ಫೇಸ್ಮಾಸ್ಕ್, ಸ್ಕ್ರಬ್, ಹೇರ್ ಆಯಿಲ್ ಮಾಡೋದು ಇಷ್ಟು ಸುಲಭನಾ? ನಟಿ ಅದಿತಿ ಪ್ರಭುದೇವ ಟಿಪ್ಸ್!
ಮನೆಯಲ್ಲಿಯೇ ಸುಲಭದಲ್ಲಿ ತಯಾರಿಸಬಹುದಾದ ಫೇಸ್ಮಾಸ್ಕ್, ಸ್ಕ್ರಬ್, ಹೇರ್ ಆಯಿಲ್ ಇತ್ಯಾದಿಗಳ ಕುರಿತು ನಟಿ ಅದಿತಿ ಪ್ರಭುದೇವ ಕೊಟ್ಟಿದ್ದಾರೆ ಈ ಟಿಪ್ಸ್
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ್ (Aditi Prabhudev) ಈಗ ಕೇವಲ ಚಿತ್ರನಟಿ ಮಾತ್ರವಲ್ಲದೇ ಅಪ್ಪಟ ಗೃಹಿಣಿ ಕೂಡ. ‘ಧೈರ್ಯಂ’, ‘ಬಜಾರ್’, ‘ಸಿಂಗ್’, ‘ಬ್ರಹ್ಮಚಾರಿ’, ‘ಒಂಬತ್ತನೆ ದಿಕ್ಕು’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಅದಿತಿ ಪ್ರಭುದೇವ ಅವರು ಸದ್ಯ ಗೃಹಿಣಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಯಶಸ್ ಪಟ್ಲಾ ಅವರ ಪತ್ನಿಯಾಗಿ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ, ಇಂಜಿನಿಯರಿಂಗ್ ಪದವಿ ಮುಗಿಸಿ ಮ್ಯಾನೇಜ್‍ಮೆಂಟ್ ನಲ್ಲಿ ಮಾಸ್ಟರ್ ಮುಗಿಸಿದವರು. ಇದರ ಹೊರತಾಗಿಯೂ ಅಡುಗೆಯಲ್ಲಿಯೂ ಇವರದ್ದು ಎತ್ತಿದ ಕೈ. ಅಡುಗೆ, ಆರೋಗ್ಯಕ್ಕೆ ಸಂಬಂಧಿಸಿದ ಕೆಲವೊಂದು ಟಿಪ್ಸ್ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ (social media) ಆ್ಯಕ್ಟೀವ್ ಆಗಿರುವ ನಟಿ ಅದಿತಿ ಪ್ರಭುದೇವ ಈಚೆಗಷ್ಟೇ ಹೊಸ ಹೇರ್ಸ್ಟೈಲ್ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ನಂತರ ಪತಿಗಾಗಿ ಪನ್ನೀರ್ ರೆಸಿಪಿ ಮಾಡಿ ಅದರ ಬಗ್ಗೆಯೂ ತಿಳಿಸಿಕೊಟ್ಟಿದ್ದರು.
ಅದಾದ ಬಳಿಕ ನಟಿ ಕೆಲವೊಂದು ಆರೋಗ್ಯ ಟಿಪ್ಸ್ ನೀಡಿದ್ದರು. ದೈನಂದಿನ ಜೀವನ ಆರೋಗ್ಯವಾಗಿ ಮತ್ತು ಚುರುಕಾಗಿ ಇರಲು ತಾವು ಫಾಲೋ ಮಾಡುವ Health Tips ಕುರಿತು ಹೇಳಿದ್ದರು. ಕರಿಬೇವು, ಬೆಚ್ಚಗಿನ ನೀರಿಗೆ ನಿಂಬೆ ರಸ, ಜೇನುತುಪ್ಪ ಅಥವಾ ಅರಿಶಿಣ ಹಾಕಿಕೊಂಡು ಕುಡಿಯುವುದು ಸೇರಿದಂತೆ ದಿನಪೂರ್ತಿ ಚುರುಕಾಗಿ ಇರಲು ಏನು ಮಾಡಬೇಕು ಎಂದು ಕೆಲವೊಂದು ಟಿಪ್ಸ್ ಕೊಟ್ಟಿದ್ದರು.
Aditi Prabhudeva: ಬೆಳಿಗ್ಗೆ ಕರಿಬೇವು, ನಿಂಬೆರಸ..ಮಧ್ಯಾಹ್ನ ಫುಲ್ ಕೆಲಸ.. ಆರೋಗ್ಯದ ಗುಟ್ಟು ಹೇಳಿದ ನಟಿ
ಇದೀಗ ದಿನನಿತ್ಯ ಬೇಕಾಗಿರುವ ಮೆನಿಕ್ಯೂರ್, ಪೆಡಿಕ್ಯೂರ್, ಸ್ನಾನಕ್ಕೆ ಸ್ಕ್ರಬ್, ಹೇರ್ ಆಯಿಲ್ ಮುಂತಾದವುಗಳ ಬಗ್ಗೆ ನಟಿ ಹೇಳಿದ್ದಾರೆ.
ಹೇರ್ ಆಯಿಲ್ (Hair Oil):
ಕೊಬ್ಬರಿ ಎಣ್ಣೆ ಕಾದ ಬಳಿಕ ಚಿಕ್ಕ ಪೀಸ್ ಲವಂಗ, ಚಕ್ಕೆ, ಮೆಂತೆ ಕಾಳು ಹಾಗೂ ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿಕೊಳ್ಳಬೇಕು. ಸ್ಟೌವ್ ಆಫ್ ಮಾಡಬೇಕು. ದಾಸವಾಳ ಮತ್ತು ಮೆಂತ್ಯೆ ಪೌಡರ್ ಇದ್ದರೆ ಅದನ್ನು ಸ್ವಲ್ಪ ಹಾಕಬೇಕು. ಒಂದು ಚಮಚ ನೀಮ್ ಪೌಡರ್ ಹಾಕಬೇಕು. ಬೆಟ್ಟದ ನೆಲ್ಲಿಕಾಯಿ ಇದ್ದರೆ ಅದನ್ನು ಅರ್ಧ ಜಜ್ಜಿ ಹಾಕಿಕೊಳ್ಳಬೇಕು. ಚಿಕ್ಕ ತುಂಡು ಈರುಳ್ಳಿ ಹಾಕಬೇಕು. ಐದು ನಿಮಿಷ ಹಾಗೆ ಬಿಡಬೇಕು. ಅರ್ಧ ಗಂಟೆ ಬಿಟ್ಟು ಸೋಸಿದ ಮೇಲೆ ಅದನ್ನು ಬಳಸಬಹುದು. ಸಾಸಿವೆ ಎಣ್ಣೆ, ಹರಳೆಣ್ಣೆ ಹಾಕಬೇಕು. ರಾತ್ರಿಪೂರ್ತಿ ಅದನ್ನು ಇಟ್ಟು ತಲೆಸ್ನಾನಕ್ಕೂ ಮುನ್ನ ಒಂದು ಗಂಟೆ ಚೆನ್ನಾಗಿ ತಲೆಗೆ ಮಸಾಜ್ ಮಾಡಿಕೊಂಡು ನಂತರ ಸ್ನಾನ ಮಾಡಬೇಕು.
