ಹೆಂಡ್ತಿ ಗಂಡನ ದಾಸಿ, ಆಕೆಗೆ ಮನಬಂದಂತೆ ಹೊಡೀಬಹುದು: ತಾಲಿಬಾನ್ ಹೊಸ ಕಾನೂನು!
ಕಾಬೂಲ್: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದಾಗಿನಿಂದ ಸ್ತ್ರೀ ಸ್ವಾತಂತ್ರ್ಯ ಅಂದರೇನು ಎಂದು ಕೇಳುವಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಹುಚ್ಚು ಸರ್ಕಾರದಲ್ಲಿ ತಾಲಿಬಾನಿಗಳು ಇದೀಗ ಹೊಸದೊಂದು ಕಾನೂನು ಜಾರಿಗೆ ತಂದಿದ್ದಾರೆ.

ಹೊಸ ಕ್ರಿಮಿನಲ್ ಕಾನೂನು ಜಾರಿಗೆ ತಂದ ತಾಲಿಬಾನಿಗಳು
ಅಫ್ಘಾನಿಸ್ತಾನದ ಮಹಿಳೆಯರ ಸ್ಥಿತಿಯನ್ನು ಇನ್ನಷ್ಟು ಶೋಷನೀಯಗೊಳಿಸುವಂತಹ ಕ್ರಿಮಿನಲ್ ಕಾನೂನೊಂದನ್ನು ತಾಲಿಬಾನ್ ಸರ್ಕಾರ ಜಾರಿಗೆ ತಂದಿದೆ.
ಹೆಂಡತಿಯು ಗಂಡನ ದಾಸಿ
ತಾಲಿಬಾನಿಗಳ ಹೊಸ ಕಾನೂನಿನ ಅನ್ವಯ ಹೆಂಡತಿಯು ದಾಸಿಯಾಗಿದ್ದು, ಆಕೆಗೆ ಹೊಡೆಯುವ ಸಂಪೂರ್ಣ ಅಧಿಕಾರವನ್ನು ಪತಿಗೆ ನೀಡಲಾಗಿದೆ.
ಹೆಂಡತಿ-ಮಕ್ಕಳಿಗೆ ಹೊಡೆಯಲು ಪತಿಗೆ ಅನುಮತಿ
ಸರ್ವೋಚ್ಚ ನಾಯಕ ಅಖುಂಡ್ಜಾದಾ ಸಹಿ ಮಾಡಿರುವ ಈ ಕಾನೂನಿನಲ್ಲಿ, ಸಣ್ಣ ತಪ್ಪುಗಳನ್ನು ಮಾಡಿದಾಗ ಹೆಂಡತಿಗೆ ಹೊಡೆಯಲು ಗಂಡನಿಗೆ ಹಾಗೂ ಮಕ್ಕಳಿಗೆ ಬಾರಿಸಲು ತಂದೆಗೆ ಪೂರ್ಣ ಸ್ವಾತಂತ್ರ್ಯವಿದೆ.
ಮೂಳೆ ಮುರಿಯುವಂತೆ ಹೊಡೆಯುವ ಹಾಗಿಲ್ಲ
ಆದರೆ ಅದರಿಂದ ಸಂತ್ರಸ್ತರಿಗೆ ಯಾವುದೇ ದೊಡ್ಡ ಗಾಯ ಅಥವಾ ಮೂಳೆ ಮುರಿತ ಆಗಬಾರದು ಎನ್ನಲಾಗಿದೆ. ಒಂದು ವೇಳೆ ಗಂಡ ಮೂಳೆ ಮುರಿಯುವಂತೆ ಹೆಂಡತಿಗೆ ಬಾರಿಸಿದರೆ ಗರಿಷ್ಠ 15 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಿದೆ.
ಗಂಡನ ಅನುಮತಿಯಿಲ್ಲದೇ ಸಂಬಂಧಿಕರ ಮನೆಗೂ ಹೋಗುವಂತಿಲ್ಲ
ಅಂತೆಯೇ ಪತಿಯ ಆಣತಿಯಿಲ್ಲದೆ ಸಂಬಂಧಿಕರ ಮನೆಗೆ ಹೋಗುವ ಸ್ತ್ರೀಯರಿಗೆ 3 ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಲಾಗುವುದು.
ಶ್ರೇಣೀಕೃತ ವ್ಯವಸ್ಥೆಯಂತೆ ಶಿಕ್ಷೆ ನಿರ್ಧಾರ
ಹೊಸ ಸಂಹಿತೆಯ 9 ನೇ ವಿಧಿಯು ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಶಿಕ್ಷೆಯ ಶ್ರೇಣೀಕೃತ ವ್ಯವಸ್ಥೆಯನ್ನು ಪರಿಚಯಿಸುತ್ತದೆ. ಅಫ್ಘಾನ್ ಸಮಾಜವನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ:
ಧಾರ್ಮಿಕ ವಿದ್ವಾಂಸರು (ಉಲಮಾ), ಎಲೈಟ್ (ಅಶ್ರಫ್), ಮಧ್ಯಮ ವರ್ಗ ಮತ್ತು ಕೆಳವರ್ಗ. ಆರೋಪಿಯು ಯಾವ ವರ್ಗಕ್ಕೆ ಸೇರಿದವನೆಂಬುದನ್ನು ಅವಲಂಬಿಸಿ ಒಂದೇ ಅಪರಾಧಕ್ಕೆ ಶಿಕ್ಷೆ ಬದಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

