Asianet Suvarna News Asianet Suvarna News

ಚೀನಾದಿಂದ ವಾಪಾಸಾದ ವ್ಯಕ್ತಿಗೆ ಕೋವಿಡ್: ಮನೆಯಲ್ಲೇ ಕ್ವಾರಂಟೈನ್

ಎರಡು ದಿನಗಳ ಹಿಂದೆ ಚೀನಾದಿಂದ ಹಿಂದಿರುಗಿದ 40 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಅವರನ್ನು ಅವರ ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಆಗ್ರಾದ ಮುಖ್ಯ ವೈದ್ಯಾಧಿಕಾರಿ ಅರುಣ್ ಶ್ರೀವಾಸ್ತವ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

A person who returned from China to Agra has Covid positive home quarantine to him akb
Author
First Published Dec 25, 2022, 9:17 PM IST

ಆಗ್ರಾ: ಎರಡು ದಿನಗಳ ಹಿಂದೆ ಚೀನಾದಿಂದ ಹಿಂದಿರುಗಿದ 40 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ಅವರನ್ನು ಅವರ ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಆಗ್ರಾದ ಮುಖ್ಯ ವೈದ್ಯಾಧಿಕಾರಿ ಅರುಣ್ ಶ್ರೀವಾಸ್ತವ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಅವರ ಕಫದ ಮಾದರಿಯನ್ನು ಸಂಗ್ರಹಿಸಿ ಲಕ್ನೋದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಕೋವಿಡ್ ಸೋಂಕಿತ ವ್ಯಕ್ತಿಯನ್ನು ಅವರ ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲಾಗಿದೆ. ಹಾಗೂ ಅವರ ಕುಟುಂಬ ಸದಸ್ಯರು ಮತ್ತು ಅವರೊಂದಿಗೆ ಸಂಪರ್ಕಕ್ಕೆ ಬಂದವರ ಪರೀಕ್ಷೆಗಳನ್ನು ನಡೆಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ವೈದ್ಯಾಧಿಕಾರಿ ಶ್ರೀವಾಸ್ತವ ಹೇಳಿದ್ದಾರೆ.

ಈ ವ್ಯಕ್ತಿ ಡಿಸೆಂಬರ್ 23 ರಂದು ಚೀನಾದಿಂದ (China) ದೆಹಲಿ (Delhi) ಮೂಲಕ ಆಗ್ರಾಕ್ಕೆ (Agra) ಹಿಂದಿರುಗಿದ್ದರು. ನಂತರ ಖಾಸಗಿ ಪ್ರಯೋಗಾಲಯದಲ್ಲಿ ಅವರನ್ನು ಪರೀಕ್ಷಿಸಲಾಯಿತು. ಈ ವೇಳೆ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ಗಮನಕ್ಕೆ ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ನವೆಂಬರ್ 25 ರ ನಂತರ ಅಗ್ರಾ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಕೋವಿಡ್ ಪಾಸಿಟಿವ್ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಕೋವಿಡ್ ಅನ್ನು ಇಡೀ ಜಗತ್ತಿಗೆ ಹಂಚಿದ ಚೀನಾದಲ್ಲಿ ಕೋವಿಡ್ ಇನ್ನು ನಿಯಂತ್ರಣಕ್ಕೆ ಬಂದಿಲ್ಲ. ಈ ಮಧ್ಯೆ ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವೂ ಕೂಡ ದೇಶದಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕಟ್ಟುನಿಟ್ಟಿನ ಕೋವಿಡ್ ವಿರೋಧಿ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೂ ಸುತ್ತೋಲೆ ಕಳುಹಿಸಿದೆ. 

