ಈ ರೀತಿಯ ಒಳಉಡುಪು ಧರಿಸೋದು ವಜೈನಾಕ್ಕೆ ತುಂಬಾನೆ ಡೇಂಜರ್ !
ಪ್ರತಿದಿನ ಪ್ಯಾಂಟಿ ಧರಿಸುವುದರಿಂದ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅದರಲ್ಲೂ ಥಾಂಗ್ ಪ್ಯಾಂಟಿಯಂತಹ ಒಳಉಡುಪು ಧರಿಸೋದ್ರಿಂದ ನಿಮ್ಮ ಆರೋಗ್ಯಕ್ಕೂ ಹಾನಿಕಾರಕವಾಗಬಹುದು, ಹೇಗೆ? ಅನ್ನೋದನ್ನು ನೋಡೋಣ.
ನಮ್ಮ ದೇಹವು ಬೆಳಿಗ್ಗೆ ಎದ್ದೇಳುವುದು, ಹಲ್ಲುಜ್ಜುವುದು, ಪ್ರತಿದಿನ ಚಹಾ ಕುಡಿಯುವುದು, ಪತ್ರಿಕೆ ಓದುವುದು, ಸರಿಯಾದ ಸಮಯದಲ್ಲಿ ತಿನ್ನುವುದು ಅಥವಾ ಒಳ ಉಡುಪುಗಳನ್ನು (innerwear) ಧರಿಸುವುದು ಮುಂತಾದ ಅನೇಕ ವಿಷಯಗಳಿಗೆ ಒಗ್ಗಿಕೊಳ್ಳುತ್ತದೆ. ಏಕೆಂದರೆ ನಾವು ಒಂದು ಕೆಲಸವನ್ನು ಮತ್ತೆ ಮತ್ತೆ ಮಾಡಿದರೆ, ನಾವು ಅದಕ್ಕೆ ಒಗ್ಗಿಕೊಳ್ಳುತ್ತೇವೆ . ಆ ಕೆಲಸ ಮಾಡದ ದಿನ ನಮಗೆ ವಿಚಿತ್ರ ಅನುಭವ ಆಗುತ್ತೆ ಅಲ್ವಆ?. ಮಹಿಳೆಯರು ಬ್ರಾ ಬೇಕಾದ್ರೆ ಮನೆಯಲ್ಲಿರೋವಾಗ ಧರಿಸದೇ ಇರಬಹುದು, ಆದರೆ ಪ್ಯಾಂಟಿ ವಿಷಯದಲ್ಲಿ ಹಾಗೆ ಮಾಡೋಕೆ ಸಾಧ್ಯವಿಲ್ಲ.
ನಾವು ಕಂಫರ್ಟೇಬಲ್ ಆಗಿರಲು ಅಥವಾ ನಮ್ಮ ಯೋನಿಯನ್ನು ಸ್ವಚ್ಛವಾಗಿಡಲು ಒಳ ಉಡುಪುಗಳನ್ನು ಧರಿಸುತ್ತೇವೆ. ಅದಕ್ಕಾಗಿಯೇ ಅನೇಕ ಮಹಿಳೆಯರು ವಿವಿಧ ರೀತಿಯ ಪ್ಯಾಂಟಿಗಳನ್ನು ಧರಿಸುತ್ತಾರೆ, ಕೆಲವು ಮಹಿಳೆಯರು ಥೋಂಗ್ ಪ್ಯಾಂಟಿಯಂತಹ (thong pantie) ಸೆಕ್ಸಿ ಪ್ಯಾಂಟಿಯನ್ನು ಧರಿಸಲು ಇಷ್ಟಪಡ್ತಾರೆ. ಆದರೆ ಯೋಚಿಸದೆ ಯಾವುದೇ ರೀತಿಯ ಒಳ ಉಡುಪುಗಳನ್ನು ಧರಿಸುವುದು ಭಾರಿ ಅಪಾಯವನ್ನುಂಟು ಮಾಡುತ್ತೆ ಅನ್ನೋದು ನಿಮಗೆ ತಿಳಿದಿದೆಯೇ...
ಇದು ಸ್ವಲ್ಪ ವಿಚಿತ್ರವಾಗಿ ತೋರಿದರೂ, ನಿಜಾ. ಸೆಕ್ಸಿ ಅಥವಾ ಬೋಲ್ಡ್ ಫೀಲ್ ಪಡೆಯಲು ನೀವು ಧರಿಸುವ ಥೋಂಗ್ ಪ್ಯಾಂಟಿ ನಮ್ಮ ಆರೋಗ್ಯ ಮತ್ತು ಯೋನಿಗೆ ಹಾನಿಕಾರಕವಾಗಿದೆ (effect on vagina) ಎಂದು ತಜ್ಞರು ಹೇಳುತ್ತಾರೆ. ಇದರಿಂದ ವಜೈನಾ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ ಅನ್ನೋದನ್ನು ನೋಡೋಣ.
ಥೋಂಗ್ ಪ್ಯಾಂಟಿ ಧರಿಸುವುದರಿಂದ ಯೋನಿಯಲ್ಲಿ ಸಮಸ್ಯೆ ಉಂಟಾಗಬಹುದೇ?: ಹೌದು, ಥೋಂಗ್ ಪ್ಯಾಂಟಿ ಧರಿಸುವುದರಿಂದ ಯೋನಿಯಲ್ಲಿ ಸಮಸ್ಯೆಗಳು ಉಂಟಾಗಬಹುದು. ಯೋನಿಯಲ್ಲಿ ವಿಶೇಷ ವಾಸನೆ ಇದೆ ಎಂದು ನಿಮಗೆಲ್ಲರಿಗೂ ತಿಳಿದಿದೆ, ಆದರೆ ನೀವು ಥೋಂಗ್ ಪ್ಯಾಂಟಿ ಧರಿಸಿದರೆ, ಯೋನಿಯ ವಾಸನೆ ವ್ಯತ್ಯಾಸವನ್ನುಂಟು ಮಾಡುತ್ತದೆ. ಅಂದ್ರೆ, ಥೋಂಗ್ ಪ್ಯಾಂಟಿ ಬಟ್ಟೆಯು ಗಾಳಿಯ ಹರಿವನ್ನು ಬೆಂಬಲಿಸುವುದಿಲ್ಲ. ಇದರಿಂದಾಗಿ ತೇವಾಂಶವು ಒಳಗೆ ಉಳಿಯುತ್ತದೆ . ಇದರಿಂದಾಗಿ ಯೋನಿಯಲ್ಲಿ ವಿಚಿತ್ರ ವಾಸನೆ ಬರಲು ಆರಂಭವಾಗುತ್ತೆ.
ಥೋಂಗ್ ಪ್ಯಾಂಟಿ ಧರಿಸೋದು ಬ್ಯಾಕ್ಟೀರಿಯಾ ಅಥವಾ ಯೀಸ್ಟ್ ಸೋಂಕುಗಳಿಗೆ ಕಾರಣವಾಗಬಹುದು. ಯೋನಿ ಯೀಸ್ಟ್ ಸೋಂಕನ್ನು (yeast infection in vagina) ಒಂದು ರೀತಿಯ ಕ್ಯಾಂಡಿಡಿಯಾಸಿಸ್ ಎಂದೂ ಕರೆಯಲಾಗುತ್ತೆ. ಇದನ್ನು ತಪ್ಪಿಸಲು, ನೀವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅದಕ್ಕಾಗಿ ಥೋಂಗ್ ಪ್ಯಾಂಟಿ ಧರಿಸೋದನ್ನು ಅವಾಯ್ಡ್ ಮಾಡಬೇಕು.
ಥೋಂಗ್ ಪ್ಯಾಂಟಿ ಧರಿಸೋದ್ರಿಂದ ಬ್ಯಾಕ್ಟೀರಿಯಾ: ನಿಮ್ಮ ಬಳಿ ನೈಲಾನ್ , ಸ್ಯಾಟಿನ್ ಬಟ್ಟೆಯಿಂದ ಮಾಡಿದ ಥೋಂಗ್ ಪ್ಯಾಂಟಿ ಇದ್ದರೆ, ಅವುಗಳನ್ನು ಎಸೆಯುವ ಸಮಯ ಇದು. ಏಕೆಂದರೆ ಇಂತಹ ಬಟ್ಟೆಯು ತೇವಾಂಶವನ್ನು ಹೆಚ್ಚಾಗಿ ಉತ್ಪಾದಿಸುತ್ತೆ, ಮತ್ತು ತೇವಾಂಶದಿಂದಾಗಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಈ ಬ್ಯಾಕ್ಟೀರಿಯಾಗಳು ಯೋನಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಮತ್ತು ವಾಸನೆಯ ಸಮಸ್ಯೆಯನ್ನು ಸಹ ಉಂಟುಮಾಡುತ್ತವೆ.
