Health Tips : ಬಾಯಿಯ ಈ ರೋಗ ದೊಡ್ಡ ಖಾಯಿಲೆಯ ಲಕ್ಷಣ

ಬಾಯಲ್ಲಿ ಯಾವುದೇ ಸಮಸ್ಯೆ ಇದ್ದರೂ ನಾವು ಅದನ್ನು ಕಡಿಮೆ ಮಾಡಿಕೊಳ್ಳಲು ಮಾತ್ರ ಪ್ರಯತ್ನಿಸ್ತೇವೆ. ಆದ್ರೆ ಇದು ಯಾಕೆ ಕಾಣಿಸಿಕೊಳ್ತಿದೆ ಎಂಬುದನ್ನು ಗಮನಿಸೋದಿಲ್ಲ. ಬಾಯಿಯಲ್ಲಿ ಕಾಣಿಸಿಕೊಳ್ಳುವ ಕೆಲ ಸಮಸ್ಯೆ ನಮ್ಮ ಇಡೀ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲ ರೋಗದ ಲಕ್ಷಣವಾಗಿರುತ್ತದೆ ಎಂಬುದನ್ನು ನೆನಪಿಟ್ಕೊಳ್ಳಬೇಕು.
 

Oral Health Related Symptoms That Indicate You Are Suffering From Cancer And 16 Other Diseases

ಹಲ್ಲು ಹಾಳಾಗುತ್ತೆ ಬಾಯಿ ಸ್ವಚ್ಛಗೊಳಿಸಿ ಎನ್ನುತ್ತೇವೆ ನಾವು. ಆದ್ರೆ ಬಾಯಿ ಆರೋಗ್ಯ ಹಲ್ಲಿಗೆ ಮಾತ್ರ  ಸೀಮಿತವಾಗಿಲ್ಲ. ನಮ್ಮ ದೇಹದ   ಅನೇಕ ಆರೋಗ್ಯ ಸಮಸ್ಯೆಗಳನ್ನು ಬಾಯಿಯಿಂದ ತಿಳಿಯಬಹುದು. ಬಾಯಿಯಿಂದ ಬರುವ ದುರ್ವಾಸನೆ, ಒಸಡುಗಳಲ್ಲಿ ರಕ್ತಸ್ರಾವ, ದುರ್ಬಲ ಹಲ್ಲು, ದವಡೆ ಕೇವಲ ಬಾಯಿಯ ಕಾಯಿಲೆ ಲಕ್ಷಣ ಮಾತ್ರವಲ್ಲ. ಕೆಲ ಮಾರಣಾಂತಿಕ ಕಾಯಿಲೆಗಳ ಸಂಕೇತವೂ ಆಗಿರುತ್ತದೆ. ಹಾಗಾಗಿ ಬಾಯಿಯಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷ್ಯಿಸಬಾರದು.  ಬಾಯಿಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಯಿದ್ದರೂ ಚಿಕಿತ್ಸೆ ಪಡೆಯಬೇಕು. ಇಲ್ಲವೆಂದ್ರೆ ಸಮಸ್ಯೆ ದೊಡ್ಡದಾಗಬಹುದು. ಬಾಯಿಯಲ್ಲಿ ಕಾಣಿಸಿಕೊಳ್ಳುವ ಯಾವ ಯಾವ ಸಮಸ್ಯೆಗಳು ದೊಡ್ಡ ಖಾಯಿಲೆಯ ಸಂಕೇತವಾಗಿದೆ ಎಂಬುದನ್ನು ನಾವಿಂದು ಹೇಳ್ತೇವೆ.  

