Knee Pain: ಮಂಡಿ ನೋವೇ ? ಆಲಿವ್‌ ಎಲೆಗಳಲ್ಲಿದೆ ಪರಿಹಾರ

ಮಂಡಿಗಳ ನೋವು (Knee Pain) ವಯಸ್ಸಾದವರನ್ನು ಇನ್ನಿಲ್ಲದಂತೆ ಕಾಡುತ್ತದೆ. ಹೇಗಾದರೂ ಅವುಗಳ ನೋವಿಗೆ ಮುಕ್ತಿ ಕಂಡುಕೊಳ್ಳಲು ಯತ್ನಿಸುತ್ತಾರೆ. ಆಲಿವ್‌ ಎಲೆ (Olive Leaf)ಗಳಿಂದ ತಯಾರಿಸಿದ ಅರ್ಕದ ಸೇವನೆಯಿಂದ ಮಂಡಿಗಳ ನೋವಿಗೆ ಪರಿಹಾರ ಸಾಧ್ಯ ಎಂದು ಅಧ್ಯಯನವೊಂದು ಇತ್ತೀಚೆಗೆ ಹೇಳಿದೆ.

Everything You Need To Know About Olive Oil And Knee Pain

ವಯಸ್ಸಾದಂತೆ ಮಂಡಿಗಳು (Knee) ಮತ್ತು ಸಂದು(Joint)ಗಳಲ್ಲಿ ನೋವು (Pain) ಕಂಡುಬರುವುದು ಅತ್ಯಂತ ಸಹಜ. ಇತ್ತೀಚೆಗಂತೂ ಮಧ್ಯ ವಯಸ್ಸು ಅಥವಾ ಅದಕ್ಕೂ ಮುನ್ನವೇ ಮಂಡಿಗಳಲ್ಲಿ ನೋವನ್ನು ಅನುಭವಿಸುವವರ ಸಂಖ್ಯೆ ಹೆಚ್ಚಾಗಿದೆ. ಕೆಟ್ಟ ಜೀವನಶೈಲಿ (Bad Lifestyle), ತೂಕದಲ್ಲಿ ಹೆಚ್ಚಾಗುವುದು (Wight Gain), ಗಾಯ (Wound) ಇತ್ಯಾದಿ ಕಾರಣಗಳಿಂದ ಮಂಡಿಗಳಲ್ಲಿ ನೋವು ಉಂಟಾಗುತ್ತದೆ. ಈ ನೋವನ್ನು ಕಡಿಮೆ ಮಾಡಿಕೊಳ್ಳಲು ವೈದ್ಯರು ಸಾಮಾನ್ಯವಾಗಿ ಸೂಚಿಸುವ ಪರಿಹಾರವೆಂದರೆ, ಮಂಡಿಗಳ ರಿಪ್ಲೇಸ್‌ ಮೆಂಟ್. ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ, ಆದರೂ ಕೆಲವೊಮ್ಮೆ ನೋವು ಅಲ್ಲಿಗೇ ಮುಗಿಯುವುದಿಲ್ಲ.

ವಯಸ್ಸಾಗುವ ಜತೆಗೆ ದೇಹದಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಹಾಗೂ ಹೆಚ್ಚಾಗುತ್ತವೆ. ಮಧುಮೇಹ, ಸುಸ್ತು, ಅನಿಮೀಯಾ, ಹೃದ್ರೋಗ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇವುಗಳೊಂದಿಗೆ ಮಂಡಿಗಳ ನೋವು ಸಹ ಒಂದು. ವಯಸ್ಸಾದಂತೆ ಹೆಚ್ಚುವ ಸಮಸ್ಯೆಗಳಲ್ಲಿ ಇದಕ್ಕೆ ಮುಖ್ಯವಾದ ಸ್ಥಾನ. ವೃದ್ಧರನ್ನು ಮನೆಯಲ್ಲೇ ಕಟ್ಟಿ ಹಾಕುವ ಮೂಲಕ ಅವರನ್ನು ಪರಾವಲಂಬಿಯನ್ನಾಗಿಸಿ ಬಿಡುತ್ತದೆ.

ಸಂಧಿವಾತ-ಮೊಣಕಾಲು ನೋವು: ಅಡುಗೆಯಲ್ಲಿ ಸೇರಲಿ ಚಿಟಿಕೆ ಅರಶಿನ..!

ಈ ನೋವು. ಕುಳಿತುಕೊಳ್ಳುವ ವಿಧಾನ, ಆರ್ಥರೈಟಿಸ್‌, ಬೊಜ್ಜು, ಫ್ರಾಕ್ಚರ್‌ (Fracture) ಮುಂತಾದ ಕಾರಣಗಳಿಂದ ಸಣ್ಣ ವಯಸ್ಸಿನಲ್ಲೂ ಮಂಡಿಗಳ ನೋವು ಕಾಡಬಹುದು. ಇದನ್ನು ಕಡಿಮೆ ಮಾಡಿಕೊಳ್ಳಲು ಹಲವು ವಿಧಾನಗಳನ್ನು ಜನರು ಅನುಸರಿಸುತ್ತಾರೆ. ಆದರೂ ಪರಿಣಾಮ ಮಾತ್ರ ಅಷ್ಟೊಂದು ತೃಪ್ತಿದಾಯಕ ಆಗಿರುವುದಿಲ್ಲ. 

ಆಲಿವ್‌ (Olive) ಎಲೆಗಳಲ್ಲಿದೆ (Leaves) ಪರಿಹಾರ
ಮಂಡಿಗಳ ನೋವನ್ನು ಆರಂಭದಲ್ಲೇ ಸರಿಯಾಗಿ ನಿರ್ವಹಣೆ ಮಾಡಬೇಕು. ನೋವು ಹೆಚ್ಚುವವರೆಗೆ ಬಿಡಬಾರದು. ಮಂಡಿಗಳ ನೋವಿನ ಕುರಿತಾಗಿ ನಡೆದ ಸಾಕಷ್ಟು ಅಧ್ಯಯನಗಳು ನಡೆದಿವೆ. ಅಂಥದ್ದೇ ಒಂದು ಅಧ್ಯಯನದ ಪ್ರಕಾರ, ಆಲಿವ್‌ ಗಿಡದ ಎಲೆಗಳಿಂದ ತಯಾರಿಸುವ ಅರ್ಕದಿಂದ ಮಂಡಿಗಳ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು. ಇದು ಪೇನ್‌ ಕಿಲ್ಲರ್‌ (Pain Killer) ನಂತೆ ಕೆಲಸ ಮಾಡುತ್ತದೆ.

ಆಲಿವ್‌ ಗಿಡದ ತೆಳುವಾದ ಹಾಗೂ ನೇರವಾಗಿರುವ ಎಲೆಗಳಲ್ಲಿ ಸಾಕಷ್ಟು ಔಷಧೀಯ (Medicinal) ಗುಣಗಳಿವೆ. ಇದನ್ನು ಪಾಲಿಫೆನೋಲ್ಸ್‌ ಎಂದು ಕರೆಯಲಾಗುತ್ತದೆ. ಆಂಟಿ ಇನ್‌ಫ್ಲೇಮೇಟರಿ (Anti Inflammatory) ಪರಿಣಾಮಗಳು ಇದರಲ್ಲಿ ಇರುತ್ತವೆ. 

ಹಳೆಯ ನೋವನ್ನು ಸಹ ನಿವಾರಿಸುವ ಶಕ್ತಿ ಆಲಿವ್‌ ಎಲೆಗಳಿಗೆ ಇದೆ ಎಂದು ಈ ಅಧ್ಯಯನ ಹೇಳುತ್ತದೆ. ಇದರ ಅರ್ಕ ಅಥವಾ ಕಷಾಯದ ಸೇವನೆ ಮಾಡಿದರೆ ನೋವು ಕಡಿಮೆಯಾಗಿ ರೋಗಿಗಳಿಗೆ ಹಿತವೆನಿಸುತ್ತದೆ. ಅಧ್ಯಯನಗಳ ಪ್ರಕಾರ, ಆಲಿವ್‌ ಎಣ್ಣೆ (Oil) ಹೃದಯಕ್ಕೆ ಭಾರೀ ಉತ್ತಮ. ಇದು ಹೃದಯದ ನಾಳಗಳ ಒಳಗೆ ಕಟ್ಟಿಕೊಳ್ಳುವ ಕೊಬ್ಬನ್ನು ಕರಗಿಸುವ ಮೂಲಕ ಹೃದಯಕ್ಕೆ ಸುರಕ್ಷತೆ ಒದಗಿಸುತ್ತದೆ. ಇದಲ್ಲದೆ, ಸ್ತನ ಕ್ಯಾನ್ಸರ್‌, ಆಲ್ಸರೇಟಿವ್‌ ಕೊಲೈಟಿಸ್‌ ಹಾಗೂ ಖಿನ್ನತೆ(Depression)ಯನ್ನು ನಿರ್ವಹಣೆ ಮಾಡುವುದಕ್ಕೂ ಆಲಿವ್‌ ಎಣ್ಣೆ ಸಹಕಾರಿಯಾಗಿದೆ. 

