2019ರ ಪುಲ್ವಾಮಾ ದಾಳಿಯ ಪ್ರಮುಖ ರೂವಾರಿ ಹಮ್ಜಾ ಬುರ್ಹಾನ್‌ನನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹತ್ಯೆ ಮಾಡಲಾಗಿದೆ. ಇಸ್ಲಾಮಾಬಾದ್‌ನಲ್ಲಿ ನಡೆದ ಅವನ ಅಂತ್ಯಕ್ರಿಯೆಯಲ್ಲಿ ಐಎಸ್‌ಐ ಅಧಿಕಾರಿಗಳು ಮತ್ತು ಸೈಯದ್ ಸಲಾಹುದ್ದೀನ್‌ನಂತಹ ಮೋಸ್ಟ್ ವಾಂಟೆಡ್ ಉಗ್ರರು ಭಾಗಿಯಾಗಿರುವುದು ಬಯಲಾಗಿದೆ.

ಲಾಹೋರ್‌: 2019ರ ಪುಲ್ವಾಮಾ ದಾಳಿಯ ಪ್ರಮುಖ ರೂವಾರಿ ಎಂದು ಗುರುತಿಸಲ್ಪಟ್ಟಿದ್ದ ಹಮ್ಜಾ ಬುರ್ಹಾನ್ ಉಗ್ರನನ್ನು ಧುರಂಧರ್ ಹೊಡೆದುರಿಳಿಸಿದ್ದಾನೆ. ಅವನ ಹತ್ಯೆ ಬಳಿಕ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಹಲವು ಉಗ್ರ ಸಂಘಟನೆಗಳ ನಾಯಕರು ಭಾಗಿಯಾಗಿರುವ ಮಾಹಿತಿ ಬಯಲಾಗಿದೆ. ಆ ಮೂಲಕ ಪಾಕಿಸ್ತಾನ ಉಗ್ರರರನ್ನು ಪೋಷಿಸುತ್ತಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಧುರಂಧರ್ ಕಾರ್ಯಾಚರಣೆಯಲ್ಲಿ ಹತ್ಯೆ?

ಹಮ್ಜಾ ಬುರ್ಹಾನ್‌ನ್ನು ಗುರುವಾರ ಬೆಳಿಗ್ಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಹತ್ಯೆಯ ಹಿಂದೆ ‘ಧುರಂಧರ್‌’ ಎಂಬ ರಹಸ್ಯ ಕಾರ್ಯಾಚರಣೆ ಇರಬಹುದೆಂಬ ಚರ್ಚೆಗಳು ಜೋರಾಗಿವೆ. ಆದರೆ ಈ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ.

ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಹಮ್ಜಾ

ಹಮ್ಜಾ ಬುರ್ಹಾನ್‌ 2019ರ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭೀಕರ ಉಗ್ರ ದಾಳಿಯ ಪ್ರಮುಖ ಸಂಚುಕೋರನಾಗಿದ್ದ ಎಂದು ಭಾರತೀಯ ಭದ್ರತಾ ಸಂಸ್ಥೆಗಳು ಗುರುತಿಸಿವೆ. ಆ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾಗಿದ್ದರು. ಈ ದಾಳಿ ಬಳಿಕ ಭಾರತ-ಪಾಕಿಸ್ತಾನ ಸಂಬಂಧ ತೀವ್ರ ಉದ್ವಿಗ್ನಗೊಂಡಿತ್ತು.

ಅಂತ್ಯಕ್ರಿಯೆ ವೇಳೆ ಭಾರತದ ಮೋಸ್ಟ್‌ ವಾಂಟೆಡ್ ಉಗ್ರರ ಹಾಜರಿ

ಶುಕ್ರವಾರ ನಡೆದ ಅಂತ್ಯಕ್ರಿಯೆಯಲ್ಲಿ ಹಿಜ್ಬುಲ್‌ ಮುಜಾಹಿದೀನ್‌ ಮುಖ್ಯಸ್ಥ ಸೈಯದ್‌ ಸಲಾಹುದ್ದೀನ್‌, ಅಲ್‌ ಬದ್ರ್‌ ಸಂಘಟನೆಯ ಮುಖ್ಯಸ್ಥ ಬಖ್ತ್‌ ಜಮೀನ್‌ ಖಾನ್‌ ಸೇರಿದಂತೆ ಹಲವು ಮೋಸ್ಟ್‌ ವಾಂಟೆಡ್ ಉಗ್ರರು ಭಾಗಿಯಾಗಿರುವುದು ಬಯಲಾಗಿದೆ ಜೊತೆಗೆ ಐಎಸ್‌ಐ ಅಧಿಕಾರಿಗಳು ಹಾಜರಾತಿ ಪಾಕಿಸ್ತಾನ ಮತ್ತು ಉಗ್ರ ಸಂಘಟನೆಗಳ ನಡುವಿನ ಸಂಬಂಧದ ಬಯಲಾಗಿದೆ.

ಪಾಕಿಸ್ತಾನ ವಿರುದ್ಧ ಮತ್ತೆ ಆರೋಪ

ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ ಎಂಬ ಭಾರತದ ಆರೋಪಗಳಿಗೆ ಈ ಬೆಳವಣಿಗೆ ಮತ್ತಷ್ಟು ಬಲ ನೀಡಿದೆ. ಅಂತ್ಯಕ್ರಿಯೆಯಲ್ಲಿ ಉಗ್ರ ನಾಯಕರು ಮತ್ತು ಐಎಸ್‌ಐ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಅಂತರರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಕಾರಣವಾಗಿದೆ.