ಮಹಿಳೆಯರು ಪುರುಷರಿಗೆ ಹೇಳುವ 7 ಸಿಹಿ ಸುಳ್ಳುಗಳು
ಮಹಿಳೆಯರು ತಮ್ಮ ಪುರುಷ ಸಂಗಾತಿಗೆ ಕೆಲವೊಂದು ಸಿಹಿ ಸುಳ್ಳುಗಳನ್ನು ಹೇಳುತ್ತಾರೆ. ಬಹುತೇಕ ಎಲ್ಲಾ ಮಹಿಳೆಯರು ಕೆಲವೊಂದು ವಿಚಾರಗಳನ್ನು ಗುಟ್ಟು ಮಾಡುತ್ತಾರೆ. ಈ ಲೇಖನದಲ್ಲಿ ಆ ಏಳು ಸುಳ್ಳುಗಳ ಬಗ್ಗೆ ತಿಳಿಸಲಾಗಿದೆ.

ಮಹಿಳೆಯರು ತಮ್ಮ ಪುರುಷ ಸಂಗಾತಿಗೆ ಕೆಲವೊಂದು ಸಿಹಿ ಸುಳ್ಳುಗಳನ್ನು ಹೇಳುತ್ತಾರೆ. ಬಹುತೇಕ ಎಲ್ಲಾ ಮಹಿಳೆಯರು ಕೆಲವೊಂದು ವಿಚಾರಗಳನ್ನು ಗುಟ್ಟು ಮಾಡುತ್ತಾರೆ. ಆ ಏಳು ಸುಳ್ಳುಗಳು ಏನೆಂದು ನೋಡೋಣ ಬನ್ನಿ.
ಸುಳ್ಳು 1
ಮಹಿಳೆಯರು ಎಂದಿಗೂ ಶಾಪಿಂಗ್ ಮಾಡುವಾಗ ಎಷ್ಟು ಹಣ ಖರ್ಚು ಮಾಡಿದ್ದೇವೆ ಎಂಬುದನ್ನು ಯಾರಿಗೂ ಹೇಳಲ್ಲ. ಅದರಲ್ಲಿಯೂ ಗಂಡಂದಿರಿಗೆ ಈ ವಿಷಯದ ಬಗ್ಗೆ ಸುಳ್ಳು ಹೇಳುತ್ತಿರುತ್ತಾರೆ. ಹೇಳಿದರೂ ಕಡಿಮೆ ಅಥವಾ ಹೆಚ್ಚು ಬೆಲೆ ಹೇಳುತ್ತಾರೆ. ಹಣ ಉಳಿಸಿಕೊಳ್ಳುವ ಉದ್ದೇಶದಿಂದ ಈ ಸುಳ್ಳು ಹೇಳುತ್ತಾರೆ.
ಸುಳ್ಳು 2
ಮಹಿಳೆಯರು ಯಾವಾಗಲೂ ಇತರರಿಗಿಂತಲೂ ಸುಂದರವಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಹಾಗಾಗಿ ಯಾರ ಮುಂದೆಯೂ ಅದರಲ್ಲಿ ಪುರುಷರ ಮುಂದೆ ತಮ್ಮ ತೂಕ ಎಷ್ಟಿದೆ ಎಂಬುದನ್ನು ಹೇಳಲ್ಲ. ಸಾಮಾನ್ಯ ತೂಕಗಿಂತ ಕಡಿಮೆ ಹೇಳುವವರ ಸಂಖ್ಯೆ ಹೆಚ್ಚಾಗಿರುತ್ತದೆ.
ಸುಳ್ಳು 3
ಗಂಡಿನ ಸಂಬಳ, ಹೆಣ್ಣಿನ ವಯಸ್ಸು ಕೇಳಬಾರದು ಎಂಬ ಮಾತಿದೆ. ಈ ಮಾತಿನಂತೆ ಮಹಿಳೆಯರು ತಮ್ಮ ವಯಸ್ಸು ಮತ್ತು ಹುಟ್ಟಿದ ವರ್ಷ ಯಾವುದು ಎಂಬುದನ್ನು ಬಿಟ್ಟುಕೊಡಲ್ಲ. ಅತ್ಯಾಪ್ತರ ಬಳಿಯಲ್ಲಿಯೂ ನಿಖರವಾದ ವಯಸ್ಸನ್ನು ಮರೆಮಾಡುತ್ತಾರೆ.
ಸುಳ್ಳು 4
ಕೆಲ ಯುವತಿಯರು ರಿಲೇಶನ್‌ಶಿಪ್‌ನಲ್ಲಿದ್ರೂ ಆ ವಿಷಯವನ್ನು ಅತ್ಯಂತ ರಹಸ್ಯವಾಗಿಡಲು ಪ್ರಯತ್ನಿಸುತ್ತಾರೆ. ಮದುವೆಗೂ ಮುಂಚಿನ ಮೊದಲ ಪ್ರೇಮದ ಬಗ್ಗೆಯೂ ಯಾರ ಬಳಿಯೂ ಹಂಚಿಕೊಳ್ಳಲ್ಲ. ಆದ್ರೆ ಪುರುಷರು ತಮ್ಮ ಮೊದಲ ಪ್ರೀತಿಯ ವಿಷಯವನ್ನು ಅತ್ಯಂತ ಪ್ರೀತಿಯಿಂದಲೇ ಹೇಳಿಕೊಳ್ಳುತ್ತಿರುತ್ತಾರೆ.
ಸುಳ್ಳು 5
ಸರಿಯಾದ ಸಮಯಕ್ಕೆ ಬರುತ್ತೇನೆ ಎಂಬ ಸುಳ್ಳನ್ನು ಮಹಿಳೆಯರು ಸಾಮನ್ಯವಾಗಿ ಹೇಳುತ್ತಿರುತ್ತಾರೆ. ಈ ವಿಷಯದಲ್ಲಿ ಪುರುಷರು ಪ್ರಾಮಾಣಿಕರಾಗಿರುತ್ತಾರೆ. ಸಮಯದ ವಿಚಾರದಲ್ಲಿಯೂ ಮಹಿಳೆಯರು ತಮ್ಮದೇ ಆದ ಕೆಲವು ಕಾರಣಗಳಿಂದ ಈ ಮಾತನ್ನು ಉಳಿಸಿಕೊಳ್ಳಲು ವಿಫಲರಾಗುತ್ತಾರೆ.
ಸುಳ್ಳು 6
ಇನ್ನು ಮಹಿಳೆಯರು ತಾವು ಎಲ್ಲಿದ್ದೇವೆ ಎಂಬುದನ್ನು ನಿಖರವಾಗಿ ಹೇಳಲ್ಲ ಎಂಬ ಮಾತಿದೆ. ಅದರಲ್ಲಿಯೂ ವಿಶೇಷವಾಗಿ ಯುವತಿಯರು ತಾವು ಎಲ್ಲಿ ಹೋಗುತ್ತಿದ್ದೇವೆ ಎಂಬುದರ ಬಗ್ಗೆ ಸಣ್ಣದಾದ ಸುಳ್ಳನ್ನು ಹೇಳುತ್ತಿರುತ್ತಾರೆ.
ಸುಳ್ಳು 7
ಮಹಿಳೆಯರು ತಮ್ಮ ಆರೋಗ್ಯದ ವಿಚಾರಗಳನ್ನು ಭಾಗಶಃ ಮರೆಮಾಡುತ್ತಾರೆ. ಅನಾರೋಗ್ಯದಿಂದ ಬಳಲುತ್ತಿದ್ದರೂ ಚೆನ್ನಾಗಿಯೇ ಇದ್ದೇವೆ ಎಂದು ಎಲ್ಲರಿಗೂ ಹೇಳುತ್ತಿರುತ್ತಾರೆ. ಹಾಗೆಯೇ ಮಹಿಳೆಯರು ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಹಿಂದೇಟು ಹಾಕಿದ್ದಾರೆ.
Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರೋ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣನ್ಯೂಸ್ ದೃಢೀಕರಿಸುವುದಿಲ್ಲ.