MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಮದುವೆಯಾಗದೆ ತಾಯಿಯಾದ ಜಾರ್ಜಿಯಾ ಮೆಲೋನಿ, ಆಕೆಯ ಗೆಳೆಯ ಯಾರು ಗೊತ್ತಾ?

ಮದುವೆಯಾಗದೆ ತಾಯಿಯಾದ ಜಾರ್ಜಿಯಾ ಮೆಲೋನಿ, ಆಕೆಯ ಗೆಳೆಯ ಯಾರು ಗೊತ್ತಾ?

ಪ್ರಧಾನಿ ಮೋದಿ ಭೇಟಿ ಬಳಿಕ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಯಾಗುತ್ತಿದೆ. ಆಂಡ್ರಿಯಾ ಜಿಯಾಂಬ್ರುನೊ ಜೊತೆಗಿನ 10 ವರ್ಷದ ಸಂಬಂಧ, ಪುತ್ರಿಯ ಜನನ ಮತ್ತು 2023ರಲ್ಲಿ ನಡೆದ ಬ್ರೇಕಪ್ ಹಿನ್ನೆಲೆಯ ಬಗ್ಗೆ ಕುತೂಹಲಕರ ವಿವರ. 

2 Min read
Author : Ravi Janekal
Published : May 24 2026, 01:25 PM IST
Share this Photo Gallery
  • FB
  • TW
  • Linkdin
  • Whatsapp
16
ಪ್ರಧಾನಿ ಮೋದಿ ಇಟಲಿ ಭೇಟಿ ಬಳಿಕ ಮೆಲೋನಿ ಬಗ್ಗೆ ಚರ್ಚೆ
Image Credit : Narendra Modi

ಪ್ರಧಾನಿ ಮೋದಿ ಇಟಲಿ ಭೇಟಿ ಬಳಿಕ ಮೆಲೋನಿ ಬಗ್ಗೆ ಚರ್ಚೆ

ಪ್ರಧಾನಿ ನರೇಂದ್ರ ಮೋದಿ(PM Modi) ಅವರು ತಮ್ಮ ಐದು ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಇತ್ತೀಚೆಗೆ ಇಟಲಿಗೆ ನೀಡಿದ್ದರು. ಅವರನ್ನು ರೋಮ್‌ನಲ್ಲಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ(Georgia Meloni) ಆತ್ಮೀಯವಾಗಿ ಸ್ವಾಗತಿಸಿದ್ದರು. ಈ ಭೇಟಿಯ ಸಮಯದಲ್ಲಿ ಮೆಲೋನಿ ಅವರು ಪ್ರಧಾನಿ ಮೋದಿ ಜೊತೆಗಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಅವರನ್ನು 'ನನ್ನ ಸ್ನೇಹಿತ' ಎಂದು ಬಣ್ಣಿಸಿದ್ದರು. ಈ ಬೇಟಿ ವೇಳೆ 'ಮೆಲೋಡಿ' ಚಾಕೊಲೆಟ್ ಫೋಟೋ ಜಗತ್ತಿನಾದ್ಯಂತ ವೈರಲ್ ಆಯ್ತು. ಪ್ರಧಾನಿ ಮೋದಿ ಇಟಲಿಗೆ ಭೇಟಿ ಬೆನ್ನಲ್ಲೇ ಇದೀಗ ಜಾರ್ಜಿಯಾ ಮೆಲೋನಿ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಅನೇಕರು ಕೂತುಹಲದಿಂದ ಕೆದಕಲು ಶುರು ಮಾಡಿದ್ದಾರೆ. ಮದುವೆಯಾಗದೆ ತಾಯಿಯಾದಳಾ ಮೆಲೋನಿ? ಜಾರ್ಜಿಯಾ ಮೆಲೋನಿ ಅವರ ಗೆಳೆಯ ಯಾರು? ಕುತೂಹಲಕಾರಿ ವಿಚಾರ ಇಲ್ಲಿದೆ ನೋಡಿ.

Add Asianetnews Kannada as a Preferred SourcegooglePreferred
26
ಜಾರ್ಜಿಯಾ ಮೆಲೋನಿ ಮಾಜಿ ಗೆಳೆಯ ಯಾರು?
Image Credit : Asianet News

ಜಾರ್ಜಿಯಾ ಮೆಲೋನಿ ಮಾಜಿ ಗೆಳೆಯ ಯಾರು?

