ಬ್ಯೂಟಿಫುಲ್, ಕ್ಯೂಟ್ ಅನ್ನೋದೆಲ್ಲಾ ಬಿಟ್ಬಿಡಿ, ಹುಡುಗೀರು ಎಂಥಾ ಕಾಂಪ್ಲಿಮೆಂಟ್‌ಗೆ ಬೇಗ ಫಿದಾ ಆಗ್ತಾರೆ ತಿಳ್ಕೊಳ್ಳಿ
ಇತ್ತೀಚಿನ ವರ್ಷಗಳಲ್ಲಿ ಡೇಟಿಂಗ್ ಆಪ್‌ಗಳ ಬಳಕೆ ಹೆಚ್ಚಾಗಿದೆ. ಯುವಜನತೆ ಈ ಆಪ್‌ಗಳ ಮೂಲಕವೇ ತಮ್ಮ ಸಂಗಾತಿಯನ್ನು ಹುಡುಕಿಕೊಳ್ತಾರೆ. ಆದರೆ ಕೆಲವೊಬ್ಬರು ಏನ್ ಮಾಡಿದ್ರೂ ಯಾವ ಹುಡುಗೀನೂ ಇಷ್ಟಪಡಲ್ಲಾಪ್ಪ ಅಂತ ಬೇಜಾರು ಪಟ್ಕೊಳ್ತಾರೆ. ಅಂಥವರು ಹುಡುಗರು, ಯಾವ ರೀತಿಯ ಕಾಂಪ್ಲಿಮೆಂಟ್ ಕೇಳೋಕೆ ಹುಡುಗೀರು ಇಷ್ಟಪಡ್ತಾರೆ ಮೊದಲು ತಿಳ್ಳೊಳ್ಳಿ.
ಭಾರತದಲ್ಲಿ ಸದ್ಯ ಆರೇಂಜ್ಡ್ ಮ್ಯಾರೇಜ್‌ಗಿಂತಲೂ ಲವ್ ಮ್ಯಾರೇಜ್‌ಗಳ ಸಂಖ್ಯೆ ಹೆಚ್ಚಾಗ್ತಿದೆ. ಸಂಗಾತಿಗಳನ್ನು ಹುಡುಕಲು ಯುವಜನತೆ ಡೇಟಿಂಗ್ ಆಪ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದ್ರೆ ಇಲ್ಲೂ ಕೆಲವೊಬ್ಬರಿಗೆ ಹುಡುಗಿಯರನ್ನು ಇಂಪ್ರೆಸ್ ಮಾಡಿ ಸೂಕ್ತ ಸಂಗಾತಿಯನ್ನು ಹುಡುಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಇತ್ತೀಚಿಗೆ ನಡೆದ ಸಮೀಕ್ಷೆಯೊಂದು ಹುಡುಗಿಯರು ಡೇಟಿಂಗ್ ಫ್ಲಾಟ್‌ಫಾರ್ಮ್‌ನಲ್ಲಿ ಯಾವ ರೀತಿಯ ಅಭಿನಂದನೆಯನ್ನು ಕೇಳಲು ಬಯಸ್ತಾರೆ ಅನ್ನೋದನ್ನು ಬಹಿರಂಗಪಡಿಸಿದೆ.
ಬಂಬಲ್ ಆಪ್ ಇತ್ತೀಚಿಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಆನ್‌ಲೈನ್‌ನಲ್ಲಿ ಡೇಟಿಂಗ್ ಮಾಡುವವರ ಪೈಕಿ ಬಹುತೇಕರು ಲುಕ್‌ಗಿಂತ ಗುಣಸ್ವಭಾವಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಹುಡುಗ, ಹುಡುಗಿ ಇಬ್ಬರೂ ಸಹ ಸರಳ ಸ್ವಭಾವದ ಸಂಗಾತಿಯನ್ನು ಹುಡುಕುತ್ತಿದ್ದಾರೆ. ಹೀಗಾಗಿಯೇ ಡೇಟಿಂಗ್ ಆಪ್‌ನಲ್ಲಿ ಪರಸ್ಪರ ಕಾಂಪ್ಲಿಮೆಂಟ್ ನೀಡುವುದು ಅತ್ಯುತ್ತಮ ಗುಣ ಎಂದು ಕಂಡುಕೊಂಡಿದ್ದಾರೆ.
ಅದರಲ್ಲೂ ಡೇಟಿಂಗ್ ಆಪ್‌ನ ಶೇಕಡಾ 88ರಷ್ಟು ಮಂದಿ ಮಹಿಳೆಯರು, ಆನ್‌ಲೈನ್ ಡೇಟಿಂಗ್ ಪ್ಲಾಟ್‌ಫಾರ್ಮ್ ಸರಿಯಾದ ವ್ಯಕ್ತಿಯಿಂದ ಸರಿಯಾದ ರೀತಿಯಲ್ಲಿ ಕಾಂಪ್ಲಿಮೆಂಟ್ ಪಡೆಯುವುದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಒಪ್ಪಿಕೊಂಡಿದ್ದಾರೆ. ಅದರಲ್ಲಿ 44 ಶೇಕಡಾ ಮಂದಿ ನಿಜವಾದ ಕಾಂಪ್ಲಿಮೆಂಟ್ ಹೇಗಿರುತ್ತದೆ ತಿಳಿದಿಲ್ಲ ಎಂದಿದ್ದಾರೆ.
