Asianet Suvarna News Asianet Suvarna News

Hubballi Violence: ಇಬ್ಬರು ಪೊಲೀಸರ ಹತ್ಯೆಗೂ ಹುಬ್ಬಳ್ಳಿ ಉದ್ರಿಕ್ತರಿಂದ ಯತ್ನ..!

*  ಗಲಭೆಯ ರಾತ್ರಿ ಕೊಲ್ಲಲು ಯತ್ನಿಸಿದ 100 ಜನರ ಗುಂಪು
*  ಓಡಿ ಪಾರಾದ ಪೇದೆಗಳು
*  ‘ಸುಮ್ಮನೆ ಬಿಡಬೇಡಿ, ಇಲ್ಲೇ ಕೊಲ್ಲಿ’ ಎಂದು ಕೂಗಿದರು
 

Attempt by the frantic to Killed Two Police in During Hubballi Violence grg
Author
Bengaluru, First Published Apr 21, 2022, 4:12 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಏ.21):  ಶನಿವಾರ ರಾತ್ರಿ ಹುಬ್ಬಳ್ಳಿಯಲ್ಲಿ(Hubballi Riot) ನಡೆದ ಗಲಭೆ ವೇಳೆ ಪೊಲೀಸರು, ಪೊಲೀಸ್‌ ಠಾಣೆ ಹಾಗೂ ಪೊಲೀಸ್‌ ವಾಹನಗಳನ್ನು ಗುರಿಯಾಗಿಸಿಕೊಂಡಿದ್ದ ಗಲಭೆಕೋರರು ಕರ್ತವ್ಯಕ್ಕೆ ಬರುತ್ತಿದ್ದ ಇಬ್ಬರು ಪೊಲೀಸ್‌ ಸಿಬ್ಬಂದಿಯ ಹತ್ಯೆಗೂ ಪ್ರಯತ್ನಿಸಿದ್ದರು. ಆದರೆ ಅದೃಷ್ಟವಶಾತ್‌ ಅವರು ಓಡಿಹೋಗಿ ಗಲಭೆಕೋರರಿಂದ ತಪ್ಪಿಸಿಕೊಂಡು ಬಚಾವಾಗಿದ್ದಾರೆ ಎನ್ನುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ಕಸಬಾ ಠಾಣೆ ಕಾನ್‌ಸ್ಟೇಬಲ್‌ ಮಂಜುನಾಥ್‌ ಅವರು ಹಳೇ ಹುಬ್ಬಳ್ಳಿ ಪೊಲೀಸ್‌(Police) ಠಾಣೆಯಲ್ಲಿ ಬುಧವಾರ ದೂರು ನೀಡಿದ್ದಾರೆ.

ಶನಿವಾರ ರಾತ್ರಿ ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ ಎಲ್ಲ ಠಾಣೆಗಳಲ್ಲಿನ ಸಿಬ್ಬಂದಿಯನ್ನು ಹಳೇ ಹುಬ್ಬಳ್ಳಿ ಠಾಣೆಗೆ ಕಳುಹಿಸುವಂತೆ ಮಾಹಿತಿ ರವಾನಿಸಲಾಗಿತ್ತು. ಅದರಂತೆ ಕಸಬಾ ಪೇಟೆ ಠಾಣೆಯ ಕಾನ್‌ಸ್ಟೇಬಲ್‌ಗಳಾದ ಮಂಜುನಾಥ ರಾಯರಡ್ಡಿ ಹಾಗೂ ಅನಿಲ್‌ ಕಾಂಡೇಕರ್‌ ಬೈಕ್‌ ಹತ್ತಿ ಹಳೇ ಹುಬ್ಬಳ್ಳಿ(Hubballi) ಠಾಣೆಯತ್ತ ಬರುವಾಗ ಸುಮಾರು ನೂರು ಜನರಿದ್ದ ಗುಂಪು ಇವರನ್ನು ಅಡ್ಡಗಟ್ಟಿದೆ.

Left Right & Centre: ಹುಬ್ಬಳ್ಳಿ ಗಲಭೆಯ ಸುತ್ತ ರಾಜಕೀಯ ಜಿದ್ದಾಜಿದ್ದಿ

ಎಲ್ಲರ ಕೈಯಲ್ಲಿ ಬಡಿಗೆ, ಕಲ್ಲುಗಳಿದ್ದವು. ‘ನಮ್ಮ ಸಮುದಾಯದ ವಿರುದ್ಧ ವ್ಯಾಟ್ಸಾಪ್‌ನಲ್ಲಿ ಪೋಸ್ಟ್‌ ಮಾಡಿದವನನ್ನು ಅರೆಸ್ಟ್‌ ಮಾಡುತ್ತಿಲ್ಲ ನೀವು. ನಿಮ್ಮನ್ನು (ಪೊಲೀಸರನ್ನು) ಕೊಲೆ(Murder) ಮಾಡುತ್ತೇವೆ’ ಎಂದು ಬೆದರಿಕೆ(Tthreat) ಹಾಕಿದರಂತೆ. ಮುಂದಿನ ಅಪಾಯ ಊಹಿಸಿ ಅವರಿಬ್ಬರೂ ಬೈಕ್‌ ಬಿಟ್ಟು ಪರಾರಿಯಾಗಿದ್ದಾರೆ. ಹಿಂದಿದ್ದ ಗುಂಪು ‘ಇವರನ್ನು ಸುಮ್ಮನೆ ಬಿಡಬಾರದು. ಇಲ್ಲೇ ಕೊಂದು ಬಿಡಿ’ ಎಂದು ಜೋರಾಗಿ ಕೂಗಿತು. ಇದರಿಂದ ಉದ್ರಿಕ್ತ ಗುಂಪಿನ ಕೆಲವರು ಇವರತ್ತ ಕಲ್ಲುಗಳನ್ನು ಬೀಸಲು ಪ್ರಾರಂಭಿಸಿತು. ಆಗ ಅಲ್ಲಿಂದ ಓಡಿ ತಪ್ಪಿಸಿಕೊಂಡು ಹಳೇ ಹುಬ್ಬಳ್ಳಿ ಠಾಣೆ ತಲುಪಿದ್ದಾರೆ.

'ಕರ್ನಾಟಕದಲ್ಲಿರುವ ಎಲ್ಲಾ ಮಸೀದಿ, ಮೌಲ್ವಿಗಳ ಸರ್ವೆ ಕಾರ್ಯ ಮಾಡಲು ಇದು ಸಕಾಲ'

ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಬುಧವಾರ ನೀಡಿರುವ ದೂರಿನಲ್ಲಿ ಮಂಜುನಾಥ ಅಂದಿನ ಘಟನೆಯನ್ನು ವಿವರಿಸಿದ್ದು, ‘ನನ್ನ ಬೈಕ್‌ ಅನ್ನು ಕಲ್ಲಿನಿಂದ ಜಜ್ಜಿ ಜಖಂ ಮಾಡಿದ್ದಾರೆ. ಸುಮಾರು .30 ಸಾವಿರ ಹಾನಿಯಾಗಿದೆ’ ಎಂದು ದೂರಿದ್ದಾರೆ.

ಮತ್ತೊಂದು ವಿಡಿಯೋ ವೈರಲ್‌:

ಈ ನಡುವೆ ಗಲಾಟೆಯ ದಿನ ಪೊಲೀಸ್‌ ವಾಹನವನ್ನು ಪಲ್ಟಿ ಹೊಡೆಸುವ ಮತ್ತೊಂದು ವಿಡಿಯೋ ವೈರಲ್‌ ಆಗಿದೆ. 23 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಉದ್ರಿಕ್ತರ ಗುಂಪು ಪೊಲೀಸ್‌ ಜೀಪನ್ನು ನೂಕುವ ಮೂಲಕ ಪಲ್ಟಿಹೊಡೆಸಿದೆ. ಪೊಲೀಸರನ್ನೇ ಟಾರ್ಗೆಟ್‌ ಮಾಡಿಕೊಂಡು ದಾಂಧಲೆ ನಡೆಸಿರುವುದಕ್ಕೆ ಈ ವಿಡಿಯೋ ಇನ್ನಷ್ಟು ಪುಷ್ಟಿ ನೀಡುತ್ತಿದೆ.
 

Follow Us:
Download App:
  • android
  • ios