Omicron BF.7: ಮತ್ತೆ ಹರಡ್ತಿದೆ ಕೋವಿಡ್, ರೂಪಾಂತರಿ ವೈರಸ್‌ನ ರೋಗಲಕ್ಷಣಳು ಹೀಗಿವೆ

ಚೀನಾವನ್ನು ಹೊರತುಪಡಿಸಿ, BF.7 ಭಾರತ, USA, UK ಮತ್ತು ಬೆಲ್ಜಿಯಂ, ಜರ್ಮನಿಯಂತಹ ಅನೇಕ ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಪ್ರಪಂಚದಾದ್ಯಂತದ ಇತರ ದೇಶಗಳಲ್ಲಿ ಕಂಡುಬಂದಿದೆ. ಫ್ರಾನ್ಸ್ ಮತ್ತು ಡೆನ್ಮಾರ್ಕ್‌ನಲ್ಲಿ ವೈರಸ್ ಹರಡುತ್ತಿದೆ. ಹೀಗಿರುವಾಗ ಈ ವೈರಸ್‌ನ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಅಗತ್ಯ. ಹೀಗಾಗಿ ಸೋಂಕಿನ ಲಕ್ಷಣಗಳ ಬಗ್ಗೆ ತಿಳಿಯೋಣ.

Omicron BF.7 Caused Havoc In China, Know Deadly Symptoms of this variant Vin

ಚೀನಾದಲ್ಲಿ ಮತ್ತೆ ಕೊರೋನಾ ಅಬ್ಬರ ಜನರನ್ನು ಹೈರಾಣಾಗಿಸುತ್ತಿದೆ. ಪ್ರಪಂಚದಾದ್ಯಂತ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿರುವಾಗ, ಚೀನಾದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಅನೇಕ ನಗರಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ. ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚೀನಾದಲ್ಲಿ ಹೊಸ ಪ್ರಕರಣಗಳ ವೇಗವನ್ನು ಗಮನದಲ್ಲಿಟ್ಟುಕೊಂಡು, ಕೊರೋನಾ ನಾಲ್ಕನೇ ಅಲೆಯ ಸಾಧ್ಯತೆಯನ್ನು ವ್ಯಕ್ತಪಡಿಸಲಾಗುತ್ತಿದೆ. ಅಮೆರಿಕದ ಆರೋಗ್ಯ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಸಂಸ್ಥೆ ಚೀನಾದ ಅನೇಕ ನಗರಗಳಲ್ಲಿ ಲಾಕ್‌ಡೌನ್ ತೆಗೆದುಹಾಕುವುದರಿಂದ, ಪ್ರಕರಣಗಳ ತ್ವರಿತ ಹೆಚ್ಚಳದಿಂದಾಗಿ, ದೇಶದ ಜನಸಂಖ್ಯೆಯ (Population) ಮೂರನೇ ಒಂದು ಭಾಗದಷ್ಟು ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಮತ್ತು ಏಪ್ರಿಲ್‌ನಲ್ಲಿ ದೇಶವು ರೋಗದ ಉತ್ತುಂಗವನ್ನು ತಲುಪಬಹುದು. 2023 ರ ವೇಳೆಗೆ 322,000 ಕ್ಕಿಂತ ಹೆಚ್ಚು ಸಾವು (Death) ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ.

Omicron BF.7 ರೂಪಾಂತರವು ಚೀನಾದಲ್ಲಿ ಹೊಸ ಪ್ರಕರಣಗಳ ಹೆಚ್ಚಳಕ್ಕೆ ಕಾರಣವೆಂದು ನಂಬಲಾಗಿದೆ. ಈ ಸಬ್‌ವೇರಿಯಂಟ್ ಅನ್ನು ಇತ್ತೀಚೆಗೆ ಬೀಜಿಂಗ್‌ನಲ್ಲಿ ಗುರುತಿಸಲಾಗಿದೆ. ಈ ಹೊಸ ರೂಪಾಂತರವನ್ನು (Variant) ಇತ್ತೀಚೆಗೆ ಗುರುತಿಸಲಾಗಿದೆ. ಇದು ಹಲವು ದೇಶಗಳಿಗೆ ಹರಡಿದೆ ಆದರೆ ಇದರ ಲಕ್ಷಣಗಳು (Symptoms) ಗಂಭೀರವಾಗಿಲ್ಲ ಎಂದು ಹೇಳಲಾಗಿದೆ. ಈ ರೂಪಾಂತರವು ಎಷ್ಟು ಅಪಾಯಕಾರಿ ಮತ್ತು ನೀವು ಯಾವ ರೋಗಲಕ್ಷಣಗಳನ್ನು ಗಮನಿಸಬೇಕು ಎಂಬುದನ್ನು ತಿಳಿಯೋಣ.

