ಡಾರ್ಕ್ ಸ್ಪಾಟ್ ಸಮಸ್ಯೆ ದೂರ ಮಾಡಲು ಈ ಐದು ಮನೆಮದ್ದುಗಳೇ ಸಾಕು
ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವಿಕೆಯು ಹೆಚ್ಚಾದಂತೆ ಕಪ್ಪು ಚುಕ್ಕೆಗಳ ಪ್ರಮಾಣವೂ ಹೆಚ್ಚಾಗುತ್ತದೆ. ಮೆಲನಿನ್ ಪ್ರಮಾಣ ಕಡಿಮೆಯಾಗುವುದರಿಂದ ಚರ್ಮ ಕಪ್ಪಾಗುವ ಸಾಧ್ಯತೆ ಇದೆ. ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳು ಇಲ್ಲಿವೆ.
ನಿಂಬೆ ರಸ
ನಿಂಬೆ ರಸವು ಚರ್ಮದ ಕಪ್ಪು ಕಲೆಗಳನ್ನು ತಿಳಿಗೊಳಿಸುವಲ್ಲಿ ಸಹಾಯ ಮಾಡುತ್ತದೆ. ನಿಂಬೆ ಹಣ್ಣಿನಿಂದ ಸ್ವಲ್ಪ ರಸವನ್ನು ಹಿಂಡಿ, ಹತ್ತಿಯ ಉಂಡೆಯನ್ನು ನಿಂಬೆ ರಸದಲ್ಲಿ ಅದ್ದಿ ಕಪ್ಪು ಕಲೆಗೆ ನೇರವಾಗಿ ಹಚ್ಚಿ. ಸುಮಾರು ಅರ್ಧ ಗಂಟೆ ಕಾಲ ಹಾಗೆ ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ.
ನಿಂಬೆ ರಸವನ್ನು ಪ್ರತಿದಿನ ದಿನಕ್ಕೆ ಎರಡು ಬಾರಿಯಾದರೂ ಮುಖಕ್ಕೆ ಹಚ್ಚಿ. ಧನಾತ್ಮಕ ಫಲಿತಾಂಶಗಳನ್ನು ನೋಡಲು 2 ತಿಂಗಳ ತೆಗೆದುಕೊಳ್ಳುತ್ತದೆ. ಇದರಿಂದ ಅಡ್ಡ ಪರಿಣಾಮ ಇರೋದಿಲ್ಲ. ಆದುದರಿಂದ ಪ್ರತಿದಿನ ಇದನ್ನು ಪ್ರಯತ್ನಿಸುವುದನ್ನು ಮಾತ್ರ ಮರೆಯಬಾರದು.
ಮಜ್ಜಿಗೆ
ನಾಲ್ಕು ಚಮಚ ಮಜ್ಜಿಗೆ, ಎರಡು ಚಮಚ ತಾಜಾ ಟೊಮ್ಯಾಟೋ ರಸವನ್ನು ಸೇರಿಸಿ. ಎರಡು ಸಾಮಾಗ್ರಿಗಳನ್ನು ಮಿಶ್ರಮಾಡಿ (ಎರಡಕ್ಕೂ ಅತ್ಯುತ್ತಮ ಬ್ಲೀಚಿಂಗ್ ಗುಣ ಹೊಂದಿವೆ) ಮತ್ತು ನಂತರ ಹತ್ತಿ ಉಂಡೆಯನ್ನು ಹಾಲಿನಲ್ಲಿ ಅದ್ದಿ, ನೇರವಾಗಿ ಕಲೆಗಳ ಮೇಲೆ ಲೇಪಿಸಿ.
ಹೀಗೆ ಮುಖಕ್ಕೆ ಹಚ್ಚಿದ ಮೇಲೆ 10 ನಿಮಿಷ ಬಿಟ್ಟು ನಂತರ ತೊಳೆಯಿರಿ. ಈ ವಿಧಾನವನ್ನು ನಾಲ್ಕರಿಂದ ಐದು ವಾರಗಳ ಕಾಲ ಪ್ರತಿದಿನ ಎರಡು ಬಾರಿ ಪುನರಾವರ್ತಿಸಿ.