ಒಸಡಿನಲ್ಲಿ ರಕ್ತಸ್ರಾವ (Bleeding) : ನಿಮ್ಮ ಒಸಡುಗಳು ಹಳದಿ (Yellow ) ಬಣ್ಣಕ್ಕೆ ತಿರುಗಿದರೆ ಅಥವಾ ಹಲ್ಲುಜ್ಜುವಾಗ ರಕ್ತಸ್ರಾವವಾಗ್ತಿದ್ದರೆ ಇದು ಒಸಡು ಕಾಯಿಲೆಯ ಸಂಕೇತವಾಗಿರಬಹುದು. ಇದು ಇತರ ಆರೋಗ್ಯ (health ) ಸಮಸ್ಯೆಗಳಿಗೆ ಕಾರಣವಾಗಬಹುದು. ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಒಸಡು ಕಾಯಿಲೆ ಇರುವ ರೋಗಿಗಳಿಗೆ ಹೃದಯಾಘಾತ ಅಥವಾ ಪಾರ್ಶ್ವವಾಯು ಬರುವ ಸಾಧ್ಯತೆ ಎರಡರಿಂದ ಮೂರು ಪಟ್ಟು ಹೆಚ್ಚು ಎಂದು ಕಂಡುಹಿಡಿದಿದ್ದಾರೆ. ಒಸಡುಗಳಿಂದ ರಕ್ತ ಬರ್ತಿದ್ದರೆ ಇದು ಗಟ್ಟಿಯಾದ ಅಪಧಮನಿಗಳು ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುವ ಉರಿಯೂತದ ಕಾರಣದಿಂದಾಗಿರಬಹುದು. ಒಸಡುಗಳು ಊದಿಕೊಳ್ಳುವುದು ಅಥವಾ ರಕ್ತಸ್ರಾವವಾಗುವುದು ಸಹ ವಿಟಮಿನ್ ಕೊರತೆಯ ಸಂಕೇತವಾಗಿರಬಹುದು. ಮಲ್ಟಿವಿಟಮಿನ್ ಮತ್ತು ಒಮೆಗಾ-3 ಮೀನಿನ ಎಣ್ಣೆಯನ್ನು ತೆಗೆದುಕೊಳ್ಳುವುದು ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ.

ಬಿಳಿ ನಾಲಿಗೆ ಸಮಸ್ಯೆ : ನಿಮ್ಮ ನಾಲಿಗೆ ಸ್ವಲ್ಪ ಬಿಳಿಯಾಗಿ ಕಾಣುವುದು ಸಹಜ. ಆದ್ರೆ ನಾಲಿಗೆಯ ಮೇಲೆ ಬಿಳಿ ದಪ್ಪದ ಲೇಪನವು ಸೋಂಕಿನ ಚಿಹ್ನೆ ಅಥವಾ ಕ್ಯಾನ್ಸರ್ ನಂತಹ ಕಾಯಿಲೆಯ ಸಂಕೇತವಾಗಿರಬಹುದು. ಅಸಹಜ ಬಿಳಿ ಚುಕ್ಕೆಗಳು ಕ್ಯಾನ್ಸರ್ ಲಕ್ಷಣವಾಗಿರುವ ಸಾಧ್ಯತೆಯಿದೆ. ಹಾಗಾಗಿ ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು.  

ಬಾಯಿ ಹುಣ್ಣುಗಳು : ಬಾಯಿಯ ಹುಣ್ಣುಗಳು ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತದೆ ಮತ್ತು ಕೆಲವೇ ದಿನಗಳು ಅಥವಾ ವಾರಗಳಲ್ಲಿ ಕಡಿಮೆಯಾಗುತ್ತವೆ. ಬಾಯಿಯ ಹುಣ್ಣುಗಳು ಹಾರ್ಮೋನ್ ಬದಲಾವಣೆಗಳು, ಬಿ ಜೀವಸತ್ವಗಳು, ಸತು ಮತ್ತು ಕಬ್ಬಿಣದ ಕೊರತೆಯ ಸಂಕೇತವೂ ಆಗಿರುತ್ತದೆ. ಕೈ, ಕಾಲು ಮತ್ತು ಬಾಯಿ ರೋಗ, ಉದರದ ಕಾಯಿಲೆ ಅಥವಾ ಹೆಚ್ ಐವಿ  ಅಥವಾ ಲೂಪಸ್‌ನಂತಹ ಆರೋಗ್ಯ ಸ್ಥಿತಿಯಿಂದ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ಇದ್ರಿಂದಲೂ ಬಾಯಿ ಹುಣ್ಣು ಕಾಣಿಸಿಕೊಳ್ಳುತ್ತದೆ. ಪದೇ ಪದೇ ಬಾಯಿ ಹುಣ್ಣು ಕಾಣಿಸಿಕೊಳ್ತಿದ್ದರೆ ತಕ್ಷಣ ಚಿಕಿತ್ಸೆ ಪಡೆಯುವುದು ಉತ್ತಮ.