ಕಿರಿಕಿರಿ ಮತ್ತು ತುರಿಕೆ ಉಂಟಾಗಬಹುದು: ಥೋಂಗ್ ಪ್ಯಾಂಟಿಯ ಬಟ್ಟೆ ಕಡಿಮೆ ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ಪ್ಯಾಂಟಿ ಯಾವಾಗಲೂ ಒದ್ದೆಯಾಗಿರುತ್ತದೆ. ತೇವಾಂಶವು ಯೋನಿಯ ಸುತ್ತಲೂ ತುರಿಕೆಗೆ (itching and irritation) ಕಾರಣವಾಗಬಹುದು. ಅಲ್ಲದೆ, ಪ್ಯಾಂಟಿಯ ತೆಳುವಾದ ರೇಖೆಯಿಂದಾಗಿ, ಯೋನಿಯಲ್ಲಿ ಕಿರಿಕಿರಿಯ ಸಮಸ್ಯೆಯೂ ಇರಬಹುದು. ಆದ್ದರಿಂದ ಈ ಪ್ಯಾಂಟಿಯನ್ನು ಪ್ರತಿದಿನ ಧರಿಸಬೇಡಿ ಮತ್ತು ಇದನ್ನು ಪ್ರತಿದಿನ ಧರಿಸುತ್ತಿದ್ದರೆ, ಅದರ ಶುಚಿತ್ವದ ಬಗ್ಗೆ ಕಾಳಜಿ ವಹಿಸಿ. ಅದು ಒದ್ದೆಯಾದರೆ, ತುರಿಕೆ ಸಮಸ್ಯೆ ಕಾಡಬಹುದು.
ತೆಳುವಾದ ಮತ್ತು ಬಿಗಿಯಾದ ಥೋಂಗ್ ಪ್ಯಾಂಟಿ ಅವಾಯ್ಡ್ ಮಾಡಿ: ನೀವು ಬಿಗಿಯಾದ ಪ್ಯಾಂಟಿ ಧರಿಸಿದ್ರೆ ಯೋನಿ ಸೋಂಕು ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ತಸರಿಯಾದ ಸೈಜ್ ನ ಪ್ಯಾಂಟಿ ಆಯ್ಕೆ ಮಾಡೋದು ಬೆಸ್ಟ್. ನೀವು ಸರಿಯಾದ ಸೈಜ್ ನ ಪ್ಯಾಂಟಿ ಧರಿಸದಿದ್ದರೆ, ಅದು ನಿಮ್ಮ ವಜೈನಾವನ್ನು ರಕ್ಷಿಸಲು ಸಹಾಯ ಮಾಡೋದಿಲ್ಲ.
ಸರಿಯಾಗಿ ತೊಳೆಯದಿರುವುದು: ವಾಷಿಂಗ್ ಮಷಿನ್ ನಲ್ಲಿ ಥೋಂಗ್ ಪ್ಯಾಂಟಿಯನ್ನು ವಾಶ್ ಮಾಡೋದು ಸುಲಭ ಮತ್ತು ಟೈಮ್ ಕೂಡ ಸೇವ್ ಆಗುತ್ತೆ ಎಂದು ನೀವು ಅಂದುಕೊಂಡಿರಬಹುದು, ಆದರೆ ವಾಸ್ತವದಲ್ಲಿ, ವಿವಿಧ ರೀತಿಯ ಒಳ ಉಡುಪುಗಳಿಗೆ ವಿಭಿನ್ನ ರೀತಿಯ ವಾಶಿಂಗ್ ವೀಲ್ ಇದೆ. ಹಾಗಾಗಿ ನೀವು ಕೈಗಳಿಂದ ಇಂತಹ ಒಳಉಡುಪುಗಳನ್ನು ವಾಶ್ ಮಾಡೋದು ಉತ್ತಮ. ಇದರಿಂದ ಸ್ವಚ್ಚವೂ ಆಗುತ್ತೆ, ದೀರ್ಘಕಾಲ ಉಳಿಯುತ್ತೆ.