ಗರ್ಭಪಾತದ ಬಳಿಕ ದೇಹದ ಶಕ್ತಿ ಹೆಚ್ಚಿಸಲು ಈ ಆಹಾರ ಬೆಸ್ಟ್

First Published Feb 26, 2021, 3:15 PM IST

ಗರ್ಭಿಣಿಯಾಗುವುದು ಪ್ರತಿಯೊಬ್ಬ ಮಹಿಳೆಯ ಜೀವನದ ಅತ್ಯುತ್ತಮ ಘಟ್ಟವಾಗಿದೆ. ಆದರೆ ಒಂದು ವೇಳೆ ಏನಾದರೂ ಸಮಸ್ಯೆಯಾಗಿ ಗರ್ಭಪಾತವಾದರೆ ಅದರಿಂದ ಮಹಿಳೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಗರ್ಭಪಾತ ಅಥವಾ ಗರ್ಭಧಾರಣೆಯ ನಷ್ಟವು ಮಹಿಳೆಯರಲ್ಲಿ  ನಿಶ್ಯಕ್ತಿ ಮತ್ತು ಆಯಾಸದ ಭಾವನೆಗೆ ಕಾರಣವಾಗಬಹುದು. ಈ ಸಮಯದಲ್ಲಿ, ಪೌಷ್ಟಿಕತೆ ಬಹಳ ಮುಖ್ಯವಾಗುವುದರಿಂದ ಆರೋಗ್ಯಕರ ಆಹಾರ ಕ್ರಮವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.