KIDS HEALTH : ಏಕಾಗ್ರತೆ ಹೆಚ್ಚಲು ಮಕ್ಕಳು ಮಾಡ್ಬೇಕು ಈ ಯೋಗ

ಬಾಯಿ ವಾಸನೆ : ಬಾಯಿಯನ್ನು ಎಷ್ಟೇ ಸ್ವಚ್ಛಗೊಳಿಸಿದ್ರೂ ಕೆಲವರ ಬಾಯಿಯಿಂದ ಕೆಟ್ಟ ವಾಸನೆ ಬರ್ತಿರುತ್ತದೆ. ಇದು ಬಾಯಿಯಿಂದ ಬರುವುದಲ್ಲ. ಉಸಿರಿನಿಂದ ಬರುವುದು. ಇದು ನಿಮ್ಮ ಆರೋಗ್ಯದಲ್ಲಿ ಏರುಪೇರಾಗಿದ್ದರ ದೊಡ್ಡ ಸಂಕೇತವಾಗಿದೆ.  ಬಾಯಿ ವಾಸನೆ ಯಾವಾಗಲೂ ಒಸಡು ಕಾಯಿಲೆಯ ಸಂಕೇತವಾಗಿರಬಹುದು. ಮೂಗು, ಸೈನಸ್ ಅಥವಾ ಗಂಟಲಿನ ಉರಿಯೂತವೂ ಕೆಟ್ಟ ಉಸಿರಾಟಕ್ಕೆ ಕಾರಣವಾಗಬಹುದು. ಕೆಲವು ಕ್ಯಾನ್ಸರ್‌ಗಳಂತಹ ರೋಗಗಳು ಮತ್ತು ಚಯಾಪಚಯ ಅಸ್ವಸ್ಥತೆಗಳಂತಹ ಸಂದರ್ಭದಲ್ಲಿ ಕೆಟ್ಟ ಉಸಿರಾಟ ಸ್ಥಿತಿ ಕಾಣಬಹುದು. ಹೊಟ್ಟೆಯಲ್ಲಿನ ಆಸಿಡ್ ರಿಫ್ಲಕ್ಸ್ ಆದಾಗ ಕೂಡ ಹೊಟ್ಟೆಯಿಂದ ಕೆಟ್ಟ ವಾಸನೆ ಬರುತ್ತದೆ. 

ಪೇನ್ ಕಿಲ್ಲರ್ ಬಿಡಿ, ಕಿವಿ ನೋವನ್ನು ನಿವಾರಿಸಲು ಇದನ್ನ ಟ್ರೈ ಮಾಡಿ

ತುಟಿಯ ಮೂಲೆಯಲ್ಲಿ ಬಿರುಕು :  ತುಟಿಯ ಮೂಲೆಯಲ್ಲಿ ಕಾಣಿಸಿಕೊಳ್ಳುವ ಬಿರುಕುಗಳನ್ನು ನಾವು ಸಾಮಾನ್ಯವಾಗಿ ಚಳಿಯಿಂದ ಆಗಿದೆ ಎಂದು ಭಾವಿಸ್ತೇವೆ. ಆದ್ರೆ ಕಬ್ಬಿಣ, ಸತು ಅಥವಾ ಬಿ ಜೀವಸತ್ವಗಳ ಕೊರತೆಯ ಸಂಕೇತ ಇದಾಗಿದೆ. ಈ ಬಿರುಕುಗಳು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಇದೆ ಎಂಬುದನ್ನು ಸಹ ಸೂಚಿಸುತ್ತವೆ. ಉದರದ ಕಾಯಿಲೆ, ಕ್ರೋನ್ಸ್ ಅಥವಾ ಅಲ್ಸರೇಟಿವ್ ಕೊಲೈಟಿಸ್ನಂತಹ ಕೆಲವು ರೋಗಗಳು ಸಹ ಇದಕ್ಕೆ ಕಾರಣವಾಗಬಹುದು. ನಿಮ್ಮ ಆಹಾರದಲ್ಲಿ ಜೀವಸತ್ವಗಳ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಈ ಸಮಸ್ಯೆ ಗುಣಪಡಿಸಬಹುದು.  
 

Latest Videos
Follow Us:
Download App:
  • android
  • ios