ಹಲ್ಲಿಗಳನ್ನ ಬಹಳ ಸುಲಭವಾಗಿ ಓಡಿಸೋದು ಹೇಗೆ?, ಜಸ್ಟ್ 1 ರೂ. ಟ್ರಿಕ್ಸ್ ಬಳಸಿ ಸಾಕು!
ಹಲ್ಲಿಗಳನ್ನ ಓಡಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಸ್ಪ್ರೇಗಳನ್ನು ಬಳಸಲು ಅನೇಕ ಜನರು ಇಷ್ಟಪಡುವುದಿಲ್ಲ. ಏಕೆಂದರೆ ಅವು ಆರೋಗ್ಯಕ್ಕೆ ಹಾನಿಕಾರಕ. ಆದರೆ ಈ ಸಮಸ್ಯೆಗೆ ನೈಸರ್ಗಿಕ, ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರಗಳೂ ಇವೆ.

ಮಳೆಗಾಲ ಬಂದ್ರೆ ಹಲ್ಲಿಗಳ ಸಮಸ್ಯೆ ಅನೇಕ ಮನೆಗಳಲ್ಲಿ ಸಾಮಾನ್ಯ. ಗೋಡೆಗಳ ಮೇಲೆ ಮತ್ತು ಮೂಲೆ ಮೂಲೆಗಳಲ್ಲಿ ಕಂಡುಬರುವ ಹಲ್ಲಿಗಳು ಕೆಲವರಿಗೆ ಭಯಾನಕ ಮತ್ತು ಅಸಹ್ಯಕರವಾಗಿ ಕಾಣಿಸುತ್ತವೆ. ಹಲ್ಲಿಗಳನ್ನ ಓಡಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಸ್ಪ್ರೇಗಳನ್ನು ಬಳಸಲು ಅನೇಕ ಜನರು ಇಷ್ಟಪಡುವುದಿಲ್ಲ. ಏಕೆಂದರೆ ಅವು ಆರೋಗ್ಯಕ್ಕೆ ಹಾನಿಕಾರಕ. ಆದರೆ ಈ ಸಮಸ್ಯೆಗೆ ನೈಸರ್ಗಿಕ, ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರಗಳೂ ಇವೆ. ಕೇವಲ 1 ರೂ.ವೆಚ್ಚದಲ್ಲಿ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ಮಿಶ್ರಣದಿಂದ ಹಲ್ಲಿಗಳನ್ನು ಆರಾಮಾಗಿ ಓಡಿಸಬಹುದು.
ಅಂದಹಾಗೆ ಈ ನೈಸರ್ಗಿಕ ಪರಿಹಾರಕ್ಕೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಮೂರು ಪದಾರ್ಥಗಳು ಬೇಕಾಗುತ್ತವೆ. ಅವುಗಳೆಂದರೆ ಮೊದಲನೆಯದಾಗಿ ಬೆಳ್ಳುಳ್ಳಿ ಮತ್ತು ಈರುಳ್ಳಿ. ಈ ಎರಡರ ಕಟುವಾದ ವಾಸನೆಯನ್ನು ಹಲ್ಲಿಗಳು ಇಷ್ಟಪಡುವುದಿಲ್ಲ. ಹಲ್ಲಿಗಳನ್ನು ದೂರವಿಡಲು ಇದು ಮೊದಲ ಮತ್ತು ಮುಖ್ಯ ಆಯುಧವಾಗಿದೆ. ಇನ್ನು ಲವಂಗ. ಇದರ ಕಟುವಾದ ವಾಸನೆಯು ಹಲ್ಲಿಗಳಿಗೆ ಚೂರು ಇಷ್ಟವಾಗಲ್ಲ. ಮೂರನೆಯದು ಶಾಂಪೂ. ಇದು ಮಿಶ್ರಣವನ್ನ ತಯಾರಿಸಿದಾಗ ಗೋಡೆಗಳಿಗೆ ಅಂಟಿಕೊಳ್ಳುವಂತೆ ಮಾಡಲು ಸಹಾಯ ಮಾಡುತ್ತದೆ. ಹೇಗೆಂದು ತಿಳಿಯಲು ಮುಂದೆನ ಓದಿ..
ಈ ಮಿಶ್ರಣವನ್ನು ತಯಾರಿಸಲು ಮೊದಲು, 4-5 ಬೆಳ್ಳುಳ್ಳಿ ಎಸಳು ಮತ್ತು ಒಂದು ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಸ್ವಲ್ಪ ನೀರು ಸೇರಿಸಿ ಮಿಕ್ಸರ್‌ನಲ್ಲಿ ನಯವಾದ ಪೇಸ್ಟ್ ಮಾಡಿ. ಬೆಳ್ಳುಳ್ಳಿ ಮತ್ತು ಈರುಳ್ಳಿಯ ಬಲವಾದ ವಾಸನೆಯು ಹಲ್ಲಿಗಳಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ಈ ಪೇಸ್ಟ್‌ನಲ್ಲಿ 5-6 ಲವಂಗ ಪುಡಿಮಾಡಿ ಹಾಕಿ. ಲವಂಗದ ಬಲವಾದ ವಾಸನೆಯು ಹಲ್ಲಿಗಳನ್ನು ಇನ್ನಷ್ಟು ಹೆದರಿಸುತ್ತದೆ. ನೀವು ಹೆಚ್ಚಿನ ಪರಿಣಾಮವನ್ನು ಬಯಸಿದರೆ, ನೀವು ಲವಂಗಗಳ ಸಂಖ್ಯೆಯನ್ನು ಹೆಚ್ಚಿಸಬಹುದು.
ಈಗ ಈ ಮಿಶ್ರಣಕ್ಕೆ 1 ರೂ.ಬೆಲೆಯ ಯಾವುದೇ ಶಾಂಪೂ ಸೇರಿಸಿ. ಶಾಂಪೂ ಮಿಶ್ರಣವನ್ನು ಜಿಗುಟಾಗಿಸುತ್ತದೆ ಮತ್ತು ಗೋಡೆಗಳು, ಕಿಟಕಿಗಳು ಮತ್ತು ಬಾಗಿಲುಗಳ ಮೂಲೆಗಳಿಗೆ ಮಿಶ್ರಣ ಸುಲಭವಾಗಿ ಅಂಟಿಕೊಳ್ಳುವಂತೆ ಮಾಡುತ್ತದೆ. ಅಷ್ಟೇ ಅಲ್ಲ, ಶಾಂಪೂವಿನ ವಾಸನೆಯು ಹಲ್ಲಿಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ.
ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಅಥವಾ ಹಲ್ಲಿಗಳು ಹೆಚ್ಚಾಗಿ ಬರುವ ಗೋಡೆಗಳ ಮೂಲೆಗಳು, ಅಡುಗೆಮನೆ, ಮಲಗುವ ಕೋಣೆ, ಸ್ಟೋರ್ ರೂಂ ಮುಂತಾದ ಪ್ರದೇಶಗಳಿಗೆ ಬ್ರಷ್ ಬಳಸಿ ಹಚ್ಚಿ. ಬಲವಾದ ವಾಸನೆಯಿಂದಾಗಿ ಹಲ್ಲಿಗಳು ತಕ್ಷಣವೇ ಆ ಪ್ರದೇಶವನ್ನು ಬಿಟ್ಟು ಹೋಗುತ್ತವೆ.
ಈ ನೈಸರ್ಗಿಕ ಸ್ಪ್ರೇ ಯಾವುದೇ ರಾಸಾಯನಿಕಗಳನ್ನು ಹೊಂದಿರುವುದಿಲ್ಲ, ಆದ್ದರಿಂದ ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಮಕ್ಕಳು ಮತ್ತು ಸಾಕುಪ್ರಾಣಿಗಳಿರುವ ಮನೆಗಳಲ್ಲಿ ಇದನ್ನು ಯಾವುದೇ ಆಕ್ಷೇಪಣೆಯಿಲ್ಲದೆ ಬಳಸಬಹುದು. ಈ ಸಲಹೆ ಬಳಸಿ ಹಲ್ಲಿಗಳ ಸಮಸ್ಯೆಯನ್ನು ಶಾಶ್ವತವಾಗಿ ತೊಡೆದುಹಾಕಬಹುದು. ಇದಲ್ಲದೆ, ಇದು ಪರಿಸರಕ್ಕೆ ಹಾನಿಕಾರಕವಲ್ಲ. ಈ ಸುಲಭ, ಕಡಿಮೆ ವೆಚ್ಚದ ಪರಿಹಾರದೊಂದಿಗೆ ಪ್ರತಿಯೊಬ್ಬರೂ ತಮ್ಮ ಮನೆಗಳನ್ನು ಹಲ್ಲಿಗಳಿಂದ ರಕ್ಷಿಸಿಕೊಳ್ಳಬಹುದು.