ದಿನಪೂರ್ತಿ ಚುರುಕಿನಿಂದ ಕೂಡಿರಲು ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ತಾವೇನು ಮಾಡುತ್ತಿದ್ದೇವೆ ಎನ್ನುವ ಕುರಿತು ಮಾಹಿತಿ ನೀಡಿದ್ದಾರೆ ನಟಿ ಅದಿತಿ ಪ್ರಭುದೇವ  

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್​ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿ ಜೀವನವನ್ನು ಎಂಜಾಯ್​ ಮಾಡುತ್ತಿದ್ದಾರೆ. ಯಶಸ್ ಪಟ್ಲಾ ಅವರ ಪತ್ನಿಯಾಗಿ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ (social media) ಆ್ಯಕ್ಟೀವ್​ ಆಗಿರುವ ನಟಿ ಅದಿತಿ ಪ್ರಭುದೇವ ಈಚೆಗಷ್ಟೇ ಹೊಸ ಹೇರ್​ಸ್ಟೈಲ್​ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ನಂತರ ಪತಿಗಾಗಿ ಪನ್ನೀರ್​ ರೆಸಿಪಿ ಮಾಡಿ ಅದರ ಬಗ್ಗೆಯೂ ತಿಳಿಸಿಕೊಟ್ಟಿದ್ದರು.

ಇದೀಗ ನಟಿ, ಕೆಲವೊಂದು ಆರೋಗ್ಯ ಟಿಪ್ಸ್​ ನೀಡಿದ್ದಾರೆ. ನನ್ನ ದೈನಂದಿನ ಜೀವನ ಆರೋಗ್ಯವಾಗಿ ಮತ್ತು ಚುರುಕಾಗಿ ಇರಲು ನಾನು Follow ಮಾಡುವ Health Tips ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಇದರಲ್ಲಿ ಅವರು ಮೊದಲಿಗೆ ಕರಿಬೇವಿನ ಕುರಿತು ವಿವರಣೆ ನೀಡಿದ್ದಾರೆ. ಆ್ಯಂಟಿ ಆಕ್ಸಿಡೆಂಟ್​ ಗುಣ ಇರುವ ಕರಿಬೇವು ಕಣ್ಣು, ಕೂದಲಿಗೆ ಸಕತ್​ ಪ್ರಯೋಜನಕಾರಿಯಾಗಿದೆ ಎಂದಿರುವ ನಟಿ, ದಿನನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ 5-10 ಕರಿಬೇವನ್ನು ತಾವು ತಿನ್ನುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆಗಾಗ್ಗೆ ಹೊಸ ಹೊಸ ಒಳ್ಳೆಯ ಅಭ್ಯಾಸ ಶುರು ಮಾಡಿಕೊಳ್ಳುತ್ತೇನೆ ಎನ್ನುವ ಮೂಲಕ ವಿಡಿಯೋ ಆರಂಭಿಸಿರುವ ಅದಿತಿ ಅವರು, ಕರಿಬೇವಿನ ಪ್ರಯೋಜನ ತಿಳಿಸಿಕೊಟ್ಟಿದ್ದಾರೆ. ಇದರ ಜೊತೆಗೆ, ಬೆಳಗಿನ ಜಾವ ಬೆಚ್ಚಗಿನ ನೀರಿಗೆ ನಿಂಬೆ ರಸ, ಜೇನುತುಪ್ಪ ಅಥವಾ ಅರಿಶಿಣ ಹಾಕಿಕೊಂಡು ಕುಡಿದರೆ ದಿನಪೂರ್ತಿ ಚುರುಕಾಗಿ ಇರಬಹುದು ಎಂದಿದ್ದಾರೆ. ಇದರಿಂದ ಶರೀರಕ್ಕೆ ತುಂಬಾ ಉಪಯೋಗವಿದೆ ಎಂದಿರುವ ಅದಿತಿ ಅವರು, ಅರಿಶಿಣ ಮತ್ತು ನಿಂಬೆ ಹಣ್ಣು ಎರಡು ಕೂಡ ದೇಹದಲ್ಲಿರುವ ಫ್ಯಾಟ್​ ಕರಗಿಸಲು ಸಹಾಯ ಮಾಡುತ್ತದೆ, ನಿಂಬೆ ಹಣ್ಣು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಅರಿಶಿಣ ನಮ್ಮ ದೇಹದಲ್ಲಿರುವ ಟಾಕ್ಸಿನ್​ ಅಂಶಗಳನ್ನು ಹೊರಕ್ಕೆ ಹಾಕುತ್ತದೆ. ಆದ್ದರಿಂದ ಬೆಳಗಿನ ಜಾವ ಇದರ ಸೇವನೆ ಅಗತ್ಯವಾಗಿದೆ ಎಂದಿದ್ದಾರೆ. 

ನಟಿ ಅದಿತಿ ಹೇರ್​ಕಟ್ ಸೂಪರ್ರೋ, ಪನ್ನೀರ್​ ರೆಸಿಪಿ ಸೂಪರ್ರೊ? ಪತಿ ರಿಯಾಕ್ಷನ್ ಹೇಗಿತ್ತು?

