ಮಗುವಿಗೆ ಇನ್ನೂ ಹಲ್ಲು ಬಂದಿಲ್ವಾ? ಆದರೂ ಈ ಫುಡ್ಸ್ ಕೊಡಬಹುದು ಟ್ರೈ ಮಾಡಿ
ಆರಂಭಿಕ ವರ್ಷಗಳಲ್ಲಿ, ಮಕ್ಕಳಿಗೆ ಕಬ್ಬಿಣಾಂಶಯುಕ್ತ ಆಹಾರಗಳನ್ನು ಅವುಗಳ ಬೆಳವಣಿಗೆಗೆ ನೀಡುವುದು ಬಹಳ ಮುಖ್ಯ. ಒಂದು ವರ್ಷದ ಒಳಗಿನ ಮಕ್ಕಳಿಗೆ ಅಥವಾ ಇನ್ನೂ ಹಲ್ಲು ಮೂಡದ ಮಕ್ಕಳಿಗೆ ಆಹಾರ ನೀಡುವಾಗ ತುಂಬಾ ಜಾಗರೂಕರಾಗಿರಬೇಕು. ಮಗುವಿಗೆ ಯಾವ ರೀತಿಯ ಆಹಾರ ನೀಡುವುದು ಉತ್ತಮ ಎಂದು ಸಹ ಯೋಚನೆಯಾಗುತ್ತದೆ, ಘನ ಆಹಾರಗಳನ್ನು ಮಕ್ಕಳಿಗೆ ಪರಿಚಯಿಸುವುದು ಒಂದು ಸವಾಲಿನ ಕೆಲಸ. ಇಂತಹ ಸಂದರ್ಭದಲ್ಲಿ ಇಂತಹ ಆಹಾರಗಳನ್ನು ನೀಡಬಹುದು ತಿಳಿಯೋಣ..
ಪೌಷ್ಟಿಕ ಆಹಾರಗಳನ್ನು ನೀಡುವುದು ಮಗುವಿನ ಬೆಳವಣಿಗೆಗೆ ತುಂಬಾ ಮುಖ್ಯ.
ಅನೇಕರು ಅನ್ನ ಮತ್ತು ಧಾನ್ಯಗಳಿಂದ ಪ್ರಾರಂಭಿಸಲು ಆದ್ಯತೆ ನೀಡುತ್ತಾರೆ, ಅವು ಪೌಷ್ಟಿಕವೆಂದು ಪರಿಗಣಿಸುತ್ತಾರೆ. ಆದರೆ ಅದು ಬೆಳೆಯುತ್ತಿರುವ ಮಗುವಿಗೆ ಸಾಕಾಗುವುದಿಲ್ಲ
ಕಬ್ಬಿಣಾಂಶ ಹೆಚ್ಚಿರುವ ಆಹಾರಗಳನ್ನು ಸೇವಿಸುವ ಪ್ರಾಮುಖ್ಯತೆ
ಆರಂಭಿಕ ವರ್ಷಗಳಲ್ಲಿ ಮಕ್ಕಳಿಗೆ ಕಬ್ಬಿಣಾಂಶಯುಕ್ತ ಆಹಾರಗಳನ್ನು ಅವುಗಳ ಬೆಳವಣಿಗೆಗೆ ನೀಡುವುದು ಬಹಳ ಮುಖ್ಯ.
ಘನವಸ್ತುಗಳನ್ನು ಪರಿಚಯಿಸಿದ ನಂತರ ಮಗುವಿಗೆ ಕೊಡಬೇಕಾದ 5 ಆಹಾರ ಪದಾರ್ಥಗಳು ಇಲ್ಲಿವೆ.
ಮೊಟ್ಟೆಯ ಹಳದಿ
ಮೊಟ್ಟೆ ಸಂಪೂರ್ಣವಾಗಿ ಸುರಕ್ಷಿತವಾಗಿವೆ ಮತ್ತು ಮೊದಲ ವರ್ಷದಲ್ಲಿ ಪರಿಚಯಿಸಬಹುದು. ಮಗುವಿನ ಬೆಳವಣಿಗೆಗೆ ಪ್ರಮುಖವಾಗಿರುವ ಮೊಟ್ಟೆಯ ಹಳದಿ ಕಬ್ಬಿಣಾಂಶವನ್ನು ಹೊಂದಿರುತ್ತದೆ.
ಬಾಳೆ
ಕಬ್ಬಿಣ, ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂಗಳಿಂದ ತುಂಬಿರುವ ಬಾಳೆಹಣ್ಣು ಹಲ್ಲು ರಹಿತ ಮಗುವಿಗೆ ಸುಲಭವಾಗಿ ಸಿಗುವ ಹಣ್ಣು. ಇದು ಮಲವಿಸರ್ಜನೆ ಸುಲಭ ಆಗಲು ಸಹಾಯ ಮಾಡುತ್ತದೆ.
ಬೀನ್ಸ್
ಬೀನ್ಸ್ ನಲ್ಲಿ ಕಬ್ಬಿಣ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಬೀನ್ಸ್ ಅನ್ನು ಬೇಯಿಸಿ, ಮ್ಯಾಶ್ ಮಾಡಿ ಮಗುವಿಗೆ ಉಣಿಸಬಹುದು.
ಬೇಳೆ
ಬೇಳೆಯಲ್ಲಿ ಕಬ್ಬಿಣ, ಪ್ರೋಟೀನ್ ಮತ್ತು ಇತರ ಪೋಷಕಾಂಶಗಳು ಇರುತ್ತವೆ. 20 ನಿಮಿಷ ಬೇಯಿಸಿ ಸರ್ವ್ ಮಾಡಿ.
ಪೀನಟ್ ಬಟರ್
ಅಧ್ಯಯನಗಳ ಪ್ರಕಾರ ಮಗುವಿಗೆ ಚಿಕ್ಕ ವಯಸ್ಸಿನಲ್ಲಿ ಪೀ ನಟ್ ಬಟರ್ ಅನ್ನು ನೀಡುವುದರಿಂದ ಪೀನಟ್ ಅಲರ್ಜಿಯನ್ನು ತಡೆಗಟ್ಟಬಹುದು. ಒಂದು ಟೋಸ್ಟ್ ಮೇಲೆ ಸ್ವಲ್ಪ ಪೀನಟ್ ಬಟರ್ ಹರಡಿ ನಂತರ ಮಗುವಿಗೆ ಆಹಾರ ನೀಡಿ.