ಸಮೀಕ್ಷೆಯಲ್ಲಿ ನಿಜವಾಗಿಯೂ ಮಹಿಳೆಯರು ಯಾವ ರೀತಿಯ ಕಾಂಪ್ಲಿಮೆಂಟ್‌ನ್ನು ಇಷ್ಟಪಡುತ್ತಾರೆ ಎಂಬುದನ್ನು ಸಹ ವಿವರಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಐದು ವಿಚಾರಗಳನ್ನು ಪಟ್ಟಿ ಮಾಡಲಾಗಿದೆ. ಮಹಿಳೆಯರು ವ್ಯಕ್ತಿತ್ವ (61%) ನೈತಿಕ ಮೌಲ್ಯಗಳು (58%) ಜ್ಞಾನ ತಮಾಷೆಯ ಸ್ವಭಾವ (56%) ಉತ್ತಮ ಹವ್ಯಾಸ (55%)ಗಳನ್ನು ಇಷ್ಟಪಡುತ್ತಾರೆ ಎಂದ ಸರ್ವೇಯಲ್ಲಿ ವಿವರಿಸಲಾಗಿದೆ.
ಆದರೆ ಕೆಲವೊಂದು ಸಂದರ್ಭದಲ್ಲಿ ಕೆಲವು ಕಾಂಪ್ಲಿಮೆಂಟ್ ವರ್ಕೌಟ್ ಆಗುವುದಿಲ್ಲ ಎಂದು ಸಹ ಬಂಬಲ್‌ನ ರಿಲೇಶನ್ ಶಿಪ್ ಎಕ್ಸ್‌ಪರ್ಟ್ ರುಚಿ ರೂಹ್ ವಿವರಿಸಿದ್ದಾರೆ. ಬದಲಿಗೆ ಡೇಟಿಂಗ್ ಆಪ್‌ನಲ್ಲಿ ಹೆಣ್ಣುಮಕ್ಕಳಿಗೆ ಯಾವ ರೀತಿಯ ಕಾಂಪ್ಲಿಮೆಂಟ್ ಇಷ್ಟವಾಗುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ.
ಹೊರ ನೋಟ ಮಾತ್ರವಲ್ಲ ಗುಣವನ್ನು ಮೆಚ್ಚಿ
ಸಾಮಾನ್ಯವಾಗಿ ಹುಡುಗರು, ಹುಡುಗಿಯರ ಬಳಿ ಯು ಆರ್ ಲುಕ್ಕಿಂಗ್ ಗುಡ್, ಕ್ಯೂಟ್ ಅಂತೆಲ್ಲಾ ಕಾಂಪ್ಲಿಮೆಂಟ್ ನೀಡೋದು ಸಾಮಾನ್ಯ.ಆದ್ರೆ ಇದನ್ನು ಹೊರತುಪಡಿಸಿ ಅವರ ಗುಣ, ಸ್ವಭಾವಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ. ಇದು ಹುಡುಗಿಯರಿಗೆ ಹೆಚ್ಚು ಇಷ್ಟವಾಗುತ್ತದೆ ಅನ್ನುತ್ತದೆ ಸಮೀಕ್ಷೆ.
ನಿರ್ಧಿಷ್ಟ ವಿಷಯದ ಬಗ್ಗೆ ಹೊಗಳಿ
ಯಾವಾಗಲೂ ಒಂದು ನಿರ್ಧಿಷ್ಟ ವಿಷಯದ ಬಗ್ಗೆ ಹೊಗಳುವುದು ಹುಡುಗಿಯರಿಗೆ ಹೆಚ್ಚು ಖುಷಿ ನೀಡುತ್ತದೆ. ಉದಾಹರಣೆಗೆ, ನಿಮ್ಮ ರೈಟಿಂಗ್ ಸ್ಟೈಲ್ ಚೆನ್ನಾಗಿದೆ, ನಿಮ್ಮ ನಾಲೆಡ್ಜ್ ಮೆಚ್ಚುವಂತದ್ದು ಎಂದು ಹೇಳಿದಾಗ ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ ಎಂದು ತಿಳಿಸಲಾಗಿದೆ.
ಗೌರವ ನೀಡುವುದು
ಹುಡುಗಿಯರು ಯಾವಾಗಲೂ ಹುಡುಗರು ತಮಗೆ ಗೌರವ ನೀಡುವುದನ್ನು ಇಷ್ಟಪಡುತ್ತಾರೆ. ಗೌರವಯುತವಾಗಿ ಹೊಗಳುವುದು ಮನಸ್ಸಿಗೆ ಇಷ್ಟವಾಗುತ್ತದೆ. ಬದಲಾಗಿ ಹಾಟ್, ಸಖತ್ತಾಗಿ ಕಾಣಿಸ್ತೀರಿ ಎಂದು ಹೇಳುವುದನ್ನು ಹುಡುಗಿಯರು ಹೆಚ್ಚು ಇಷ್ಟಪಡುವುದಿಲ್ಲ ಎಂದು ಬಂಬಲ್ ಆಪ್‌ನ ಸರ್ವೇ ಹೇಳುತ್ತದೆ.