Taliban new rules: ಮಹಿಳೆಯರು ಮೇಕಪ್ ಮಾಡಿಕೊಳ್ಳುವಂತಿಲ್ಲ: ತಾಲಿಬಾನ್ ಹೊಸ ಫರ್ಮಾನು!
ಮಹಿಳೆಯರ ವಿರುದ್ಧದ ವಿಚಿತ್ರ ಕಾನೂನು ತರುವ ಮೂಲಕ ಜಗತ್ತಿನ ಮಹಿಳೆಯರಿಂದ ಹಿಡಿ ಶಾಪ ಹಾಕಿಸಿಕೊಳ್ಳುವ ಅಪ್ಘಾನಿಸ್ತಾನ್ ಇದೀ ಮತ್ತೊಂದು ಹೊಸ ಕಾನೂನು ತರುವ ಮೂಲಕ ಸುದ್ದಿಯಾಗಿದೆ.'ಮಹಿಳೆಯರು ಮೇಕಪ್ ಮಾಡಿಕೊಳ್ಳುವಂತಿಲ್ಲ' ಎಂಬ ಹೊಸ ಕೋಳ ತೋಡಿಸಿದೆ.

ಮಹಿಳೆಯರ ಮೇಕಪ್‌ಗೆ ತಾಲಿಬಾನ್ ನಿಷೇಧ
ಮಹಿಳೆಯರ ವಿರುದ್ಧದ ವಿಚಿತ್ರ ಕಾನೂನು ತರುವ ಮೂಲಕ ಜಗತ್ತಿನ ಮಹಿಳೆಯರಿಂದ ಹಿಡಿ ಶಾಪ ಹಾಕಿಸಿಕೊಳ್ಳುವ ಅಪ್ಘಾನಿಸ್ತಾನ್ ಇದೀ ಮತ್ತೊಂದು ಹೊಸ ಕಾನೂನು ತರುವ ಮೂಲಕ ಸುದ್ದಿಯಾಗಿದೆ. ಇತ್ತೀಚೆಗಷ್ಟೇ 'ಕನ್ಯೆಯ ಮೌನವೇ ಮದುವೆಗೆ ಸಮ್ಮತಿ' ಎಂಬ ಆಘಾತಕಾರಿ ಕಾನೂನು ತರುವ ಮೂಲಕ ಬಾಲ್ಯವಿವಾಹ ಪ್ರೋತ್ಸಾಹಿಸಿತ್ತು. ಇದೀಗ 'ಮಹಿಳೆಯರು ಮೇಕಪ್ ಮಾಡಿಕೊಳ್ಳುವಂತಿಲ್ಲ' ಎಂಬ ಹೊಸ ಕೋಳ ತೋಡಿಸಿದೆ.
ತಾಲಿಬಾನ್ ಹೊಸ ಫರ್ಮಾನು: ಮಹಿಳೆಯರು ಉಂಗುರು ಬದಲಿಸುವಂತಿಲ್ಲ
ಹೌದು, ಕಳೆದ ವಾರ ಅಫ್ಟಾನಿಸ್ತಾನದಲ್ಲಿ ಇಂಥದೊಂದು ಕಾನೂನು ಜಾರಿಯಾಗಿದೆ. ಮದುವೆ, ನಿಶ್ಚಿತಾರ್ಥದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮಹಿಳೆಯರು ಮೇಕಪ್ ಮಾಡಿಕೊಳ್ಳುವಂತಿಲ್ಲ, ಕೂದಲು ಬಿಡುವಂತಿಲ್ಲ. ಪರ್ಫ್ಯೂಮ್ ಹಾಕುವುದನ್ನ ನಿಷೇಧಿಸಿ ತಾಲಿಬಾನ್ ಆಡಳಿತ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೆ ನಿಶ್ಚಿತಾರ್ಥದ ವೇಳೆ ಉಂಗುರಗಳ ಬದಲಾವಣೆಯು ಪಾಶ್ಚಿಮಾತ್ಯ ಸಂಸ್ಕೃತಿಯಾಗಿರುವುದರಿಂದ ಇಸ್ಲಾಮಿಕ್ ಕಾನೂನು ಪ್ರಕಾರ ಅಂತದ್ದ ನಿಷೇಧಿಸಿದಿಸಿದೆ ಎಂದು ಹೇಳಿದೆ.
ಳೆದ ಗುರುವಾರ ತಾಲಿಬಾನ್ ಆಡಳಿತ ಈ ಆದೇಶ ಹೊರಡಿಸಿದ್ದು, ಶುಕ್ರವಾರದ ದರ್ಮಫದೇಶಗಳಲ್ಲಿ ಅದನ್ನ ಜನರಿಗೆ ತಿಳಿಸಿ ಜಾಗೃತಿ ಮೂಡಿಸುವಂತೆ ಧರ್ಮಗುರುಗಳಿಗೆ ಆದೇಶಿಸಿದೆ. ಅಂದರೆ ನಿಶ್ಚಿತಾರ್ಥ ಸಮಾರಂಭಗಳಲ್ಲಿ ದಂಪತಿಗಳು ಇನ್ನು ಮುಂದೆ ಉಂಗುರಗಳನ್ನು ಧರಿಸಲು ಅಥವಾ ಪರಸ್ಪರ ಬದಲಿಸಿಕೊಳ್ಳಲು, ಗೋರಂಟಿ ಹಚ್ಚಿಕೊಳ್ಳಲು ಅವಕಾಶವಿಲ್ಲ ಎಂದಿದೆ.
ಮೇಕಪ್ ಮಾಡಿಕೊಳ್ಳಲು ಮಹಿಳೆಯರು ಹೊರಗೆ ಹೋಗುವಂತಿಲ್ಲ
ತಾಲಿಬಾನ್ ದೇಶಾದ್ಯಂತ ಬ್ಯೂಟಿ ಪಾರ್ಲರ್‌ಗಳನ್ನು ಮುಚ್ಚಿದ ನಂತರ ಈ ಪದ್ಧತಿ ಹೆಚ್ಚಾಗಿ ನಿಂತುಹೋಗಿತ್ತು. ತಾಲಿಬಾನ್ ಮಹಿಳೆಯರು ಪರಸ್ಪರ ಭೇಟಿಯಾಗಲು, ಒಂದು ಕಡೆ ಸೇರಲು ಇದೊಂದೇ ಮಾರ್ಗ ಉಳಿದಿತ್ತು. ಇದೀಗ ಆ ಮಾರ್ಗವೂ ಮುಚ್ಚಿದಂತಾಗಿದೆ. ಅಫ್ಘಾನಿಸ್ತಾನದಲ್ಲಿ ಮದುವೆ, ನಿಶ್ಚಿತಾರ್ಥ ಕಾರ್ಯಕ್ರಮಗಳಲ್ಲಿ ಈಗಾಗಲೇ ಸಂಗೀತ ಹಾಡು ಹಾಡುವುದನ್ನ ನಿಷೇಧಿಸಿದೆ. ಅದ್ಯಾಗೂ ಕೆಲವಡೆ ಇದು ಮುಂದುವರಿದಿದೆ. ಇಸ್ಲಾಮಿಕ್ ಬೋಧನೆಗಳನ್ನ ಪಾಲಿಸುತ್ತಿಲ್ಲ. ಆದರೆ ತಾಲಿಬಾನ್ ಹೋರಾಟಗಾರರು ಇಂಥ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.
ತಾಲಿಬಾನ್ ಆಡಳಿತದಲ್ಲಿ ಮಹಿಳೆಯರ ಸ್ಥಿತಿ ಶೋಚನೀಯ!
ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಮೇಲೆ ವಿಚಿತ್ರ ಕಾನೂನು ತರುತ್ತಿರುವುದರಿಂದ ಯುವತಿಯರು ಮಹಿಳೆಯರು ಕೆಲಸವಿಲ್ಲದೆ ಮನೆಯಲ್ಲೇ ಇರುವಂತಾಗಿದೆ. ಇದು ಬಡತನ, ಅನಕ್ಷರತೆ ಹೆಚ್ಚಿಸಿ ಹೊಸದೊಂದು ಸಮಸ್ಯೆ ಸೃಷ್ಟಿಸಿದೆ. ಬಹುತೇಕ ಕುಟುಂಬಗಳು ಮಕ್ಕಳ ಮದುವೆ ಮಾಡಿಸಲು ಕೂಡ ಶಕ್ತರಾಗಿಲ್ಲ. ಕೆಲವೆಡೆ ಕುಟುಂಬ ನಿರ್ವಹಣೆಯೂ ಕಷ್ಟವಾಗಿ ಬಲವಂತಾಗಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವಂತಹ ದಂಧೆಗಳು ನಡೆಯುತ್ತಿವೆ ಎಂಬುದು ತಾಲಿಬಾನ್ ಸರ್ಕಾರದಲ್ಲಿನ ಮಹಿಳೆ ಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂಬುದನ್ನು ತೋರಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

