ಸ್ನಾನಕ್ಕೆ ಮನೇಲಿ ಇರೋ ಎಲ್ರೂ ಒಂದೇ ಸೋಪ್ ಯೂಸ್ ಮಾಡೋದು ಸರೀನಾ?
ಒಂದು ಮನೆ ಎಂದಾಗ ಅಲ್ಲಿರುವ ಎಲ್ಲರೂ ಒಂದೇ ವಸ್ತುವನ್ನು ಬಳಸುವುದು ಸಾಮಾನ್ಯ. ಹಾಗೆಯೇ ಬಾತ್‌ರೂಮ್‌ನಲ್ಲಿ ಒಂದೇ ಸೋಪ್ ಹಂಚಿಕೊಳ್ಳುವುದು ಸಹ ಸಹಜ. ಆದರೆ ಹೀಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಸರೀನಾ? ಈ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ
ಮನುಷ್ಯನ ಸ್ವಭಾತಹಃ ಸಾಮಾಜಿಕ ಜೀವಿ. ಹೀಗಾಗಿ ಯಾವಾಗಲೂ ಬೆರೆತು ಬಾಳುತ್ತಾನೆ. ಒಂದೇ ಮನೆಯಲ್ಲಿ ಪ್ರತ್ಯೇಕ ರೂಮಿದ್ದರೂ ಒಂದೇ ವಸ್ತುವನ್ನು ಹಲವು ಬಳಸುತ್ತಾರೆ. ಒಂದೇ ಕಿಚನ್, ಅಡುಗೆ ಕೋಣೆ, ಪಾತ್ರೆಗಳು, ಸೋಫಾ, ಟಿವಿ ಎಲ್ಲರಿಂದಲೂ ಬಳಸಲ್ಪಡುತ್ತವೆ. ಹಾಗೆಯೇ ಬಾತ್‌ರೂಮ್ ಸಹ ಕಾಮನ್ ಆಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕೆಲವೊಬ್ಬರು ಅಟ್ಯಾಚ್ಡ್ ಬಾತ್‌ರೂಮ್ ಕಟ್ಟಿಸಿ ಕೊಳ್ಳುತ್ತಿದ್ದಾರೆ.
ಅದಲ್ಲದೆ ಬಹುತೇಕ ಮನೆಗಳಲ್ಲಿ ಇವತ್ತಿಗೂ ಎಲ್ಲರೂ ಒಂದೇ ಸೋಪ್ ಬಳಸುವುದು ಕಾಮನ್. ಆದರೆ ಹೀಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಸರೀನಾ? ಈ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಒಂದು ಮನೆಯಲ್ಲಿ ಎಲ್ಲರೂ ಸಾಮಾನ್ಯವಾಗಿ ಟವೆಲ್ ಬೇರೆ ಬೇರೆ ಉಪಯೋಗಿಸುತ್ತಾರೆ. ಆದರೆ ಸೋಪ್ ಮಾತ್ರ ಒಂದೇ ಇರುತ್ತದೆ. ಆದರೆ ಇದರಿಂದ ಆರೋಗ್ಯಕ್ಕೆಷ್ಟು ತೊಂದರೆಯಾಗಬಲ್ಲದು ತಿಳಿದಿದ್ಯಾ?
ಸಾಬೂನಿನ ಬಾರ್‌ನಲ್ಲಿರುತ್ತೆ ಸೂಕ್ಷ್ಮಾಣು
ಸಾಬೂನು ಸ್ವತಃ ಶುದ್ಧೀಕರಣ ಏಜೆಂಟ್ ಆಗಿರುವುದರಿಂದ ಅದು ಕಲುಷಿತವಾಗುವುದಿಲ್ಲ ಅಥವಾ ಸೂಕ್ಷ್ಮಜೀವಿಗಳನ್ನು ಹೊಂದಿರುವುದಿಲ್ಲ ಎಂಬುದು ಸಾಮಾನ್ಯ ತಪ್ಪು ಕಲ್ಪನೆ. ಆದರೆ 2006ರಲ್ಲಿ ಇಂಡಿಯನ್ ಜರ್ನಲ್ ಆಫ್ ಡೆಂಟಲ್ ರಿಸರ್ಚ್‌ನಲ್ಲಿ ಪ್ರಕಟವಾದ ಅಧ್ಯಯನವು ಸೋಪಿನ ಬಾರ್‌ನಲ್ಲಿ ವಿವಿಧ ರೀತಿಯ ಸೂಕ್ಷ್ಮಜೀವಿಗಳು ಇರುತ್ತವೆ ಎಂಬುದನ್ನು ಬಹಿರಂಗಪಡಿಸಿದೆ.
ಅದೇ ರೀತಿ, ಆಸ್ಪತ್ರೆಗಳಲ್ಲಿನ ಬಾರ್ ಸೋಪ್‌ನ 62% ಕಲುಷಿತವಾಗಿದೆ ಎಂದು ಅಮೇರಿಕನ್ ಅಧ್ಯಯನವು ಹೇಳಿದೆ ಆದರೆ ದ್ರವ ಸೋಪ್‌ನ 3% ಮಾತ್ರ ಸೂಕ್ಷ್ಮಾಣುಗಳನ್ನು ಹೊಂದಿದ್ದು ಅದು ತುಲನಾತ್ಮಕವಾಗಿ ತುಂಬಾ ಕಡಿಮೆಯಾಗಿದೆ.
ಸೋಪ್ ಬಾರ್‌ನಲ್ಲಿರುವ ಸೂಕ್ಷ್ಮಜೀವಿಗಳಲ್ಲಿ ಶಿಗೆಲ್ಲ ಬ್ಯಾಕ್ಟೀರಿಯಾ, ಇ.ಕೋಲಿ, ಸಾಲ್ಮೊನೆಲ್ಲಾ ಮತ್ತು ಸ್ಟ್ಯಾಫ್, ರೋಟವೈರಸ್ ಮತ್ತು ನೊರೊವೈರಸ್‌ನಂತಹ ವೈರಸ್‌ಗಳು ಸೇರಿವೆ ಎಂದು ತಜ್ಞರು ಹೇಳಿದ್ದಾರೆ. ಅನೇಕ ಬಾರಿ ಈ ಸೂಕ್ಷ್ಮಜೀವಿಗಳು ಗೀರುಗಳು ಅಥವಾ ಗಾಯಗಳ ಮೂಲಕ ಹರಡುತ್ತವೆ. ಆದರೆ ಅಧ್ಯಯನವು ಸಾಬೂನಿನ ಮೇಲಿನ ರೋಗಾಣುಗಳು ಸಾಮಾನ್ಯವಾಗಿ ರೋಗವನ್ನು ಹರಡುವುದಿಲ್ಲ ಎಂಬುದನ್ನು ಸಹ ತಿಳಿಸಿದೆ.
ಆರೋಗ್ಯ ಸಮಸ್ಯೆಯ ಅಪಾಯ ಕಡಿಮೆ
ಸೋಪ್ ಬಾರ್‌ಗಳಲ್ಲಿ ಸೂಕ್ಷ್ಮಜೀವಿಗಳು ಇರುತ್ತವೆ ಎಂಬುದು ನಿಜವಾದರೂ ಸಾಮಾನ್ಯವಾಗಿ, ಅವು ರೋಗಗಳನ್ನು ಹರಡುವುದಿಲ್ಲ. ರೋಗಾಣುಗಳಿಂದ ಕಲುಷಿತಗೊಂಡ ಸೋಪ್ ಬಾರ್‌ನಿಂದ ಅನೇಕ ಬಾರಿ ಕೈಗಳನ್ನು ತೊಳೆದರೂ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳು ವರ್ಗಾವಣೆಯಾಗುವುದಿಲ್ಲ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಆದ್ದರಿಂದ, ಕಲುಷಿತ ಸೋಪ್ ಬಾರ್‌ಗಳ ಪುನರಾವರ್ತಿತ ಬಳಕೆಯ ನಂತರವೂ ಆರೋಗ್ಯದ ಅಪಾಯದ ಸಾಧ್ಯತೆ ಕಡಿಮೆ ಎಂದು ತಜ್ಞರು ತೀರ್ಮಾನಿಸಿದ್ದಾರೆ.
ಸೋಪ್ ಬಾರ್‌ನಿಂದ ಹೆಚ್ಚಿನ ಸೂಕ್ಷ್ಮಾಣುಗಳು ವರ್ಗಾವಣೆಯಾಗದಿದ್ದರೂ ಸಹ, ಪುನರಾವರ್ತಿತ ಸಮಸ್ಯೆಗಳಿಗೆ ಕಾರಣವಾಗುವ ಒಂದು ನಿರ್ದಿಷ್ಟ ಸೋಂಕು ಮೆಥಿಸಿಲಿನ್-ನಿರೋಧಕ ಸ್ಟ್ಯಾಫಿಲೋಕೊಕಸ್ ಔರೆಸ್ (MRSA) ನಿಂದ ಉಂಟಾಗುವ ಪ್ರತಿಜೀವಕ-ನಿರೋಧಕ ಸ್ಟ್ಯಾಫ್ ಸೋಂಕು. ಅದಕ್ಕಾಗಿಯೇ ಸೋಪ್ ಬಾರ್‌ಗಳಂತಹ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.