Harmful tea habits: ಅನೇಕ ರೀತಿಯ ಟೀಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದರೆ ಜನರು ಟೀ ಕುಡಿಯುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅದು ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಭಾರತೀಯರಿಗೆ ಟೀ ಕುಡಿಯುವುದೆಂದರೆ ಕೇವಲ ಅಭ್ಯಾಸವಲ್ಲ, ಒಂದು ರೀತಿ ಆಚರಣೆಯಾಗಿದೆ. ಬ್ಲಾಕ್‌ ಟೀಯಿಂದ ಮಸಾಲಾ ಟೀವರೆಗೆ ಜನರು ವಿವಿಧ ರೀತಿಯ ಟೀ ಕುಡಿಯಲು ಇಷ್ಟಪಡುತ್ತಾರೆ. ವಿಶೇಷವಾಗಿ ಉಪಾಹಾರ ಮತ್ತು ಸಂಜೆಗೆ ಟೀ ಇರಲೇಬೇಕು. ಸರಿಯಾಗಿ ಸೇವಿಸಿದ್ದೇ ಆದಲ್ಲಿ ಟೀ ಕುಡಿಯುವುದರಿಂದಲೂ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಟೀ ಉತ್ಕರ್ಷಣ ನಿರೋಧಕಗಳು ಮತ್ತು ಇತರ ಅನೇಕ ಪ್ರಯೋಜನಕಾರಿ ಸಸ್ಯ ಸಂಯುಕ್ತ(Compound leaf)ಗಳಿಂದ ಸಮೃದ್ಧವಾಗಿದೆ. ಅನೇಕ ರೀತಿಯ ಟೀಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದರೆ ಜನರು ಟೀ ಕುಡಿಯುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅದು ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇತ್ತೀಚೆಗೆ AIIMS, ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಿಂದ ತರಬೇತಿ ಪಡೆದ ಕರುಳಿನ ವೈದ್ಯ ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ, ನಿಮ್ಮ ಆರೋಗ್ಯಕ್ಕೆ ವಿಶೇಷವಾಗಿ ಕರುಳು ಮತ್ತು ಯಕೃತ್ತು ಅಥವಾ ಲಿವರ್‌ಗೆ ಹಾನಿ ಮಾಡುವ 7 ಕೆಟ್ಟ ಅಭ್ಯಾಸಗಳನ್ನು ಶೇರ್ ಮಾಡಿದ್ದಾರೆ.

ನಿಮ್ಮ ಲಿವರ್ ಮತ್ತು ಹೊಟ್ಟೆಯನ್ನು ಹಾಳು ಮಾಡುವ ಕೆಟ್ಟ ಅಭ್ಯಾಸಗಳು

1. ಖಾಲಿ ಹೊಟ್ಟೆಯಲ್ಲಿ ಟೀ ಸೇವನೆ
ಇದು ಹೊಟ್ಟೆಯ ಒಳಪದರವನ್ನು ಕೆರಳಿಸಬಹುದು. ರಿಫ್ಲಕ್ಸ್, ವಾಕರಿಕೆ ಮತ್ತು ಸಾಮಾನ್ಯ ಅಸ್ವಸ್ಥತೆ (General malaise)ಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಊಟದ ನಂತರ ಟೀ ಕುಡಿಯುವುದು ಸಾಮಾನ್ಯವಾಗಿ ಉತ್ತಮ.

2. ಸಕ್ಕರೆ ಅಥವಾ ಸಿಹಿ ಚಹಾ ಸೇವನೆ
"ಐಸ್ಡ್ ಟೀ ಅಥವಾ ಹಾಲಿನ ಟೀಯಲ್ಲಿ 30-40 ಗ್ರಾಂ ಸಕ್ಕರೆ ಇರಬಹುದು. ಇದು ಫ್ಯಾಟಿ ಲಿವರ್ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಡಾ. ಸೇಥಿ ವಿವರಿಸಿದರು. ಸಿಹಿಯಿರದ ಟೀ ಆಯ್ಕೆ ಮಾಡುವುದರಿಂದ ಅಥವಾ ಸಕ್ಕರೆ ಸೇವನೆಯನ್ನು ಸೀಮಿತಗೊಳಿಸುವುದರಿಂದ ಈ ಅಪಾಯ ಕಡಿಮೆ ಮಾಡಬಹುದು.

3. ಡಿಟಾಕ್ಸ್ ಅಥವಾ ಸ್ಲಿಮ್ಮಿಂಗ್ ಟೀ ಸೇವನೆ
ತೂಕ ಇಳಿಸಿಕೊಳ್ಳಲು ತ್ವರಿತ ಪರಿಹಾರ (Quick solution) ಎಂದು ಸಾಮಾನ್ಯವಾಗಿ ಹೇಳಲಾಗುವ ಚಹಾವು ದೀರ್ಘಕಾಲದವರೆಗೆ ಸೇವಿಸಿದರೆ ನಿರ್ಜಲೀಕರಣ, ಎಲೆಕ್ಟ್ರೋಲೈಟ್ ಅಸಮತೋಲನ ಮತ್ತು ಕರುಳಿನ ಹಾನಿಗೆ ಕಾರಣವಾಗುವ ವಿರೇಚಕಗಳನ್ನು ಹೊಂದಿರುತ್ತದೆ.

4. ಗ್ರೀನ್‌ ಟೀ ಅತಿಯಾದ ಸೇವನೆ
ಗ್ರೀನ್‌ ಟೀ ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ ಪೂರಕಗಳಲ್ಲಿ ಕಂಡುಬರುವ ಹೆಚ್ಚಿನ ಪ್ರಮಾಣದ ಗ್ರೀನ್‌ ಟೀ ಸಾರವು ಯಕೃತ್ತಿನ ವಿಷತ್ವ(Liver toxicity)ದ ಅಪರೂಪದ ಪ್ರಕರಣಗಳಿಗೆ ಸಂಬಂಧಿಸಿದೆ.

5. ತುಂಬಾ ಬಿಸಿಯಾದ ಟೀ ಕುಡಿಯುವುದು
ಕೆಲವು ಅಧ್ಯಯನಗಳು 65°C ಗಿಂತ ಹೆಚ್ಚಿನ ತಾಪಮಾನದಲ್ಲಿ ನಿಯಮಿತವಾಗಿ ಟೀ ಕುಡಿಯುವುದರಿಂದ ಅನ್ನನಾಳದ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗುತ್ತದೆ ಎಂದು ಕಂಡುಹಿಡಿದಿವೆ. ಕುಡಿಯುವ ಮೊದಲು ಟೀ ಸ್ವಲ್ಪ ತಣ್ಣಗಾಗಲು ಬಿಡುವುದು ಬಹಳ ಸುರಕ್ಷಿತ.

6. ತಡರಾತ್ರಿ ಟೀ ಸೇವನೆ ಅಥವಾ ಗ್ರೀನ್‌ ಟೀ
ಈ ಚಹಾಗಳಲ್ಲಿ ಕೆಫೀನ್ ಗಂಟೆಗಟ್ಟಲೆ ಇರುತ್ತದೆ ಮತ್ತು ನಿದ್ರೆಗೆ ಭಂಗ ತರುತ್ತದೆ. ಯಕೃತ್ತಿನ ದುರಸ್ತಿ ಮತ್ತು ಒಟ್ಟಾರೆ ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ ಎಂದು ನಮಗೆಲ್ಲರಿಗೂ ತಿಳಿದಿದೆ.

7. ಬೋಬಾ/ಬಬಲ್ ಟೀ
"ಸಕ್ಕರೆ ಮತ್ತು ಪಿಷ್ಟಯುಕ್ತ ಮುತ್ತುಗಳು ಗುಪ್ತ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಇದು ಇನ್ಸುಲಿನ್ ಪ್ರತಿರೋಧ ಮತ್ತು ಕೊಬ್ಬಿನ ಯಕೃತ್ತಿಗೆ ಕಾರಣವಾಗಬಹುದು" ಎಂದು ಡಾ. ಸೇಥಿ ಹೇಳಿದರು.

ಈ ಸಾಮಾನ್ಯ ತಪ್ಪುಗಳನ್ನು ತಪ್ಪಿಸುವುದರಿಂದ ಚಹಾದ ಪ್ರಯೋಜನಗಳನ್ನು ಆನಂದಿಸಲು ಮತ್ತು ಸಂಭಾವ್ಯ ಆರೋಗ್ಯ ಅಪಾಯ ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.

ಇಲ್ಲಿದೆ ನೋಡಿ ವಿಡಿಯೋ 

View post on Instagram