5 ದೇಶಗಳಲ್ಲಿ ಕೋವಿಡ್‌ ಏರಿಕೆ: ಅಮೆರಿಕದಲ್ಲಿ 10 ಕೋಟಿ ದಾಟಿದ ಸೋಂಕಿತರು

ಚೀನಾ (China), ಜಪಾನ್(Japan), ದಕ್ಷಿಣ ಕೊರಿಯಾ (South Korea), ಸಿಂಗಾಪುರ (Singapore) ಮತ್ತು ಥಾಯ್ಲೆಂಡ್‌ನ (Thailand)ನಿಂದ ಆಗಮಿಸುವ ಜನರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಇದಲ್ಲದೇ ವೈದ್ಯಕೀಯ ವ್ಯವಸ್ಥೆ, ಆಮ್ಲಜನಕ ಉತ್ಪಾದನಾ ಘಟಕಗಳು ಸೇರಿದಂತೆ ಆರೋಗ್ಯ ಸೌಲಭ್ಯಗಳ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಡಿಸೆಂಬರ್ 27 ರಂದು ಅಣಕು ಡ್ರಿಲ್ ನಡೆಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. 

ಈ ನಡುವೆ ಆಗ್ರಾದ (Agra) ಆರೋಗ್ಯ ಇಲಾಖೆಯು ಇಲ್ಲಿನ ತಾಜ್ ಮಹಲ್ (Taj Mahal), ಆಗ್ರಾ ಕೋಟೆ(Agra Fort) ಮತ್ತು ಅಕ್ಬರ್ ಸಮಾಧಿಗೆ (Akbar's Tomb)ಆಗಮಿಸುವ ವಿದೇಶಿ ಪ್ರವಾಸಿಗರನ್ನು ಪರೀಕ್ಷಿಸಲು ಮತ್ತು ಇವರ ಕಫದ ಮಾದರಿಯನ್ನು ಸಂಗ್ರಹಿಸಲು ಪ್ರಾರಂಭಿಸಿದೆ. ಇದಲ್ಲದೆ, ಆಗ್ರಾ ವಿಮಾನ ನಿಲ್ದಾಣ, ರೈಲು ನಿಲ್ದಾಣ ಮತ್ತು ಇಂಟರ್ ಬಸ್ ಟರ್ಮಿನಲ್ (ಐಎಸ್‌ಬಿಟಿ) ನಲ್ಲಿಯೂ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರೋಜನಿ ನಾಯ್ಡು ವೈದ್ಯಕೀಯ ಕಾಲೇಜು (Sarojani Naidu Medical College), ಜಿಲ್ಲಾ ಆಸ್ಪತ್ರೆ ಮತ್ತು ಗ್ರಾಮೀಣ ಆಗ್ರಾದ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮಾದರಿ ಸಂಗ್ರಹವನ್ನು ಆದ್ಯತೆಯೊಂದಿಗೆ ಪ್ರಾರಂಭಿಸಲಾಗಿದೆ. ಶೀತ, ಕೆಮ್ಮು ಮತ್ತು ಜ್ವರದ ಲಕ್ಷಣಗಳು ಇದ್ದವರು ಕೋವಿಡ್ ಪರೀಕ್ಷೆಗೆ (Covid test) ಒಳಗಾಗಲು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಬಹುದು ಎಂದು ಸಿಎಂಒ ಹೇಳಿದೆ. 

ಸ್ಥಳೀಯ ನಿವಾಸಿಗಳು ಮಾಸ್ಕ್ ಧರಿಸಲು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಅಲ್ಲದೇ ಸ್ಯಾನಿಟೈಸರ್ ಬಳಸಲು ಮತ್ತು ಸೋಂಕನ್ನು ತಪ್ಪಿಸಲು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ. ಅಲ್ಲದೇ ರೋಗದ ಬಗ್ಗೆ ಯಾವುದೇ ಅನುಮಾನಗಳಿದ್ದಲ್ಲಿ ಜನರು ಆರೋಗ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ 0562-2600412, 9458569043 ಅನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Omicron BF.7: ಮತ್ತೆ ಹರಡ್ತಿದೆ ಕೋವಿಡ್, ರೂಪಾಂತರಿ ವೈರಸ್‌ನ ರೋಗಲಕ್ಷಣಳು ಹೀಗಿವೆ

Follow Us:
Download App:
  • android
  • ios