ನ್ಯೂ ಇಯರ್ ಸೆಲೆಬ್ರೇಷನ್‌ಗೆ ಕೊರೋನಾ ಆತಂಕ: ಬೆಂಗಳೂರಿನಲ್ಲಿ ಅಲರ್ಟ್

Omicron BF.7 ರೂಪಾಂತರ ಎಂದರೇನು ?
ಕೊರೋನಾ ಪ್ರಾರಂಭವಾದಾಗಿನಿಂದ, ಇಲ್ಲಿಯವರೆಗೆ ವೈರಸ್‌ನ ಅನೇಕ ರೂಪಾಂತರಗಳು ಬಂದಿವೆ. ಅದರಲ್ಲಿ ಓಮಿಕ್ರಾನ್ ಅತ್ಯಂತ ಪ್ರಮುಖವಾಗಿದೆ. ಇದರಲ್ಲಿ ಹಲವು ಉಪರೂಪಗಳಿವೆ. ಇದು BA.5.2.1.7 ಎಂದು ಕರೆಯಲ್ಪಡುವ ಸಬ್‌ವೇರಿಯಂಟ್ BF.7 ಅನ್ನು ಸಹ ಹೊಂದಿದೆ. ಇದು ಓಮಿಕ್ರಾನ್ ರೂಪಾಂತರ BA.5ರ ಉಪರೂಪವಾಗಿದೆ.

Omicron BF.7 ಎಷ್ಟು ಮಾರಕವಾಗಿದೆ ?
ಚೀನಾದಲ್ಲಿ ಹೆಚ್ಚುತ್ತಿರುವ ಪ್ರಕರಣಗಳಲ್ಲಿ ಓಮಿಕ್ರಾನ್-ಬಿಎಫ್-7 ಪತ್ತೆಯಾಗಿದೆ. ಇದು ಇತರ ರೂಪಾಂತರಗಳಿಗಿಂತ ವೇಗವಾಗಿ ಹರಡುತ್ತದೆ ಎಂದು ಹೇಳಲಾಗುತ್ತದೆ. ಇದು ಕಡಿಮೆ ಅವಧಿಯನ್ನು ಹೊಂದಿದೆ ಆದರೆ ಜನರಿಗೆ ಸೋಂಕು (Virus) ತಗಲುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಇದನ್ನು ಹೆಚ್ಚು ಡೇಂಜರಸ್ ಎಂದು ಪರಿಗಣಿಸಲಾಗುತ್ತದೆ.

ಲಸಿಕೆ ಹಾಕಿಸಿಕೊಂಡವರನ್ನೂ ಬಿಡುತ್ತಿಲ್ಲ ಬಿಎಫ್.7 
ಓಮಿಕ್ರಾನ್‌ನ ಸಬ್‌ವೇರಿಯಂಟ್ BF.7 ವೇಗವಾಗಿ ಹರಡುತ್ತದೆ ಎಂದು ಅಧ್ಯಯನ ವರದಿಯಿಂದ ತಿಳಿದುಬಂದಿದೆ. ಅಚ್ಚರಿಯ ವಿಷಯವೆಂದರೆ ಕೊರೋನಾ ಲಸಿಕೆಯನ್ನು ಪಡೆದ ಜನರಿಗೂ ಇದು ಸುಲಭವಾಗಿ ಹರಡುತ್ತಿದೆ. ಹೀಗಾಗಿ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಹೆಚ್ಚು ಜಾಗರೂಕರಾಗಿರಬೇಕು. ಚೀನಾದ ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುವ ಕಾರಣ ಜನರು ಸುಲಭವಾಗಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಲಾಕ್‌ಡೌನ್‌ ಹೇರಿಕೆಯಿಂದ ಅಲ್ಲಿನ ಜನರ ರೋಗನಿರೋಧಕ ಶಕ್ತಿ ಇನ್ನೂ ದುರ್ಬಲವಾಗಿದೆ. ಅವರು ಈ ರೂಪಾಂತರಕ್ಕೆ ಬೇಗನೆ ಬಲಿಯಾಗಲು ಇದು ಕಾರಣವಾಗಿದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಸುಲಭವಾಗಿ ಇದಕ್ಕೆ ಬಲಿಯಾಗಬಹುದು ಎಂದು ತಜ್ಞರು ನಂಬುತ್ತಾರೆ.

ಕೊರೋನಾ ಮುಗಿದಿಲ್ಲ, ಮಾಸ್ಕ್‌ ಧರಿಸಿ, ಬೂಸ್ಟರ್‌ ಡೋಸ್‌ ಹಾಕಿಸಿ: ಕೇಂದ್ರ

Omicron BF.7ನ ರೋಗಲಕ್ಷಣಗಳು
ಓಮಿಕ್ರಾನ್‌ನ ಸಬ್‌ವೇರಿಯಂಟ್ BF.7 ರೋಗಲಕ್ಷಣಗಳ ಬಗ್ಗೆ ಹೇಳುವುದಾರೆ, ಇದು Omicronನ ಎಲ್ಲಾ ಹಿಂದಿನ ರೂಪಾಂತರಗಳಂತೆಯೇ ಅದೇ ವಿಶೇಷಣಗಳನ್ನು ಹಂಚಿಕೊಳ್ಳುತ್ತದೆ. ಇದರ ಲಕ್ಷಣಗಳು ಮುಖ್ಯವಾಗಿ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಮೇಲೆ ಪರಿಣಾಮ ಬೀರುತ್ತವೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಇದು ಮಾರಣಾಂತಿಕವಾಗಿದೆ ಎಂದು ನಂಬಲಾಗಿದೆ. ಇದು ಜ್ವರ, ಕೆಮ್ಮು, ಗಂಟಲು ಕೆರತ, ಸೋರುವ ಮೂಗು, ಆಯಾಸ, ವಾಂತಿ ಮತ್ತು ಅತಿಸಾರದಂತಹ ಜಠರಗರುಳಿನ ಸಮಸ್ಯೆಗಳನ್ನು ಹೊಂದಿರುತ್ತವೆ.

Latest Videos
Follow Us:
Download App:
  • android
  • ios