ಹುಡುಗೀರು Googleನಲ್ಲಿ ಯಾವ ವಿಷ್ಯಾನ ಹೆಚ್ಚು ಸರ್ಚ್ ಮಾಡ್ತಾರೆ?
ಹುಡುಗಿಯರು ಗೂಗಲ್‌ನಲ್ಲಿ ವಿಭಿನ್ನ ವಿಷ್ಯಗಳನ್ನು ಹುಡುಕುವುದನ್ನು ನೋಡಿರಬಹುದು, ಆದರೆ ಅವರು ಏನನ್ನು ಹುಡುಕುತ್ತಿದ್ದಾರೆಂದು ಯಾರಿಗೂ ತಿಳಿದಿರೋದಿಲ್ಲ. ಆದರೆ ಆ ಬಗ್ಗೆ ತಿಳಿಯೋ ಇಂಟ್ರೆಸ್ಟ್ ಅಂತೂ ಎಲ್ಲರಿಗೂ ಇದ್ದೇ ಇರುತ್ತೆ. ಆದ್ದರಿಂದ ಹುಡುಗಿಯರು ಹೆಚ್ಚು ಹುಡುಕುವ ಐದು ವಿಷಯಗಳ ಬಗ್ಗೆ ನಾವು ಹೇಳುತ್ತೇವೆ.
ಗೂಗಲ್ ನಮ್ಮ ಜೀವನದ ಅವಿಭಾಜ್ಯ ಅಂಗ. ಅದಲ್ಲದೆ ನಾವು ನಮ್ಮ ಜೀವನವನ್ನು ಊಹಿಸಲೂ ಸಾಧ್ಯವಿಲ್ಲ. ಯಾವುದೇ ವಿಷಯದ ಮೇಲೆ ನಾವು ಮೊದಲು Google ಮಾಡುತ್ತೇವೆ. ಅದು ಕೆಲಸ, ಮನೆಗೆ ಸಂಬಂಧಿಸಿದ ಫ್ಯಾಷನ್, ಮಕ್ಕಳು ಅಥವಾ ಇತರ ಹಲವು ವಿಷಯಕ್ಕೆ ಸಂಬಂಧಿಸಿರುತ್ತೆ. ಹುಡುಗಿಯರು ತಮ್ಮ ಫೋನ್‌ಗಳು, ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳಲ್ಲಿ ಗೂಗಲ್‌ನಲ್ಲಿ ಹೆಚ್ಚು ಏನನ್ನು ಹುಡುಕುತ್ತಾರೆ ಎಂಬ ಪ್ರಶ್ನೆಯನ್ನು ಹೆಚ್ಚಿನ ಜನರಿಗೆ ಇದ್ದೇ ಇರುತ್ತೆ. ಆದ್ದರಿಂದ ಇಂದು ನಿಮ್ಮ ಗೊಂದಲವನ್ನು ನಿವಾರಿಸುತ್ತೇವೆ ಮತ್ತು ಈ ಗೂಗಲ್ ನಲ್ಲಿ ಯಾವ ಐದು ವಿಷ್ಯಗಳನ್ನು ಹುಡುಗಿಯರು ಹೆಚ್ಚು ಹುಡುಕುತ್ತಾರೆ ಅನ್ನೋದನ್ನು ತಿಳಿಸುತ್ತೇವೆ.
ಅಂಕಿಅಂಶಗಳು ಏನು ಹೇಳುತ್ತವೆ? (what report says)
ಒಂದು ವರದಿಯ ಪ್ರಕಾರ, ಭಾರತದಲ್ಲಿ 15 ಕೋಟಿ ಇಂಟರ್ನೆಟ್ ಬಳಕೆದಾರರು ಗೂಗಲ್ ಬಳಸುತ್ತಾರೆ. ಇದರಲ್ಲಿ 40% ಮಹಿಳೆಯರು, ಅವರು ಗೂಗಲ್‌ನಲ್ಲಿ ಸೌಂದರ್ಯ ಸಲಹೆಗಳಿಂದ (Beauty Tips) ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳವರೆಗೆ ಸಾಕಷ್ಟು ಹುಡುಕುತ್ತಾರೆ. ಅತಿ ಹೆಚ್ಚು ಸರ್ಚ್ ಮಾಡಲಾದ ಟಾಪ್ 5 ಗೂಗಲ್ ಸರ್ಚ್ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ.
ವೃತ್ತಿಜೀವನ (career life)
ವರದಿ ಪ್ರಕಾರ, ಹುಡುಗಿಯರು ತಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಗೂಗಲ್‌ನಲ್ಲಿ ಹುಡುಕುತ್ತಾರೆ. ಇದು ಅತ್ಯುತ್ತಮ ಕಾಲೇಜುಗಳು, ಅತ್ಯುತ್ತಮ ಕೋರ್ಸ್, ಪರೀಕ್ಷೆಗಳು, ಪರೀಕ್ಷೆಯ ಫಲಿತಾಂಶಗಳು, ಉದ್ಯೋಗಾವಕಾಶಗಳು, ಸರ್ಕಾರಿ ಉದ್ಯೋಗಗಳು ಇತ್ಯಾದಿಗಳ ಹೆಸರುಗಳನ್ನು ಒಳಗೊಂಡಿದೆ.
