techie dies on stage video: ಸೂರತ್‌ನಲ್ಲಿ ನಡೆದ ಐಟಿ ಕಾರ್ಯಕ್ರಮವೊಂದರಲ್ಲಿ, 24 ವರ್ಷದ ವೆಬ್ ಡೆವಲಪರ್ ಝಿಲ್ ಥಕ್ಕರ್ ಭಾಷಣ ಮುಗಿಸಿದ ಕೂಡಲೇ ವೇದಿಕೆಯ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 

ವೇದಿಕೆಯಲ್ಲಿ ಮಾತು ಮುಗಿಸುತ್ತಿದ್ದಂತೆ ಕುಸಿದು ಬಿದ್ದು 24ರ ಹರೆಯದ ಟೆಕ್ಕಿ ಸಾವು

ಸೂರತ್: ಇತ್ತೀಚೆಗೆ ಕುಳಿತಿದ್ದಾಗಲೇ, ನಿಂತಿದ್ದಾಗಲೇ ಡಾನ್ಸ್ ಮಾಡುತ್ತಲೇ ಹಠಾತ್ ಆಗಿ ಕುಸಿದು ಬಿದ್ದು ಸಾವನ್ನಪ್ಪುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಪುಟ್ಟ ಮಕ್ಕಳು ಯುವಕರು ಯುವತಿಯರು, ಹರೆಯದ ಹುಡುಗ ಹುಡುಗಿಯರು ಈ ಹಠಾತ್ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದು, ಇದು ಯುವ ಸಮೂಹದ ಆರೋಗ್ಯ ಕಾಳಜಿಯ ಬಗ್ಗೆ ಆತಂಕ ಮೂಡಿಸಿದೆ. ಅದೇ ರೀತಿ ಈಗ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದೆ. ಅಹ್ಮದಾಬಾದ್‌ನ ಕಾಲೇಜೊಂದರಲ್ಲಿ ನಡೆದ ಐಟಿ ಕಾರ್ಯಕ್ರಮವೊಂದರಲ್ಲಿ 24ರ ಹರೆಯ ಐಟಿ ಉದ್ಯೋಗಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಭಾನುವಾರ ಸಂಜೆ ಸೂರತ್‌ನಲ್ಲಿ ನಡೆದ ಮಾಹಿತಿ ತಂತ್ರಜ್ಞಾನ ಕಾರ್ಯಕ್ರಮದಲ್ಲಿ ಈ ದುರಂತ ನಡೆದಿದೆ.

ವೇದಿಕೆ ಮೇಲೆ ಕುಸಿದು ಬಿದ್ದ ಝಿಲ್ ಥಕ್ಕರ್

ಮೂಲತಃ ರಾಯ್‌ಪುರದವರಾದ ಝಿಲ್ ಥಕ್ಕರ್ ಸಾವನ್ನಪ್ಪಿದ್ದವರು. ವೆಬ್ ಡೆವಲಪರ್ ಆಗಿರುವ ಝಿಲ್ ಥಕ್ಕರ್ ಕಪೋದ್ರಾದ ಶ್ರೀ ಸ್ವಾಮಿ ಆತ್ಮಾನಂದ ಸರಸ್ವತಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SSASIT) ನಲ್ಲಿ ನಡೆದ ವರ್ಡ್‌ಕ್ಯಾಂಪ್ ಸೂರತ್ 2025 ರಲ್ಲಿ ಭಾಗವಹಿಸಲು ಬಂದಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿದ್ದ ಅವರು ಭಾಷಣ ಮುಗಿಸಿದ ಕೆಲವೇ ಕ್ಷಣಗಳಲ್ಲಿ ವೇದಿಕೆಯ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಸಂಜೆ 5 ಗಂಟೆ ಸುಮಾರಿಗೆ, ಥಕ್ಕರ್ ತಮ್ಮ ಕಂಪನಿಯನ್ನು ಪ್ರತಿನಿಧಿಸಲು ವೇದಿಕೆಯ ಮೇಲೆ ಬಂದಿದ್ದರು. ಅಲ್ಲಿ ಭಾಷಣ ಮುಗಿಸಿದ ಕೆಲವೇ ಕ್ಷಣಗಳಲ್ಲಿ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ.