ಫೇಸ್ ಪ್ಯಾಕ್, ಬಾಡಿ ಮಸಾಜ್ (Face Pack, Body Massage)
ಫೇಸ್ ಪ್ಯಾಕ್: ಚಂದನದ ಪೌಡರ್ ಒಂದು ಕಪ್ ತೆಗೆದುಕೊಂಡು ಅದಕ್ಕೆ ಹಸಿ ಹಾಲನ್ನು ಹಾಕಿ ಮಿಕ್ಸ್ ಮಾಡಬೇಕು. ಅರ್ಧ ಗಂಟೆ ಬಿಟ್ಟು ಫೇಸ್ಗೆ ಚೆನ್ನಾಗಿ ಮಸಾಜ್ ಮಾಡಿಕೊಂಡರೆ ಟ್ಯಾನ್ ಆಗುವುದು, ಪಿಂಪಲ್ ಆಗುವುದನ್ನು ತಪ್ಪಿಸಬಹುದು. ಇನ್ನು ಬಾಡಿ ಮಸಾಜ್ಗೆ ಹೊರಗಡೆಯಿಂದಲೇ ಆಯಿಲ್ ತರಬಹುದು. ಆದರೆ ಮನೆಯಲ್ಲಿಯೇ ಸಿಂಪಲ್ ಆಗಿ ಎಣ್ಣೆ ತಯಾರಿಸಿಕೊಳ್ಳಬಹುದು. ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿಕೊಂಡು ಅದಕ್ಕೆ ಸ್ವಲ್ಪ ಆಲೀವ್ ಆಯಿಲ್, ಸ್ವಲ್ಪ ಅರಿಶಿಣ ಹಾಗೂ ಅರ್ಧ ಚಮಚ ನೀಮ್ ಪೌಡರ್ ಮಿಕ್ಸ್ ಮಾಡಬೇಕು. 5-10 ನಿಂಬೆಹಣ್ಣನ್ನು ಮಿಕ್ಸ್ ಮಾಡಿದರೆ ಬಾಡಿ ಮಸಾಜ್ಗೆ ಆಯಿಲ್ ರೆಡಿ. 10-15 ನಿಮಿಷ ಮಸಾಜ್ ಮಾಡಿಕೊಳ್ಳಿ. ಇದು ಸೂಪರ್ ಆಗಿ ವರ್ಕ್ ಆಗುತ್ತದೆ.
ನಟಿ ಅದಿತಿ ಹೇರ್ಕಟ್ ಸೂಪರ್ರೋ, ಪನ್ನೀರ್ ರೆಸಿಪಿ ಸೂಪರ್ರೊ? ಪತಿ ರಿಯಾಕ್ಷನ್ ಹೇಗಿತ್ತು?
ಪೆಡಿಕ್ಯೂರ್, ಮೆನಿಕ್ಯೂರ್, ಸ್ಕ್ರಬ್ (scrub)
ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಸೋಡಾ, ಒಂದು ಚಮಚ ಉಪ್ಪು, ಅರ್ಧ ನಿಂಬೆಹಣ್ಣು, ಇಷ್ಟವಾದ ಶ್ಯಾಂಪೂ ಹಾಕಿ ನೊರೆ ಬರುವವರೆಗೆ ಕದಡಿ. ಗುಲಾಬಿ ದಳ ಇದ್ದರೆ ಹಾಕಿದರೆ ಹಿಮ್ಮಡಿ ಕ್ರ್ಯಾಕ್, ಟ್ಯಾನ್ ಕಲೆ ಎಲ್ಲವೂ ಹೋಗುತ್ತದೆ. ಇನ್ನು ಸುಲಭದಲ್ಲಿ ಸ್ಕ್ರಬ್ ತಯಾರಿಸಿಕೊಳ್ಳಬಹುದು. ಅದಕ್ಕೆ ಎರಡು ಚಮಚ ಮಸೂರ್ ದಾಲ್, ಒಂದು ಚಮಚ ಬೇಳೆ, ಒಂದು ಚಮಚ ಹೆಸರು ಕಾಳು, ಒಂದು ಚಮಚ ಕಡ್ಲೆ ಹಿಟ್ಟು, ಒಂದು ಚಮಚ ಅರಿಶಿಣ ಪುಡಿ ಹಾಕಿ ತರಿತರಿಯಾಗಿ ಮಿಕ್ಸಿಯಲ್ಲಿ ಮಾಡಬೇಕು. ನೀರು, ಮೊಸರು, ಎಣ್ಣೆ ಏನಾದರೂ ಒಂದು ಹಾಕಿಕೊಂಡು ಸ್ನಾನ ಮಾಡುವಾಗ ಐದು ನಿಮಿಷ ಮಸಾಜ್ ಮಾಡಿಕೊಂಡು ಸ್ನಾನ ಮಾಡಬಹುದು. ಸೋಪ್ ಬಳಸಬೇಡಿ.