ಆನ್ ಲೈನ್ ಶಾಪಿಂಗ್ (online shopping)
ಆನ್ಲೈನ್ ಶಾಪಿಂಗ್ ಕೂಡ ಗೂಗಲ್ ಲಿಸ್ಟ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ವಿಷಯಗಳಲ್ಲಿ ಒಂದು. ಹುಡುಗಿಯರು ಶಾಪಿಂಗ್ ಅನ್ನು ಇಷ್ಟಪಡುತ್ತಾರೆ ಎಂದು ನಮಗೆಲ್ಲರಿಗೂ ತಿಳಿದಿದೆ ಮತ್ತು ಅವರು ತಮ್ಮ ಫೋನ್ Google ನಲ್ಲಿ ಹೆಚ್ಚು ಆನ್ ಲೈನ್ ಶಾಪಿಂಗ್‌ನಲ್ಲಿ ಮಾರಾಟ ಮತ್ತು ರಿಯಾಯಿತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹುಡುಕುತ್ತಾರೆ.
ಬ್ಯೂಟಿ ಟಿಪ್ಸ್ (beauty tips)
ಮಹಿಳೆಯರು ಸುಂದರವಾಗಿ ಕಾಣಲು, ಅಲಂಕರಿಸಲು ತುಂಬಾ ಇಷ್ಟಪಡುತ್ತಾರೆ. ಹಾಗಾಗಿ, ಗೂಗಲ್‌ನಲ್ಲಿ ಹೆಚ್ಚಿನ ಮಹಿಳೆಯರು ಬ್ಯೂಟಿ ಟಿಪ್ಸ್ ಹುಡುಕುತ್ತಾರೆ, ಇದರಲ್ಲಿ ಡಿ.ಐ.ವೈ. ಪ್ರಿಸ್ಕ್ರಿಪ್ಷನ್ಸ್, ಮನೆಯಲ್ಲಿ ವ್ಯಾಕ್ಸಿಂಗ್ ಮಾಡುವುದು ಹೇಗೆ ಮತ್ತು ಮುಖದ ಮೇಲೆ ಯಾವ ಗೃಹೋಪಯೋಗಿ ವಸ್ತುಗಳನ್ನು ಬಳಸಬೇಕು ಮೊದಲಾದ ಟಿಪ್ಸ್ ಸರ್ಚ್ ಮಾಡ್ತಾರೆ.
ಇತ್ತೀಚಿನ ಫ್ಯಾಷನ್ (fashion trend)
ಫ್ಯಾಷನ್ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇರುತ್ತದೆ. ಒಂದೊಂದು ಬಾರಿ ಒಂದೊಂದು ಫ್ಯಾಷನ್ ಟ್ರೆಂಡ್ ನಲ್ಲಿರುತ್ತೆ, ಅಂತಹ ಪರಿಸ್ಥಿತಿಯಲ್ಲಿ, ಹುಡುಗಿಯರು ತಮ್ಮ ಫೋನ್‌ಗಳಲ್ಲಿ ಫ್ಯಾಷನ್ ಟ್ರೆಂಡ್ಸ್ ಮತ್ತು ವಿನ್ಯಾಸಕ್ಕೆ ಸಂಬಂಧಿಸಿದ ಅನೇಕ ವೀಡಿಯೊಗಳನ್ನು ನೋಡುತ್ತಾರೆ. ಇದರಲ್ಲಿ ಉಡುಗೆ, ಮನೆ ಅಲಂಕಾರ, ರಂಗೋಲಿ ವಿನ್ಯಾಸ, ಮೆಹಂದಿ ವಿನ್ಯಾಸ, ಫ್ಯಾಷನ್ ಟಿಪ್ಸ್ ಇತ್ಯಾದಿಗಳು ಸೇರಿವೆ.
ರೊಮ್ಯಾಂಟಿಕ್ ಹಾಡುಗಳು (romantic songs)
ಹುಡುಗಿಯರ play list ನಲ್ಲಿ ರೊಮ್ಯಾಂಟಿಕ್ ಹಾಡುಗಳಿರುತ್ತವೆ. ಇದು ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟಿದೆ. ಇದರಲ್ಲಿ, ಹುಡುಗಿಯರು ಅರಿಜಿತ್ ಸಿಂಗ್ ರಿಂದ ಹಿಡಿದು ಶ್ರೇಯಾ ಘೋಷಾಲ್ ವರೆಗಿನ ಹಾಡುಗಳನ್ನು ಆಯ್ಕೆ ಮಾಡಿರೋದು ತಿಳಿದು ಬಂದಿದೆ.