ಹೆರಿಗೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದರೆ, ಈ ವಸ್ತು ಬ್ಯಾಗಿನಲ್ಲಿರಲಿ
ಡೆಲಿವರಿಗೆ ಆಸ್ಪತ್ರೆಗೆ ಹೋಗುವ ಸಮಯದಲ್ಲಿ ಚೀಲಗಳನ್ನು ಪ್ಯಾಕ್ ಮಾಡುವ ಬಗ್ಗೆ ಈಗಾಗಲೇ ಸಾಕಷ್ಟು ಆಲೋಚನೆ ಮಾಡಿರುತ್ತೀರಿ, ವಿಶೇಷವಾಗಿ ಮೊದಲ ಬಾರಿಗೆ ತಾಯಂದಿರಾಗಲು ಹೊರಟಿರುವ ಮಹಿಳೆಯರ ಆಸ್ಪತ್ರೆಯ ಚೀಲದಲ್ಲಿ ಯಾವ ಅಗತ್ಯ ವಸ್ತುಗಳನ್ನು ಇಡಬೇಕು ಎಂಬುದರ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ಇಲ್ಲಿದೆ.
ಗರ್ಭಧಾರಣೆಯ (pregnancy) ಕೊನೆಯ ತ್ರೈಮಾಸಿಕವು ನಡೆಯುತ್ತಿದ್ದರೆ, ನಿಮ್ಮ ಪುಟ್ಟ ಅತಿಥಿಯನ್ನು ಭೇಟಿಯಾಗಲು ಖಂಡಿತವಾಗಿಯೂ ಉತ್ಸುಕರಾಗಿದ್ದೀರಿ ಮತ್ತು ಕಾತುರರಾಗುತ್ತೀರಿ. ಮಗುವಿನ ಅಗತ್ಯದ ಎಲ್ಲಾ ವಸ್ತುಗಳನ್ನು ನೀವು ಮಗುವಿನ ಆಗಮನದ ಸಿದ್ಧತೆಯಲ್ಲಿ ಇಟ್ಟಿರಬೇಕು.
ಡೆಲಿವರಿ (Delivery) ಸಮಯ ತುಂಬಾ ರೋಮಾಂಚನಕಾರಿಯಾಗಿರುತ್ತದೆ, ಆದರೆ ಅದೇ ಸಮಯದಲ್ಲಿ ಲೇಬರ್ ಪೆನ್ ಮತ್ತು ಡೆಲಿವರಿಯ ಬಗ್ಗೆ ಉದ್ವಿಗ್ನತೆ ಇರುತ್ತದೆ ಮತ್ತು ಸಿ-ಸೆಕ್ಷನ್ ಡೆಲಿವರಿ (c section delivery) ಆಗಿದ್ದರೆ ಒತ್ತಡವು ಮತ್ತಷ್ಟು ಹೆಚ್ಚಾಗುತ್ತದೆ. ಆದರೆ ನಿಮ್ಮನ್ನು ಶಾಂತವಾಗಿಸಲು ನೀವು ಮಾಡಬಹುದಾದ ಕೆಲವು ವಿಷಯಗಳಿವೆ. ಉದಾಹರಣೆಗೆ, ಆಸ್ಪತ್ರೆಗೆ ಹೋಗಲು ನಿಮಗೆ, ಮಗುವಿಗೆ ಬೇಕಾದ ವಸ್ತುಗಳನ್ನು ಬ್ಯಾಗ್ ಪ್ಯಾಕ್ ಮಾಡುವುದು.
ಕೆಲವು ಕಾರಣಗಳಿಗಾಗಿ ಹೆರಿಗೆಯು(delivery) ಸಿ-ಸೆಕ್ಷನ್ ನಿಂದ ಸಂಭವಿಸಲಿದ್ದರೆ, ನೀವು ಸಂಪೂರ್ಣ ಬೆಡ್ ರೆಸ್ಟ್ ನಲ್ಲಿರಬೇಕು.ಬ್ಯಾಗ್ ನಲ್ಲಿ ಬೇರೆ ಬೇರೆ ಕಡೆಗಳಲ್ಲಿ ಬೇಗನೆ ಸಿಗುವಂತೆ ವಸ್ತುಗಳನ್ನು ಇರಿಸಿ, ಇದರಿಂದ ಆಸ್ಪತ್ರೆಯಲ್ಲಿ ನಿಮ್ಮೊಂದಿಗೆ ಇರಲು ಹೋಗುವವರಿಗೆ ಅದನ್ನು ಹುಡುಕುವುದು ಸುಲಭವಾಗುತ್ತದೆ.
ಕೆಲವು ಅಗತ್ಯ ವಸ್ತುಗಳನ್ನು ಆಸ್ಪತ್ರೆಯಿಂದ ಸಹ ಒದಗಿಸಲಾಗುತ್ತದೆ, ಆದ್ದರಿಂದ ಚೀಲವನ್ನು ಪ್ಯಾಕ್ (Bag Pack) ಮಾಡುವ ಮೊದಲು ಆಸ್ಪತ್ರೆಯ ಸಿಬ್ಬಂದಿ ಜೊತೆ ಒಮ್ಮೆ ಮಾತನಾಡಿ. ಆಸ್ಪತ್ರೆಗೆ ಅಗತ್ಯ ವಸ್ತುಗಳನ್ನು ಮಾತ್ರ ಪ್ಯಾಕ್ ಮಾಡಲು ಪ್ರಯತ್ನಿಸಿ. ಅಗತ್ಯವಿಲ್ಲದ ವಸ್ತುಗಳನ್ನು ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ಅಗತ್ಯ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಪಡೆಯಲು ಕಷ್ಟವಾಗುತ್ತದೆ.
ಆಸ್ಪತ್ರೆಯ ಚೀಲದಲ್ಲಿ ಏನನ್ನು ಇಡಬೇಕು ಎಂದು ನೋಡೋಣ.
ನಿಮಗಾಗಿ ಏನನ್ನು ಇಟ್ಟುಕೊಳ್ಳಬೇಕು
ನಿಮಗಾಗಿ ಇಡಲಾದ ವಸ್ತುಗಳಲ್ಲಿ ಅತ್ಯಂತ ಪ್ರಮುಖವಾದುದು ಆರಾಮದಾಯಕ ಬಟ್ಟೆಗಳು. (comfortable clothes) ಚೀಲದಲ್ಲಿ ಆರಾಮದಾಯಕ ಬಟ್ಟೆಗಳನ್ನು ಹಾಕಲು ಮರೆಯದಿರಿ, ಅದು ನಿಮಗೆ ವಿಶ್ರಾಂತಿಯನ್ನು ನೀಡುತ್ತದೆ. ನಂತರ ಒಳ ಉಡುಪುಗಳು (inner wears) ಬರುತ್ತವೆ. ಪ್ರತಿಯೊಬ್ಬರೂ ಇದನ್ನು ನೆನಪಿಸಿಕೊಳ್ಳುತ್ತಾರೆ, ಆದರೆ ಕೆಲವೊಮ್ಮೆ ಅದು ಮನಸ್ಸಿನಿಂದ ಹೊರಹೋಗುತ್ತದೆ. ಆದ್ದರಿಂದ ಸಡಿಲವಾದ ಮತ್ತು ಆರಾಮದಾಯಕ ಒಳ ಉಡುಪುಗಳನ್ನು ಚೀಲಗಳಲ್ಲಿ ಪ್ಯಾಕ್ ಮಾಡಿ.
ಟೂತ್ ಪೇಸ್ಟ್ (Toothpaste), ಬ್ರಷ್, ಸೋಪ್, ಲೋಷನ್ (lotion), ಆಯಿಲ್, ಕ್ರೀಮ್, ಹೆರಿಗೆ ಬಟ್ಟೆ, ಸ್ತನ ಪಂಪ್, ಟವೆಲ್, ಸಾಕ್ಸ್, ಬೆಚ್ಚಗಿನ ಬಟ್ಟೆಗಳು, ವೈದ್ಯಕೀಯ ದಾಖಲೆಗಳು, ನಗದು (cash), ಕಾರ್ಡ್ ಗಳು ಮುಂತಾದ ಬ್ಯಾಗ್ ಗಳಲ್ಲಿ ನೀವು ಪ್ರತಿದಿನ ಬಳಸುವ ಎಲ್ಲಾ ಅಗತ್ಯವಸ್ತುಗಳನ್ನು ಪ್ಯಾಕ್ ಮಾಡಿ.
ನವಜಾತ ಶಿಶುವಿಗೆ (newborn baby) ಚೀಲದಲ್ಲಿ ಏನು ಇಡಬೇಕು?
ಮಗುವಿಗೆ ಮೃದುವಾದ ಬಟ್ಟೆಗಳನ್ನು ಪ್ಯಾಕ್ ಮಾಡಿ ಮತ್ತು ಹವಾಮಾನಕ್ಕೆ ಅನುಗುಣವಾಗಿ, ಉದಾಹರಣೆಗೆ ಶೀತವಾದಾಗ ಬೆಚ್ಚಗಿನ ಬಟ್ಟೆಗಳು (Warm Cloths) ಮತ್ತು ಬಿಸಿಯಾಗಿದ್ದರೆ ಹತ್ತಿ ಬಟ್ಟೆಗಳು (Cotton Cloths). ಡೈಪರ್ ಬ್ಯಾಗ್ ಅನ್ನು ಇಟ್ಟುಕೊಳ್ಳಲು ಮರೆಯಬೇಡಿ, ಏಕೆಂದರೆ ಅದು ಬಹಳ ಮುಖ್ಯವಾಗಿರುತ್ತದೆ.
ಡೈಪರ್ ರಾಶ್ ಕ್ರೀಮ್ (Diper rash cream) ಮತ್ತು ಬೇಬಿ ವೈಪ್ ಗಳನ್ನು (Baby wipes )ಒಟ್ಟಿಗೆ ಇರಿಸಿ. ಮಗುವಿನ ತಲೆ ಮತ್ತು ಕಿವಿಗಳನ್ನು ಮುಚ್ಚಲು ಟೋಪಿ ಮತ್ತು ಫೀಡಿಂಗ್ ಬಾಟಲಿಯನ್ನು ಒಟ್ಟಿಗೆ ಇರಿಸಿ. ಏಕೆಂದರೆ ಮಗುವಿಗೆ ಕೆಲವು ಕಾರಣಗಳಿಂದ ಹಾಲುಣಿಸಲು ಸಾಧ್ಯವಾಗದಿದ್ದರೆ, ಫೀಡಿಂಗ್ ಬಾಟಲ್ ನಿಂದ ಹಾಲುಣಿಸಿ. ಮಗುವಿನ ಅಗತ್ಯ ವಸ್ತುಗಳಾದ ಗ್ಲೌಸ್, ಸಾಕ್ಸ್, ಬ್ಲಾಂಕೆಟ್, ಟವೆಲ್ ಇತ್ಯಾದಿಗಳನ್ನು ಇಟ್ಟುಕೊಳ್ಳಲು ಮರೆಯಬೇಡಿ.
ಸಂಗಾತಿಗಾಗಿ ಇವುಗಳನ್ನು ಇರಿಸಿ
ಆಸ್ಪತ್ರೆಯಲ್ಲಿ ನಿಮ್ಮೊಂದಿಗೆ ಇರುವ ಸಂಗಾತಿಗೆ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿ ಇಟ್ಟುಕೊಳ್ಳಿ. ಬಟ್ಟೆಗಳು, ಕಂಬಳಿಗಳು, ಟೂತ್ ಬ್ರಷ್ ಗಳು, ಟೂತ್ ಪೇಸ್ಟ್ ಗಳು, ಸಾಬೂನುಗಳು (soap), ಶಾಂಪೂಗಳು, ಚಾರ್ಜರ್ ಗಳು (charger), ಮನೆ ಮತ್ತು ಕಾರಿನ ಕೀಲಿಗಳು, ಸಾಕ್ಸ್ ಗಳು, ಟವೆಲ್ ಗಳು, ನಗದು, ಕಾರ್ಡ್ ಗಳು, ತಿಂಡಿಗಳು ಇತ್ಯಾದಿಗಳನ್ನು ಸಂಗಾತಿಗಾಗಿ ಪ್ಯಾಕ್ ಮಾಡಿ.
ಮಗುವಿಗೆ ಜನ್ಮ ನೀಡುವುದು ತಾಯಿಗೆ ಬಹಳ ಸುಂದರವಾದ ಅನುಭವವಾಗಿದೆ. ಅವಳು ತನ್ನ ಮಗುವಿಗಾಗಿ ಇಡೀ 9 ತಿಂಗಳ ಕನಸು ಕಾಣುತ್ತಾಳೆ. ಸಣ್ಣ ಸಣ್ಣ ವಿಷಯಗಳೂ ಕೂಡ ಗರ್ಭಿಣಿ ತಾಯಿಗೆ ಸಾಕಷ್ಟು ಸಂತೋಷವನ್ನು ನೀಡುತ್ತವೆ. ಆಸ್ಪತ್ರೆಗೆ ಹೋಗಲು ಬ್ಯಾಗ್ ಪ್ಯಾಕ್ ಮಾಡುವುದು ಸಹ ಅನೇಕ ಮಹಿಳೆಯರಿಗೆ ಬಹಳ ರೋಮಾಂಚನಕಾರಿ ಕಾರ್ಯವಾಗಿದೆ.