MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • ಸ್ನಾನದ ಸಾಬೂನು ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವುದಿಷ್ಟು

ಸ್ನಾನದ ಸಾಬೂನು ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವುದಿಷ್ಟು

ಸಾಬೂನು (soap)ಹೆಚ್ಚಾಗಿ ಲವಣ ಅಥವಾ ಕ್ಷಾರೀಯವಾಗಿದ್ದು, ಸಸ್ಯಜನ್ಯ ಎಣ್ಣೆ ಮತ್ತು ಸೋಡಿಯಂ ಹೈಡ್ರಾಕ್ಸೈಡ್ ಅಥವಾ ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ಅನ್ನು ಒಳಗೊಂಡಿದೆ. ಸಾಬೂನಿನ ನಿರಂತರ ಬಳಕೆಯಿಂದ ನಮ್ಮ ಚರ್ಮದ ಪಿಎಚ್ ಅನ್ನು ಕಡಿಮೆ ಮಾಡಬಹುದು, ಅಂದರೆ 5.6 ರಿಂದ 5.8. ಒಣ ಚರ್ಮ ಹೊಂದಿರುವವರು ಸಾಬೂನು ಮುಕ್ತ ಕ್ಲೆನ್ಸರ್ ಅನ್ನು ಬಳಸಬೇಕು, ಏತನ್ಮಧ್ಯೆ ಎಣ್ಣೆಯುಕ್ತ ಚರ್ಮವು (oily skin) ಸ್ಯಾಲಿಸಿಲಿಕ್, ಸಿಟ್ರಿಕ್ ಆಮ್ಲವನ್ನು ಹೊಂದಿರುವ ಔಷಧೀಯ ಸಾಬೂನನ್ನು ಬಳಸಬೇಕು.

2 Min read
Suvarna News | Asianet News
Published : Oct 24 2021, 03:57 PM IST| Updated : Oct 24 2021, 04:10 PM IST
Share this Photo Gallery
  • FB
  • TW
  • Linkdin
  • Whatsapp
19

ನಮ್ಮಲ್ಲಿ ಹೆಚ್ಚಿನವರು ಸ್ನಾನದ ಸಾಬೂನನ್ನು ಆಯ್ಕೆ ಮಾಡುವಾಗ, ಅದು ನಮ್ಮ ಚರ್ಮದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ಇದು ನಮ್ಮ ದೈನಂದಿನ ದಿನಚರಿಯ ಒಂದು ಭಾಗವಾಗಿರುವುದರಿಂದ, ಅದರ ಬಗ್ಗೆ ನಾವು ಸರಿಯಾದ ಮಾಹಿತಿಯನ್ನು ಏಕೆ ಹೊಂದಿರಬೇಕು ಎಂಬುದು ಇಲ್ಲಿದೆ.

29

ಸರ್ಫ್ಯಾಕ್ಟಂಟ್ (Sarfactant): ಸರ್ಫ್ಯಾಕ್ಟಂಟ್ ಒಂದು ರೀತಿಯ ರಾಸಾಯನಿಕವಾಗಿದೆ, ಇದು ನೀರು ಮತ್ತು ಸಾಬೂನಿನ ಮಿಶ್ರಣವಾಗಿದೆ. ಇದು ಕೊಳೆಯನ್ನು ತೆಗೆದುಹಾಕಲು ಕೆಲಸ ಮಾಡುತ್ತದೆ, ಆದರೆ ಚರ್ಮದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು.
 
ಡಿಟರ್ಜೆಂಟ್ ಗಳು (detergent): ಡಿಟರ್ಜೆಂಟ್ ಗಳನ್ನು ಚರ್ಮದ ತೇವಾಂಶವನ್ನು ಕದಿಯುವ ಸಂಶ್ಲೇಷಿತ ವಸ್ತುಗಳಿಂದ ತಯಾರಿಸಲಾಗುತ್ತದೆ.

 

39

ಸುಗಂಧ (fragrance): ಸುಗಂಧದ್ರವ್ಯಗಳಾದ ಶ್ರೀಗಂಧ (sandal wood), ಗುಲಾಬಿ (rose), ಸ್ಟ್ರಾಬೆರಿ, ಅಲೋವೆರಾ ಚರ್ಮಕ್ಕೆ ಹಾನಿಮಾಡಬಹುದು. ಸುವಾಸನೆಯುಕ್ತ ಸಾಬೂನುಗಳು ನಿಮ್ಮ ಚರ್ಮಕ್ಕೆ ಹೆಚ್ಚು ಹಾನಿ ಉಂಟುಮಾಡುತ್ತವೆ (damage skin)ದು ನಿಮಗೆ ತಿಳಿದಿದೆಯೇ?

49

ಒಣ ಚರ್ಮ (dry skin): ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಯೆಂದರೆ ಒಣ ಚರ್ಮ, ಮತ್ತು ಹೆಚ್ಚಿನ ಸಾಬೂನುಗಳು ಇದಕ್ಕೆ ಕಾರಣ ಎಂದು ನಿಮಗೆ ತಿಳಿದಿದೆಯೇ? ಸಾಬೂನುಗಳು ಪಿಎಚ್ ಸಮತೋಲನ, ತೇವಾಂಶ ಮತ್ತು ಎಣ್ಣೆಯನ್ನು ಬದಲಾಯಿಸಬಹುದು ಮತ್ತು ಆದ್ದರಿಂದ ನಿಮ್ಮ ಚರ್ಮವನ್ನು ಹಾನಿಗೊಳಿಸಬಹುದು.

59

ನಿಮ್ಮ ಸಾಬೂನನ್ನು ಆಯ್ಕೆ ಮಾಡುವುದು ಹೇಗೆ?: ನಿತ್ಯ ಬಳಕೆಯ ಸಾಬೂನುಗಳು (daily using soap): ಆರೋಗ್ಯಕರ ಚರ್ಮ ಹೊಂದಿರುವವರು, ಸಾಬೂನುಗಳನ್ನು ಖರೀದಿಸುವಾಗ ಯೋಚಿಸುವುದಿಲ್ಲ. ದೈನಂದಿನ ಬಳಕೆಯ ಸಾಬೂನಿನಲ್ಲಿ ಸುಗಂಧ ಮತ್ತು ರಾಸಾಯನಿಕಗಳಿವೆ, ಇದು ನಮ್ಮ ಚರ್ಮವನ್ನು ಶುದ್ಧೀಕರಿಸುತ್ತದೆ, ಆದರೆ ಅವು ತೇವಾಂಶವನ್ನು ಕಡಿಮೆ ಮಾಡುತ್ತದೆ.

69

ಗ್ಲಿಸರಿನ್ (gliserin): ಗ್ಲಿಸರಿನ್ ಅನ್ನು ಸಾಬೂನು ಮತ್ತು ಲೋಷನ್ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಗ್ಲಿಸರಿನ್ ಸಾಬೂನು ವಿಶೇಷವಾಗಿ ಒಣ ಹವೆಗೆ ಸೂಕ್ತವಾಗಿದೆ. ಇದು  ಚರ್ಮದ ತೇವಾಂಶವನ್ನು ಉಳಿಸಿಕೊಳ್ಳುತ್ತದೆ ಮತ್ತು ಅದನ್ನು ಮೃದುಗೊಳಿಸುತ್ತದೆ. ನಿರ್ಜಲೀಕರಣಗೊಂಡ ಚರ್ಮವನ್ನು ಹೊಂದಿರುವ ಜನರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.

79

ಸೌಮ್ಯ ಸೋಪುಗಳು (mild soap): ಇಂತಹ ಸಾಬೂನುಗಳು ಸಾಕಷ್ಟು ದುಬಾರಿಯಾಗಿರುತ್ತವೆ, ಏಕೆಂದರೆ ಅವುಗಳಲ್ಲಿ ಹಾಲು, ಕೆನೆ, ಗ್ಲಿಸರಿನ್ ಮುಂತಾದ ಪದಾರ್ಥಗಳು ಇರುತ್ತವೆ ಮತ್ತು ಚರ್ಮದ ತೇವಾಂಶದ ಮೇಲೆ ಪರಿಣಾಮ ಬೀರುವುದಿಲ್ಲ. ಇವುಗಳು ಚರ್ಮದ ತೇವಾಂಶವನ್ನು ರಕ್ಷಿಸುತ್ತದೆ.

89

ಸೋಂಕು ನಿವಾರಕ (antibiotic): ಈ ರೀತಿಯ ಸಾಬೂನುಗಳು ದೈನಂದಿನ ಬಳಕೆಗೆ ಸೂಕ್ತವಲ್ಲ, ಏಕೆಂದರೆ ಅವು ನಿಮ್ಮ ಚರ್ಮವನ್ನು ಸಾಕಷ್ಟು ಒಣಗಿಸುತ್ತದೆ. ಇಂತಹ ಸೋಪು ವೈದ್ಯರ ಸಲಹೆಯ ಮೇರೆಗೆ ಮಾತ್ರ ಬಳಸಬೇಕು ಅಂದರೆ  ಚರ್ಮದ ಮೇಲೆ ಯಾವುದೇ ಅಲರ್ಜಿ ಅಥವಾ ಸೋಂಕು ಇದ್ದಾಗ ಮಾತ್ರ ಬಳಸಬೇಕು.

99

ಸಾವಯವ ಸಾಬೂನು (natural soap): ಈ ರೀತಿಯ ಸಾಬೂನು ಸಾಕಷ್ಟು ದುಬಾರಿಯಾಗಿದೆ. ಯಾವುದೇ ಸಾವಯವ ಸಾಬೂನನ್ನು ಖರೀದಿಸುವ ಮೊದಲು, ಅವುಗಳಲ್ಲಿ ಬಳಸುವ ನೈಸರ್ಗಿಕ ಪದಾರ್ಥಗಳ ವಿವರಗಳ ಬಗ್ಗೆ ನಾವು ಓದಬೇಕು. ಸಾವಯವ ಸಾಬೂನುಗಳ ಅತಿಯಾದ ಬಳಕೆಯೂ ನಿಮಗೆ ಹಾನಿಕಾರಕವಾಗಬಹುದು.

 

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved