ಸಮಾಜ ಒಡೆಯುವ ಶಕ್ತಿಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯ ಸರ್ಕಾರ ಕಳೆದುಕೊಂಡಿದೆ

  • ಹಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಲೀಂ ಅಹ್ಮದ್
  • ಸಮಾಜ ಒಡೆಯುವ ಸಂಘಟನೆಗಳಿಗೆ ಕಡಿವಾಣ ಹಾಕುವ ಶಕ್ತಿ ಸರ್ಕಾರ ಕಳೆದುಕೊಂಡಿದೆ
  • ಗಲಭೆ ವಿಚಾರದಲ್ಲಿ ಅಮಾಯಕರನ್ನು ಅರೆಸ್ಟ್ ಮಾಡಬೇಡಿ ಕಿರುಕುಳ ಕೊಡಬೇಡಿ ಎಂದಿದ್ದೇವೆ
KPCC Executive Salim Ahmed told Govt lost its power to control Organization that breaks down society akb

ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ

ಹಾವೇರಿ ( ಏ 21): ಹುಬ್ಬಳ್ಳಿ ಗಲಭೆ ವಿಚಾರದಲ್ಲಿ ಸರ್ಕಾರ ಎಡವಿದೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸಲೀಂ ಅಹ್ಮದ್ ಅಸಮಾಧಾನ ವ್ಯಕ್ತಪಡಿಸಿದರು. ಇಂದು ಹಾವೇರಿಯಲ್ಲಿ (Haveri) ಸುದ್ದಿಗೋಷ್ಠಿ (PressMeet) ನಡೆಸಿ ಮಾತನಾಡಿದ ಸಲೀಂ ಅಹ್ಮದ್, ಹುಬ್ಬಳ್ಳಿ ಗಲಭೆ (Hubli riots) ವಿಚಾರದಲ್ಲಿ ಅಮಾಯಕರನ್ನು ಅರೆಸ್ಟ್ ಮಾಡಬೇಡಿ ಕಿರುಕುಳ ಕೊಡಬೇಡಿ ಎಂದಿದ್ದೇವೆ. ಹುಬ್ಬಳ್ಳಿ ಗಲಭೆ ವಿಚಾರದಲ್ಲಿ ಕಾಂಗ್ರೆಸ್ ಕುಮ್ಮಕ್ಕಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಬಿಜೆಪಿ (BJP) ಯವರಿಗೆ ಸೋಲುಗಳಿಂದ ಭ್ರಮನಿರಸವಾಗಿದೆ. ಬಿಜೆಪಿಯವರದ್ದು ಕಾಮಾಲೆ ಕಣ್ಣು ಎಂದು ಕಿಡಿಕಾರಿದರು. 

ಎಸ್‌ಡಿಪಿಐ (SDPI), ಪಿಎಫ್ಐ (PFI) ಸಂಘಟನೆ ಬ್ಯಾನ್ ಮಾಡುವ ವಿಚಾರವಾಗಿ ಬಿಜೆಪಿ ನಾಯಕ ಸಿ.ಟಿ ರವಿ ಹೇಳಿಕೆ ವಿಚಾರವಾಗಿ  ತಿರುಗೇಟು ನೀಡಿದ ಸಲೀಂ ಅಹ್ಮದ್(Salim Ahmed), ಸಿ.ಟಿ ರವಿ (CT Ravi)ಯಾವಾಗ ಏನ್ ಹೇಳ್ತಾರೋ ಗೊತ್ತಿಲ್ಲ. ಸಿ.ಟಿ ರವಿಗೆ ರಾಜಕೀಯ ಇಚ್ಚಾಶಕ್ತಿ ಇದ್ದರೆ  ಯಾವ  ಸಂಘಟನೆಗಳು ಕೋಮುವಾದ ಮಾಡ್ತಿವೆಯೋ ಅವನ್ನೆಲ್ಲಾ ನಿಷೇಧ ಮಾಡಲಿ. ಕಳೆದ 6 ತಿಂಗಳಿಂದ ಈ ರಾಜ್ಯದಲ್ಲಿ ಶಾಂತಿ (Peace) ಹಾಳು ಮಾಡಲು ಪ್ರಯತ್ನ ಮಾಡಲಾಗ್ತಿದೆ. ಸರ್ಕಾರ ಇಲ್ಲಿ ಸಂಪೂರ್ಣ ಎಡವಿದೆ. ಇದಕ್ಕೆ  ಸರ್ಕಾರವೇ ಹೊಣೆ. ಯುವಕರಿಗೆ ಉದ್ಯೋಗ (Job), ಅಭಿವೃದ್ಧಿ (Development) ಏನೂ ಮಾಡದೇ  ಇಂಥ ವಿಚಾರ ಮುಂದಿಟ್ಟುಕೊಂಡು ರಾಜಕೀಯ (Politics) ಮಾಡಲಾಗ್ತಿದೆ. ಸಮಾಜ ಒಡೆಯುವ ಸಂಘಟನೆಗಳಿಗೆ ಕಡಿವಾಣ ಹಾಕೋ ಶಕ್ತಿ ಸರ್ಕಾರ ಕಳೆದುಕೊಂಡಿದೆ. ಬಿಜೆಪಿ ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡಿದೆ  ಎಂದು ಆರೋಪಿಸಿದರು.

Congress Politics: ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ!

ಕಳೆದ ಶನಿವಾರ ರಾತ್ರಿ ಹುಬ್ಬಳ್ಳಿಯಲ್ಲಿ (Hubballi Riot) ಹಠಾತ್ತನೆ ಸಂಭವಿಸಿದ ಗಲಭೆ, ಹಿಂಸಾಚಾರಕ್ಕೆ ಸಂಬಂಧಿಸಿದ ಒಂದೊಂದೇ ದೃಶ್ಯಾವಳಿಗಳು ಹಾಗೂ ಧ್ವನಿ ಸಂದೇಶಗಳು ಬಹಿರಂಗವಾಗುತ್ತಿದ್ದು, ಇಡೀ ಘಟನೆ ಪೂರ್ವನಿಯೋಜಿತವಾಗಿತ್ತಾ? ಕೆಲ ಕಾಣದ ಕೈಗಳ ಕುಮ್ಮಕ್ಕಿನಿಂದಾಗಿ ವಾಣಿಜ್ಯ ನಗರಿ ಕಂಗೆಡುವಂತಾಯಿತಾ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವವಾಗಿವೆ.

ಮೆಕ್ಕಾ ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿದಂತೆ ಎಡಿಟ್‌ ಮಾಡಿದ ವಿಡಿಯೋವೊಂದನ್ನು ಕಿಡಿಗೇಡಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಾಕಿದಲ್ಲಿಂದ ಆರಂಭವಾದ ವಿವಾದ ಏ.16ರ ಶನಿವಾರ ರಾತ್ರಿ ಭಾರೀ ಗಲಭೆ, ಕಲ್ಲು ತೂರಾಟ, ಹಿಂಸಾಚಾರ ಆಗುವ ಮಟ್ಟಿಗೆ ಮುಂದುವರಿದಿತ್ತು. ಆ ರಾತ್ರಿ 15-20 ನಿಮಿಷದಲ್ಲಿ ಹಳೆ ಹುಬ್ಬಳ್ಳಿಯ ಪೊಲೀಸ್‌ ಠಾಣೆ ಎದುರು 2000ಕ್ಕೂ ಅಧಿಕ ಮಂದಿ ಸೇರಿದ್ದರು. ಹಾಗಾದರೆ ಅಲ್ಪಾವಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಗಲಭೆ ಸಂಭವಿಸಿದ್ದು ಹೇಗೆ? ಇದರ ಹಿಂದೆ ಯಾರಿದ್ದಾರೆ? ಇದೊಂದು ಯೋಜಿತ ಕೃತ್ಯವೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ತನಿಖೆ ನಡೆಸಿದ್ದಾರೆ.

Hubballi Violence: ಇಬ್ಬರು ಪೊಲೀಸರ ಹತ್ಯೆಗೂ ಹುಬ್ಬಳ್ಳಿ ಉದ್ರಿಕ್ತರಿಂದ ಯತ್ನ..!
ಹುಬ್ಬಳ್ಳಿ ಹಿಂಸಾಚಾರ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಸೀದಿ ಹಾಗೂ ಮೌಲ್ವಿಗಳ ಸರ್ವೇಯಾಗಬೇಕು ಎಂದು ಬಿಜೆಪಿ ಶಾಸಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮಸೀದಿಗಳಿಂದಲೇ ಈ ರೀತಿ ಪ್ರಚೋದನೆಯಾಗುತ್ತಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಘಟನೆಯ ದೃಶ್ಯಾವಳಿಗಳನ್ನು ಗಮನಿಸಿದಾಗ ಹಿಂಸಾಚಾರಕ್ಕ ಮೌಲ್ವಿಯೇ ಪ್ರಚೋದನೆ ನೀಡಿರುವುದು ಕಂಡು ಬರುತ್ತಿದೆ. ಹೀಗಾಗಿ ಮೌಲ್ವಿಯ ಹಿನ್ನೆಲೆಯನ್ನು ತನಿಖೆ ಮಾಡಬೇಕಾಗಿ ಬಿಜೆಪಿ ಶಾಸಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

ಇನ್ನು ಈ ಬೆನ್ನಲ್ಲೆ ಮಾತನಾಡಿರುವ ಮುಸ್ಲಿಂ ಮುಖಂಡ ರಿಯಾಜ್‌ ಅಹ್ಮದ್‌ " ಮಸೀದಿಗಳಲ್ಲಿ ಯಾವುದೇ ರೀತಿ ಪ್ರಚೋದನೆ ನೀಡೋದಿಲ್ಲ, ದ್ವೇಷ ಭಾಷಣ ಮಾಡುವ ಕಾರ್ಯ ನಡೆಯೋದಿಲ್ಲ, ಗಡ್ಡ ಬಿಟ್ಟವರೆಲ್ಲ ಮೌಲ್ವಿಯಾಗಲು ಸಾಧ್ಯವಿಲ್ಲ. ನಮ್ಮ ಮದರಸಾಗಳಲ್ಲಿ, ಮಸೀದಿಗಳಲ್ಲಿ ಇನ್ನೊಬ್ಬರನ್ನು ಗೌರವಿಸಲು ಕಲಿಸಲಾಗುತ್ತದೆ. ಹುಬ್ಬಳ್ಳಿಯಲ್ಲಿ ಮಾತನಾಡಿದವರು ಯಾರೋ ವೇಷಧಾರಿಯಾಗಿದ್ದಾರೆ, ಹೊರತು ಮೌಲ್ವಿ ಅಲ್ಲ " ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios