Over exercise women health: ಪರಿಸ್ಥಿತಿ ಯಾವ ಲೆವೆಲ್‌ಗೆ ಹದಗೆಟ್ಟಿತು ಎಂದರೆ ಕಳೆದ ಬಾರಿ ಪಿರಿಯಡ್ಸ್ ಆದಾಗ ರಕ್ತಸ್ರಾವವು ಕೇವಲ ಎರಡು ಗಂಟೆಗಳ ಕಾಲ ಮಾತ್ರ ಇತ್ತು. ಈ ಗಂಭೀರ ಬದಲಾವಣೆಯನ್ನು ನೋಡಿದ ಮಹಿಳೆ ತುಂಬಾ ಭಯಭೀತಳಾಗಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿದ್ದಾಳೆ. 

ತ್ತೀಚಿನ ದಿನಗಳಲ್ಲಿ ಫಿಟ್ ಆಗಿರುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿಯೇ ಜನರು ವಿವಿಧ ವ್ಯಾಯಾಮಗಳನ್ನು ಮಾಡುತ್ತಾರೆ. ಜಿಮ್‌ಗೆ ಹೋಗುತ್ತಾರೆ. ಅವರಲ್ಲಿ ಹೆಚ್ಚಿನವರು ಹುಡುಗಿಯರು. ಆದರೆ ಒಂದು ಸುದ್ದಿ ಮಹಿಳೆಯರಲ್ಲಿ ಜಿಮ್ ಬಗ್ಗೆ ಭಯವನ್ನು ಸೃಷ್ಟಿಸಿದೆ. ಅದನ್ನು ತಿಳಿದರೆ ನೀವು ಸಹ ಆಶ್ಚರ್ಯಚಕಿತರಾಗುವಿರಿ. ವರದಿಗಳ ಪ್ರಕಾರ, ಚೀನಾದ 23 ವರ್ಷದ ಹುಡುಗಿಯೊಬ್ಬಳು ಜಿಮ್ ಅನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದಳು. ಇದೇ ಅವಳ ಗಂಭೀರತೆಯು ಅವಳನ್ನು ಎಂದಿಗೂ ಯೋಚಿಸದಷ್ಟು ತೊಂದರೆಗೆ ಸಿಲುಕಿಸಿತು.

ಜಿಮ್ ಹುಚ್ಚಿನಿಂದ ಹುಡುಗಿಗೆ ಆಗಿದ್ದೇನು?

ವರದಿಯ ಪ್ರಕಾರ, ಅತಿಯಾದ ಜಿಮ್‌ನಿಂದಾಗಿ ಮಹಿಳೆಯ ದೇಹದ ಸಮತೋಲನ ಹದಗೆಟ್ಟಿದೆ ಮತ್ತು ಇದ್ದಕ್ಕಿದ್ದಂತೆ ಅವಳ ಋತುಚಕ್ರ ನಿಂತುಹೋಯಿತು. ಈ ಸಮಸ್ಯೆಯ ಕುರಿತಂತೆ ಮಹಿಳೆ ವೈದ್ಯರ ಬಳಿಗೆ ಹೋದಾಗ, ವೈದ್ಯರು ಕೆಲವು ಪರೀಕ್ಷೆಗಳನ್ನು ಮಾಡಿದರು. ಆಗ ಮಹಿಳೆಯ ಹಾರ್ಮೋನ್ ಮಟ್ಟಗಳು 50 ವರ್ಷದ ಮಹಿಳೆಯಂತೆಯೇ ಇರುವುದು ಕಂಡುಬಂದಿದೆ. ಇದು ಒಂದು ದೊಡ್ಡ ಸಮಸ್ಯೆಯಾಗಿದ್ದು, ಅಗತ್ಯಕ್ಕಿಂತ ಹೆಚ್ಚು ಜಿಮ್‌ಗೆ ಹೋಗುವುದು ಅಥವಾ ಫಿಟ್‌ಗಾಗಿ ಹೆಚ್ಚು ಸಮಯ ಕಳೆಯುವವರಲ್ಲಿ ಆತಂಕ ಹುಟ್ಟಿಸಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಆ ಮಹಿಳೆ ಕೆಲವು ಸಮಯದ ಹಿಂದೆ "ತನ್ನ ತೂಕ 65 ಕೆಜಿ ಇತ್ತು. ಅತಿಯಾಗಿ ತಿನ್ನುವ ಸಮಸ್ಯೆಯಿಂದ ಬಳಲುತ್ತಿದ್ದೆ" ಎಂದು ಹೇಳಿಕೊಂಡಿದ್ದಾಳೆ. ಈ ತೂಕ ಹೆಚ್ಚಾಗುವುದನ್ನು ತಡೆಯಲು ಆಕೆ ಕಠಿಣ ವ್ಯಾಯಾಮ ದಿನಚರಿಯನ್ನು ಅಳವಡಿಸಿಕೊಂಡಳು. ಕೊನೆಗೆ ಅದರಲ್ಲಿಯೇ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡಿದ್ದಾಳೆ. ಈ ಸಮಯದಲ್ಲಿ ಆಕೆ ವಾರಕ್ಕೆ ಆರು ದಿನಗಳೂ ಸುಮಾರು 70 ನಿಮಿಷಗಳ ಕಾಲ ನಿರಂತರವಾಗಿ ಕಠಿಣ ತರಬೇತಿ ಪಡೆಯಲು ಪ್ರಾರಂಭಿಸಿದಳು. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ಕಾಲಾನಂತರದಲ್ಲಿ ಆಕೆಯ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರಲು ಪ್ರಾರಂಭಿಸಿದವು.

