ಕೂದಲಿನ ನೂರು ಸಮಸ್ಯೆ ನಿವಾರಿಸುತ್ತೆ ದೇಸಿ ತುಪ್ಪ

First Published Mar 4, 2021, 3:33 PM IST

ತುಪ್ಪವು ಭಾರತೀಯ ಭಕ್ಷ್ಯಗಳಲ್ಲಿ ಒಂದು ಪ್ರಮುಖ ಪದಾರ್ಥವಾಗಿದ್ದು, ಇದು ಆಹಾರಕ್ಕೆ ಇನ್ನಷ್ಟು ರುಚಿಯನ್ನು ನೀಡುತ್ತದೆ. ಆಯುರ್ವೇದದಲ್ಲಿ ಅತಿ ಹೆಚ್ಚು ಬಳಕೆಯಾದ  ಆಹಾರಗಳಲ್ಲಿ ಇದು ಒಂದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಇದು ಆರೋಗ್ಯ, ಚರ್ಮ ಮತ್ತು ಕೂದಲಿಗೂ ಸಹ ಪ್ರಯೋಜನಕಾರಿಯಾಗಿದೆ. ತುಪ್ಪ ಕೂದಲಿಗೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ತುಪ್ಪದ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ವಿಜ್ಞಾನಿಗಳು ಚರ್ಚೆಯನ್ನು ಮುಂದುವರೆಸುತ್ತಲೇ ಇರುವುದರಿಂದ,  ಕೂದಲಿಗೆ ಅದರ ಪ್ರಯೋಜನಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ...