ಹೊಟ್ಟೆ ಬೊಜ್ಜು ಕರಗಿಸೋದು ಕಷ್ಟವಲ್ಲ; ಇಲ್ಲಿದೆ ಸಿಂಪಲ್ ಟಿಪ್ಸ್!

ನಮ್ಮ ದೇಹದಲ್ಲಿ ಅತಿ ಕೆಟ್ಟ ಬೊಜ್ಜೆಂದರೆ ಅದು ಹೊಟ್ಟೆಯ ಬೊಜ್ಜು. ಇದೇ ಡಯಾಬಿಟೀಸ್ ಹಾಗೂ ಹೃದಯದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಈ ಹೊಟ್ಟೆಯ ಸುತ್ತಳತೆ ಗಂಡಸರಲ್ಲಿ 40 ಇಂಚು ಹಾಗೂ ಹೆಂಗಸರಲ್ಲಿ 35 ಇಂಚು ದಾಟಬಾರದು. ಹಾಗೆ ಹೆಚ್ಚಾದರೆ ಅದನ್ನು ಅಬ್ಡೋಮಿನಲ್ ಒಬೆಸಿಟಿ ಎನ್ನಲಾಗುತ್ತದೆ. 

6 simple ways to Reduce Belly Fat

ಫ್ಲ್ಯಾಟ್ ಆಬ್ಸ್ ಕಾಣಿಸುವವರಿಗೆ ಕೂಡಾ ಸ್ವಲ್ಪ ಹೊಟ್ಟೆ ಬೊಜ್ಜಿದ್ದೇ ಇರುತ್ತದೆ. ಅದು ಸಾಮಾನ್ಯ. ಆದರೆ, ಅತಿಯಾದ ಹೊಟ್ಟೆಯ ಬೊಜ್ಜು ಆರೋಗ್ಯದ ಮೇಲೆ ಕೆಡುಕುಂಟು ಮಾಡುವಷ್ಟು ಇತರೆ ಬೊಜ್ಜು ಮಾಡುವುದಿಲ್ಲ. ನಮ್ಮ ಕೆಲ ಫ್ಯಾಟ್ ಚರ್ಮದ ಕೆಳಗೇ ಇರುತ್ತದೆ. ಮತ್ತೆ ಕೆಲವು ಬಹಳ ಆಳದಲ್ಲಿ ಇರುತ್ತದೆ. ಅಂದರೆ, ಹೃದಯ, ಶ್ವಾಸಕೋಶ, ಲಿವರ್ ಹಾಗೂ ಇತರೆ ಅಂಗಗಳ ಸುತ್ತ. ಈ ಆಳದ ಫ್ಯಾಟ್‌ನ್ನೇ ವಿಸೆರಲ್ ಎನ್ನುವುದು.

ಹಿಂಗ್ಯಾಕಾದ್ಲು ಶ್ರದ್ಧಾ..! 18 ಕೆಜಿ ಇಳಿಸಿ ಹೀಗಾಗಿದಾರೆ ನೋಡಿ!

ಇದು ಎಲ್ಲ ಅಂಗಗಳಿಗೆ ಕುಶನ್ ನೀಡುವುದರಿಂದ ಸ್ವಲ್ಪ ಮಟ್ಟಿಗೆ ಇರುವುದು ಅಗತ್ಯ. ಆದರೆ, ಅತಿಯಾದ ಕುಶನ್ ಇದ್ದಾಗ ಅದು ಸಮಸ್ಯೆಯಾಗುತ್ತದೆ. ತೆಳ್ಳಗಿರುವವರಿಗೆ ಕೂಡಾ ಈ ವಿಸೆರಲ್ ಹೆಚ್ಚಿರಬಹುದು.  ಇದರಿಂದ ಹೈ ಬಿಪಿ, ಟೈಪ್ 2 ಡಯಾಬಿಟೀಸ್, ಹೃದಯ ಸಮಸ್ಯೆಗಳು, ಮರೆವು, ಕೆಲ ಕ್ಯಾನ್ಸರ್‌ಗಳು ಕಾಣಿಸಿಕೊಳ್ಳಬಹುದು. ಹಾಗಾಗಿಯೇ ಈ ಫ್ಯಾಟ್ ಕರಗಿಸುವುದು ಅಗತ್ಯ. ಸಧ್ಯ ಹೊಟ್ಟೆಯ ಬೊಜ್ಜು ಕರಗಿಸಲು ಹೀಗ್ ಮಾಡಿ.

ಪ್ರೋಟೀನ್ ಡಯಟ್

ತೂಕ ಇಳಿಸುವಿಕೆಯಲ್ಲಿ ಪ್ರೋಟೀನ್ ಮುಖ್ಯ ಪಾತ್ರ ವಹಿಸುತ್ತದೆ. ಇದು ಜೀರ್ಣಕ್ರಿಯೆ ಆಗುವಾಗ ಹೆಚ್ಚು ಕ್ಯಾಲೋರಿ ಬರ್ನ್ ಆಗುವಂತೆ ಮಾಡುವ ಜೊತೆಗೆ ತೆಳುವಾದ ಮಸಲ್ಸ್ ಬೆಳವಣಿಗೆಗೆ ಕಾರಣವಾಗುತ್ತದೆ. ಜೊತೆಗೆ ಪ್ರೋಟೀನ್ ಬೇಗ ಹೊಟ್ಟೆ ತುಂಬಿದ ಫೀಲಿಂಗ್ ನೀಡುತ್ತದೆ. ಕಾರ್ಬೋಹೈಡ್ರೇಟ್‌ನಂತೆ ಪ್ರೋಟೀನ್ ಬೇಗ ಜೀರ್ಣವಾಗುವುದಿಲ್ಲ. ಇದು ನಮ್ಮ ಮೆಟಾಬಾಲಿಸಂ ಹೆಚ್ಚಿಸುತ್ತದೆ. ಹಾಗಾಗಿ, ಆಹಾರದಲ್ಲಿ ಪ್ರೋಟೀನ್ ಹೆಚ್ಚಿಸಿ.

ಆಯುರ್ವೇದಿಕ್ ಡಯಟ್; ತೂಕ ಇಳಿಸೋಕೂ ಸಹಕಾರಿನಾ?

ಕೊಬ್ಬರಿ ಎಣ್ಣೆ ಬಳಕೆ

ಕೊಬ್ಬರಿ ಎಣ್ಣೆಯು ತೂಕ ಇಳಿಕೆ ಫ್ರೆಂಡ್ಲಿ ಫ್ಯಾಟ್. ಇತರೆ ಫ್ಯಾಟ್‌ನಂಥಲ್ಲ ಇದು. ನಿಮ್ಮ ಆಹಾರದಲ್ಲಿ ಕೊಬ್ಬರಿ ಎಣ್ಣೆ ಬಳಕೆ ಹೆಚ್ಚಿಸಿ ಇತರೆ ಎಣ್ಣೆಗಳ ಬಳಕೆ ಕಡಿಮೆ ಮಾಡಿದಲ್ಲಿ ಹೊಟ್ಟೆಯ ಭಾಗದ ಆ ಕೆಟ್ಟ ಅಪಾಯಕಾರಿ ಫ್ಯಾಟ್ ಕರಗುತ್ತದೆ. ಇದರಲ್ಲಿರುವ ಫ್ಯಾಟಿ ಆ್ಯಸಿಡ್ಸ್ ನೇರವಾಗಿ ಡೈಜೆಸ್ಟಿವ್ ಟ್ರ್ಯಾಕ್‌ನಿಂದ ಲಿವರ್‌ಗೆ ಹೋಗಿ ಅಲ್ಲಿ ತಕ್ಷಣ ಎನರ್ಜಿಗಾಗಿ ಬಳಕೆಯಾಗುತ್ತವೆ. ಕೀಟೋಜೆನಿಕ್ ಡಯಟ್ ಮಾಡುವವರು ಕೀಟೋನ್ ಮಟ್ಟ ಹೆಚ್ಚಿಸಲು ಈ ಎಣ್ಣೆ ಬಳಸಬಹುದು. ಇದು ಹಸಿವು ತಗ್ಗಿಸಿ, ನೀವು ಪ್ರಯತ್ನಿಸದೆಯೇ ಕಡಿಮೆ ತಿನ್ನುವಂತೆ ಮಾಡುತ್ತದೆ. 