ಈ ಬದಲಾವಣೆಗಳಲ್ಲಿ ಒಂದು ಋತುಚಕ್ರದ ಸಮಯದಲ್ಲಿ ರಕ್ತದ ಪ್ರಮಾಣ ಕಡಿಮೆಯಾಯಿತು. ಪರಿಸ್ಥಿತಿ ಯಾವ ಲೆವೆಲ್‌ಗೆ ಹದಗೆಟ್ಟಿತು ಎಂದರೆ ಕಳೆದ ಬಾರಿ ಪಿರಿಯಡ್ಸ್ ಆದಾಗ ರಕ್ತಸ್ರಾವವು ಕೇವಲ ಎರಡು ಗಂಟೆಗಳ ಕಾಲ ಮಾತ್ರ ಇತ್ತು. ಈ ಗಂಭೀರ ಬದಲಾವಣೆಯನ್ನು ನೋಡಿದ ಮಹಿಳೆ ತುಂಬಾ ಭಯಭೀತಳಾಗಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿದ್ದಾಳೆ.

ಈ ಸಮಸ್ಯೆಗೆ ಕಾರಣವೇನು?

ಇಂತಹ ಸಮಸ್ಯೆಯು ಸಾಮಾನ್ಯವಾಗಿ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಕಂಡುಬರುತ್ತದೆ. ಏಕೆಂದರೆ ಆಗ ಸ್ತ್ರೀ ಹಾರ್ಮೋನ್ ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಇದರ ಹೊರತಾಗಿ ವೈದ್ಯರು ಮೂತ್ರಪಿಂಡದ ಕೊರತೆಯ ಲಕ್ಷಣಗಳನ್ನು ಸಹ ಹೇಳಿದರು. ಈ ಸಮಸ್ಯೆ ಇದ್ದಾಗ ಮೂತ್ರಪಿಂಡವು ಸಹ ತನ್ನ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ವೈದ್ಯರು ತಕ್ಷಣವೇ ಮಹಿಳೆಗೆ ಅತಿಯಾದ ವ್ಯಾಯಾಮವನ್ನು ನಿಲ್ಲಿಸುವಂತೆ ಸಲಹೆ ನೀಡಿದರು ಮತ್ತು ದೇಹವನ್ನು ಸಮತೋಲನಕ್ಕೆ ತರಲು ಸಾಂಪ್ರದಾಯಿಕ ಚೀನೀ ಔಷಧವನ್ನು ಪ್ರಾರಂಭಿಸಿದರು.

ಈ ಸಮಸ್ಯೆಯನ್ನು ವಿಜ್ಞಾನದ ಭಾಷೆಯಲ್ಲಿ 'ವ್ಯಾಯಾಮ ಸಂಬಂಧಿತ ಅಮೆನೋರಿಯಾ' (Exercise amenorrhoea) ಎಂದು ಕರೆಯಲಾಗುತ್ತದೆ. ದೇಹವು ಆಹಾರದಿಂದ ಕಡಿಮೆ ಶಕ್ತಿ ಪಡೆದಾಗ ಅಥವಾ ಕಠಿಣ ವ್ಯಾಯಾಮದಿಂದಾಗಿ ಹೆಚ್ಚಿನ ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಕಡಿಮೆ ಶಕ್ತಿಯನ್ನು ಹೊಂದಿರುವಾಗ ದೇಹವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಮಾಡುವ ಮೊದಲ ಕೆಲಸವೆಂದರೆ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು. ಇದು ಮೆದುಳಿನಿಂದ ಬಿಡುಗಡೆಯಾಗುವ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಅಂಡೋತ್ಪತ್ತಿ ನಿಲ್ಲುತ್ತದೆ ಮತ್ತು ಮುಟ್ಟು ಅನಿಯಮಿತವಾಗುತ್ತದೆ. ಈ ಸ್ಥಿತಿಯು ದೀರ್ಘಕಾಲದವರೆಗೆ ಮುಂದುವರಿದರೆ, ಭವಿಷ್ಯದಲ್ಲಿ ತಾಯಿಯಾಗುವ ಸಮಸ್ಯೆ ಉಂಟಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.