 ಇನ್ನು ತಮ್ಮ ನಿತ್ಯ ಜೀವನದ ಕೆಲಸದ ಕುರಿತು ಹೇಳಿದ ಅದಿತಿ ಪ್ರಭುದೇವ ಅವರು, ಬೆಳಿಗ್ಗೆ ಒಂದು ಗಂಟೆಯಲ್ಲಿಯೇ ಎಲ್ಲಾ ಕ್ಲೀನಿಂಗ್​ ಕೆಲಸಗಳನ್ನು ಮುಗಿಸುವುದಾಗಿ ಹೇಳಿದ್ದಾರೆ. ಇದನ್ನು ಸಾಮಾನ್ಯವಾಗಿ ಎಲ್ಲ ಗೃಹಿಣಿಯರೂ ಮಾಡುತ್ತಾರೆ ಎಂದಿರುವ ನಟಿ, ತಾವು ಕೂಡ ಇತರರಂತೆಯೇ, ನನ್ನಲ್ಲೇನೂ ಎಕ್ಸ್​ಟ್ರಾ ವಿಶೇಷವಿಲ್ಲ ಎಂದಿದ್ದಾರೆ. ಎಲ್ಲರಿಗೂ ಇರುವಂತೆಯೇ ಟೆನ್ಷನ್​, ಕೆಲಸದ ಒತ್ತಡ ಎಲ್ಲವೂ ತಮಗೂ ಇರುವುದಾಗಿ ಹೇಳಿದ್ದಾರೆ. ಬೆಳಗಿನ ವೇಳೆ ಮನೆಯಲ್ಲಾ ಕ್ಲೀನ್​ ಮಾಡಿಟ್ಟುಕೊಂಡರೆ ಇಡೀ ದಿನ ಉಲ್ಲಾಸದಿಂದ ಇರಬಹುದು ಎನ್ನುವುದು ಅವರ ಮಾತು. ಇದೇ ವೇಳೆ ಜೀವನ ಪಾಠವನ್ನೂ ಮಾಡಿದ್ದಾರೆ. ಇದೇ ವೇಳೆ, ದಿನನಿತ್ಯ ನಾವು ಒಳ್ಳೆಯ ಜನರಾಗಿರಲು ಟ್ರೈ ಮಾಡಬೇಕು. ನಾಲ್ಕು ಜನರಿಗೆ ಸಹಾಯ ಮಾಡಬೇಕು. ಇದರಿಂದ ಜೀವನದಲ್ಲಿ ತುಂಬಾ ಒಳ್ಳೆಯದಾಗುತ್ತದೆ ಎಂದಿದ್ದಾರೆ.

 ಮುದ್ದಾದ ನಾಯಿಮರಿ ಚಾಕಲೇಟ್​ (Chocolate) ಪರಿಚಯ ಮಾಡಿರುವ ನಟಿ, ಅದಕ್ಕಿರುವ ಆಟದ ಸಾಮಾನುಗಳನ್ನು ತೋರಿಸಿದ್ದಾರೆ. ನಾಯಿಗೆ ತಾವು ಕೊಡುವ ಆಹಾರದ ಕುರಿತು ವಿವರಣೆ ನೀಡಿದ ಅದಿತಿ ಅವರು, ಬೆಳಗ್ಗೆನೇ ಅದಕ್ಕೆ ಪ್ರೋಟೀನ್​ಯುಕ್ತ ಆಹಾರ ನೀಡುವುದಾಗಿ ಹೇಳಿದ್ದಾರೆ. ನಾಯಿಗೆ ಮೊಟ್ಟೆ, ಹಾಲು ನೀಡುವುದಾಗಿ ಹೇಳಿದ್ದಾರೆ. ನಂತರ ನಾಯಿಯ ಜೊತೆ ಕುಳಿತು ಅದಕ್ಕೂ ತಿನ್ನಿಸುತ್ತಾ, ತಾವು ಬ್ರೇಕ್​ಫಾಸ್ಟ್​ ಮಾಡುವುದಾಗಿ ಹೇಳಿದ್ದಾರೆ. ಮಧ್ಯಾಹ್ನದ ವೇಳೆ ನಿದ್ದೆ ಮಾಡುವುದು ಸರಿಯಲ್ಲ ಎನ್ನುವ ಕಾರಣಕ್ಕೆ, ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ ಎನ್ನುವ ಮೂಲಕ ತಮ್ಮ ಇಡೀ ದಿನದ ದಿನಚರಿಯನ್ನು ತೆರೆದಿದ್ದಾರೆ. 

ಸ್ನಾನಕ್ಕೆ ಮನೇಲಿ ಇರೋ ಎಲ್ರೂ ಒಂದೇ ಸೋಪ್ ಯೂಸ್ ಮಾಡೋದು ಸರೀನಾ?