ಅಲೋವೆರಾ
ಚರ್ಮದ ಗಾಯ, ಸುಟ್ಟ ಗಾಯಗಳು ಮತ್ತು ಕಂದು ಕಲೆಗಳನ್ನು ಗುಣಪಡಿಸುವಲ್ಲಿ ಅಲೋವೆರಾ ಒಂದು ಪರಿಣಾಮಕಾರಿ ಪರಿಹಾರ. ಇದನ್ನು ಚರ್ಮಕ್ಕೆ ಹಚ್ಚುವುದು ಅಥವಾ ಸೇವಿಸುವುದು, ಎರಡೂ ಸಹ ಚರ್ಮದ ಕಪ್ಪು ಕಲೆ ನಿವಾರಣೆಗೆ ಸಹಕರಿಸುತ್ತದೆ.
ತಾಜಾ ಅಲೋವೆರಾ ಜೆಲ್ ಅನ್ನು ಕಪ್ಪು ಕಲೆಗಳ ಮೇಲೆ ನಯವಾಗಿ ಉಜ್ಜಿ. ಸುಮಾರು 45 ನಿಮಿಷ ಕಾಲ ಹಾಗೆ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಈ ವಿಧಾನವನ್ನು ಒಂದು ತಿಂಗಳ ಕಾಲ ದಿನಕ್ಕೆ ಎರಡು ಬಾರಿ ಪುನರಾವರ್ತಿಸಿ. ಇದೇ ಸಮಯದಲ್ಲಿ, 2 ಟೇಬಲ್ ಚಮಚ ಅಲೋವೆರಾ ರಸವನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಶೀಘ್ರ ಫಲಿತಾಂಶ ಪಡೆಯಬಹುದು.
ಆಲೂಗಡ್ಡೆ
ಆಲೂಗಡ್ಡೆಯನ್ನು ಎರಡು ವಿಧಾನಗಳಲ್ಲಿ ಹಚ್ಚಬಹುದು: ಆಲೂಗಡ್ಡೆಯನ್ನು ಕತ್ತರಿಸಿ ಒಂದು ತುಂಡು ಕಪ್ಪು ಚುಕ್ಕೆಗಳ ಮೇಲೆ ನೇರವಾಗಿ ಇಡಿ; ಕೆಲವು ನಿಮಿಷ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಎರಡನೆಯ ವಿಧಾನವೆಂದರೆ ತುರಿದ ಆಲೂಗಡ್ಡೆಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಫೇಸ್ ಮಾಸ್ಕ್ ತಯಾರಿಸಬಹುದು. ಇವೆರಡು ಕಣ್ಣಿಗೆ ಮತ್ತು ತ್ವಚೆ ಆರಾಮ ನೀಡುತ್ತದೆ. ಮತ್ತು ಕಪ್ಪು ಕಲೆ ನಿವಾರಣೆ ಮಾಡುತ್ತದೆ. ಆಲೂಗಡ್ಡೆಯ ರಸವು ನೈಸರ್ಗಿಕವಾಗಿ ಬಿಳಿ ಬಣ್ಣವನ್ನು ಉಂಟು ಮಾಡುವಂತಹ ಗುಣವನ್ನು ಹೊಂದಿದೆ. ಇದು ಚರ್ಮಕ್ಕೆ ಉತ್ತಮ ಬಣ್ಣವನ್ನು ಕೊಡುತ್ತದೆ.
ಪಪ್ಪಾಯಿ
ಹಸಿ ಪಪ್ಪಾಯಿಯನ್ನು ಕಡು ಕಂದು ಬಣ್ಣದ ಕಲೆಗಳಿಗೆ ಉಜ್ಜಿ. ಸುಮಾರು 20 ನಿಮಿಷ ಕಾಲ ಹಾಗೆ ಬಿಡಿ ನಂತರ ಬಾಧಿತ ಚರ್ಮವನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
ಇದರಿಂದ ಚರ್ಮ ಹೆಚ್ಚು ಸ್ವಚ್ಛ ಮತ್ತು ಕಾಂತಿಯಿಂದ ಕೂಡುವುದು. ಕಲೆಗಳು ತಿಳಿಯಾಗುವವರೆಗೆ ಈ ಪರಿಹಾರವು ಪ್ರತಿದಿನ 2 ಬಾರಿ ಪುನರಾವರ್ತಿಸಿ. ಪಪ್ಪಾಯಿಯಲ್ಲಿ ಚರ್ಮದ ಸುಕ್ಕನ್ನು ಹೋಗಲಾಡಿಸುವ, ಚರ್ಮದ ಭಾಗದಲ್ಲಿ ಹೆಚ್ಚು ನೀರಿನ ಅಂಶ ಆರೋಗ್ಯದ ಚರ್ಮವನ್ನು ನೀಡುತ್ತದೆ.