Asianet Suvarna News Asianet Suvarna News

Congress Politics: ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ!

*  40 ಜನ ಉಪಾಧ್ಯಕ್ಷರ ಪೈಕಿ 11 ಜನ ಉ.ಕ.ದವರು
* 109 ಪ್ರಧಾನ ಕಾರ್ಯದರ್ಶಿಗಳ ಪೈಕಿ ಬರೀ 22 ಜನ ಇಲ್ಲಿನವರು
*  ಉತ್ತರ ಕರ್ನಾಟಕದ ನಾಯಕರೆಂದರೆ ರಾಜಕೀಯ ಪಕ್ಷಗಳಲ್ಲೂ ಅನ್ಯಾಯ

List of KPCC Officers is Unfair to North Karnataka grg
Author
Bengaluru, First Published Apr 19, 2022, 4:12 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಏ.19):  ಸರ್ಕಾರದ ಮಟ್ಟದಲ್ಲಿ ಉತ್ತರ ಕರ್ನಾಟಕ(North Karnataka) ಭಾಗಕ್ಕೆ ತಾರತಮ್ಯವಾಗುತ್ತದೆ ಎಂಬ ಆರೋಪ- ಪ್ರತ್ಯಾರೋಪ ಸಹಜ. ಇದು ಸತ್ಯವೂ ಹೌದು. ಆದರೆ ಇದೀಗ ರಾಜಕೀಯ ಪಕ್ಷದ ಸ್ಥಾನ ಮಾನಗಳಲ್ಲೂ ಅನ್ಯಾಯವಾಗುತ್ತಿರುವುದು ಕೆಪಿಸಿಸಿ ಇತ್ತೀಚಿಗೆ ಬಿಡುಗಡೆ ಮಾಡಿರುವ ಪದಾಧಿಕಾರಿಗಳ ಪಟ್ಟಿಯಿಂದ ಸಾಬೀತಾಗಿದೆ. ಇದು ಪಕ್ಷದ ಕಾರ್ಯಕರ್ತರಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ.

ಹೌದು, ಇತ್ತೀಚಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ಸಮಿತಿಗೆ (KPCC) ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡಿದೆ. 40 ಜನ ಉಪಾಧ್ಯಕ್ಷರನ್ನು ಹಾಗೂ 109 ಜನ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿರುವುದು ವಿಶೇಷ. 2023ರ ಚುನಾವಣೆಯನ್ನು(Karnataka Assembly Election 2023) ಗಮನದಲ್ಲಿ ಇಟ್ಟುಕೊಂಡು ಮಾಡಿರುವ ನೇಮಕಾತಿ ಇದು. ಇದರಲ್ಲೂ ಅತಿ ಹೆಚ್ಚಿನ ಸ್ಥಾನ ಪಡೆದಿರುವುದು ದಕ್ಷಿಣ ಕರ್ನಾಟಕದ(South Karnataka) ಭಾಗವೇ. ಉತ್ತರ ಕರ್ನಾಟಕ ಭಾಗದ ಮುಖಂಡರು ಸ್ಥಾನ ಪಡೆದಿರುವುದು ಕಡಿಮೆಯೇ ಆಗಿದೆ.

Hubli violence ಪೊಲೀಸ್‌ ಕಾರಿನ ಮೇಲೆ ಹತ್ತಿ ನಿಂತು ಹುಬ್ಬಳ್ಳಿ ಉದ್ರಿಕ್ತ ಕೇಕೆ!

40ರಲ್ಲಿ 11 ಜನ:

40 ಜನ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ಈ ಪೈಕಿ ಉತ್ತರ ಕರ್ನಾಟಕದ ಬಸವರಾಜ ರಾಯರಡ್ಡಿ, ಸಂತೋಷ ಲಾಡ್, ಶರಣ ಪ್ರಕಾಶ ಪಾಟೀಲ, ವಿನಯ ಕುಲಕರ್ಣಿ, ಡಿ.ಆರ್. ಪಾಟೀಲ ಸೇರಿದಂತೆ 11 ಜನ ಸ್ಥಾನ ಪಡೆದಿದ್ದಾರೆ. ಅಂದರೆ ಶೇ.25ರಷ್ಟುಸ್ಥಾನಗಳು ಮಾತ್ರ ಉತ್ತರ ಕರ್ನಾಟಕದವರಿಗೆ ಲಭಿಸಿದಂತಾಗಿವೆ. ಇನ್ನೂ 109 ಜನ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಿದೆ. ಇದರಲ್ಲಿ ಶಾಕೀರ ಸನದಿ, ಎಫ್.ಎಚ್. ಜಕ್ಕಪ್ಪನವರ, ಅಲ್ಕೋಡ ಹನುಮಂತಪ್ಪ, ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ರುದ್ರಪ್ಪ ಲಮಾಣಿ, ಸಿರಾಜ್ಶೇಖ, ಟಿ. ಈಶ್ವರ, ವೀಣಾ ಕಾಶಪ್ಪನವರ ಸೇರಿದಂತೆ 22 ಜನರಿಗೆ ಸ್ಥಾನ ಲಭಿಸಿದೆ. ಅಂದರೆ ಶೇ. 20ರಷ್ಟು ಜನರು ಉತ್ತರ ಕರ್ನಾಟಕ ಭಾಗದವರು ಸ್ಥಾನ ಪಡೆದಂತಾಗಿದೆ.

