ನ್ಯೂಜಿಲೆಂಡ್ ಸಚಿವೆಯಾದ ಮೊದಲ ಭಾರತೀಯ ಮಹಿಳೆ ಪ್ರಿಯಾಂಕ..!
ನ್ಯೂಜಿಲೆಂಡ್‌ನಲ್ಲಿ ಸಚಿವೆಯಾದ ಭಾರತೀಯ ಮಹಿಳೆ | ಪ್ರಿಯಾಂಕ ರಾಧಾಕೃಷ್ಣನ್ ಈಗ ನ್ಯೂಜಿಲೆಂಡ್‌ನ ಸಂಸದೆ | ಇಲ್ಲಿವೆ ಫೋಟೋಸ್
ನ್ಯೂಜಿಲ್ಯಾಂಡ್ ಸಚಿವೆಯಾದ ಮೊದಲ ಭಾರತೀಯ ಸಂಜಾತೆಗೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಲೇಬರ್ ಪಾರ್ಟಿಯ ಸಂಸದೆ ಪ್ರಿಯಾಂಕಾ ರಾಧಾಕೃಷ್ಣನ್ ಪ್ರಧಾನಿ ಜಕಿಂದಾ ಆರ್ಡರ್ನ್ ಸಂಪುಟದಲ್ಲಿ ಸಚಿವೆಯಾಗಿದ್ದಾರೆ.
ಭಾರತದಲ್ಲಿ ಜನಿಸಿ, ಸಿಂಗಾಪುರದಲ್ಲಿ ಓದಿದ ಪ್ರಿಯಾಂಕಾ ನ್ಯೂಜೆಲೆಂಡ್ ಸಂಸದೆಯಾದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ಭಾರತದಲ್ಲಿ ಜನಿಸಿ, ಸಿಂಗಾಪುರದಲ್ಲಿ ಓದಿದ ಪ್ರಿಯಾಂಕಾ ನ್ಯೂಜೆಲೆಂಡ್ ಸಂಸದೆಯಾದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
41 ವರ್ಷದ ಪ್ರಿಯಾಂಕಾ ಮೂಲತಃ ಕೇರಳದ ಎರ್ನಾಕುಲಂನವರು. ಸಮಾಜ ಅಭಿವೃದ್ಧಿ ಹಾಗೂ ಉದ್ಯೋಗ ಖಾತೆ ಸಹಾಯಕ ಸಚಿವೆಯಾಗಿ ಇವರು ಕಾರ್ಯ ನಿರ್ವಹಿಸಲಿದ್ದಾರೆ.
ಪ್ರಧಾನಿ ಜಕಿಂದಾ ಆರ್ಡರ್ನ್ ತಮ್ಮ ಸಂಪುಟಕ್ಕೆ ಹೊಸ ಮುಖವನ್ನು ಪರಚಯಿಸುತ್ತಿರುವುದಾಗಿ ಹೇಳಿ ಪ್ರಿಯಾಂಕಾ ಹೆಸರನ್ನು ಘೋಷಿಸಿದ್ದಾರೆ.
ಮಹಿಳಾ ಸಬಲೀಕರಣ ಹಾಗೂ ವಲಸೆ ಕಾರ್ಮಿಕರ ದೌರ್ಜನ್ಯ ವಿರುದ್ಧ ಪ್ರಿಯಾಂಕಾ ಧ್ವನಿ ಎತ್ತಿದ್ದರು.
2017ರ ಸೆಪ್ಟೆಂಬರ್‌ನಲ್ಲಿ ಲೇಬರ್ ಪಾರ್ಟಿಯಿಂದ ಸಂಸದೆಯಾಗಿದ್ದರು. ವಿಶ್ವದೆಲ್ಲೆಡೆ ಭಾರತೀಯರು ಅದರಲ್ಲಿಯೂ ಹೆಣ್ಣು ಮಕ್ಕಳು ಉನ್ನತ ಹುದ್ದೆಯನ್ನು ಅಲಂಕರಿಸುತ್ತಿರುವುದು ಅತ್ಯುತ್ತಮ ಬೆಳವಣಿಗೆಯಾಗಿದ್ದು, ಬಹಳಷ್ಟು ಹೆಣ್ಣುಮಕ್ಕಳಿಗೆ ಇದು ಮಾದರಿಯಾಲಿದೆ.
ಪ್ರಿಯಾಂಕ ರಾಧಾಕೃಷ್ಣನದ ಸಚಿವೆಯಾಗಿ ವಹಿಸಲಿರುವ ಜವಾಬ್ದಾರಿಗಳು
ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರು ಟ್ವಿಟರ್ ಮೂಲಕ ಪ್ರಿಯಾಂಕ ಅವರಿಗೆ ಅಭಿನಂದನೆ ತಿಳಿಸಿದ್ದಾರೆ
ಪ್ರಿಯಾಂಕಾ ಅವರು 2ನೇ ಬಾರಿಗೆ ಸಂಸದರಾಗಿದ್ದು, ಇದೀಗ ಸಚಿವರಾಗಿದ್ದಾರೆ. ಅವರಿಗೆ ಜನಾಂಗೀಯ ಸಮುದಾಯ ಮತ್ತು ವೈವಿದ್ಯತೆ ಸೇರಿದಂತೆ ಮೂರು ಖಾತೆಗಳನ್ನು ವಹಿಸಲಾಗಿದೆ. ಶುಕ್ರವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಧಾಕೃಷ್ಣನ್ ಅವರು ಸಿಂಗಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಉನ್ನತ ವಿದ್ಯಾಭ್ಯಾದಕ್ಕಾಗಿ ನ್ಯೂಜಿಲೆಂಡ್‌ಗೆ ತೆರಳಿದ್ದರು. ಬಳಿಕ ಅಲ್ಲಿಯೇ ವಕೀಲರಾಗಿದ್ದರು.