ಜಾರ್ಜಿಯಾ ಮೆಲೋನಿ ಅವರ ದೀರ್ಘಕಾಲದ ಸಂಗಾತಿಯಾಗಿದ್ದ, ಇಟಾಲಿಯನ್ ಪತ್ರಕರ್ತ ಮತ್ತು ಟಿವಿ ನಿರೂಪಕ ಆಂಡ್ರಿಯಾ ಜಿಯಾಂಬ್ರುನೊ. ಇಬ್ಬರೂ ಮೊದಲ ಬಾರಿ 2014ರಲ್ಲಿ ಟಿವಿ ಸ್ಟುಡಿಯೋದಲ್ಲಿ ಭೇಟಿಯಾದರು. ಅದೇ ಸ್ಟುಡಿಯೋಗೆ ಅತಿಥಿಯಾಗಿ ಬಂದಿದ್ದ ಮೆಲೋನಿ ಮತ್ತು ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ ಜಿಯಾಂಬ್ರುನೊ ನಡುವಿನ ಪರಿಚಯ ಕ್ರಮೇಣ ಗಾಢ ಸಂಬಂಧವಾಗಿ ಬೆಳೆಯಿತು.

Related Articles

Related image1
Giorgia Meloni praises Narendra Modi: ದಶಕ ಕಳೆದರೂ ಕುಸಿಯದ ಮೋದಿ ಜನಪ್ರಿಯತೆ; ಮೆಲೋನಿ ಮೆಚ್ಚುಗೆ
Related image2
Modi Chocolate Politics: ಪ್ರಧಾನಿ ಮೋದಿ-ಜಾರ್ಜಿಯಾ ಮೆಲೋನಿ ಭೇಟಿ ಬಗ್ಗೆ ಪ್ರಿಯಾಂಕ್ ಖರ್ಗೆ ಶಾಕಿಂಗ್ ಹೇಳಿಕೆ
36
ಮದುವೆಯಾಗದೆ 10 ವರ್ಷಗಳ ಕಾಲ ಒಟ್ಟಿಗೆ ಜೀವನ
Image Credit : Asianet News

ಮದುವೆಯಾಗದೆ 10 ವರ್ಷಗಳ ಕಾಲ ಒಟ್ಟಿಗೆ ಜೀವನ

ಇಬ್ಬರೂ ಅಧಿಕೃತವಾಗಿ ಮದುವೆಯಾಗಿರಲಿಲ್ಲ. ಆದರೂ ಸುಮಾರು 10 ವರ್ಷಗಳ ಕಾಲ ಒಟ್ಟಿಗೆ ಲಿವಿಂಗ್ ಟುಗೆದರ್ ಇದ್ದರು. ಈ ಅವಧಿಯಲ್ಲಿ ಅವರ ಸಂಬಂಧವನ್ನು ಇಟಲಿಯ ರಾಜಕೀಯ ಮತ್ತು ಮಾಧ್ಯಮ ವಲಯಗಳು ಸದಾ ಗಮನಿಸುತ್ತಿದ್ದವು.

46
ಮದುವೆಯಾಗದೆ ತಾಯಿಯಾದ ಜಾರ್ಜಿಯಾ ಮೆಲೋನಿ!
Image Credit : Asianet News

ಮದುವೆಯಾಗದೆ ತಾಯಿಯಾದ ಜಾರ್ಜಿಯಾ ಮೆಲೋನಿ!

ಹತ್ತು ವರ್ಷಗಳ ಒಟ್ಟಿಗೆ ಇದ್ದ ಪರಿಣಾಮವಾಗಿ 2016ರಲ್ಲಿ ಈ ದಂಪತಿಗೆ ಗಿನೆವ್ರಾ ಎಂಬ ಪುತ್ರಿ ಜನಿಸಿದರು. ಪ್ರಧಾನಿಯಾಗಿದ್ದರೂ ಕುಟುಂಬ ಜೀವನ ಮತ್ತು ತಾಯ್ತನವನ್ನು ಹೇಗೆ ಬ್ಯಾಲೆನ್ಸ್ ಮಾಡಿದರು ಎಂಬ ಬಗ್ಗೆ ಮೆಲೋನಿ ಹಲವಾರು ಬಾರಿ ಸಾರ್ವಜನಿಕವಾಗಿ ಮಾತನಾಡಿದ್ದರು.

56
ಆಂಡ್ರಿಯಾ ಜಿಯಾಂಬ್ರುನೊ ಕ್ಲಿಪ್ ಲೀಕ್!
Image Credit : social media

ಆಂಡ್ರಿಯಾ ಜಿಯಾಂಬ್ರುನೊ ಕ್ಲಿಪ್ ಲೀಕ್!