ಅಹಮದಾಬಾದ್‌ನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಝಿಲ್:

ಪ್ರಾಥಮಿಕ ಮಾಹಿತಿಯ ಪ್ರಕಾರ ಆಕೆಗೆ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ಆದರೆ ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ತಜ್ಞರ ವಿಶ್ಲೇಷಣೆಯ ನಂತರ ನಿಖರವಾದ ಕಾರಣವನ್ನು ದೃಢೀಕರಿಸಲಾಗುತ್ತದೆ. ಹೆಚ್ಚಿನ ಪರೀಕ್ಷೆಗಾಗಿ ಆಕೆಯ ಒಳಾಂಗಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಕಪೋದ್ರಾ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಬಿ. ಔಸುರ ತಿಳಿಸಿದ್ದಾರೆ. ಎಂಸಿಎ ಪದವಿ ಪಡೆದಿದ್ದ ಝಿಲ್ ಥಕ್ಕರ್ ಭಾನುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಕಾರ್ಯಕ್ರಮಕ್ಕಾಗಿ ಸೂರತ್ ತಲುಪಿದ್ದರು ಮತ್ತು ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಕಾರ್ಯಕ್ರಮದ ಸ್ಥಳದಲ್ಲಿದ್ದರು ಎಂದು ವರದಿಯಾಗಿದೆ. ಅವರು ಕಳೆದ ಎರಡು ವರ್ಷಗಳಿಂದ ಅಹಮದಾಬಾದ್‌ನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ನಗರಗಳಲ್ಲಿ ನಡೆಯುವ ತಾಂತ್ರಿಕ ಕಾರ್ಯಕ್ರಮಗಳಲ್ಲಿ ನಿಯಮಿತವಾಗಿ ತಮ್ಮ ಕಂಪನಿಯನ್ನು ಪ್ರತಿನಿಧಿಸುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಐಟಿ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರು.

ಕೊನೆಕ್ಷಣ ಕ್ಯಾಮರಾದಲ್ಲಿ ಸೆರೆ:

ಝಿಲ್ ಅವರ ಕೊನೆಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ವೇದಿಕೆ ಮೇಲೆ ನಿಂತಿದ್ದ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಜೊತೆಯಲ್ಲಿದ್ದವರು ಓಡಿ ಬಂದು ಆಕೆಯನ್ನು ಮೇಲೆತ್ತಿದ್ದಾರೆ. ಘಟನೆಯ ವೀಡಿಯೋ ನೋಡಿದ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ವೀಡಿಯೋ ನೋಡಿದ ಅನೇಕರು ಏನೋ ಸ್ಪಷ್ಟವಾಗಿ ತಪ್ಪು ಕಾಣುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಅನೇಕರು ಪ್ರತಿಕ್ರಿಯಿಸಿದ್ದು, ಹೌದು, ಜಂಕ್‌ಫುಡ್‌ಗಳು, ಸಕ್ಕರೆ, ರಿಫೈನ್ಡ್‌ ಆಯಿಲ್‌ಗಳು ಇದಕ್ಕೆ ಕಾರಣವಾಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಎಲ್ಲಾ ಸ್ಟ್ರೀಟ್ ಫುಡ್‌ಗಳಲ್ಲಿ ಮಯೋನೀಸ್ ಇರುತ್ತದೆ ಇದರ ಜೊತೆ ಅವರು ಡಾಲ್ಡಾ ಬಲಸುತ್ತಾರೆ ಇದು ಕೂಡ ಮತ್ತೊಂದು ಕಾರಣ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಕೋವಿಶೀಲ್ಡ್ ಮೇಲೆ ಆರೋಪ ಮಾಡಿದ್ದಾರೆ. ಹಾಗೆಯೇ ಕೆಲವರು ಇದಕ್ಕೆ ಕೋವಿಶೀಲ್ಡ್ ಕಾರಣ ಅಲ್ಲ, ನಮ್ಮ ಜೀವನಶೈಲಿ ಆಹಾರ ಶೈಲಿಯೇ ಕಾರಣ ಎಂದು ಹೇಳಿದ್ದಾರೆ. ಜನ ಆರೋಗ್ಯಕ್ಕಿಂತ ದೈಹಿಕವಾಗಿ ಚಂದ ಕಾಣುವುದಕ್ಕೆ ಆದ್ಯತೆ ನೀಡುವುದು ಕೂಡ ಇದಕ್ಕೆ ಕಾರಣ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಭಾರತೀಯ ಮೆಕ್ಕಾ ಯಾತ್ರಿಕರ ಬಸ್ ದುರಂತ: ನ ಒಂದೇ ಕುಟುಂಬ ಮೂರು ತಲೆಮಾರಿನ 18 ಜನ ಸಾವು

ಇದನ್ನೂ ಓದಿ: ಬೆಂಗಳೂರು ಕನ್ಸರ್ಟ್‌ನಲ್ಲಿ ಖ್ಯಾತ ಗಾಯಕ ಅಕಾನ್ ಪ್ಯಾಂಟ್ ಎಳೆದಾಡಿ ಮುಜುಗರಕ್ಕೀಡು ಮಾಡಿದ ಅಭಿಮಾನಿಗಳು

View post on Instagram