ಖಾಸಗಿ ಭಾಗದಲ್ಲಿ ತುರಿಕೆಯೇ? ಚಿಂತೆ ಬಿಡಿ ಇದನ್ನ ಟ್ರೈ ಮಾಡಿ
ಖಾಸಗಿ ಭಾಗದಲ್ಲಿ ತುರಿಕೆಯೇ? ನಿಮಗೂ ಈ ಸಮಸ್ಯೆ ಕಾಡ್ತಿದೆಯಾ? ಪುರುಷರ ಖಾಸಗಿ ಭಾಗದಲ್ಲಿ ತುರಿಕೆ (Itching) ಒಂದು ಸಾಮಾನ್ಯ ಸಮಸ್ಯೆಯಾಗಿದೆ. ನಿಮಗೂ ಈ ಸಮಸ್ಯೆ ಕಾಡ್ತಿದ್ರೆ, ನೀವು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆ ದೂರ ಮಾಡಬಹುದು.
ಪುರುಷರ ಖಾಸಗಿ ಭಾಗದಲ್ಲಿ ತುರಿಕೆ ಸಾಮಾನ್ಯ ಸಮಸ್ಯೆಯಾಗಿದೆ. ಹೆಚ್ಚಿನ ಜನರು ಈ ಸಮಸ್ಯೆಯ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅಂದಹಾಗೆ, ಖಾಸಗಿ ಭಾಗವನ್ನು (private part) ಸ್ವಚ್ಛವಾಗಿಡದಿರುವುದರಿಂದ, ಈ ಸ್ಥಳದಲ್ಲಿ ತುರಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತೆ, ಇದು ನಂತರದಲ್ಲಿ ಸೋಂಕಿನ ರೂಪವನ್ನೂ ತಾಳುತ್ತದೆ. ಹಾಗಾಗಿ ನೀವು ಜನನಾಂಗದ ಪ್ರದೇಶದ ಬಗ್ಗೆ ಕಾಳಜಿ ವಹಿಸಬೇಕು.
ನೀವು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ರೆ ಆ ಬಗ್ಗೆ ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ ಏಕೆಂದರೆ ನೀವು ಈ ಸಮಸ್ಯೆಯನ್ನು ಹೇಗೆ ತೊಡೆದುಹಾಕಬಹುದು, ಇದನ್ನು ಪರಿಹರಿಸಲು ಮನೆಮದ್ದುಗಳು ಯಾವುವು ಅನ್ನೋದರ ಬಗ್ಗೆ ಇಲ್ಲಿ ನಾವು ನಿಮಗೆ ಹೇಳುತ್ತೇವೆ… ಓದಿ ನೋಡಿ
ಪುರುಷರ ಖಾಸಗಿ ಭಾಗಗಳಲ್ಲಿ ತುರಿಕೆಗೆ ಕಾರಣವೇನು?
ಖಾಸಗಿ ಭಾಗವನ್ನು ಸರಿಯಾಗಿ ಸ್ವಚ್ಛವಾಗಿಡದಿರುವುದು ತುರಿಕೆಗೆ ಕಾರಣವಾಗುತ್ತೆ.
ಖಾಸಗಿ ಭಾಗದಲ್ಲಿ ತೇವಾಂಶವಿದ್ದರೆ ಅಥವಾ ಬೆವರುತ್ತಿದ್ದರೆ, ಅದರಿಂದ ತುರಿಕೆ ಉಂಟಾಗಬಹುದು.
ಯೀಸ್ಟ್ ಸೋಂಕು (yeast infection) ಅಥವಾ ಶಿಲೀಂಧ್ರದ ಸೋಂಕಿನಿಂದ ತುರಿಕೆ ಉಂಟಾಗುತ್ತೆ.
ಖಾಸಗಿ ಭಾಗವನ್ನು ಗಟ್ಟಿಯಾದ ರಾಸಾಯನಿಕಗಳಿಂದ (chemical) ಸಾಬೂನಿನಿಂದ ತೊಳೆದಾಗ ತುರಿಕೆಯ ಸಮಸ್ಯೆ ಉಂಟಾಗಬಹುದು. ನೀವು ಒಂದೇ ಒಳ ಉಡುಪುಗಳನ್ನು ದೀರ್ಘಕಾಲದವರೆಗೆ ಧರಿಸಿದರೆ, ಖಾಸಗಿ ಭಾಗದಲ್ಲಿ ತುರಿಕೆಯ ಉಂಟಾಗದೆ ಇರುತ್ತಾ ಹೇಳಿ…
ಈ ಸಮಸ್ಯೆ ನಿವಾರಿಸಲು ನ್ಯಾಚುರಲ್ ಪರಿಹಾರ (natural remedies) ಏನು?
ನಿಮಗೆ ಅಂತಹ ಸಮಸ್ಯೆ ಉಂಟಾದಾಗಲೆಲ್ಲಾ, ನೀವು ಉಪ್ಪನ್ನು ನೀರಿನಲ್ಲಿ ಮಿಕ್ಸ್ ಮಾಡಿ ಅದರಿಂದ ಖಾಸಗಿ ಭಾಗಗಳನ್ನು ಸ್ವಚ್ಛಗೊಳಿಸಬೇಕು. ಉಪ್ಪು ಸೋಂಕನ್ನು ಹರಡುವ ಸೂಕ್ಷ್ಮಜೀವಿಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಬೇವು (neem) ಒಂದು ಔಷಧೀಯ ಸಸ್ಯವಾಗಿದೆ. ಬೇವಿನ ಎಲೆಗಳನ್ನು ಕುದಿಸಿ. ಇದು ತಣ್ಣಗಾದ ನಂತರ, ಖಾಸಗಿ ಭಾಗಗಳನ್ನು (private part) ಈ ನೀರಿನಿಂದ ತೊಳೆಯಿರಿ. ತುರಿಕೆಯಿಂದ ನೀವು ಶೀಘ್ರ ಪರಿಹಾರ ಪಡೆಯುತ್ತೀರಿ.
