ರಿಲಯನ್ಸ್ ಇಂಡಸ್ಟ್ರೀಸ್ ಮೀಟಿಂಗ್ ಹಾಜರಾಗಲು ನೀತಾ ಅಂಬಾನಿ ಪಡೆಯೋ ಸ್ಯಾಲರಿ ಎಷ್ಟು ಗೊತ್ತಾ?
ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ 2023ನೇ ಸಾಲಿನ ಟಾಪ್ 100 ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಈ ಬಾರಿಯೂ ಮುಕೇಶ್ ಅಂಬಾನಿ ಅಗ್ರಸ್ಥಾನದಲ್ಲಿದ್ದಾರೆ. ಯಶಸ್ವಿಯಾಗಿ ಮುನ್ನಡೆಯುತ್ತಿರುವ ಅಂಬಾನಿ ಬಿಸಿನೆಸ್‌ನ್ನು ಕುಟುಂಬದ ಎಲ್ಲಾ ಸದಸ್ಯರು ಸೇರಿ ನಿರ್ವಹಿಸುತ್ತಾರೆ. ಆದರೆ, ರಿಲಯನ್ಸ್ ನಿರ್ದೇಶಕಿಯಾಗಿದ್ದ ನೀತಾ ಅಂಬಾನಿ ಅವರ ಸಂಬಳ ಎಷ್ಟು ನಿಮ್ಗೆ ಗೊತ್ತಿದ್ಯಾ?
ಬಿಲಿಯನೇರ್ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ, ಅಂಬಾನಿ ಬಿಸಿನೆಸ್ ವರ್ಲ್ಡ್‌ನ ಮಹತ್ವದ ಭಾಗವಾಗಿದ್ದಾರೆ. ಹಲವಾರು ವರ್ಷಗಳ ಕಾಲ ರಿಲಯನ್ಸ್ ಬೋರ್ಡ್ ಆಫ್ ಡೈರೆಕ್ಟರ್ಸ್ ಸದಸ್ಯರಾಗಿದ್ದ ನಂತರ, ನೀತಾ ಅಂಬಾನಿ ಆಗಸ್ಟ್ 2023ರಲ್ಲಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.
ನೀತಾ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮಂಡಳಿಯಲ್ಲಿನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇಶಾ, ಆಕಾಶ್ ಮತ್ತು ಅನಂತ್ ಅಂಬಾನಿ ನಿರ್ದೇಶಕರ ಮಂಡಳಿಗೆ ನೇಮಕಗೊಳ್ಳಲು ನೀತಾ ಅಂಬಾನಿ ತಮ್ಮ ಸ್ಥಾನಕ್ಕೆ ರಿಸೈನ್ ಮಾಡಿದರು.
ರಿಲಯನ್ಸ್ ಬೋರ್ಡ್ ಆಫ್ ಡೈರೆಕ್ಟರ್ಸ್ ಸದಸ್ಯರಾಗಿ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಮಾಸಿಕ ವೇತನವನ್ನು ಪಡೆಯದಿರುವುದು ಅನೇಕ ಜನರ ಅಚ್ಚರಿಗೆ ಕಾರಣವಾಗಿದೆ.
ಹೌದು, ನೀತಾ ಅಂಬಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಂಡಳಿ ಮತ್ತು ಸಮಿತಿ ಸಭೆಗಳಲ್ಲಿ ಭಾಗವಹಿಸಲು ಶುಲ್ಕವನ್ನು ಮಾತ್ರ ಪಾವತಿಸುತ್ತಾರೆ. ಯಾವುದೇ ಸಂಬಳವನ್ನು ಪಡೆಯುವುದಿಲ್ಲ.
RILನ ವಾರ್ಷಿಕ ವರದಿಯ ಪ್ರಕಾರ, ನೀತಾ ಅಂಬಾನಿ ಮಂಡಳಿಯ ಸಭೆಯಲ್ಲಿ ಭಾಗವಹಿಸಲು ಸುಮಾರು 6 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳುತ್ತಾರೆ. 2022-2023 ರ ಹಣಕಾಸು ವರ್ಷಕ್ಕೆ 2 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಸ್ಟಾಕ್ ಆಯ್ಕೆಗಳು, ಬೋನಸ್‌ಗಳು ಅಥವಾ ಕಮಿಷನ್‌ಗಳಂತಹ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಿಂದ ಯಾವುದೇ ಇತರ ಸಂಭಾವನೆ ಅಥವಾ ಪ್ರಯೋಜನಗಳಿಗೆ ನೀತಾ ಅರ್ಹರಾಗಿಲ್ಲ.
ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರನ್ನು RIL ಬೋರ್ಡ್‌ಗೆ ನೇಮಿಸಲಾಗಿದೆ. ನೀತಾ ಅಂಬಾನಿ ಪಾಲಿಸುತ್ತಿದ್ದ ಒಪ್ಪಂದಗಳನ್ನೇ ಇಶಾ, ಆಕಾಶ್, ಅನಂತ್ ಅಂಬಾನಿ ಸಹ ಪುನರಾವರ್ತಿಸುತ್ತಿದ್ದಾರೆ. ಅಂದರೆ ಅವರಿಗೆ ಯಾವುದೇ ಸಂಬಳವನ್ನು ನೀಡಲಾಗುವುದಿಲ್ಲ, ಸಭೆಗಳಿಗೆ ಕುಳಿತುಕೊಳ್ಳುವ ಶುಲ್ಕ ಮತ್ತು ವಾರ್ಷಿಕ ಕಮಿಷನ್ ಮಾತ್ರ ಲಭ್ಯವಾಗುತ್ತದೆ.
ರಿಲಯನ್ಸ್ ಪ್ರಕಟಣೆಯಲ್ಲಿ, ಬೋರ್ಡ್ ಅಥವಾ ಅದರ ಸಮಿತಿಗಳ ಸಭೆಗಳಿಗೆ ಅಥವಾ ಮಂಡಳಿಯು ನಿರ್ಧರಿಸಬಹುದಾದ ಯಾವುದೇ ಇತರ ಸಭೆಗಳಿಗೆ ಹಾಜರಾಗಲು ಶುಲ್ಕದ ಮೂಲಕ ಅವರಿಗೆ ಸಂಭಾವನೆಯನ್ನು ಪಾವತಿಸಲಾಗುವುದು' ಎಂದು ತಿಳಿಸಲಾಗಿದೆ.
ರಿಲಯನ್ಸ್‌ನ ನಿರ್ದೇಶಕ ಮಂಡಳಿಗೆ ರಾಜೀನಾಮೆ ನೀಡುವುದರ ಜೊತೆಗೆ, ನೀತಾ ಅಂಬಾನಿ ಅವರು ಧೀರೂಭಾಯಿ ಅಂಬಾನಿ ಇನ್‌ಸ್ಟಿಟ್ಯೂಟ್‌ನ ಉನ್ನತ ಸ್ಥಾನದಿಂದ ಕೆಳಗಿಳಿದು ತಮ್ಮ ಮಗಳು ಇಶಾ ಅಂಬಾನಿಗೆ ಸ್ಥಾನವನ್ನು ಹಸ್ತಾಂತರಿಸಿದ್ದಾರೆ.