Santosh Suicide Case: ಕಾಂಗ್ರೆಸ್ಸಿಗರು ತನಿಖಾಧಿಕಾರಿಗಳಾಗುವುದು ಬೇಡ: ಸಿಎಂ ಬೊಮ್ಮಾಯಿ

ಈ ಅನ್ಯಾಯ ಏಕೆ?:

ಮೊದಲೇ ಉತ್ತರ ಕರ್ನಾಟಕ ಬಿಜೆಪಿ ಶಕ್ತಿ ಕೇಂದ್ರವೆನಿಸಿದೆ. ಬಿಜೆಪಿಯನ್ನು(BJP) ಸೋಲಿಸಬೇಕೆಂದರೆ ಕಾಂಗ್ರೆಸ್ಸದೃಢವಾಗಬೇಕು. ಹಾಗಂತ ಉತ್ತರ ಕರ್ನಾಟಕದಲ್ಲಿ ದೊಡ್ಡ ದೊಡ್ಡ ನಾಯಕರಿಲ್ಲ ಅಂತೇನೂ ಇಲ್ಲ. ಸಾಕಷ್ಟುಜನ ಮುಖಂಡರಿದ್ದಾರೆ. ಇದೀಗ ಎರಡನೆಯ ಸ್ತರದ ನಾಯಕರನ್ನು ಬೆಳೆಸಬೇಕಿದೆ. ಎರಡನೆಯ ಸ್ತರದ ನಾಯಕರೆಂದರೆ ಕಳೆದ 20-30 ವರ್ಷಗಳಿಂದ ಪಕ್ಷಕ್ಕಾಗಿ ನಿರಂತರ ದುಡಿಯುತ್ತಲೇ ಬರುತ್ತಿದ್ದಾರೆ. ಕೆಲವರಿಗಂತೂ ಒಂದೇ ಒಂದು ಸ್ಥಾನವೂ ಸಿಕ್ಕಿಲ್ಲ. ಬರೀ ಸಮಾರಂಭಗಳಲ್ಲಿ ಕುರ್ಚಿ, ಟೇಬಲ್ಹಾಕುವುದಕಷ್ಟೇ ಅವರು ಸೀಮಿತವಾಗಿದ್ದಾರೆ. ದಕ್ಷಿಣ ಕರ್ನಾಟಕಕ್ಕೆ ಕೊಟ್ಟಂತಹ ಪ್ರಾಶಸ್ತ್ಯವನ್ನೇ ಈ ಭಾಗದ ಮುಖಂಡರಿಗೂ ನೀಡಬೇಕಿತ್ತು. ಇಲ್ಲಿನ ಇನ್ನಷ್ಟುನಾಯಕರಿಗೆ ಪ್ರಧಾನ ಕಾರ್ಯದರ್ಶಿ ಅಥವಾ ಉಪಾಧ್ಯಕ್ಷ ಹುದ್ದೆಗಳನ್ನು ನೀಡಬೇಕಿತ್ತು. ಸ್ಥಾನಮಾನ ಸಿಗದೇ ಒಳಗೊಳಗೆ ಅಸಮಾಧಾನಗೊಂಡಿರುವವರಿಗೆ ಕೊಂಚ ಸಮಾಧಾನವಾಗುತ್ತಿತ್ತು. ಪಕ್ಷವನ್ನು ಸಂಘಟಿಸಲು ಅನುಕೂಲವಾಗುತ್ತಿತ್ತು. ಅವರಿಗೆ ಪಕ್ಷ ಸ್ಥಾನಮಾನ ಕೊಟ್ಟಿದ್ದರೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲು ಸಹಕಾರಿಯಾಗುತ್ತಿತ್ತು ಎಂಬ ಅಭಿಪ್ರಾಯ ಮುಖಂಡರದ್ದು.

ಉತ್ತರ ಕರ್ನಾಟಕದ ನಾಯಕರೆಂದರೆ ರಾಜಕೀಯ ಪಕ್ಷಗಳಲ್ಲೂ ಅನ್ಯಾಯವಾಗುತ್ತದೆ ಎಂಬುದಕ್ಕೆ ಕೆಪಿಸಿಸಿ ಪಟ್ಟಿಯೇ ಸಾಕ್ಷಿಯಾದಂತಾಗಿದೆ. ಇದನ್ನು ಇನ್ಮೇಲಾದರೂ ಸರಿದೂಗಿಸುವ ಕೆಲಸ ಮಾಡಬೇಕು. ಬೇರೆ ಬೇರೆ ಯಾವುದಾದರೂ ಹುದ್ದೆಗಳನ್ನು ಸೃಜಿಸಿ ಈ ಭಾಗದ ಎರಡನೆಯ ಸ್ತರದ ನಾಯಕರಿಗೆ ಕೊಡಬೇಕೆಂಬ ಬೇಡಿಕೆ ಕಾರ್ಯಕರ್ತರದ್ದು.
 

Follow Us:
Download App:
  • android
  • ios