ಬೋರಿಕ್ ಆಸಿಡ್ (boric acid) ನಂಜುನಿರೋಧಕ ಮತ್ತು ಶಿಲೀಂಧ್ರ ವಿರೋಧಿ ಗುಣಲಕ್ಷಣಗಳಿಂದ ತುಂಬಿದೆ. ಇದು ನಿಮ್ಮ ಸಮಸ್ಯೆಯನ್ನು ಸಹ ಪರಿಹರಿಸಬಹುದು. ಇದನ್ನು ನೀರಿನಲ್ಲಿ ಬೆರೆಸಿ ಮತ್ತು ತುರಿಕೆ ಭಾಗವನ್ನು ತೊಳೆಯಿರಿ.ಇದರಿಂದ ತುರಿಕೆ ನಿವಾರಣೆಯಾಗುತ್ತೆ.
ಕೊಬ್ಬರಿ ಎಣ್ಣೆಯು (coconut oil) ಚರ್ಮದ ಶುಷ್ಕತೆ ನಿವಾರಿಸುತ್ತದೆ. ಅದೇ ಸಮಯದಲ್ಲಿ, ಇದು ಆಂಟಿಮೈಕ್ರೊಬಿಯಲ್ ಆಗಿದ್ದು, ಇದು ತುರಿಕೆ ಸಮಸ್ಯೆಯನ್ನು ತೊಡೆದುಹಾಕಲು ರಾಮಬಾಣವಾಗಿದೆ. ಪ್ರತಿದಿನ ಕೊಬ್ಬರಿ ಎಣ್ಣೆಯನ್ನು ಆ ಜಾಗಕ್ಕೆ ಹಚ್ಚುತ್ತಿದ್ದರೆ ಸಮಸ್ಯೆ ನಿವಾರಣೆಯಾಗುತ್ತೆ.
ಅಲ್ಲದೆ, ಈ ಸಮಯದಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯಿರಿ. ಉಗುರುಬೆಚ್ಚಗಿನ ನೀರಿನಿಂದ ನಿಮ್ಮ ಖಾಸಗಿ ಭಾಗಗಳನ್ನು ಸ್ವಚ್ಛಗೊಳಿಸಿ. ಅದರ ಮೇಲೆ ಸಾಬೂನನ್ನು ಬಳಸುವುದನ್ನು ತಪ್ಪಿಸಿ ಏಕೆಂದರೆ ಸಾಬೂನು ನಿಮ್ಮ ಚರ್ಮದ ಮೇಲಿರುವ ಉತ್ತಮ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುತ್ತದೆ. ಜೊತೆಗೆ ಆರೋಗ್ಯಕರ ಆಹಾರ ಸೇವಿಸಿ.
ನೀವು ಪುರುಷನಾಗಿದ್ದರೆ ಮತ್ತು ಜನನಾಂಗದಲ್ಲಿ ತುರಿಕೆಯ (itching in private part) ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ನೀವು ಟೀ ಟ್ರೀ ಎಣ್ಣೆಯನ್ನು ಬಳಸಬಹುದು. ಟೀ ಟ್ರೀ ಆಯಿಲ್ ಶಿಲೀಂಧ್ರ ವಿರೋಧಿಯಾಗಿದೆ, ಇದು ಶಿಲೀಂಧ್ರ ಸೋಂಕಿನ ಸಮಸ್ಯೆ ನಿವಾರಿಸುತ್ತೆ. ನೀವು ಹರಳೆಣ್ಣೆಯಲ್ಲಿ ಎರಡು ಹನಿ ಟೀ ಟ್ರೀ ಎಣ್ಣೆ ಬೆರೆಸಿ ಜನನಾಂಗಕೆ ಹಚ್ಚಿದ್ರೆ ಪರಿಹಾರ ಸಿಗುತ್ತೆ.
ಖಾಸಗಿ ಭಾಗದಲ್ಲಿ ತುರಿಕೆ ಇದ್ದರೆ, ಸ್ನಾನದ ನೀರಿಗೆ ಬೇಕಿಂಗ್ ಸೋಡಾ ಸೇರಿಸಿ ನೀವು ಸ್ನಾನ ಮಾಡಬೇಕು. ಬೇಕಿಂಗ್ ಸೋಡಾದ ಪ್ರಯೋಜನ ಏನೆಂದರೆ ಇದು ಸೋಂಕುಗಳು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಿಸುತ್ತೆ. ಬೇಕಿಂಗ್ ಸೋಡಾ ಶಿಲೀಂಧ್ರ ವಿರೋಧಿ ಗುಣಲಕ್ಷಣಗಳನ್ನು ಸಹ ಹೊಂದಿದೆ. ನೀವು ಸ್ನಾನದ ನೀರಿಗೆ ಕಾಲು ಕಪ್ ಬೇಕಿಂಗ್ ಸೋಡಾ ಪುಡಿ ಸೇರಿಸಿ. ಮತ್ತು 10 ಮೀಟರ್ ನಂತರ, ಆ ನೀರಿನಿಂದ ಸ್ನಾನ ಮಾಡಿ, ಖಾಸಗಿ ಭಾಗದಲ್ಲಿ ತುರಿಕೆಯ ಸಮಸ್ಯೆ ದೂರವಾಗುತ್ತದೆ.