Asianet Suvarna News Asianet Suvarna News

30-30-30 Method: ವೈಟ್‌ ಲಾಸ್‌ ಮಾಡ್ಕೊಳ್ಳೋಕೆ ಸಿಂಪಲ್ ಟೆಕ್ನಿಕ್‌, ಒಂದೇ ವಾರದಲ್ಲಿ ತೂಕ ಇಳಿಯುತ್ತೆ

ತೂಕ ಹೆಚ್ಚಳ, ಬೊಜ್ಜು ಅಥವಾ ಅಧಿಕ ತೂಕ ಇತ್ತೀಚಿನ ವರ್ಷಗಳಲ್ಲಿ ಹಲವರನ್ನು ಕಾಡುತ್ತಿರುವ ಸಮಸ್ಯೆ. ಇದಕ್ಕೆ ಆರೋಗ್ಯ ತಜ್ಞರು ಸಹ ಹಲವಾರು ಪರಿಹಾರಗಳನ್ನು ಸೂಚಿಸುತ್ತಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿರೋದು 30-30-30 ತೂಕ ನಷ್ಟ ವಿಧಾನ. ಆ ಬಗ್ಗೆ ತಿಳಿಯೋಣ.

30-30-30 weight loss method: Here's how this viral weight loss technique works Vin
Author
First Published Dec 23, 2023, 9:28 AM IST

ತೂಕ ಹೆಚ್ಚಳ, ಬೊಜ್ಜು ಅಥವಾ ಅಧಿಕ ತೂಕ ಇತ್ತೀಚಿನ ವರ್ಷಗಳಲ್ಲಿ ಹಲವರನ್ನು ಕಾಡುತ್ತಿರುವ ಸಮಸ್ಯೆ. ಇದಕ್ಕೆ ಆರೋಗ್ಯ ತಜ್ಞರು ಸಹ ಹಲವಾರು ಪರಿಹಾರಗಳನ್ನು ಸೂಚಿಸುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಸಹ ತೂಕ ಇಳಿಕೆಗೆ ಹಲವಾರು ಟ್ರಿಕ್ಸ್‌ಗಳನ್ನು ಹೇಳಿ ಕೊಡಲಾಗುತ್ತದೆ. ಆದರೆ ಇಂಥಾ ಎಲ್ಲಾ ಟಿಪ್ಸ್‌ಗಳು, ಎಲ್ಲರ ಪಾಲಿಗೂ ವರ್ಕೌಟ್ ಆಗಬೇಕೆಂದಿಲ್ಲ. ಹೀಗಾಗಿ ಇಂಥಾ ಹ್ಯಾಕ್‌ಗಳು ನಿಮಗೆ ಸಹಾಯಕವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚಿಗೆ ವೈರಲ್ ಆಗುತ್ತಿರುವ ಅಂತಹ ತೂಕ ನಷ್ಟ ವಿಧಾನವೆಂದರೆ 30-30-30 ತೂಕ ಇಳಿಸುವ ವಿಧಾನ. 

30-30-30 ವೈಟ್‌ ಲಾಸ್‌ ವಿಧಾನವು ಹೆಲ್ದೀ ಲೈಫ್‌ಸ್ಟೈಲ್‌ನ್ನು ಬ್ಯಾಲೆನ್ಸ್ ಮಾಡುವ ಅಭ್ಯಾಸವನ್ನುಒಳಗೊಂಡಿರುತ್ತದೆ. ಇದು ಪೋಷಣೆ, ವ್ಯಾಯಾಮ ಮತ್ತು ಮಾನಸಿಕ ಆರೋಗ್ಯವನ್ನು ಒಳಗೊಂಡಿದೆ..

ಇಂಥಾ ತರಕಾರಿ ದಿನಾ ತಿಂದ್ರೆ ಒಂದೇ ವಾರದಲ್ಲಿ ತೂಕ ಕಡಿಮೆ ಮಾಡ್ಕೋಬೋದು!

ಪೋಷಣೆ (30%): ತೂಕ ಇಳಿಕೆಗೆ, ಸಮತೋಲಿತ ಮತ್ತು ಪೌಷ್ಟಿಕ ಆಹಾರ ಸೇವನೆ ತುಂಬಾ ಅಗತ್ಯ. ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳು, ತರಕಾರಿಗಳು, ನೇರ ಪ್ರೋಟೀನ್‌ಗಳು, ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬುಗಳಂತಹ ವಿವಿಧ ಸಂಪೂರ್ಣ ಆಹಾರಗಳನ್ನು ಸೇವಿಸಿ. ವೈವಿಧ್ಯಮಯ ಪೋಷಕಾಂಶಗಳನ್ನುಹೊಂದಿರುವವುಗಳನ್ನು ಹೆಚ್ಚು ತಿನ್ನಿ. ದಿನವಿಡೀ ನಿರಂತರ ಶಕ್ತಿಯನ್ನು ಒದಗಿಸುವಂತಹಾ ಧಾನ್ಯ, ಕಾಳುಗಳ ಸೇವನೆ ಅಧಿಕವಾಗಿರಲಿ. ದಿನವಿಡೀ ಅನಗತ್ಯವಾಗಿ ಕುರುಕುಲು ತಿಂಡಿ ತಿನ್ನೋದನ್ನು ತಪ್ಪಿಸಿ. ಉತ್ತಮ ಆರೋಗ್ಯಕ್ಕೆ ಹೆಚ್ಚು ನೀರು ಕುಡಿಯುವುದು ತುಂಬಾ ಅಗತ್ಯ. ದೇಹದ ಕಾರ್ಯಗಳು ಮತ್ತು ಒಟ್ಟಾರೆ ಆರೋಗ್ಯಕ್ಕೆ ಬೆಂಬಲಿಸುವಲ್ಲಿ ಜಲಸಂಚಯನವು ಪ್ರಮುಖ ಪಾತ್ರ ವಹಿಸುತ್ತದೆ.

ವ್ಯಾಯಾಮ (30%): ತೂಕ ಇಳಿಕೆಗೆ ಆರೋಗ್ಯಕರವಾಗಿ ತಿನ್ನುವುದರ ಜೊತೆಗೆ ವ್ಯಾಯಾಮ ಮಾಡುವುದು ಸಹ ಮುಖ್ಯ. ಓಟ, ಸೈಕ್ಲಿಂಗ್, ಈಜು ಅಥವಾ ಚುರುಕಾದ ನಡಿಗೆಯಂತಹ ಚಟುವಟಿಕೆಗಳು ಹೃದಯದ ಆರೋಗ್ಯ, ಕ್ಯಾಲೋರಿ ಸುಡುವಿಕೆಗೆ ನೆರವಾಗುತ್ತದೆ. ಸ್ನಾಯುವಿನ ಬಲವನ್ನು ನಿರ್ಮಿಸಲು, ಚಯಾಪಚಯವನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಕ್ರಿಯಾತ್ಮಕ ಫಿಟ್‌ನೆಸ್ ಅನ್ನು ಉತ್ತೇಜಿಸಲು ಭಾರ ಎತ್ತುವಿಕೆ, ದೇಹದ ತೂಕದ ವ್ಯಾಯಾಮಗಳು ಹೆಲ್ಪ್‌ಫುಲ್ ಆಗಿವೆ. 

ತೂಕ ಇಳಿಸಿಕೊಳ್ಳಲು ನೀವು ಬ್ರೌನ್ ಶುಗರ್ ಸೇವಿಸ್ತೀರಾ? ನಿಜಾ ಏನು ಗೊತ್ತಾ?

ಮೈಂಡ್‌ಫುಲ್‌ನೆಸ್ (30%): ಆಹಾರ, ವ್ಯಾಯಾಮಕ್ಕೆ ಗಮನ ಕೊಡುವ ಹಾಗೆಯೇ ಧ್ಯಾನ ಅಥವಾ ಆಳವಾದ ಉಸಿರಾಟದ ವ್ಯಾಯಾಮಗಳಂತಹ ಪ್ರಾಣಾಯಾಮ ಅಭ್ಯಾಸಗಳಿಗೆ ದಿನದ ಒಂದು ಭಾಗವನ್ನು ಮೀಸಲಿಡಿ. ಈ ಚಟುವಟಿಕೆಗಳು ಒತ್ತಡವನ್ನು ಕಡಿಮೆ ಮಾಡುತ್ತದೆ, ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸುತ್ತದೆ ಮತ್ತು ಒಟ್ಟಾರೆ ಭಾವನಾತ್ಮಕ ಸಮತೋಲನಕ್ಕೆ ಕೊಡುಗೆ ನೀಡುತ್ತದೆ.

30-30-30 ವಿಧಾನದ ಪ್ರಯೋಜನಗಳು
ಪೋಷಣೆ, ವ್ಯಾಯಾಮ ಮತ್ತು ಸಾವಧಾನತೆಯನ್ನು ಅಳವಡಿಸಿಕೊಳ್ಳುವ 30-30-30 ವಿಧಾನವು ಸಂಪೂರ್ಣ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ದೀರ್ಘಾವಧಿಯಲ್ಲಿ ವ್ಯಕ್ತಿಗಳು ಆರೋಗ್ಯಕರ ಅಭ್ಯಾಸಗಳಿಗೆ ಅಂಟಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. 30-30-30 ವಿಧಾನವನ್ನು ಅನುಸರಿಸುವಾಗ ದೇಹವು ಹೊಸ ಆಹಾರ ಪದ್ಧತಿ ಮತ್ತು ವ್ಯಾಯಾಮದ ದಿನಚರಿಗಳಿಗೆ ಹೊಂದಿಕೊಳ್ಳಲು ಸ್ಪಲ್ಪ ಸಮಯ ನೀಡುವುದು ಮುಖ್ಯ. ದೇಹದ ಸಂಕೇತಗಳಿಗೆ ಗಮನ ಕೊಡಿ. ಒಂದು ನಿರ್ದಿಷ್ಟ ಅಂಶವು ತುಂಬಾ ಶ್ರಮದಾಯಕ ಅಥವಾ ಅಹಿತಕರವೆಂದು ಭಾವಿಸಿದರೆ, ಬದಲಾವಣೆಯನ್ನು ಮಾಡಿಕೊಳ್ಳಬಹುದು.

Follow Us:
Download App:
  • android
  • ios