ಮೂಡಿಗೆರೆ: 184 ವಿದ್ಯಾರ್ಥಿಗಳಿಗೆ ಮದ್ರಾಸ್ ಐ ಸೋಂಕು!
ತಾಲೂಕಿನಲ್ಲಿ ಮದ್ರಾಸ್ ಐ (ಕೆಂಗಣ್ಣು) ಕಾಯಿಲೆಯ ಸೋಂಕು ಒಬ್ಬರಿಂದ ಒಬ್ಬರಿಗೆ ಅತಿ ವೇಗವಾಗಿ ಹರಡುತ್ತಿದ್ದು, ಈಗಾಗಲೇ ತಾಲೂಕಿನಲ್ಲಿ ಒಟ್ಟು 184 ವಿದ್ಯಾರ್ಥಿಗಲ್ಲಿ ಈ ಮದ್ರಾಸ್ ಐ ಕಾಯಿಲೆ ಕಾಣಿಸಿಕೊಂಡಿದೆ.
ಮೂಡಿಗೆರೆ (ಜು.24) : ತಾಲೂಕಿನಲ್ಲಿ ಮದ್ರಾಸ್ ಐ (ಕೆಂಗಣ್ಣು) ಕಾಯಿಲೆಯ ಸೋಂಕು ಒಬ್ಬರಿಂದ ಒಬ್ಬರಿಗೆ ಅತಿ ವೇಗವಾಗಿ ಹರಡುತ್ತಿದ್ದು, ಈಗಾಗಲೇ ತಾಲೂಕಿನಲ್ಲಿ ಒಟ್ಟು 184 ವಿದ್ಯಾರ್ಥಿಗಲ್ಲಿ ಈ ಮದ್ರಾಸ್ ಐ ಕಾಯಿಲೆ ಕಾಣಿಸಿಕೊಂಡಿದೆ.
ಕಳೆದ ಏಳೆಂಟು ದಿನದ ಹಿಂದೆ ಈ ಸೋಂಕು ತಾಲೂಕಿನ ಕೆಲ ವಿದ್ಯಾರ್ಥಿ ನಿಲಯಗಳಲ್ಲಿ ಕಾಣಿಸಿಕೊಂಡಿದೆ. ಪಟ್ಟಣದ ಪ್ರೀ ಮೆಟ್ರಿಕ್ ಬಾಲಕರ ಹಾಸ್ಟೆಲ್‌ನ 125 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೂಡಲೇ ಹಾಸ್ಟೆಲ್ ವಾರ್ಡನ್ ಎಚ್ಚೆತ್ತುಕೊಂಡು ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಸೂಕ್ತ ಚಿಕಿತ್ಸೆ ದೊರಕಿಸಿದ್ದರಿಂದ ಇದೀಗ 20 ವಿದ್ಯಾರ್ಥಿಗಳು ಗುಣಮಖರಾಗಿದ್ದಲ್ಲದೇ ಇತರೇ ವಿದ್ಯಾರ್ಥಿಗಳಿಗೆ ಹರಡುವುದನ್ನು ತಪ್ಪಿಸಲಾಗಿದೆ.
ಎಲ್ಲೆಡೆ ಹರಡುತ್ತಿರುವ ಮದ್ರಾಸ್ ಐ, ಹುಷಾರಾಗಿದ್ದು ಆರೋಗ್ಯ ಕಾಪಾಡಿಕೊಳ್ಳಿ
ಬಿದರಹಳ್ಳಿ ಮುರಾರ್ಜಿ ವಸತಿ ಶಾಲೆಯಲ್ಲಿ 450 ಮಕ್ಕಳ ಪೈಕಿ 164 ವಿದ್ಯಾರ್ಥಿಗಳಿಗೆ ಮದ್ರಾಸ್ ಐ ಸೋಂಕು ಆವರಿಸಿಕೊಂಡಿದೆ. ಇದೀಗ ಎಲ್ಲಾ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಗುಣಮುಖರಾಗುತ್ತಿದ್ದಾರೆ. ಸೋಂಕು ಹರಡುವಿಕೆ ಅಧಿಕಗೊಳ್ಳುತ್ತಿದ್ದಂತೆ ಪೋಷಕರಿಗೆ ಮಾಹಿತಿ ತಿಳಿಸಿದ್ದು, ಕೆಲ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ದಿದ್ದಾರೆ. ಸೋಂಕಿತ ವಿದ್ಯಾರ್ಥಿಗಳಿಗೆ ಕಣ್ಣಿನ ವೈದ್ಯರಿಂದ ಚಿಕಿತ್ಸೆ ನೀಡುವ ಮೂಲಕ ಇತರೇ ವಿದ್ಯಾರ್ಥಿಗಳಿಗೆ ಸೋಂಕು ಹರಡದಂತೆ ಎಚ್ಚರ ವಹಿಸಲಾಗಿದೆ. ಗುರುವಾರ ಜಿ.ಪಂ. ಸಿಇಒ ಗೋಪಾಲಕೃಷ್ಣ ಹಾಗೂ ಡಿಎಚ್‌ಒ ಕಚೇರಿಯಿಂದ ವೈದ್ಯರು ಆಗಮಿಸಿ ಪರಿಶೀಲಿಸಿದ್ದಾರೆ.
Madras Eye; ಉಡುಪಿಯಲ್ಲಿ ಹೆಚ್ಚಿದ ಕೆಂಗಣ್ಣು ಸಾಂಕ್ರಾಮಿಕ ರೋಗ, ವೈದ್ಯರ ಸಲಹೆ ಪಡೆಯಲು ಸೂಚನೆ
ಮದ್ರಾಸ್ ಐ ಸೋಂಕು ಬಗ್ಗೆ ಯಾರಲ್ಲೂ ಭಯ ಬೇಡ. ಒಮ್ಮೆ ಸೋಂಕು ಹರಡಿದರೆ ನಾಲ್ಕೈದು ದಿನದಲ್ಲಿ ಗುಣವಾಗುತ್ತದೆ. ಈಗಾಗಲೇ ತಾಲೂಕಿನಲ್ಲಿ 184 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿನಿತ್ಯ ಮೆಡಿಕಲ್ ಆಫೀಸರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ವಚ್ಛತೆ ಕಾಪಾಡಿಕೊಂಡರೆ ಸೋಂಕು ಆವರಿಸಿಕೊಳ್ಳದಂತೆ ತಡೆಯಬಹುದು.
ಡಾ.ಸುಂದರೇಶ್, ತಾಲೂಕು ಆರೋಗ್ಯಾಧಿಕಾರಿ.