ಚೆನ್ನಾಗಿ ಪೂರೈಕೆಯಾಗುತ್ತದೆ. ಪರಿಣಾಮವಾಗಿ, ದೇಹದ ಶಕ್ತಿ (Energy) ವರ್ಧಿಸುತ್ತದೆ. ಸುಸ್ತನ್ನು ಕಡಿಮೆಗೊಳಿಸಿ ದೇಹವನ್ನು ಸದೃಢಗೊಳಿಸುತ್ತದೆ. ಮನಸ್ಥಿತಿಯನ್ನು ಉತ್ತಮಪಡಿಸುವ ಎಂಡಾರ್ಫಿನ್‌ (Endorphin) ಹಾರ್ಮೋನ್‌ ಸ್ರವಿಕೆ ಹೆಚ್ಚಿಸಿ, ಮಾಂಸಖಂಡಗಳಿಗೆ ಪೋಷಕ ತತ್ವಗಳು ಲಭಿಸುವಂತೆ ಮಾಡಲು ಸಹಕಾರಿಯಾಗಿದೆ. ಮಿದುಳು ಚುರುಕಾಗಲು ಸಹ ಇದು ಅತ್ಯುತ್ತಮವಾಗಿದೆ. ದೇಹದಲ್ಲಿ ನೋವಿದ್ದರೆ ಹಾಗೂ ಊತವಿದ್ದರೂ (Swelling) ಕಡಿಮೆ ಆಗುತ್ತದೆ. ಮುಖ್ಯವಾಗಿ, ದೇಹದ ಕೆಳಭಾಗದ ಊತ, ನೋವನ್ನು (Pain) ನಿವಾರಣೆ ಮಾಡುತ್ತದೆ. 

Latest Videos
Follow Us:
Download App:
  • android
  • ios