ಬಿರುಕು ಬಿಟ್ಟ ಹಿಮ್ಮಡಿಗೆ ಸರಳ ಮನೆ ಮದ್ದುಗಳು
ಕಾಲ ಯಾವುದೇ ಇರಲಿ, ಪಾದಗಳ ಹಿಮ್ಮಡಿ ಬಿರುಕು ಬಿಡುವುದು ಸಾಮಾನ್ಯ. ಚಳಿಗಾಲದಲ್ಲಿ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಹಾಗಂತ ಬೇಸಿಗೆ ಕಾಲದಲ್ಲಿ ಇಲ್ಲ ಎಂದು ಹೇಳಲಾಗುವುದಿಲ್ಲ. ಬೇಸಿಗೆಯಲ್ಲೂ ಹಿಮ್ಮಡಿ ಬಿರುಕು ಬಿಡುತ್ತದೆ. ಈ ಸಂದರ್ಭದಲ್ಲಿ ಮನೆಯಲ್ಲಿಯೇ ಸುಲಭವಾಗಿ ಸಮಸ್ಯೆ ನಿವಾರಣೆ ಮಾಡಬಹುದು. ಅದು ಹೇಗೆ ಅನ್ನೋದನ್ನು ತಿಳಿಯಿರಿ....
ಆಲಿವ್ ಎಣ್ಣೆ
ಆಲಿವ್ ಎಣ್ಣೆಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳಿವೆ. ಇದನ್ನು ಪ್ರತಿದಿನ ಹಚ್ಚಿಕೊಂಡಾಗ ಪಾದಗಳಿಗೆ ಸುಂದರವಾದ ಲುಕ್ ನೀಡುತ್ತದೆ.
ಮೌತ್ ವಾಶ್
ಹೌದು, ಮೌತ್ ವಾಶ್ ಒಡೆದ ಹಿಮ್ಮಡಿಗಳನ್ನು ಗುಣಪಡಿಸಬಲ್ಲದು!! ಮೌತ್ ವಾಶ್‌ನಲ್ಲಿರುವ ಅಂಶಗಳು ಬ್ಯಾಕ್ಟೀರಿಯಾಗಳನ್ನು ಕೊಂದು, ಒಣ ಚರ್ಮವನ್ನು ತೇವಗೊಳಿಸುತ್ತದೆ. ಹಿಮ್ಮಡಿಗಳನ್ನು ಒಂದು ಭಾಗ ಮೌತ್ ವಾಶ್ ಮತ್ತು ಎರಡು ಭಾಗನೀರಿನಲ್ಲಿ 15 ನಿಮಿಷ ಅದ್ದಿ. ಇದರಿಂದ ಹಿಮ್ಮಡಿ ಸಮಸ್ಯೆ ನಿವಾರಣೆಯಾಗುತ್ತದೆ.
ಜೇನು
ಜೇನು ನೈಸರ್ಗಿಕ ಆಂಟಿ ಮೈಕ್ರೋಬಿಯಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಆದ್ದರಿಂದ ಬಿರುಕು ಬಿಟ್ಟ ಹಿಮ್ಮಡಿಗಳಿಗೆ ಇದು ಅತ್ಯುತ್ತಮವಾದ ಮಾಯಿಶ್ಚರೈಸರ್ ಆಗಿದೆ. ಹಿಮ್ಮಡಿಗೆ ಸ್ವಲ್ಪ ಜೇನು ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ.
ಶೀಯಾ ಬೆಣ್ಣೆ
ಶೀಯಾ ಬೆಣ್ಣೆಗಿಂತ ಉತ್ತಮ ಮಾಯಿಶ್ಚರೈಸರ್ ಇಲ್ಲ, ಹಸಿ ಶೀಯಾ ಬೆಣ್ಣೆ ಸಿಗಲು ಸಾಧ್ಯವಿಲ್ಲದಿದ್ದರೆ, ಹಿಮ್ಮಡಿಗಳಿಗೆ ಶೀಯಾ ಬಟರ್ ಆಧಾರಿತ ಕ್ರೀಮ್ ಅನ್ನು ಆಯ್ಕೆ ಮಾಡಿ.
ತೆಂಗಿನ ಎಣ್ಣೆ
ಒಣ ಚರ್ಮದ ನಿವಾರಣೆಗೆ ತೆಂಗಿನಎಣ್ಣೆ ಉತ್ತಮ. ಮಲಗುವ ಮುನ್ನ ತೆಂಗಿನಎಣ್ಣೆಯನ್ನು ಒಡೆದ ಹಿಮ್ಮಡಿಗಳ ಮೇಲೆ ಹಚ್ಚಿ.
ಓಟ್ ಮೀಲ್ ಮತ್ತು ಹಾಲು
ವಾರಕ್ಕೊಮ್ಮೆ ಓಟ್ ಮೀಲ್ ಮತ್ತು ಹಾಲಿನ ಮಿಶ್ರಣದಿಂದ ಹಿಮ್ಮಡಿಗಳನ್ನು ಸ್ಕ್ರಬ್ ಮಾಡಿ ಮತ್ತು ಗಮನಾರ್ಹವಾದ ವ್ಯತ್ಯಾಸವನ್ನು ಕಾಣುತ್ತೀರಿ.
ವಿನೆಗರ್
ಬಿರುಕು ಬಿಟ್ಟ ಹಿಮ್ಮಡಿಗಳು ಶಿಲೀಂಧ್ರದ ಸೋಂಕಿನಿಂದ ಉಂಟಾದರೆ, ವಿನೆಗರ್‌ನಲ್ಲಿ ಪಾದವನ್ನು ನೆನೆಸಿದರೆ ಉತ್ತಮ.
ಓಟ್ ಮೀಲ್ ಮತ್ತು ಹಾಲು
ವಾರಕ್ಕೊಮ್ಮೆ ಓಟ್ ಮೀಲ್ ಮತ್ತು ಹಾಲಿನ ಮಿಶ್ರಣದಿಂದ ಹಿಮ್ಮಡಿಗಳನ್ನು ಸ್ಕ್ರಬ್ ಮಾಡಿ ಮತ್ತು ಗಮನಾರ್ಹವಾದ ವ್ಯತ್ಯಾಸವನ್ನು ಕಾಣುತ್ತೀರಿ.
ಬಾಳೆಹಣ್ಣು
ಬಾಳೆಹಣ್ಣನ್ನು ಇದ್ದರೆ, ಅವುಗಳನ್ನು ಹಿಮ್ಮಡಿಯ ಮಾಯಿಸ್ಚರೈಸ್ ಮಾಡಲು ಬಳಸಬಹುದು. ಬಾಳೆಹಣ್ಣು ಆರಿಹೋಗುವವರೆಗೆ ಹಾಗೆಯೇ ಬಿಟ್ಟು ನಂತರ ತೊಳೆಯಿರಿ.
ಪಪ್ಪಾಯಿ ಪ್ಯಾಕ್
ಸ್ವಲ್ಪ ಉಳಿದ ಪಪ್ಪಾಯಿಯನ್ನು ತೆಗೆದುಕೊಂಡು ಅದನ್ನು ಮ್ಯಾಶ್ ಮಾಡಿ ಬಾಧಿತ ಪ್ರದೇಶಕ್ಕೆ ಹಚ್ಚಿ. ಒಣಗಿದ ನಂತರ ತೊಳೆಯಿರಿ.ಇದು ಒಡೆದ ಹಿಮ್ಮಡಿಗಳನ್ನು ಗುಣಪಡಿಸಬಹುದು.