ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ. ಹಲವು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಮೋದಿಯವರು ತಮ್ಮ ನಾಗರಿಕರಲ್ಲಿ ಹೊಂದಿರುವ ಅಪಾರ ಜನಪ್ರಿಯತೆ, ಅವರ ದೂರದೃಷ್ಟಿ ಮತ್ತು ನಾಯಕತ್ವವನ್ನು ತಾವು ಮೆಚ್ಚಿರುವುದಾಗಿ ಮೆಲೋನಿ ಹೇಳಿದ್ದಾರೆ.

ರೋಮ್ (ಮೇ.21): ‘ಹಲವು ವರ್ಷಗಳ ಕಾಲ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ನಂತರವೂ ಪ್ರಧಾನಿ ನರೇಂದ್ರ ಮೋದಿ ತಮ್ಮ ನಾಗರಿಕರಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದಾರೆ. ಇದನ್ನು ನೋಡಿದ ನಂತರ ಅವರ ದೂರದೃಷ್ಟಿ, ವಾಸ್ತವಿಕತೆ ಮತ್ತು ನಾಯಕತ್ವವನ್ನು ಮೆಚ್ಚಿಕೊಳ್ಳಲು ಕಲಿತಿದ್ದೇನೆ’ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಬುಧವಾರ ಶ್ಲಾಘಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೋದಿ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಮೂರುವರೆ ವರ್ಷಗಳಲ್ಲಿ ನಾನು ಮೋದಿಯವರೊಂದಿಗೆ 7 ಸಭೆಗಳನ್ನು ನಡೆಸಿದ್ದೇನೆ. ಇದರಿಂದ ಒಬ್ಬರನ್ನೊಬ್ಬರು ಅರಿತುಕೊಂಡಿದ್ದೇವೆ. ಗೌರವ ಮತ್ತು ನಂಬಿಕೆಯ ಆಧಾರದ ಮೇಲೆ ಪ್ರಾಮಾಣಿಕ ಸ್ನೇಹವನ್ನೂ ಸೃಷ್ಟಿಸಿದ್ದೇವೆ. ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರವೂ ಮೋದಿ ತಮ್ಮ ನಾಗರಿಕರಲ್ಲಿ ಎಷ್ಟು ಜನಪ್ರಿಯರಾಗಿದ್ದಾರೆ ಎಂಬುದನ್ನು ನೋಡಿದಾಗ, ಅವರ ದೂರದೃಷ್ಟಿ, ವಾಸ್ತವಿಕತೆ ಮತ್ತು ನಾಯಕತ್ವವನ್ನು ನಾನು ವೈಯಕ್ತಿಕವಾಗಿ ಮೆಚ್ಚಿಕೊಳ್ಳಲು ಕಲಿತಿದ್ದೇನೆ’ ಎಂದರು.