Asianet Suvarna News Asianet Suvarna News

ಸುಖವಾಗಿರಲು ಆರೋಗ್ಯಯುತ ಶರೀರ ಮುಖ್ಯ: ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ

ಮನುಷ್ಯ ಸುಖವಾಗಿರಲು ಆರೋಗ್ಯಯುತ ಶರೀರ ಮುಖ್ಯ. ಇತ್ತೀಚೆಗೆ ಹಲವು ರೋಗಗಳು ಬರುತ್ತಿದ್ದು ಅವುಗಳ ನಿವಾರಣೆಗೆ ಹೊಸ ಹೊಸ ಆಸ್ಪತ್ರೆಗಳು ಹುಟ್ಟಿಕೊಳ್ಳುವುದು ಎಂದು ಕೊಪ್ಪಳ ಗವಿಸಿದ್ಧೇಶ್ವರ ಸಂಸ್ಥಾನ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು

A healthy body is important for happiness
Author
Hubli, First Published Aug 22, 2022, 12:01 PM IST

ಧಾರವಾಡ (ಆ.22) : ಮನುಷ್ಯ ಸುಖವಾಗಿರಲು ಆರೋಗ್ಯಯುತ ಶರೀರ ಮುಖ್ಯ. ಇತ್ತೀಚೆಗೆ ಹಲವು ರೋಗಗಳು ಬರುತ್ತಿದ್ದು ಅವುಗಳ ನಿವಾರಣೆಗೆ ಹೊಸ ಹೊಸ ಆಸ್ಪತ್ರೆಗಳು ಹುಟ್ಟಿಕೊಳ್ಳುವುದು ಉತ್ತಮ ಬೆಳವಣಿಗೆ ಎಂದು ಕೊಪ್ಪಳ ಗವಿಸಿದ್ಧೇಶ್ವರ ಸಂಸ್ಥಾನ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಇಲ್ಲಿಯ ರಪಾಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಯುನಿಟಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯ ಉದ್ಘಾಟನೆಯ ಸಾನ್ನಿಧ್ಯ ವಹಿಸಿ ಅಶೀರ್ವಚನ ನೀಡಿದರು. ಅಧಿಕಾರ, ಸಂಪತ್ತು, ಪ್ರಸಿದ್ಧಿಯಿಂದ ಬದುಕು ಸಂಪೂರ್ಣ ಆಗಲಾರದು ಏನಿದ್ದರೆ ಬದುಕು ಪೂರ್ಣ ಎಂಬುದು ಮುಖ್ಯ. ನಾವೆಲ್ಲರೂ ಸುಖಿಯಾಗಿರಬೇಕು ಎಂದು ಬಯಸುತ್ತೇವೆ. ಅದು ನಮ್ಮಿಚ್ಛೆ ಕೂಡ ಆಗಿರುತ್ತದೆ. ಮನೆ ಸಂಪತ್ತಿನಿಂದ ತುಂಬುವುದಿಲ್ಲ.ಅದರ ಬದಲು ಸಂತೋಷದಿಂದ,ಆರೋಗ್ಯದಿಂದ ತುಂಬುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.

ಮಹಿಳೆಯ ಕಾಡುವ ಮೊಣಕಾಲು ನೋವಿಗೆ ಕಾರಣವೇನು?

’ನಿರೋಗಿ ಕಾಯವೇ ಪ್ರಥಮ ಸುಖ’ಎಂಬ ದಾರ್ಶನಿಕರ ಉಕ್ತಿಯನ್ನು ತಿಳಿದು ನಡೆಯಬೇಕು. ದೇಹ ಸದೃಢ, ಮನಸ್ಸು ತೀಕ್ಷ$್ಣ, ಹೃದಯ ಸೂಕ್ಷ್ಮ ಇಟ್ಟುಕೊಳ್ಳಬೇಕು. ಮನುಷ್ಯ ಅ​ಧಿಕಾರ, ಹಣ, ಹೆಸರು ಗಳಿಸುವ ಭ್ರಮೆಯನ್ನು ಬಿಟ್ಟು ಸಂತೋಷದಿಂದ ಬದುಕಲು ಕಲಿಯಬೇಕು. ಆರೋಗ್ಯ ಕ್ಷೇತ್ರದಲ್ಲಿ ಈಗ ಬಹಳಷ್ಟುಪ್ರಗತಿ ಆಗಿದೆ. ಆದರೂ ರೋಗಿಯಾಗಿ ಚಿಕಿತ್ಸೆ ಪಡೆಯುವುದಕ್ಕಿಂತ ಆರೋಗ್ಯ ಕಾಪಾಡಿಕೊಳ್ಳಲು ಬೇಕಿರುವ ನೈಪುಣ್ಯತೆ ಬೆಳೆಸಿಕೊಂಡರೆ ನೆಮ್ಮದಿಯ ಬದುಕು ಸಾಧ್ಯ ಎಂದು ಸ್ವಾಮೀಜಿ ಹೇಳಿದರು.

Health Tips : ಬಾಯಿಯ ಈ ರೋಗ ದೊಡ್ಡ ಖಾಯಿಲೆಯ ಲಕ್ಷಣ

ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಮಾಜಿ ಶಾಸಕರಾದ ಸೀಮಾ ಮಸೂತಿ, ಎನ್‌.ಎಚ್‌.ಕೋನರಡ್ಡಿ ಹಾಗೂ ನೂತನ ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ.ಜ್ಯೋತಿ ಪ್ರಕಾಶ ಸುಲ್ತಾನಪುರಿ, ಡಾ. ಶ್ರೀಕಂಠ ರಾಮನಗೌಡರ, ಡಾ.ಚೌಡಪ್ಪ ಶಾಕಾಪುರ, ಡಾ. ಸಂತೋಷ ಚಿಕ್ಕರೆಡ್ಡಿ, ಡಾ. ಚೇತನ ಮುದ್ರಬೆಟ್ಟು, ಡಾ.ಅಂಬೇಶ್‌ ಪ್ರಸಾದ್‌ ಮೊಹಿತೆ, ಡಾ.ಶೀತಲ್‌ಕುಮಾರ್‌, ಡಾ.ಸುನೀಲ್‌ ಮಳಗಿ, ಡಾ. ಸಂತೋಷ್‌ ಚಕ್ರಸಾಲಿ, ಡಾ. ಪ್ರವೀಣ್‌ಕುಮಾರ್‌ ಬಿ.,ಡಾ. ಪರಮೇಶ್ವರ ಕೆಂಚಣ್ಣವರ, ಡಾ.ಎಸ್‌.ಆರ್‌. ಜಂಬಗಿ, ಡಾ. ಮೊಹಮ್ಮದ್‌ ಇಕ್ಬಾಲ್‌ ಎ.ಶೇಖ್‌, ಡಾ. ಪ್ರಕಾಶ ರಾಮನಗೌಡರ, ಡಾ.ಅಮೃತ ಮಹಾಬಲಶೆಟ್ಟಿ, ಡಾ. ನೀಲಕಂಠ ಪಾಟೀಲ, ಡಾ. ಜಗದೀಶ್‌ ನಾಯಕ್‌, ಡಾ.ಅಮಿತ ಎಸ್‌.ಗಲಗಲಿ, ಡಾ.ಆದಿತ್ಯ ಪಾಂಡುರಂಗಿ, ಡಾ.ನವೀನ ಮಂಕಣಿ, ಡಾ. ಸಪನ್‌ ಡಿ.ಎಸ್‌., ಡಾ. ರಾಮಚಂದ್ರ ಅನೆಹೊಸೂರು, ಡಾ.ಅನಿಕೇತ್‌ ಪಾಂಡುರಂಗಿ, ಡಾ.ಭಾವನಾ ಮಲ್ಹೋತ್ರಾ, ಡಾ. ಎಸ್‌.ಆರ್‌.ರಾಮನಗೌಡರ, ಡಾ.ಆನಂದ ಪಾಂಡುರಂಗಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ ಮಾನಕರ, ನಿವೃತ್ತ ಸರ್ಜನ್‌ರಾದ ಡಾ. ಎಸ್‌.ಎ.ಕಟಕೋಳ. ಡಾ.ವಿಜಯ ವಿಠ್ಠಲ ಮನಗೋಳಿ, ಡಾ.ದಿಲೀಪ ದೇಶಪಾಂಡೆ ಇದ್ದರು.

Follow Us:
Download App:
  • android
  • ios