ಗುಡಿಯೊಳಗೆ ದೇವರಿಲ್ಲ..ಈ ದೇವಾಲಯದಲ್ಲಿ ನಡೆಯುತ್ತೆ ಮಹಿಳೆಯ ಸ್ತನದ ಪೂಜೆ
ದೇವಾಲಯಗಳಲ್ಲಿ ಸಾಮಾನ್ಯವಾಗಿ ದೇವರ ವಿಗ್ರಹಗಳನ್ನಿಟ್ಟು ಪೂಜಿಸಲಾಗುತ್ತದೆ. ಇನ್ನು ಕೆಲವೆಡೆ ವಸ್ತುಗಳನ್ನು ಪೂಜಿಸುವುದೂ ಇದೆ. ಆದ್ರೆ ಜಪಾನಿನಲ್ಲಿ ಮಾತ್ರ ಇದೆಲ್ಲಕ್ಕಿಂತ ವಿಭಿನ್ನವಾಗಿ ಸ್ತನಗಳಿಗೆ ಪೂಜೆ ನಡೆಯುತ್ತದೆ. ಅರೆ. ಇದೇನ್ ವಿಚಿತ್ರ ಅನ್ಬೇಡಿ. ಇಲ್ಲಿದೆ ಹೆಚ್ಚಿನ ಮಾಹಿತಿ.
ಜಗತ್ತಿನಾದ್ಯಂತ ಹಲವು ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ತನ್ನದೇ ಆದ ಮಹತ್ವ ಹೊಂದಿದೆ. ದೇವಸ್ಥಾನಗಳು ಆರಂಭವಾದ ರೀತಿ, ಅಲ್ಲಿನ ಹಿನ್ನಲೆ, ಸಂಪ್ರದಾಯ ಅಚ್ಚರಿ ಹುಟ್ಟಿಸುವಂತಿರುತ್ತದೆ. ಕೆಲವು ದೇವಾಲಯಗಳು ನಿರ್ಧಿಷ್ಟ ವಿಚಾರಕ್ಕೆಂದೇ ಪೂಜೆ ಸಲ್ಲಿಸಲು ಹೆಸರುವಾಸಿಯಾಗಿರುತ್ತದೆ. ಹಾಗೆಯೇ ಜಪಾನಿನಲ್ಲಿ ವಿಭಿನ್ನ ದೇವಾಲಯವೊಂದಿದೆ
ಇಲ್ಲಿ ಯಾವುದೇ ದೇವರಿಗೆ ಪೂಜೆ ನಡೆಯುವುದಿಲ್ಲ. ಬದಲಿಗೆ ಮಹಿಳೆಯರ ಸ್ತನಗಳಿಗೆ ಪೂಜೆ ನಡೆಯುತ್ತದೆ. ಈ ದೇವಾಲಯವು ಸಂಪೂರ್ಣವಾಗಿ ಮಹಿಳೆಯರ ಯೋಗಕ್ಷೇಮ ಮತ್ತು ಆರೋಗ್ಯಕ್ಕೆ ಸಮರ್ಪಿತವಾಗಿದೆ. ಸ್ತ್ರೀ ಸ್ತನಗಳನ್ನು ಪೂಜಿಸುವ ಆಚರಣೆ ಇಲ್ಲಿದೆ. ದೇವಸ್ಥಾನದ ಸುತ್ತ ಮುತ್ತ ಮಹಿಳೆಯರ ಸ್ತನಗಳ ಆಕಾರಗಳು ಕಾಣಸಿಗುತ್ತವೆ.
ಜಪಾನಿನ ಸ್ತನ ದೇವಾಲಯ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಸ್ತನ ಕ್ಯಾನ್ಸರ್ ನಿಂದ ಮಹಿಳೆಯನ್ನು ರಕ್ಷಿಸಲು ಇಲ್ಲಿ ಸ್ತನದ ಪೂಜೆ ನಡೆಯುತ್ತದೆ. ಹತ್ತಿ ಹಾಗೂ ಬಟ್ಟೆಯಿಂದ ಮಾಡಿದ ಸ್ತನಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ದೇವಾಲಯಕ್ಕೆ ದೂರ ದೂರುಗಳಿಂದ ಬರುವ ಮಹಿಳೆಯರು, ಸ್ತನ ಕ್ಯಾನ್ಸರ್ ನಿಂದ ಮುಕ್ತಿ ಹೊಂದಲು ಹಾಗೂ ಸುರಕ್ಷಿತ ಗರ್ಭಧಾರಣೆಗಾಗಿ ಇಲ್ಲಿಗೆ ಆಗಮಿಸಿ ಪೂಜೆ ಮಾಡ್ತಾರೆ.
ಜಪಾನಿನ ವೈದ್ಯರೊಬ್ಬರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೋಗಿಯನ್ನು ರಕ್ಷಿಸುವಂತೆ ಇಲ್ಲಿ ಹರಕೆ ಹೊತ್ತಿದ್ದರಂತೆ. ಆ ನಂತರದ ದಿನಗಳಲ್ಲಿ ರೋಗಿಗೆ ಸ್ತನ ಕ್ಯಾನ್ಸರ್ ಗುಣವಾಯ್ತಂತೆ. ಅಲ್ಲಿಂದ ಈ ದೇವಸ್ಥಾನ ಹೆಚ್ಚು ಪ್ರಸಿದ್ಧಿ ಪಡೆದಿದೆ. ಹರಕೆ ಹೊತ್ತುಕೊಳ್ಳುವ ಮಹಿಳೆಯರು ನಂತ್ರ ಬಂದು ನಕಲಿ ಸ್ತನವನ್ನು ಇಲ್ಲಿಟ್ಟು ಹೋಗ್ತಾರೆ.
ದೇವಾಲಯದ ಮೈದಾನವು ಬಟ್ಟೆಯಿಂದ ಮಾಡಿದ ವಿವಿಧ ಗಾತ್ರದ ಸ್ತನಗಳಿಂದ ತುಂಬಿದೆ ಮತ್ತು ಬೆಡಝ್ಡ್ ಮೊಲೆತೊಟ್ಟುಗಳು ಅಥವಾ ಸ್ತನಗಳನ್ನು ಚಿತ್ರಿಸಲು ಗುಡ್ಡಗಳನ್ನು ಚಿತ್ರಿಸಿದ ಮರದ ಹಲಗೆಗಳಿಂದ ತುಂಬಿದೆ. ದೇವಸ್ಥಾನದ ಮುಖ್ಯ ಮೂರ್ತಿಯಿಂದ ಹಿಡಿದು ಪ್ರತಿಯೊಂದೂ ಇಲ್ಲಿ ಸ್ತನದ ಆಕಾರದಲ್ಲಿದೆ.
ಈ ದೇವಾಲಯವನ್ನು ಮೂಲತಃ 1492ರಲ್ಲಿ ಮೌಂಟ್ ಕೊಮಾಕಿಯಲ್ಲಿ ಸ್ಥಾಪಿಸಲಾಯಿತು. ಬಳಿಕ, 16ನೇ ಶತಮಾನದಲ್ಲಿ ಸಮುರಾಯ್ ಲಾರ್ಡ್ ಓಡಾ ನೊಬುನಾಗಾ ಅವರ ಆದೇಶದ ಮೇರೆಗೆ ದೇವಾಲಯವನ್ನು ಇಂದು ಇರುವ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿಂದ ಈ ದೇವಾಲಯ ಮಮ್ಮಾ ಕಣ್ಣೋನ್ ಎಂದು ಕರೆಯಲ್ಪಡುತ್ತದೆ.
1665ರಲ್ಲಿ, ಸ್ತನ್ಯಪಾನ ಮಾಡಲು ಸಾಧ್ಯವಾಗದ ಮಹಿಳೆಯೊಬ್ಬರು ದೇವಾಲಯದಲ್ಲಿ ಪ್ರಾರ್ಥಿಸಿದರು ಎಂದು ನಂಬಲಾಗಿದೆ. ಅವರ ಭೇಟಿಯ ನಂತರ, ಅವರು ತಮ್ಮ ಮಗುವಿಗೆ ಹಾಲುಣಿಸಲು ಮತ್ತು ಆಹಾರವನ್ನು ನೀಡಲು ಸಾಧ್ಯವಾಯಿತು.