ಹಳೆ ಕೀಲು ನೋವು ಕಾಡುತಿದ್ದರೆ, ತಕ್ಷಣವೇ ಈ ಪರಿಣಾಮಕಾರಿ ಮನೆಮದ್ದು ಟ್ರೈ ಮಾಡಿ!

ಹೀಗೊಂದು ಅಧ್ಯಯನ (Study)
ಸ್ವಿಸ್‌ ಮೂಲದ ತಜ್ಞರಾದ ಮಾರಿ ನೊಯೆಲ್‌ ಹೊರ್ಕಾಜಾಡ ಅವರು ಈ ಅಧ್ಯಯನದ ನೇತೃತ್ವ ವಹಿಸಿದ್ದರು. ೬೨ ವಯೋಮಾನದ ಮೇಲ್ಪಟ್ಟವರ ಮೇಲೆ ನಡೆಸಿದ್ದ ಈ ಅಧ್ಯಯನದಲ್ಲಿ ಆಲಿವ್‌ ಎಲೆಯಿಂದ ತಯಾರಿಸಿದ ಅರ್ಕವನ್ನು ಪ್ರಯೋಗಿಸಲಾಗಿತ್ತು. ಇವರಲ್ಲಿ ಬಹಳಷ್ಟು ಜನ ಅಧಿಕ ಬೊಜ್ಜಿನ ಸಮಸ್ಯೆ ಹೊಂದಿದ್ದರು. ಇವರಲ್ಲಿ ಅರ್ಧದಷ್ಟು ಜನರಿಗೆ ಸತತವಾಗಿ ಆರು ತಿಂಗಳ ಕಾಲ ಆಲಿವ್‌ ಅರ್ಕವನ್ನು ನೀಡಲಾಗಿತ್ತು. ಆರು ತಿಂಗಳ ಬಳಿಕ ಅವರನ್ನು ಪರೀಕ್ಷೆಗೆ ಒಳಪಡಿಸಿದರೆ ಅವರಿಗೆ ನೋವು ಕಡಿಮೆಯಾಗಿತ್ತು. ಆಸ್ಟಿಯೋಪೊರೊಸಿಸ್‌ ಸಮಸ್ಯೆ ಕಡಿಮೆಯಾಗಿತ್ತು.

ಆಸ್ಟಿಯೋಪೊರೊಸಿಸ್‌ ಔಟ್‌ ಕಮ್‌ ಸ್ಕೋರ್‌ (Score) ಆಧಾರದ ಮೇಲೆ ಪರೀಕ್ಷಿಸಿದಾಗ ಅವರಲ್ಲಿ ರೋಗದ ತೀವ್ರತೆ ಉತ್ತಮ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಈ ಸ್ಕೋರ್‌ ಯಾರಲ್ಲಿ ಹೆಚ್ಚಿರುತ್ತದೆಯೋ ಅವರಲ್ಲಿ ನೋವು ಸಾಕಷ್ಟು ಕಡಿಮೆ ಇರುತ್ತದೆ. ಯಾರಲ್ಲಿ ಕಡಿಮೆ ಸ್ಕೋರ್‌ ಇರುತ್ತದೆಯೋ ಅವರಲ್ಲಿ ನೋವು ಹೆಚ್ಚಿರುತ್ತದೆ. ಆಲಿವ್‌ ಅರ್ಕವನ್ನು ಬಳಸಿದವರಲ್ಲಿ ಈ ಸ್ಕೋರ್‌ ಮಟ್ಟ ಹೆಚ್ಚಿತ್ತು, ಉಳಿದವರಲ್ಲಿ ಕಡಿಮೆ ಇತ್ತು. 

Latest Videos
Follow Us:
Download App:
  • android
  • ios