ಅಕ್ಟೋಬರ್ 2023ರಲ್ಲಿ ಇಬ್ಬರೂ ಬೇರ್ಪಟ್ಟಿದ್ದೇವೆ ಎಂದು ಮೆಲೋನಿ ಸ್ವತಃ ಘೋಷಿಸಿದರು. ಜಿಯಾಂಬ್ರುನೊ ಅವರ ಆಫ್-ಏರ್ ವಿಡಿಯೋ ಮತ್ತು ಆಡಿಯೋ ಕ್ಲಿಪ್‌ಗಳು ಲೀಕ್ ಆದ ನಂತರ ಈ ನಿರ್ಧಾರ ಕೈಗೊಳ್ಳಲಾಯಿತು ಎಂಬುದು ತಿಳಿದುಬಂದಿದೆ. ಈ ಕ್ಲಿಪ್‌ಗಳಲ್ಲಿ ಸಹೋದ್ಯೋಗಿಗಳ ಜೊತೆಗೆ ಅನುಚಿತವಾಗಿ ವರ್ತಿಸಿರುವುದು ಇಬ್ಬರ ನಡುವೆ ನಂಬಿಕೆ ಮುರಿದುಬೀಳಲು ಕಾರಣವಾಯ್ತು ಎನ್ನಲಾಗಿದೆ.

66
ಆಂಡ್ರಿಯಾ ಜಿಯಾಂಬ್ರುನೊ ಮೆಲೋನಿ ಹತ್ತು ವರ್ಷಗಳ ಸಂಬಂಧಕ್ಕೆ ಬ್ರೇಕ್
Image Credit : @GiorgiaMeloni

ಆಂಡ್ರಿಯಾ ಜಿಯಾಂಬ್ರುನೊ ಮೆಲೋನಿ ಹತ್ತು ವರ್ಷಗಳ ಸಂಬಂಧಕ್ಕೆ ಬ್ರೇಕ್

ಸುಮಾರು ಒಂದು ದಶಕದ ದೀರ್ಘ ಸಂಬಂಧದ ನಂತರ ಇಬ್ಬರೂ ತಮ್ಮ ಸಂಬಂಧಗಳನ್ನ ಬೇರ್ಪಡಿಸಿಕೊಂಡರು. ಜಾರ್ಜಿಯಾ ಮೆಲೋನಿ ತಮ್ಮ ಸ್ಥಾನಮಾನ ಮತ್ತು ಸಾರ್ವಜನಿಕ ಘನತೆಯನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆಗಳು ನಡೆಯುತ್ತಿವೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
ತೈಲ ಸಂಕಷ್ಟದಲ್ಲಿ ಜಗತ್ತೇ ಹೈರಾಣು; ಪೆಟ್ರೋಲ್ ಇಲ್ಲ, ಡೀಸೆಲ್ ಇಲ್ಲ ಆದ್ರೂ ಈ ದೇಶ ಮಾತ್ರ ನೋ ಟೆನ್ಷನ್!
Recommended image2
ಸಣ್ಣ ಜಾಗ ಸಿಕ್ರೂ ಬಟ್ಟೆ ಒಣಗಿಸೋ ಭಾರತ; ಮನೆ ಮುಂದೆ ಅಪ್ಪಿ ತಪ್ಪಿ ಬಟ್ಟೆ ಹಾಕದ ಅಮೆರಿಕ! ಯಾಕೆ?
Recommended image3
ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಅಂತ್ಯಕ್ರಿಯೆಗೆ ಪಾಕ್ ಅಧಿಕಾರಿ, ಮೋಸ್ಟ್‌ ವಾಂಟೆಡ್ ಉಗ್ರರು ಭಾಗಿ!
Related Stories
Recommended image1
Giorgia Meloni praises Narendra Modi: ದಶಕ ಕಳೆದರೂ ಕುಸಿಯದ ಮೋದಿ ಜನಪ್ರಿಯತೆ; ಮೆಲೋನಿ ಮೆಚ್ಚುಗೆ
Recommended image2
Modi Chocolate Politics: ಪ್ರಧಾನಿ ಮೋದಿ-ಜಾರ್ಜಿಯಾ ಮೆಲೋನಿ ಭೇಟಿ ಬಗ್ಗೆ ಪ್ರಿಯಾಂಕ್ ಖರ್ಗೆ ಶಾಕಿಂಗ್ ಹೇಳಿಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved