ಗರ್ಭಿಣಿ ಹಾಗಲಕಾಯಿ ತಿನ್ನಬಾರದಂತೆ... ಯಾಕೆ ಅನ್ನೋ ಮಾಹಿತಿ ಇಲ್ಲಿದೆ...
First Published Dec 9, 2020, 5:04 PM IST
ಹಾಗಲಕಾಯಿ, ಭಾರತದಲ್ಲಿ ಇದನ್ನು ಕಹಿ ಕಲ್ಲಂಗಡಿ ಅಥವಾ ಮೊಮೊರ್ಡಿಕಾ ಚರಂತಿಯಾ ಅಥವಾ ಕರೇಲಾ ಎಂದೂ ಕರೆಯುತ್ತಾರೆ. ಇದು ಹಲವು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ, ಆದರೆ ಅದರ ಕಹಿ ರುಚಿಯಿಂದಾಗಿ ಜನರು ಅದನ್ನು ಸೇವಿಸಲು ಹೆಚ್ಚಾಗಿ ಇಷ್ತಪಡುವುದಿಲ್ಲ. ಪ್ರೋಟೀನ್, ಕಾರ್ಬೋಹೈಡ್ರೇಟ್ ಗಳು, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಮೆಗ್ನೀಸಿಯಮ್, ಮ್ಯಾಂಗನೀಸ್, ಫೋಲೇಟ್, ವಿಟಮಿನ್ ಎ, ವಿಟಮಿನ್ ಸಿ, ಮತ್ತು ಹಲವಾರು ಬಿ ವಿಟಮಿನ್ಗಳಿಂದ ತುಂಬಿದ ಕಹಿ ಹಾಗಲಕಾಯಿ ನಿಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ.

ಈ ತರಕಾರಿ ಆಹಾರದಲ್ಲಿ ಹೆಚ್ಚಿನ ಫೈಬರ್ ಮತ್ತು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಆದಾಗ್ಯೂ, ಗರ್ಭಿಣಿ ಮಹಿಳೆಯರಿಗೆ ಹಾಗಲಕಾಯಿ ಸೇವಿಸದಂತೆ ಸೂಚಿಸಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಹಾಗಲಕಾಯಿಯನ್ನು ಸೇವಿಸುವುದರೊಂದಿಗೆ ಸಂಬಂಧಿಸಿದ ಕೆಲವು ಅಪಾಯಗಳನ್ನು ಕೆಳಗೆ ನೀಡಲಾಗಿದೆ.

ರಕ್ತಹೀನತೆ: ಹಾಗಲಕಾಯಿ ನಿಮ್ಮ ದೇಹದ ಅಂಗಾಂಶಗಳಿಗೆ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತ ಕಣಗಳ ನಾಶಕ್ಕೆ ಕಾರಣವಾಗಿದೆ. ಇದು ರಕ್ತಹೀನತೆಗೆ ಕಾರಣವಾಗಬಹುದು ಮತ್ತು ಗರ್ಭಧಾರಣೆಯ ತೊಂದರೆಗಳಿಗೆ ಕಾರಣವಾಗಬಹುದು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?