ಒತ್ತಡ ತಗ್ಗಿಸಿ

ಒತ್ತಡದ ಕಾರಣದಿಂದಾಗಿಯೇ ಹಲವರು ತೂಕ ತಗ್ಗಿಸಲು ಸಾಧ್ಯವಾಗುತ್ತಿರುವುದಿಲ್ಲ. ಮೊದಲಿಗೆ, ಒತ್ತಡದಿಂದಲೇ ಜನ ಅತಿಯಾಗಿ ತಿನ್ನಲಾರಂಭಿಸುತ್ತಾರೆ. ಇದೊಂತರಾ ಎಮೋಶನಲ್ ಈಟಿಂಗ್. ಇದರಿಂದ ಕ್ಯಾಲೋರಿ ಹೆಚ್ಚಿ ತೂಕ ಹೆಚ್ಚಳವಾಗುತ್ತದೆ. ಅದರಲ್ಲೂ ಸ್ಟ್ರೆಸ್ ಆದಾಗ ತಿನ್ನಬೇಕೆನಿಸುವ ಆಹಾರವೆಲ್ಲ ಜಂಕ್ ಆಗಿರುತ್ತದೆ. ಸಕ್ಕರೆ, ಉಪ್ಪು ಹೆಚ್ಚಿರುವ, ಪ್ರೊಸೆಸ್ಡ್ ಆಹಾರ ಈ ಸಂದರ್ಭದಲ್ಲಿ ತಿನ್ನುವುದು ಹೆಚ್ಚು. ಅಲ್ಲದೆ, ಸ್ಟ್ರೆಸ್ ದೇಹವು ಕಾರ್ಟಿಸೋಲ್ ಹಾರ್ಮೋನ್ ಹೆಚ್ಚಾಗಿ ಉತ್ಪಾದಿಸುವಂತೆ ಮಾಡುತ್ತದೆ. ಈ ಹಾರ್ಮೋನ್ ಬಾಡಿ ಫ್ಯಾಟ್ ಹೆಚ್ಚಲು ಪ್ರೋತ್ಸಾಹಿಸಿ ತೂಕ ಕಳೆಯುವುದು ಕಷ್ಟವಾಗುವಂತೆ ಮಾಡುತ್ತದೆ.

4 ತಿಂಗ​ಳಲ್ಲಿ 26 ಕೆ.ಜಿ ತೂಕ ಇಳಿ​ಸಿದ ಸಾನಿ​ಯಾ!

ಅದರಲ್ಲೂ ಹೊಟ್ಟೆಯ ಸುತ್ತದ ಬೊಜ್ಜು ಕರಗಲು ಬಿಡಲ್ಲ. ಕಡಿಮೆ ನಿದ್ರೆ ಅತಿಯಾದ ಸುಸ್ತಿನಿಂದ ಘ್ರೆಲಿನ್ ಹಾರ್ಮೋನ್ ಹೆಚ್ಚುತ್ತದೆ. ಇದು ಹಸಿವಿನ ಹಾರ್ಮೋನ್ ಆಗಿದ್ದು, ಅಗತ್ಯವಿಲ್ಲದಿದ್ದರೂ ತಿನ್ನಬೇಕೆನಿಸುವಂತೆ ಮಾಡುತ್ತದೆ. ಹಾಗಾಗಿ ಒತ್ತಡ ತಗ್ಗಿಸಿಕೊಳ್ಳುವುದು ಮುಖ್ಯ. ಇದಕ್ಕಾಗಿ ಉತ್ತಮ ನಿದ್ರೆ ಮಾಡಿ. ಕೆಲವರಿಗೆ ಒತ್ತಡದಿಂದ ತೂಕ ಇಳಿಯಬಹುದು. ಆದರೆ, ಅದು ಆರೋಗ್ಯಕಾರಿ ತೂಕ ಇಳಿಕೆ ಅಲ್ಲ. ಅದರಿಂದ ವೀಕ್ನೆಸ್ ಹೆಚ್ಚಿ ರೋಗ ನಿರೋಧಕ ಶಕ್ತಿ ಡಲ್ ಆಗುತ್ತದೆ. 

ಗ್ರೀನ್ ಟೀ ಕುಡಿಯಿರಿ

ಗ್ರೀನಿ ಟೀ ಅತ್ಯಂತ ಆರೋಗ್ಯಕರ ಪಾನೀಯ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ಸಸ್ಯಜನ್ಯ ಪದಾರ್ಥಗಳು ಆರೋಗ್ಯಕ್ಕೆ ಲಾಭ ತಂದುಕೊಡುತ್ತವೆ. ಒಂದು ಲೋಟ ಗ್ರೀನ್ ಟೀ ಕುಡಿಯುವುದರಿಂದ ರಕ್ತದಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಹೆಚ್ಚುವುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಗ್ರೀನ್ ಟೀ ಎಕ್ಸ್ಯ್ಟ್ರಾಕ್ಟ್‌ ವಿಶ್ರಾಂತಿಯಲ್ಲಿರುವಾಗ ಕೂಡಾ ಹೆಚ್ಚು ಕ್ಯಾಲೋರಿ ಕರಗಿಸುತ್ತವೆ. 

ತೂಕ ಇಳಿಸಲು ಕ್ಲೋರೋಫಿಲ್ ವಾಟರ್ ಎಂಬ ಹೊಸ ಟ್ರೆಂಡ್!

ಗುಣಮಟ್ಟದ ನಿದ್ರೆ

ನಿದ್ರೆ ಕಡಿಮೆಯಾದರೆ ಅದರಿಂದ ಕೂಡಾ ತೂಕ ಏರುಪೇರಾಗುತ್ತದೆ. ನಿದ್ರೆ ಇಲ್ಲದಿದ್ದಾಗ ಹಸಿವಿನ ಬಗ್ಗೆ, ವ್ಯಾಯಾಮದ ಬಗ್ಗೆ - ಹೀಗೆ ಯಾವುದರ ಕುರಿತೂ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾರಿರಿ. ಸುಮ್ಮನೆ ಅದೂ ಇದೂ ತಿನ್ನೋಣವೆನಿಸುತ್ತದೆ, ಕಾಫಿ, ಟೀ ಕುಡಿಯೋಣ ಎನಿಸುತ್ತದೆ. ಇವೆಲ್ಲವೂ ಕ್ಯಾಲೋರಿ ಹೆಚ್ಚಿಸುತ್ತಲೇ ಹೋಗುತ್ತವೆ. ನಿದ್ರೆಯು ಮೆದುಳಿಗೆ ನ್ಯೂಟ್ರಿಶನ್ ಇದ್ದಂತೆ. ಹಾಗಾಗಿ ಪ್ರತಿ ದಿನ ನಿದ್ರೆಗೆ ನಿಗದಿತ ಸಮಯ ಮಾಡಿಕೊಳ್ಳಿ. ಮಲಗುವ 1 ಗಂಟೆ ಮುನ್ನವೇ ಎಲೆಕ್ಟ್ರಾನಿಕ್ ಉಪಕರಣಗಳಿಂದ ದೂರವಿರಿ. ಲೈಟ್ ಆರಿಸಿ. ಕತ್ತಲಲ್ಲಿ ಸ್ಲೀಪ್ ಹಾರ್ಮೋನ್ ಮೆಲಟೋನಿನ್ ಬಿಡುಗಡೆ ಮಾಡುವಂತೆ ದೇಹಕ್ಕೆ ಸಂದೇಶ ಹೋಗುತ್ತದೆ. 

ಹೆಚ್ಚು ನೀರು ಕುಡಿಯಿರಿ

ನೀರು ಕುಡಿಯುವುದರಿಂದ ಹೆಚ್ಚು ಕ್ಯಾಲೋರಿ ಬರ್ನ್ ಆಗುತ್ತದೆ. ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ. ಇದರಿಂದ ಶೇ,13ರಷ್ಟು ಕ್ಯಾಲೋರಿ ತೆಗೆದುಕೊಳ್ಳುವುದು ಕಡಿಮೆಯಾಗುತ್ತದೆ. ನೀರು ಕ್ಯಾಲೋರಿ ಫ್ರೀ ಕೂಡಾ ಆಗಿರುವುದರಿಂದ ಆರಾಮಾಗಿ ಸಾಕಷ್ಟು ನೀರು ಕುಡಿಯಬಹುದು. ಆಗ ಸಕ್ಕರೆ ಹೊಂದಿರುವ ಬೇರೆ ಪಾನೀಯಗಳನ್ನು ಕುಡಿಯಬೇಕೆಂದು ಅನಿಸುವುದೂ ಇಲ್ಲ.

Latest Videos
Follow Us:
Download App:
  • android
  • ios